Pixel 10a vs iPhone 16: 50 ಸಾವಿರ ರೇಂಜ್‌ನಲ್ಲಿ ಯಾವುದು ಬೆಸ್ಟ್?
ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪ್ರೀಮಿಯಂ ಮಿಡ್-ರೇಂಜ್ ವಿಭಾಗದಲ್ಲಿ ಮತ್ತೆ ತೀವ್ರ ಪೈಪೋಟಿ ಆರಂಭವಾಗಿದೆ. ಇತ್ತೀಚಿಗಷ್ಟೇ ಗೂಗಲ್ ತನ್ನ ಹೊಸ Pixel 10a ಅನ್ನು ಬಿಡುಗಡೆ ಮಾಡಿದ್ದು, ಇದು A-ಸಿರೀಸ್‌ನಲ್ಲಿ ಅತ್ಯಂತ ಬಲಿಷ್ಠ ಮಾದರಿ ಎಂದು ಕಂಪನಿ ಹೇಳುತ್ತಿದೆ. ಇದೇ ಬೆಲೆ ಶ್ರೇಣಿಯಲ್ಲಿ ಲಭ್ಯವಿರುವ iPhone 16 ಕೂಡ ಖರೀದಿದಾರರ ಗಮನ ಸೆಳೆಯುತ್ತಿದೆ. ಹಾಗಾದರೆ, ಸುಮಾರು ₹50,000 ಬಜೆಟ್ ಹೊಂದಿರುವವರಿಗೆ ಈ ಎರಡರಲ್ಲಿ ಯಾವುದು ಉತ್ತಮ ಆಯ್ಕೆ?.. ಇಂದಿನ ಲೇಖನದಲ್ಲಿ ಸಂಪೂರ್ಣ ಹೋಲಿಕೆಯೊಂದಿಗೆ ಉತ್ತರವನ್ನು ನೋಡೋಣ ಬನ್ನಿ.
ವಿನ್ಯಾಸ ಮತ್ತು ಬಿಲ್ಡ್ ಕ್ವಾಲಿಟಿ: ಯಾವುದು ಹೆಚ್ಚು ಗಟ್ಟಿತನ ಹೊಂದಿದೆ?
Pixel 10a ಗೋರಿಲ್ಲಾ ಗ್ಲಾಸ್ 7i ರಕ್ಷಣೆಯೊಂದಿಗೆ ಮತ್ತು IP68 ಧೂಳು-ನೀರು ಪ್ರತಿರೋಧ ಸಾಮರ್ಥ್ಯದಿಂದ ಬರುತ್ತದೆ. ದಿನನಿತ್ಯ ಬಳಕೆಯಲ್ಲಿ ಸ್ಕ್ರ್ಯಾಚ್ ಹಾಗೂ ನೀರಿನ ಹಾನಿಯಿಂದ ರಕ್ಷಣೆ ಸಿಗುತ್ತದೆ. 100% ಮರುಬಳಕೆ ಅಲ್ಯೂಮಿನಿಯಂ ಫ್ರೇಮ್ ಬಳಕೆ ಪರಿಸರ ಸ್ನೇಹಿ ಕ್ರಮವಾಗಿದೆ.
ಇನ್ನೊಂದೆಡೆ iPhone 16 ಸೆರಾಮಿಕ್ ಶೀಲ್ಡ್ ರಕ್ಷಣೆಯೊಂದಿಗೆ ಗಟ್ಟಿಯಾದ ನಿರ್ಮಾಣ ಗುಣಮಟ್ಟವನ್ನು ನೀಡುತ್ತದೆ. ಆಪಲ್‌ನ ಫಿನಿಷಿಂಗ್ ಮತ್ತು ಡಿಸೈನ್ ಸಾಮಾನ್ಯವಾಗಿ ಪ್ರೀಮಿಯಂ ಅನುಭವ ನೀಡುತ್ತದೆ.
ಡಿಸ್‌ಪ್ಲೇ: ಬ್ರೈಟ್‌ನೆಸ್ vs ಕಲರ್ ನಿಖರತೆ
Pixel 10a 6.3 ಇಂಚಿನ Actua ಡಿಸ್‌ಪ್ಲೇ ಹೊಂದಿದ್ದು, 3,000 ನಿಟ್ಸ್ ಪೀಕ್ ಬ್ರೈಟ್‌ನೆಸ್ ನೀಡುತ್ತದೆ. ಬಿಸಿಲಿನಲ್ಲೂ ಸ್ಪಷ್ಟವಾಗಿ ಪರದೆ ಕಾಣುವಂತಿದೆ. 120Hz ರಿಫ್ರೆಶ್ ರೇಟ್ ಸ್ಕ್ರೋಲಿಂಗ್ ಮತ್ತು ಗೇಮಿಂಗ್‌ಗೆ ಮೃದುವಾದ ಅನುಭವ ನೀಡುತ್ತದೆ.
iPhone 16 ನಲ್ಲಿ 6.1 ಇಂಚಿನ Super Retina XDR OLED ಡಿಸ್‌ಪ್ಲೇ ಇದೆ. ನೈಸರ್ಗಿಕ ಬಣ್ಣಗಳು, ಉತ್ತಮ ಕಾಂಟ್ರಾಸ್ಟ್ ಮತ್ತು ವಿಡಿಯೋ ವೀಕ್ಷಣೆಗೆ ಇದು ಉತ್ತಮ ಆಯ್ಕೆ.
ಕಾರ್ಯಕ್ಷಮತೆ: Tensor G4 vs A18
Pixel 10a Google Tensor G4 ಚಿಪ್ ಬಳಕೆಯಾಗಿದೆ. AI ಆಧಾರಿತ ಫೀಚರ್‌ಗಳು, ವೇಗದ ಪ್ರಕ್ರಿಯೆ ಮತ್ತು ಕ್ಲೀನ್ Android 16 ಅನುಭವ ಇದರ ಪ್ರಮುಖ ಬಲ. ದಿನನಿತ್ಯ ಬಳಕೆ ಹಾಗೂ ಮಲ್ಟಿಟಾಸ್ಕಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತದೆ.
iPhone 16 ನಲ್ಲಿ Apple A18 ಪ್ರೊಸೆಸರ್ ಇದೆ. ಗೇಮಿಂಗ್, ವಿಡಿಯೋ ಎಡಿಟಿಂಗ್ ಮತ್ತು ದೀರ್ಘಕಾಲಿಕ ಸ್ಥಿರ ಕಾರ್ಯಕ್ಷಮತೆಯಲ್ಲಿ ಇದು ಮುಂಚೂಣಿಯಲ್ಲಿದೆ. iOS 18 ಜೊತೆ ಆಪಲ್ ಇಕೋಸಿಸ್ಟಮ್ ಬಳಸುವವರಿಗೆ ಹೆಚ್ಚು ಲಾಭ.
ಕ್ಯಾಮೆರಾ: ಫೋಟೋ ಪ್ರಿಯರ ಆಯ್ಕೆ ಯಾವುದು?
Pixel 10a 48MP ಮುಖ್ಯ ಕ್ಯಾಮೆರಾ ಮತ್ತು 13MP ಅಲ್ಟ್ರಾ-ವೈಡ್ ಲೆನ್ಸ್ ಹೊಂದಿದೆ. ಕಡಿಮೆ ಬೆಳಕಿನಲ್ಲೂ ಉತ್ತಮ ಫೋಟೋ ಗುಣಮಟ್ಟ ನೀಡುತ್ತದೆ. ಗೂಗಲ್‌ನ ಇಮೇಜ್ ಪ್ರೊಸೆಸಿಂಗ್ ಇಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ.
iPhone 16 ಕೂಡ 48MP ವೈಡ್ ಮತ್ತು 12MP ಅಲ್ಟ್ರಾ-ವೈಡ್ ಕ್ಯಾಮೆರಾ ಹೊಂದಿದೆ. ನೈಸರ್ಗಿಕ ಬಣ್ಣಗಳು ಮತ್ತು ಸ್ಥಿರ ವಿಡಿಯೋ ಇದರ ಪ್ರಮುಖ ಬಲ.

