ಭಾರತಕ್ಕೆ ಈ ವಾರ Pixel 10a, Vivo V70, Infinix Note Edge ಭರ್ಜರಿ ಎಂಟ್ರಿ!
2026ರ ಫೆಬ್ರವರಿ ಮೂರನೇ ವಾರವು (ಫೆ.16ರಿಂದ 20ರವರೆಗೆ) ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಒಂದು ವಿಶೇಷ ವಾರ ಎಂದೇ ಹೇಳಬಹುದು. ಏಕೆಂದರೆ, ಈ ವಾರ ಮಧ್ಯಮ ಬೆಲೆ ಹೊಂದಿರುವ ಹಲವು ಗಮನಾರ್ಹ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತಿದೆ. ಅತಿ ದುಬಾರಿಯ ಫ್ಲ್ಯಾಗ್‌ಶಿಪ್‌ಗಳು ಅಲ್ಲದ, ಸಾಮಾನ್ಯ ಬಳಕೆದಾರರನ್ನು ಗುರಿಯಾಗಿಸಿಕೊಂಡಿರುವ Google Pixel 10a, Vivo V70 ಸರಣಿ ಮತ್ತು Infinix Note Edge ಫೋನ್‌ಗಳು ಈ ವಾರ ಎಂಟ್ರಿ ನೀಡುತ್ತಿವೆ. ಇವುಗಳ ಜೊತೆಗೆ ಆಪಲ್‌ನ ಹೊಸ ಕಡಿಮೆ ಬೆಲೆಯ ಮಾದರಿ iPhone 17e ಕೂಡ ಇದೇ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಹಾಗಾಗಿ, ಈ ಲೇಖನದಲ್ಲಿ 2026ರ ಫೆಬ್ರವರಿ ಮೂರನೇ ವಾರದಲ್ಲಿ ಬಿಡುಗಡೆಯಾಗುತ್ತಿರುವ ಈ ನಾಲ್ಕು ಮಿಡ್-ರೇಂಜ್ ಫ್ಲಾಗ್‌ಶಿಪ್‌ಗಳ ಬಗ್ಗೆ ನೋಡೋಣ ಬನ್ನಿ.
Google Pixel 10a
ಗೂಗಲ್ ತನ್ನ ಹೊಸ ಪಿಕ್ಸೆಲ್ 10a ಅನ್ನು ಫೆಬ್ರವರಿ 18ರಂದು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಹಿಂದಿನ ಮಾದರಿಯಂತೆ ಇದು ಫ್ಲಿಪ್ಕಾರ್ಟ್‌ನಲ್ಲಿ ಮಾತ್ರ ಲಭ್ಯವಾಗುವ ಸಾಧ್ಯತೆ ಇದೆ. ವಿನ್ಯಾಸದ ದೃಷ್ಟಿಯಿಂದ ಇದು ಪಿಕ್ಸೆಲ್ 9a ಮಾದರಿಯಂತೆಯೇ ಸಮತಟ್ಟಾದ ಅಂಚುಗಳು ಮತ್ತು ಹಿಂಭಾಗದಲ್ಲಿ ಪಿಲ್ ಆಕಾರದ ಕ್ಯಾಮೆರಾ ಘಟಕದೊಂದಿಗೆ ಬರಬಹುದು. ಸೋರಿಕೆಗಳ ಪ್ರಕಾರ, ಪಿಕ್ಸೆಲ್ 10a ಫೋನ್‌ನಲ್ಲಿ Tensor G4 ಚಿಪ್‌ಸೆಟ್, 6.2 ಇಂಚಿನ FHD+ AMOLED ಡಿಸ್ಪ್ಲೇ (120Hz), 48MP + 13MP ಡ್ಯುಯಲ್ ಹಿಂಬದಿ ಕ್ಯಾಮೆರಾ, 13MP ಮುಂಭಾಗ ಕ್ಯಾಮೆರಾ ಹಾಗೂ 5,100mAh ಬ್ಯಾಟರಿ (23W ಫಾಸ್ಟ್ ಚಾರ್ಜಿಂಗ್) ಇರಬಹುದು.
