Poco C75 5G vs Samsung Galaxy F05: ಜಸ್ಟ್ 7,999 ರೂ.! ಯಾವ ಫೋನ್ ಬೆಸ್ಟ್? ಹೇಗಿವೆ ಫೀಚರ್ಸ್
Poco C75 5G vs Samsung Galaxy F05: ನೀವು ಅಗ್ಗದ ಬೆಲೆಯಲ್ಲಿ ಹೊಸ ಮೊಬೈಲ್ ಖರೀದಿಸಲು ಬಯಸುತ್ತಿದ್ದೀರಾ? ಕೇವಲ 7,999 ರೂ.ಗೆ ಎರಡು ಫೋನ್‌ಗಳು ಲಭ್ಯವಿದೆ. ಹೌದು, ಪೊಕೊ C75 5G (Poco C75 5G) ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ F05 (Samsung Galaxy F05) ಎರಡು ಕೈಗೆಟುಕುವ ಸ್ಮಾರ್ಟ್‌ಫೋನ್‌ಗಳಾಗಿವೆ. ಅಗ್ಗದ ದರವೆಂಬ ಕಾರಣಕ್ಕೆ ಈ ಫೋನ್‌ಗಳ ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳಲ್ಲಿ ಕಂಪನಿಯು ಯಾವುದೇ ರಾಜಿ ಮಾಡಿಕೊಂಡಿಲ್ಲ. ಆದರೆ, ಇವೆರಡೂ ಫೋನ್‌ಗಳ ನಡುವೆ ಕೆಲವು ವ್ಯತ್ಯಾಸಗಳಿವೆ.
ಹೌದು, ಪೊಕೊ C75 5G ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ F05 ಫೋನ್‌ಗಳ ಬೆಲೆ ಒಂದೇ ಆಗಿದೆ. ಈ ಪೈಕಿ ಪೊಕೊ C75 5G ಮೊಬೈಲ್ ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾಗಿದೆ. ಈಗಾಗಲೇ, ಮೊಬೈಲ್ ಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಬನ್ನಿ, ಈ ಎರಡೂ ಫೋನ್‌ಗಳ ಬೆಲೆ, ವಿಶೇಷತೆಗಳು ಮತ್ತು ನೀವು ಯಾವ ಫೋನ್ ಖರೀದಿಸಬೇಕು ಎನ್ನುವುದನ್ನು ತಿಳಿಯೋಣ.

ಪೊಕೊ C75 5G ಮತ್ತು ಗ್ಯಾಲಕ್ಸಿ F05 ವ್ಯತ್ಯಾಸಗಳು
ಡಿಸ್ಪ್ಲೇ ವಿವರ
ಪೊಕೊ C75 ಮೊಬೈಲ್ 6.68 ಇಂಚಿನ ಹೆಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು 1600x720 ಪಿಕ್ಸೆಲ್ ರೆಸಲ್ಯೂಶನ್ ಮತ್ತು 120 Hz ರಿಫ್ರೆಶ್ ದರದ ಬೆಂಬಲ ಪಡೆದಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ F05 ಮೊಬೈಲ್ 6.7 ಇಂಚಿನ ಹೆಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು 720 x 1600 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 60Hz ರಿಫ್ರೆಶ್ ದರ ಹೊಂದಿದೆ.
ಪ್ರೊಸೆಸರ್ ಯಾವುದು
ಪೊಕೊ C75 ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 4s ಜೆನ್ 2 ಪ್ರೊಸೆಸರ್ ಹೊಂದಿದೆ. ಇದು ಗ್ರಾಫಿಕ್ಸ್‌ಗಾಗಿ, ಅಡ್ರಿನೊ 611 ಜಿಪಿಯು ಸಹ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 14 ಆಧಾರಿತ ಶಿಯೋಮಿ ಹೈಪರ್ ಒಎಸ್‌ನಲ್ಲಿ ಕೆಲಸ ಮಾಡುತ್ತದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ F05 ಫೋನ್ ಮಿಡಿಯಾಟೆಕ್ ