ಟೆಕ್ ದೈತ್ಯ ಗೂಗಲ್ ತನ್ನ ಜನಪ್ರಿಯ ಎ-ಸೀರಿಸ್ ಸ್ಮಾರ್ಟ್‌ಫೋನ್ ಸಾಲಿಗೆ ಹೊಸ ಸೇರ್ಪಡೆಯಾಗಿ Google Pixel 10a ಸ್ಮಾರ್ಟ್‌ಫೋನ್ ಅನ್ನು ಅನ್ನು ಶೀಘ್ರದಲ್ಲೇ ಪರಿಚಯಿಸಲು ಸಿದ್ಧವಾಗಿದೆ. ಕಂಪನಿಯ ಅಧಿಕೃತ ಘೋಷಣೆಯಂತೆ, ಈ ಫೋನ್ ಫೆಬ್ರವರಿ ತಿಂಗಳಲ್ಲೇ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದ್ದು, ಕಳೆದ ಮಾರ್ಚ್ 2025ರಲ್ಲಿ ಬಿಡುಗಡೆಯಾದ ಪಿಕ್ಸೆಲ್ 9aಗೆ ಉತ್ತರಾಧಿಕಾರಿಯಾಗಿ ಬರುತ್ತಿದೆ. ಈ ಬಾರಿ ಉತ್ತಮ ಕ್ಯಾಮೆರಾ ಮತ್ತು ಎಐ ಅನುಭವದೊಂದಿಗೆ ಮಧ್ಯಮ ದರ್ಜೆಯ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ.
ಗೂಗಲ್ ಈಗಾಗಲೇ ದೃಢಪಡಿಸಿದಂತೆ, ಫೆಬ್ರವರಿ 18ರಂದು Google Pixel 10a ಸ್ಮಾರ್ಟ್‌ಫೋನ್ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಈ Google Pixel 10a ಫೋನ್ ಬೆಲೆ ವಿವರಗಳನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಗೂಗಲ್ ಸ್ಟೋರ್‌ನಲ್ಲಿ ಮುಂಗಡವಾಗಿ ಮಾಹಿತಿಗೆ ನೋಂದಾಯಿಸುವ ಗ್ರಾಹಕರಿಗೆ ವಿಶೇಷ ಲಾಭವನ್ನು ನೀಡಲಾಗುತ್ತದೆ. ಫೆಬ್ರವರಿ 13ರ ಮಧ್ಯಾಹ್ನ 1:29ರೊಳಗೆ ನೋಂದಾಯಿಸಿದವರಿಗೆ, Google Pixel 10a ಖರೀದಿಸುವ ವೇಳೆ ಭವಿಷ್ಯದ ಆರ್ಡರ್‌ಗೆ ಅನ್ವಯಿಸುವ ಆಫರ್ ದೊರೆಯಲಿದೆ ಎಂದು ಗೂಗಲ್ ತಿಳಿಸಿದೆ.
ವಿನ್ಯಾಸದ ವಿಷಯದಲ್ಲಿ Google Pixel 10a ಸ್ಮಾರ್ಟ್‌ಫೋನ್ ತನ್ನ ಹಿಂದಿನ ಮಾದರಿಯಂತೆಯೇ ಪರಿಚಿತ ಲುಕ್ ಅನ್ನು ಮುಂದುವರಿಸಿದೆ. ಹಿಂಭಾಗದಲ್ಲಿ ಹಾರಿಜಂಟಲ್ ಪಿಲ್ ಆಕಾರದ ಕ್ಯಾಮೆರಾ ಬಾರ್ ಒಳಗೊಂಡ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ನೀಡಲಾಗಿದೆ. ಒಂದೇ ಎಲ್‌ಇಡಿ ಫ್ಲ್ಯಾಶ್ ಜೊತೆಗೆ ಮಧ್ಯಭಾಗದಲ್ಲಿ ಗೂಗಲ್ ಲೋಗೋ ಇರಲಿದೆ. ಡಿಸ್‌ಪ್ಲೇ ಭಾಗದಲ್ಲಿ ದಪ್ಪ ಬೇಜಲ್‌ಗಳು ಮತ್ತು ಮಧ್ಯದಲ್ಲಿ ಹೋಲ್-ಪಂಚ್ ಕಟ್‌ಔಟ್ ಕಾಣಿಸುತ್ತದೆ. ಅಧಿಕೃತ ಟೀಸರ್‌ನಲ್ಲಿ ಫೋನ್ ಅನ್ನು ನೀಲಿ ಬಣ್ಣದ ಆಯ್ಕೆಯಲ್ಲಿ ಪ್ರದರ್ಶಿಸಲಾಗಿದೆ.