ಈ ಬಾರಿ ಪ್ರಮುಖ ಹೊಸತನವೆಂದರೆ Android 16 ಅನ್ನು ನೇರವಾಗಿ ಒಳಗೊಂಡಿರುವ ಸಾಧ್ಯತೆ. ಬೆಲೆ ಯೂರೋಪ್‌ನಲ್ಲಿ €500ರಿಂದ ಆರಂಭವಾಗಬಹುದು ಎಂದು ವರದಿಗಳು ಸೂಚಿಸುತ್ತಿವೆ. ಭಾರತದಲ್ಲಿ ನಿಖರ ಬೆಲೆ ಲಾಂಚ್ ದಿನವೇ ತಿಳಿಯಲಿದೆ.ಹಿಂದಿನ ಪಿಕ್ಸೆಲ್ 9a ಬಳಕೆದಾರರಿಗೆ ದೊಡ್ಡ ಅಪ್‌ಗ್ರೇಡ್ ಆಗದಿದ್ದರೂ, Pixel 7a ಅಥವಾ ಅದಕ್ಕಿಂತ ಹಳೆಯ ಮಾದರಿಗಳಿಂದ ಅಪ್‌ಗ್ರೇಡ್ ಮಾಡುವವರಿಗೆ ಇದು ಒಳ್ಳೆಯ ಆಯ್ಕೆಯಾಗಬಹುದು.

Infinix Note Edge
Infinix Note Edge ಕೂಡ ಫೆಬ್ರವರಿ 18ರಂದು ಮಧ್ಯಾಹ್ನ 12ಕ್ಕೆ ಬಿಡುಗಡೆ ಆಗಲಿದೆ. ಇದು ಸಹ ಫ್ಲಿಪ್ಕಾರ್ಟ್ ವಿಶೇಷ ಮಾದರಿಯಾಗಿರಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಈಗಾಗಲೇ ಬಿಡುಗಡೆಯಾಗಿರುವುದರಿಂದ, ಭಾರತೀಯ ಬೆಲೆ ಮುಖ್ಯ ಕುತೂಹಲವಾಗಿದೆ. ಇದರ ಬೆಲೆ ₹25,000 ಒಳಗೆ ಇರಬಹುದು ಎಂಬ ಅಂದಾಜು ಇದೆ. ಈ Infinix Note Edge ಫೋನ್ 6.78 ಇಂಚಿನ 1.5K ಕರ್ವ್ಡ್ AMOLED ಡಿಸ್ಪ್ಲೇ (120Hz, 4,500 ನಿಟ್ಸ್ ಪೀಕ್ ಬ್ರೈಟ್ನೆಸ್) ಹೊಂದಿರಲಿದೆ.
ಜೊತೆಗೆ MediaTek Dimensity 7100 ಪ್ರೊಸೆಸರ್, 8GB ವರೆಗೆ RAM, 50MP ಮುಖ್ಯ ಕ್ಯಾಮೆರಾ, XOS 16 (Android 16 ಆಧಾರಿತ), 6,500mAh ಬ್ಯಾಟರಿ (45W ಚಾರ್ಜಿಂಗ್) ಇದರ ಪ್ರಮುಖ ವೈಶಿಷ್ಟ್ಯಗಳು. ಜೊತೆಗೆIP65 ರೇಟಿಂಗ್, JBL ಟ್ಯೂನ್ ಮಾಡಿದ ಸ್ಟೀರಿಯೋ ಸ್ಪೀಕರ್‌ಗಳು ಮತ್ತು ಆಕರ್ಷಕ ಕರ್ವ್ಡ್ ವಿನ್ಯಾಸ ಇದರ ಮುಖ್ಯ ಆಕರ್ಷಣೆ. ವಿನ್ಯಾಸ ಹಾಗೂ ದೊಡ್ಡ ಬ್ಯಾಟರಿ ಬೇಕೆಂದಿರುವವರಿಗೆ ಇದು ಸೂಕ್ತ ಆಯ್ಕೆಯಾಗಬಹುದು.
Vivo V70 ಮತ್ತು Vivo V70 Elite
ವಿವೋ ತನ್ನ V70 ಸರಣಿಯನ್ನು ಫೆಬ್ರವರಿ 19ರಂದು ಭಾರತದಲ್ಲಿ ಅನಾವರಣಗೊಳಿಸಲಿದೆ. ಈ ಬಾರಿ V70 ಮತ್ತು V70 Elite ಎರಡು ಮಾದರಿಗಳು ಲಭ್ಯವಾಗುತ್ತಿವೆ. ವರದಿಗಳ ಪ್ರಕಾರ V70 ಬೆಲೆ ₹45,999ರಿಂದ, Elite ಮಾದರಿ ₹51,999ರಿಂದ ಆರಂಭವಾಗಬಹುದು.ಇವು 6.59 ಇಂಚಿನ 1.5K OLED ಡಿಸ್ಪ್ಲೇ (120Hz, 5,000 ನಿಟ್ಸ್ ಬ್ರೈಟ್ನೆಸ್), 6,500mAh ಬ್ಯಾಟರಿ (90W ಫಾಸ್ಟ್ ಚಾರ್ಜಿಂಗ್), IP68/IP69 ರಕ್ಷಣೆಯೊಂದಿಗೆ ಬರಲಿವೆ.
ಕಾರ್ಯಕ್ಷಮತೆಗಾಗಿ, V70 Elite ನಲ್ಲಿSnapdragon 7 Gen 4 ಮತ್ತು V70ನಲ್ಲಿ Snapdragon 8s Gen 3 Elite ಚಿಪ್‌ಸೆಟ್ ಇರಲಿದೆ. ಜೊತೆಗೆ OriginOS 6 ಮತ್ತು ಆರು ವರ್ಷಗಳವರೆಗೆ ಸಾಫ್ಟ್‌ವೇರ್ ಅಪ್ಡೇಟ್ ಭರವಸೆ ನೀಡಲಾಗುತ್ತಿದೆ. ಉನ್ನತ ಕಾರ್ಯಕ್ಷಮತೆ ಮತ್ತು ಉತ್ತಮ ಕ್ಯಾಮೆರಾ ಅನುಭವವನ್ನು ಹುಡುಕುವವರಿಗೆ V70 Elite ಸೂಕ್ತ ಆಯ್ಕೆಯಾಗಬಹುದು, ಸಾಮಾನ್ಯ ಬಳಕೆ ಮತ್ತು ಬ್ಯಾಟರಿ ಸಾಮರ್ಥ್ಯ ಮುಖ್ಯವಾದರೆ V70 ಸಾಕಷ್ಟು ಸಮರ್ಪಕವಾಗಬಹುದು.
iPhone 17e
ಆಪಲ್‌ನ ಹೊಸ ಕಡಿಮೆ ಬೆಲೆಯ ಮಾದರಿ iPhone 17e ಫೆಬ್ರವರಿ 19ರಂದು ಬಿಡುಗಡೆಯಾಗಬಹುದು ಎಂಬ ವರದಿಗಳಿವೆ. ಇದರಲ್ಲಿ 6.1 ಇಂಚಿನ OLED ಡಿಸ್ಪ್ಲೇ (60Hz), 48MP ಏಕೈಕ ಹಿಂಬದಿ ಕ್ಯಾಮೆರಾ, A19 ಚಿಪ್‌ಸೆಟ್ ಮತ್ತು MagSafe ಬೆಂಬಲ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಫೋನ್ iOS 26 ನೊಂದಿಗೆ ಬರಬಹುದಾದ ಸಾಧ್ಯತೆ ಇದೆ. ಬೆಲೆ ಸುಮಾರು $599ರಿಂದ ಆರಂಭವಾಗಬಹುದು. ಭಾರತದಲ್ಲಿ ಸುಮಾರು ₹59,900 ದಾಟುವ ಸಾಧ್ಯತೆ ಇದೆ. ಕಡಿಮೆ ಬೆಲೆಗೆ ಆಪಲ್‌ನ ಹೊಸ ಚಿಪ್ ಅನುಭವಿಸಬೇಕೆಂದಿರುವವರಿಗೆ ಇದು ಆಕರ್ಷಕ ಆಯ್ಕೆಯಾಗಬಹುದು.
ಒಟ್ಟಾರೆಯಾಗಿ, ಫೆಬ್ರವರಿಯ ಈ ವಾರ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಖರೀದಿದಾರರಿಗೆ ಪ್ರಮುಖವಾಗಿದೆ. ಹೆಚ್ಚಿನ ಬ್ಯಾಟರಿ ಸಾಮರ್ಥ್ಯ, ಉತ್ತಮ ಕ್ಯಾಮೆರಾ, ದೀರ್ಘಾವಧಿ ಸಾಫ್ಟ್‌ವೇರ್ ಅಪ್ಡೇಟ್ ಹಾಗೂ ಆಕರ್ಷಕ ವಿನ್ಯಾಸವು ಒಂದೇ ಪ್ಯಾಕೇಜ್‌ನಲ್ಲಿ ದೊರಕುವ ಕಾಲ ಬಂದಿದೆ. ನೀವು ಹೊಸ ಫೋನ್ ಖರೀದಿಸಲು ಯೋಚಿಸುತ್ತಿದ್ದರೆ, ಈ ವಾರದ ಲಾಂಚ್‌ಗಳನ್ನು ಗಮನಿಸುವುದು ಉತ್ತಮ.ಹೊಸ ಪೀಳಿಗೆಯ V-ಸಿರೀಸ್ ಮಾದರಿಗಳು, ಗೂಗಲ್ ಮತ್ತು ಆಪಲ್‌ನ ಮಧ್ಯಮ ಶ್ರೇಣಿಯ ಆಫರ್‌ಗಳು ಹಾಗೂ ಇನ್‌ಫಿನಿಕ್ಸ್‌ನ ಹೊಸ ಸರಣಿ ಸೇರಿ ಈ ವಾರದ ಮಾರುಕಟ್ಟೆಯಲ್ಲಿ ಸಂಚಲನ ಮೂಡುವುದು ಖಚಿತ.


Click it and Unblock the Notifications