ಭಾರತದಲ್ಲಿ PlayStation ಬ್ಲ್ಯಾಕ್ ಫ್ರೈಡೇ 2025 ಡೀಲ್‌ಗಳು ಪ್ರಕಟ!
ಜನಪ್ರಿಯ ಗೇಮಿಂಗ್ ಬ್ರ್ಯಾಂಡ್ ಪ್ಲೇಸ್ಟೇಷನ್ ಇಂಡಿಯಾ (PlayStation India) 2025 ಬ್ಲಾಕ್ ಫ್ರೈಡೇ ಕೊಡುಗೆಗಳನ್ನು ಅಧಿಕೃತವಾಗಿ ಪ್ರಕಟಿಸಿದೆ. ಇದೇ ನವೆಂಬರ್ 21 ರಿಂದ ಡಿಸೆಂಬರ್ 4 ರವರೆಗೆ ದೇಶದಲ್ಲಿ 'ಬ್ಲ್ಯಾಕ್ ಫ್ರೈಡೇ 2025 ಸೇಲ್' ಆಯೋಜಿಸಲಾಗಿದ್ದು, ಈ ಸೇಲ್‌ನಲ್ಲಿ PS5 ಕನ್ಸೋಲ್‌ಗಳು, DualSense ಕಂಟ್ರೋಲರ್, PS VR2, ಪ್ಲೇಸ್ಟೇಷನ್ ಪೋರ್ಟಲ್, ಹಾಗೂ ಅನೇಕ ಪ್ರಮುಖ PS5 ಗೇಮ್‌ಗಳ ಮೇಲೆ ಭಾರಿ ರಿಯಾಯಿತಿಗಳು ದೊರೆಯಲಿವೆ. ಈ ಸೇಲ್‌ನಲ್ಲಿ ಲಭ್ಯವಿರುವ ಎಲ್ಲಾ ಕೊಡುಗೆಗಳ ಪಟ್ಟಿ ಇಲ್ಲಿದೆ.
PS5 ಕನ್ಸೋಲ್‌ಗಳಿಗೆ ದೊಡ್ಡ ರಿಯಾಯಿತಿ
ಈ ಬ್ಲಾಕ್ ಫ್ರೈಡೇ ಸೇಲ್ ವೇಳೆ ಎರಡೂ PS5 ಮಾದರಿಗಳಿಗೂ ರಿಯಾಯಿತಿ ಇದೆ. ಇದರಲ್ಲಿ,
PS5 ಡಿಸ್ಕ್ ಎಡಿಷನ್ (PS5 Disc Edition)
ಮೂಲ ಬೆಲೆ ₹54,990 - ರಿಯಾಯಿತಿ ಬೆಲೆ ₹49,990
PS5 ಡಿಜಿಟಲ್ ಎಡಿಷನ್ (PS5 Digital Editio)
ಮೂಲ ಬೆಲೆ ₹49,990 -ರಿಯಾಯಿತಿ ಬೆಲೆ ₹44,990
PS5 ಮೇಲೆ ಇಷ್ಟು ದೊಡ್ಡ ರಿಯಾಯಿತಿ ಅಪರೂಪವಾಗಿದ್ದು, ಹೊಸ ಖರೀದಿದಾರರಿಗೆ ಇದು ಉತ್ತಮ ಅವಕಾಶವಾಗಿದೆ
DualSense ಕಂಟ್ರೋಲರ್ ಈಗ ₹4,390 ರಿಂದ
ಪ್ರಸ್ತುತ ಎಲ್ಲಾ DualSense ಕಂಟ್ರೋಲರ್ ಮಾದರಿಗಳ ಮೇಲೂ ಆಕರ್ಷಕ ರಿಯಾಯಿತಿಗಳು ಲಭ್ಯ:
ಸ್ಟ್ಯಾಂಡರ್ಡ್ ಬಣ್ಣಗಳು (White/Black/Red/Grey Camo/Ice Blue)
ಮೂಲ ಬೆಲೆ ₹6,390 - ರಿಯಾಯಿತಿ ಬೆಲೆ ₹4,390
ಮೆಟಾಲಿಕ್ (MET Blue, MET Red) ಮತ್ತು ಕ್ರೋಮಾ ಸರಣಿ (CHRM Teal, CHRM Indigo):
ಮೂಲ ಬೆಲೆ ₹6,849 - ರಿಯಾಯಿತಿ ಬೆಲೆ ₹4,849
ಕಂಟ್ರೋಲರ್ ಖರೀದಿಸಲು ಬಯಸುವವರಿಗೆ ಅಥವಾ ಹೊಸ ಬಣ್ಣಗಳನ್ನು ಪ್ರಯತ್ನಿಸಲು ಬಯಸುವವರಿಗೆ ಇದು ಉತ್ತಮ ಡೀಲ್ ಆಗಿದೆ.

ಆಕ್ಸೆಸರಿಗಳ ಮೇಲೂ ಭಾರಿ ಬೆಲೆ ಕಡಿತ
ಪ್ರಿಮಿಯಂ ಪ್ಲೇಸ್ಟೇಷನ್ ಆಕ್ಸೆಸರಿಗಳೂ ಈ ಸೇಲ್‌ನಲ್ಲಿ ಉತ್ತಮ ರಿಯಾಯಿತಿಗಳೊಂದಿಗೆ ಲಭ್ಯವಿವೆ, ಇವುಗಳಲ್ಲಿ
PS5 Access Controller: ಮೂಲ ಬೆಲೆ ₹7,700 - ರಿಯಾಯಿತಿ ಬೆಲೆ₹5,700
DualSense Edge: ಮೂಲ ಬೆಲೆ ₹18,990 - ರಿಯಾಯಿತಿ ಬೆಲೆ₹15,990
PS VR2: ಮೂಲ ಬೆಲೆ ₹44,999 - ರಿಯಾಯಿತಿ ಬೆಲೆ ₹34,999
Pulse Elite Wireless Headset: ಮೂಲ ಬೆಲೆ ₹12,990 - ಮೂಲ ಬೆಲೆ ₹7,990
Pulse Explore Wireless Earbuds: ಮೂಲ ಬೆಲೆ ₹18,990 - ಮೂಲ ಬೆಲೆ ₹9,990
PlayStation Portal: ಮೂಲ ಬೆಲೆ ₹18,990 - ಮೂಲ ಬೆಲೆ ₹16,990
ವಿಶೇಷವಾಗಿ PS VR2 ಮೇಲಿನ ₹10,000ರಷ್ಟು ಬೆಲೆ ಕಡಿತ ಗಮನ ಸೆಳೆಯುತ್ತದೆ.
PS5 ಗೇಮ್‌ಗಳ ಭಾರಿ ಸೇಲ್
ಅತ್ಯಂತ ಜನಪ್ರಿಯ ಮತ್ತು ಇತ್ತೀಚಿನ PS5 ಗೇಮ್‌ಗಳ ಮೇಲೂ ದೊಡ್ಡ ರಿಯಾಯಿತಿಗಳು ಘೋಷಿಸಲಾಗಿದೆ. ಕೆಲವು ಮುಖ್ಯ ಗೇಮ್‌ಗಳು:
Horizon Zero Dawn Remastered - ರಿಯಾಯಿತಿ ಬೆಲೆ ₹1,599
Lego Horizon Adventures - ರಿಯಾಯಿತಿ ಬೆಲೆ ₹1,599
Uncharted: Legacy of Thieves Collection - ರಿಯಾಯಿತಿ ಬೆಲೆ ₹1,599
The Last of Us Part II Remastered - ರಿಯಾಯಿತಿ ಬೆಲೆ ರಿಯಾಯಿತಿ ಬೆಲೆ ₹2,099
Ghost of Tsushima Director's Cut - ರಿಯಾಯಿತಿ ಬೆಲೆ ₹2,599
Marvel's Spider-Man 2 - ರಿಯಾಯಿತಿ ಬೆಲೆ ₹2,599
God of War Ragnarök - ರಿಯಾಯಿತಿ ಬೆಲೆ ₹2,099
Stellar Blade - ರಿಯಾಯಿತಿ ಬೆಲೆ ₹3,199
Astro Bot - ರಿಯಾಯಿತಿ ಬೆಲೆ ₹3,199
Death Stranding 2 - ರಿಯಾಯಿತಿ ಬೆಲೆ ₹4,199
ಬಹುತೇಕ ಗೇಮ್‌ಗಳು ಅರ್ಧ ಬೆಲೆಗೆ ದೊರೆಯುತ್ತಿವೆ.
ಈ ರಿಯಾಯಿತಿಗಳು ಅಮೆಜಾನ್, ಫ್ಲಿಪ್ಕಾರ್ಟ್, ಬ್ಲಿಂಕಿಟ್, ಝೆಪ್ಟೋ ಸೇರಿದಂತೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಾಗಲಿವೆ. ಜೊತೆಗೆ ಕ್ರೋಮಾ, ರಿಲಯನ್ಸ್ ಡಿಜಿಟಲ್, ವಿಜಯ್ ಸೇಲ್ಸ್, ಸೋನಿ ಸೆಂಟರ್ ಮತ್ತು ಇತರೆ ಅನುಮೋದಿತ ಅಂಗಡಿಗಳಲ್ಲೂ ಸೇಲ್ ಲಭ್ಯವಾಗಲಿದೆ. ಹಾರ್ಡ್‌ವೇರ್, ಆಕ್ಸೆಸರಿಗಳು ಮತ್ತು ಪ್ರಮುಖ ಎಕ್ಸ್‌ಕ್ಲೂಸಿವ್ ಗೇಮ್‌ಗಳ ಮೇಲೆ ಉತ್ತಮ ಕೊಡುಗೆಗಳನ್ನು ನೀಡುತ್ತಿರುವುದರಿಂದ, ಈ ವರ್ಷದ ಪ್ಲೇಸ್ಟೇಷನ್ ಬ್ಲಾಕ್ ಫ್ರೈಡೇ ಸೇಲ್ ಅತ್ಯಂತ ಆಕರ್ಷಕ ಎಂದು ಹೇಳಬಹುದು. ಹೊಸ PS5 ಖರೀದಿಸುವುದು ಅಥವಾ ಗೇಮ್ ಲೈಬ್ರರಿಯನ್ನು ವಿಸ್ತರಿಸುವ ಉದ್ದೇಶವಿದ್ದರೆ ಈ ಎರಡು ವಾರಗಳ ಅವಧಿ ಗೇಮರ್‌ರಿಗೆ ಅತ್ಯುತ್ತಮ ಸಮಯ ಎನ್ನಬಹುದು.


Click it and Unblock the Notifications








