ಸದ್ದು ಮಾಡುತ್ತಿದೆ ಗೂಗಲ್ ಪಿಕ್ಸೆಲ್ 3 ಲೀಕ್ ಫೋಟೋ: ಬಿಡುಗಡೆ ಡೇಟ್ ಫಿಕ್ಸ್..!
ಮಾರುಕಟ್ಟೆಯಲ್ಲಿ ಗೂಗಲ್ ತನ್ನ ಸ್ಮಾರ್ಟ್‌ಫೋನ್‌ಗಳನ್ನು ಪಿಕ್ಸೆಲ್ ಹೆಸರಿನಲ್ಲಿ ಲಾಂಚ್ ಮಾಡುತ್ತಿದೆ. ಈಗಾಗಲೇ ಪಿಕ್ಸೆಲ್ 1 ಮತ್ತು ಪಿಕ್ಸೆಲ್ 2 ಸ್ಮಾರ್ಟ್‌ಫೋನ್‌ಗಳು ಕಾಣಿಸಿಕೊಂಡಿದೆ. ಆದರೆ ಗೂಗಲ್‌ಗೆ ಹೇಳಿಕೊಳ್ಳುವಷ್ಟು ದೊಡ್ಡ ಮಟ್ಟದ ಲಾಭವನ್ನು ಮಾಡಿಕೊಟ್ಟಿಲ್ಲ. ಈ ಹಿನ್ನಲೆಯಲ್ಲಿ ಮಾರುಕಟ್ಟೆಗೆ ನೂತನವಾಗಿ ಪಿಕ್ಸೆಲ್ 3 ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಲು ಸಿದ್ಧತೆ ನಡೆಸಿದೆ. ಬಿಡುಗಡೆಗೂ ಮುನ್ನವೇ ಪಿಕ್ಸೆಲ್ 3 ಸ್ಮಾರ್ಟ್‌ಫೋನ್ ಫೋಟೋಗಳು ಲೀಕ್ ಆಗಿದೆ.

ಮಾರುಕಟ್ಟೆಯಲ್ಲಿ ಈ ಬಾರಿ ಪಿಕ್ಸೆಲ್ 3 ಮತ್ತು ಪಿಕ್ಸೆಲ್ 3 XL ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿರುವ ಪಿಕ್ಸೆಲ್ 3 XL ಸ್ಮಾರ್ಟ್‌ಫೋನಿನ ಲೀಕ್ ಇಮೇಜ್‌ಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಇದಲ್ಲದೇ ಈ ಸ್ಮಾರ್ಟ್‌ಫೋನ್ ಅಕ್ಟೋಬರ್ 6 ರಂದು ಲಾಂಚ್ ಆಗಲಿದೆ.

ಆಪಲ್ ನೋಚ್:
ಐಫೋನ್ X ನಲ್ಲಿ ಕಾಣಿಸಿಕೊಂಡಿರುವ ನೋಚ್ ಮಾದರಿಯ ವಿನ್ಯಾಸವನ್ನು ಪಿಕ್ಸೆಲ್ 3 ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ. ಇದರಿಂದಾಗಿ ಪಿಕ್ಸಲ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಯನ್ನು ಸೃಷ್ಠಿಸಿಕೊಳ್ಳಲಿದೆ.

ಹೊಸ ವಿನ್ಯಾಸ:
ಗೂಗಲ್ನವರ ನೂತನ ಪಿಕ್ಸೆಲ್ XL ಸ್ಮಾರ್ಟ್‌ಫೋನ್ ಮುಂಭಾಗದಲ್ಲಿ ಸೆಲ್ಫಿಗಾಗಿ ಡ್ಯುಯಲ್ ಕ್ಯಾಮೆರಾವನ್ನು ನೀಡಲಾಗಿದೆ. ಅಲ್ಲದೇ ಇದು ಹೊಸ ಮಾದರಿಯದಾಗಿದ್ದು, ಯಾವುದೇ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳು ಈ ಮಾದರಿಯ ಆಯ್ಕೆಯನ್ನು ಹೊಂದಿಲ್ಲ ಎನ್ನಲಾಗಿದೆ.

ದೊಡ್ಡ ಡಿಸ್‌ಪ್ಲೇ:
ಗೂಗಲ್ ಪಿಕ್ಸೆಲ್ 3 XL ಸ್ಮಾರ್ಟ್‌ಫೋನಿನಲ್ಲಿ ದೊಡ್ಡ ಮಾದರಿಯ 5.5 FHD ಪ್ಲಸ್ ಗುಣಮಟ್ಟದ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಎಲ್ಲಾ ಮೊಬೈಲ್ಗಿಂತಲೂ ದೊಡ್ಡ ಡಿಸ್‌ಪ್ಲೇಯನ್ನು ಗೂಗಲ್ ಪಿಕ್ಸೆಲ್ 3 XL ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಲಾಗಿದೆ. ಇದರಿಂದಾಗಿ ವೀಡಿಯೋ ನೋಡುವ ವಿಧಾನವು ಉತ್ತಮವಾಗಲಿದೆ.

ಟಾಪ್ ಎಂಡ್ ಪ್ರೋಸೆಸರ್;
ಗೂಗಲ್ ಪಿಕ್ಸೆಲ್ 3 XL ಸ್ಮಾರ್ಟ್‌ಫೋನಿನಲ್ಲಿ ಸ್ನಾಪ್ಡ್ರಾಗನ್ 845 ಪ್ರೊಸೆಸರ್ ಅನ್ನು ಹೊಂದಿರಲಿದೆ ಎನ್ನಲಾಗಿದೆ. ಇದು ಟಾಪ್ ಎಂಡ್ ಪ್ರೋಸೆಸರ್ ಆಗಿದೆ. ಅಲ್ಲದೇ ಟಾಪ್ ಎಂಡ್ GPUವನ್ನು ಹೊಂದಿದ್ದು, ವೇಗದ ಮತ್ತು ಗ್ರಾಫಿಕ್ಸ್ ಗೇಮ್‌ಗಳನ್ನು ಆಡಲು ಇದು ಸಹಾಯವನ್ನು ಮಾಡುತ್ತಿದೆ.

ಆಂಡ್ರಾಯ್ಡ್ P:
ಆಂಡ್ರಾಯ್ಡ್ P ನೊಂದಿಗೆ ಗೂಗಲ್ ಪಿಕ್ಸೆಲ್ 3 XL ಸ್ಮಾರ್ಟ್‌ಫೋನ್ ಕಾಣಿಸಿಕೊಳ್ಳಲಿದೆ. ಇದಲ್ಲದೇ ಇದರಲ್ಲಿ 4 GB RAM ನೀಡಲಾಗಿದೆ. ಅಲ್ಲದೇ ಎರಡು ಮಾದರಿಯ ಆವೃತ್ತಿಯಲ್ಲಿ ಈ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

ಹಿಂಭಾಗದಲ್ಲಿ ಸಿಂಗಲ್ ಕ್ಯಾಮೆರಾ:
ಆದರೆ ಗೂಗಲ್ ಪಿಕ್ಸೆಲ್ 3 XL ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಹೊಂದಿಲ್ಲ ಎನ್ನಲಾಗಿದೆ. ಈ ಹಿಂದಿನ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಿಸಿಕೊಂಡ ಮಾದರಿಯಲ್ಲಿಯೇ ಸಿಂಗಲ್ ಕ್ಯಾಮೆರಾವನ್ನು ನೀಡಲಾಗಿದೆ. ಆದರೆ ಕ್ಯಾಮೆರಾ UI ಅನ್ನು ಬದಲಾವಣೆ ಮಾಡಲಾಗಿದೆ.


Click it and Unblock the Notifications