ಬ್ಯಾಟರಿ ಮತ್ತು ಚಾರ್ಜಿಂಗ್: ದೀರ್ಘ ಬಳಕೆಗೆ ಯಾವುದು ಸೂಕ್ತ?
Pixel 10a 5,100mAh ಬ್ಯಾಟರಿ ಹೊಂದಿದ್ದು, ಒಂದು ಚಾರ್ಜ್‌ನಲ್ಲಿ ಪೂರ್ಣ ದಿನಕ್ಕಿಂತ ಹೆಚ್ಚು ಬ್ಯಾಕಪ್ ನೀಡುತ್ತದೆ. ವೇಗದ ವೈರ್ಡ್ ಹಾಗೂ ವೈರ್‌ಲೆಸ್ ಚಾರ್ಜಿಂಗ್ ಬೆಂಬಲವಿದೆ.
iPhone 16 ಬ್ಯಾಟರಿ ಸಾಮರ್ಥ್ಯವನ್ನು ಸ್ಪಷ್ಟವಾಗಿ ತಿಳಿಸದಿದ್ದರೂ, ದೈನಂದಿನ ಬಳಕೆಗೆ ಸಮರ್ಪಕ ಬ್ಯಾಕಪ್ ನೀಡುತ್ತದೆ.
ಬೆಲೆ ಮತ್ತು ಮೌಲ್ಯ: ಹಣಕ್ಕೆ ಯಾವುದು ಹೆಚ್ಚು?
Pixel 10a ₹49,999ರಿಂದ ಆರಂಭವಾಗುತ್ತದೆ. ಇತ್ತ iPhone 16 ಕ್ಯಾಶ್‌ಬ್ಯಾಂಕ್ ಕೊಡುಗೆಗಳಿಂದ ₹50 ಸಾವಿರ ವಿಭಾಗದಲ್ಲಿ ಲಭ್ಯವಾಗಿದ್ದನ್ನು ನಾವು ಗಮನಿಸಬಹುದು. ಹೀಗೆ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸ ಇಲ್ಲದಿದ್ದರೂ, Android ಅಥವಾ iOS ಆಯ್ಕೆ ನಿಮ್ಮ ವೈಯಕ್ತಿಕ ಆದ್ಯತೆ ಮೇಲೆ ಅವಲಂಬಿತ.
ಅಂತಿಮ ತೀರ್ಮಾನ: ನಿಮ್ಮ ಬಳಕೆಗೆ ಸರಿಯಾದ ಆಯ್ಕೆ
ಹೆಚ್ಚು ಬ್ರೈಟ್‌ನೆಸ್, ದೊಡ್ಡ ಬ್ಯಾಟರಿ ಮತ್ತು ಕ್ಲೀನ್ Android ಅನುಭವ ಬೇಕಾದರೆ Pixel 10a ಉತ್ತಮ ಆಯ್ಕೆ. ದೀರ್ಘಕಾಲದ ಸಾಫ್ಟ್‌ವೇರ್ ಬೆಂಬಲ, ಸ್ಥಿರ ಕಾರ್ಯಕ್ಷಮತೆ ಮತ್ತು ಆಪಲ್ ಇಕೋಸಿಸ್ಟಮ್ ಬಳಸುವವರಿಗೆ iPhone 16 ಸೂಕ್ತ. ಖರೀದಿಸುವ ಮೊದಲು ನಿಮ್ಮ ಅಗತ್ಯ ಮತ್ತು ಬಳಕೆ ಶೈಲಿಯನ್ನು ಪರಿಗಣಿಸುವುದು ಅತ್ಯಂತ ಮುಖ್ಯ ಎಂಬುದು ನಮ್ಮ ಅಭಿಪ್ರಾಯ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications