Home
ಮೊಬೈಲ್

ಕೇವಲ 5,999 ರೂ.! Poco C61 ಅಗ್ಗದ ಫೋನ್ ಭಾರತದಲ್ಲಿ ಲಾಂಚ್: ಜು.17ರಿಂದ ಸೇಲ್

ಶಿಯೋಮಿ (Xiaomi) ಉಪ ಬ್ರಾಂಡ್ ಪೊಕೊ (Poco) ಭಾರತದಲ್ಲಿ ಹೊಸ ಕಡಿಮೆ ಬಜೆಟ್ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದೆ. Poco C61 ಅನ್ನು ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆ ಕೇವಲ 5,999 ರೂಪಾಯಿ. ಇದು ವಾಸ್ತವವಾಗಿ POCO C61 ಏರ್‌ಟೆಲ್ ವಿಶೇಷ ಆವೃತ್ತಿಯಾಗಿದ್ದು, ಇದರೊಂದಿಗೆ ಏರ್‌ಟೆಲ್ ಪೋಸ್ಟ್‌ಪೇಯ್ಡ್ ಸಂಪರ್ಕವೂ ಲಭ್ಯವಿರುತ್ತದೆ. ಈ ಅಗ್ಗದ ಸ್ಮಾರ್ಟ್‌ಫೋನ್‌ನ ಸಂಪೂರ್ಣ ವಿವರಗಳನ್ನು ತಿಳಿಯೋಣ ಬನ್ನಿ.

ಈ ಸ್ಮಾರ್ಟ್‌ಫೋನ್ 6.71 ಇಂಚಿನ HD+ 90Hz ಡಿಸ್ಪ್ಲೇಯನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಹೆಲಿಯೊ ಜಿ 36 ಚಿಪ್‌ಸೆಟ್ ಅನ್ನು ಪಡೆದಿದೆ. 8 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಬ್ಯಾಕ್ ಕ್ಯಾಮೆರಾ ಹೊಂದಿದೆ. ಇದು 5,000mAh ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ ಮತ್ತು ಆಫರ್ ಬಗ್ಗೆ ತಿಳಿಯಲು ಮುಂದೆ ಓದಿ.

ಕೇವಲ 5,999 ರೂ.! Poco C61 ಅಗ್ಗದ ಫೋನ್ ಭಾರತದಲ್ಲಿ ಲಾಂಚ್: ಜು.17ರಿಂದ ಸೇಲ್

POCO C61 ಬೆಲೆ ಮತ್ತು ಮಾರಾಟ

Poco C61 Airtel ವಿಶೇಷ ಮೊಬೈಲ್ ಫೋನ್ ಅನ್ನು 5,999 ರೂ.ಗೆ ಬಿಡುಗಡೆ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ 4GB RAM ಮತ್ತು 64GB ಸ್ಟೋರೇಜ್ ಹೊಂದಿದೆ. ಹೊಸ ಪೊಕೊ ಫೋನ್ ಅನ್ನು ಜುಲೈ 17 ರಿಂದ ಖರೀದಿಸಬಹುದು. ಮತ್ತು ಇದು ಪ್ರಸಿದ್ಧ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್‌ನ ಮೂಲಕ ಮಾರಾಟವಾಗಲಿದೆ. ಈ ಫೋನ್ ಅನ್ನು ಎಥೆರಿಯಲ್ ಬ್ಲೂ, ಡೈಮಂಡ್ ಬಸ್ಟ್ ಬ್ಲಾಕ್ ಮತ್ತು ಮಿಸ್ಟಿಕಲ್ ಗ್ರೀನ್ ಬಣ್ಣಗಳಲ್ಲಿ ಖರೀದಿಸಬಹುದು.

50GB ಡೇಟಾ ಉಚಿತ, 750 ರೂ. ಡಿಸ್ಕೌಂಟ್‌

ಈ ಪೊಕೊ ಸ್ಮಾರ್ಟ್‌ಫೋನ್ ಏರ್‌ಟೆಲ್ ಪ್ರಿಪೇಯ್ಡ್ ಸಂಪರ್ಕದೊಂದಿಗೆ ಬರುತ್ತದೆ. ಫೋನ್ 18 ತಿಂಗಳವರೆಗೆ ಏರ್‌ಟೆಲ್ ಸಿಮ್ ಲಾಕ್ ಆಗಿರುತ್ತದೆ. ಈ ಅವಧಿಗೆ ನೀವು ಮೊಬೈಲ್‌ನಲ್ಲಿ ಏರ್‌ಟೆಲ್ ಸಿಮ್ ಅನ್ನು ಮಾತ್ರ ಬಳಸಬೇಕಾಗುತ್ತದೆ. ಇನ್ನೂ ಕಂಪನಿಯು 50GB ಡೇಟಾವನ್ನು ಉಚಿತವಾಗಿ ನೀಡುತ್ತದೆ. ಏರ್‌ಟೆಲ್ ಬಳಕೆದಾರರಿಗೆ ಕಂಪನಿಯು 7.5% ಅಥವಾ 750 ರೂ. ವರೆಗೆ ಡಿಸ್ಕೌಂಟ್‌ ಅನ್ನು ನೀಡುತ್ತದೆ. ಈ ಪ್ರಯೋಜನವನ್ನು ಪಡೆಯಲು, ನೀವು ಪ್ರತಿ ತಿಂಗಳು ಕನಿಷ್ಠ 199 ರೂ. ಅಥವಾ ಅದಕ್ಕಿಂತ ಹೆಚ್ಚು ರೀಚಾರ್ಜ್ ಮಾಡಬೇಕಾಗುತ್ತದೆ.

POCO C61 ಏರ್‌ಟೆಲ್ ವಿಶೇಷತೆಗಳು

ಡಿಸ್ಪ್ಲೇ: ಪೊಕೊ ಸಿ61 ಫೋನ್ 1650 x 720 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ 6.71 ಇಂಚಿನ HD + ಡಿಸ್ಪ್ಲೇಯನ್ನು ಹೊಂದಿದೆ. ಇದು IPS LCD ಡಿಸ್ಲ್ಪೇ ಆಗಿದ್ದು, ಅದು 90Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಇದು 500nits ಗರಿಷ್ಠ ಬ್ರೈಟ್‌ನೆಸ್‌ ಮತ್ತು ಗೊರಿಲ್ಲಾ ಗ್ಲಾಸ್ 3ನಿಂದ ರಕ್ಷಣೆ ಪಡೆದಿದೆ.

ಪ್ರೊಸೆಸರ್: ಪೊಕೊ ಸಿ61 ಅನ್ನು MediaTek Helio G36 ಚಿಪ್‌ಸೆಟ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ. ಈ ಆಕ್ಟಾಕೋರ್ 2.2 GHz ಗಡಿಯಾರದ ವೇಗದಲ್ಲಿ ಚಲಿಸಬಹುದು.

ಕ್ಯಾಮೆರಾ ಸೆಟಪ್: ಈ ಫೋನ್ ಎಐ (AI) ತಂತ್ರಜ್ಞಾನದೊಂದಿಗೆ ಡ್ಯುಯಲ್ ಕ್ಯಾಮೆರಾವನ್ನು ಹೊಂದಿದೆ. ಇದು 8 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಪಡೆದಿದೆ. ಈ ಸ್ಮಾರ್ಟ್‌ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 5 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಬ್ಯಾಕಪ್: ಪೊಕೊ ಸಿ61 ಸ್ಮಾರ್ಟ್‌ಫೋನ್ ಅನ್ನು 5,000 mAh ಬ್ಯಾಟರಿಯೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಚಾರ್ಜಿಂಗ್‌ಗಾಗಿ, ಇದು USB ಟೈಪ್-C ಪೋರ್ಟ್ ಮತ್ತು 10W ಚಾರ್ಜಿಂಗ್ ವೇಗವನ್ನು ಹೊಂದಿದೆ.

ಇತರೆ ಫೀಚರ್ಸ್: ಪೊಕೊ ಸಿ61 ಫೋನ್ ಭದ್ರತೆಗಾಗಿ ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಆಡಿಯೋಗಾಗಿ 3.5mm ಹೆಡ್‌ಫೋನ್ ಜ್ಯಾಕ್, ಸ್ಪೀಕರ್, ಡ್ಯುಯಲ್ ಸಿಮ್ 4G, ಬ್ಲೂಟೂತ್ 5.3 ಮತ್ತು ಸಂಪರ್ಕಕ್ಕಾಗಿ Wi-Fi 5 ಅನ್ನು ಹೊಂದಿದೆ.

Best Mobiles in India

English summary
Poco C61 Airtel exclusive variant Launched in India. Price Starts at Rs 5,999: Sale Starts on July 17 : price, specifications
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+