Photo Credit:
Photo credit :AH
ಫೀಚರ್‌ಗಳ ವಿಷಯದಲ್ಲಿ ಗೂಗಲ್ ಇನ್ನೂ ಸಂಪೂರ್ಣ ವಿವರಗಳನ್ನು ಪ್ರಕಟಿಸಿಲ್ಲ. ಆದರೂ, Google Pixel 10a ಫೋಟೋಗ್ರಫಿಯಲ್ಲಿ ಗಮನಾರ್ಹ ಸುಧಾರಣೆ ನೀಡಲಿದೆ ಎಂಬುದು ಕಂಪನಿಯ ಸೂಚನೆ. ಜೊತೆಗೆ, ಇದು ಇದುವರೆಗೆ ಬಿಡುಗಡೆಯಾದ ಅತ್ಯಂತ ದೈರ್ಘ್ಯಯುತ ಪಿಕ್ಸೆಲ್ ಎ-ಸೀರಿಸ್ ಫೋನ್ ಆಗಿರಲಿದೆ ಎಂದು ಗೂಗಲ್ ಹೇಳಿದೆ. ಇದರಿಂದ ಉತ್ತಮ ಧೂಳು ಮತ್ತು ನೀರಿನ ರಕ್ಷಣೆ ಇರುವ ಸಾಧ್ಯತೆ ಇದೆ. ಪಿಕ್ಸೆಲ್ 9aಯಂತೆ, ಈ ಹೊಸ ಫೋನ್‌ನಲ್ಲೂ ಜೆಮಿನಿ ಎಐ ಅಸಿಸ್ಟೆಂಟ್ ಆಂತರಿಕವಾಗಿ ಲಭ್ಯವಾಗಲಿದೆ ಎಂಬುದನ್ನು ನಾವು ಊಹಿಸಬಹುದು.
ಇನ್ನು ವರದಿಗಳ ಪ್ರಕಾರ, Google Pixel 10a ಸ್ಮಾರ್ಟ್‌ಫೋನ್ 128GB ಮತ್ತು 256GB ಸ್ಟೋರೇಜ್ ಆಯ್ಕೆಗಳಲ್ಲಿ ಮಾರುಕಟ್ಟೆಗೆ ಬರಬಹುದು. ಬಣ್ಣಗಳ ಪಟ್ಟಿಯಲ್ಲಿ ಬೆರಿ, ಫಾಗ್, ಲಾವೆಂಡರ್ ಮತ್ತು ಆಬ್ಸಿಡಿಯನ್ ಸೇರಿಕೊಳ್ಳುವ ಸಾಧ್ಯತೆ ಇದೆ. ಯುರೋಪ್‌ನಲ್ಲಿ ಇದರ ಆರಂಭಿಕ ಬೆಲೆ EUR 549 (ಸುಮಾರು ರೂ. 58,000) ಆಗಿರಬಹುದು ಎಂದು ಹೇಳಲಾಗುತ್ತಿದ್ದು, 256GB ಮಾದರಿಯ ಬೆಲೆ EUR 649 (ಸುಮಾರು ರೂ. 69,000) ಇರಬಹುದು ಎನ್ನಲಾಗಿದೆ. ಅಂದರೆ, ಭಾರತದಲ್ಲಿ ಇದಕ್ಕಿಂತಲೂ ಕಡಿಮೆ ಬೆಲೆಯನ್ನು ಊಹಿಸಬಹುದು.
ಕೆಲ ವರದಿಗಳ ಪ್ರಕಾರ, ಭಾರತದಲ್ಲಿ 128GB ಮೂಲ ರೂಪಾಂತರದ Google Pixel 10a ಸ್ಮಾರ್ಟ್‌ಫೋನ್ ಬೆಲೆ 49,999 ರೂ. ಇರಲಿದೆ ಎಂದು ಅಂದಾಜಿಸಿವೆ. ಆದರೆ, ಭಾರತೀಯ ಗ್ರಾಹಕರಿಗೆ ಸಂಬಂಧಿಸಿದ ನಿಖರ ಬೆಲೆ, ಲಭ್ಯತೆ ಮತ್ತು ಬ್ಯಾಂಕ್ ಆಫರ್‌ಗಳ ವಿವರಗಳು ಬಿಡುಗಡೆ ದಿನದಂದು ಸ್ಪಷ್ಟವಾಗಲಿವೆ. ಶುದ್ಧ ಆಂಡ್ರಾಯ್ಡ್ ಅನುಭವ, ಬಲಿಷ್ಠ ಎಐ ವೈಶಿಷ್ಟ್ಯಗಳು ಮತ್ತು ವಿಶ್ವಾಸಾರ್ಹ ಕ್ಯಾಮೆರಾ ಗುಣಮಟ್ಟದೊಂದಿಗೆ Google Pixel 10a, ಪ್ರೀಮಿಯಂ ಮಿಡ್‌ರೇಂಜ್ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಮಹತ್ವದ ಆಯ್ಕೆಯಾಗಿ ಹೊರಹೊಮ್ಮುವ ನಿರೀಕ್ಷೆ ಇದೆ.
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed
English summary
Google is set to launch the Pixel 10a on February 18, positioning it as a mid-range smartphone focused on improved camera performance and advanced AI features. The device will succeed the Pixel 9a and is expected to launch globally, including India, with special benefits for users who pre-register via the Google Store.
Story first
published: Thursday, February 5, 2026, 12:30 [IST]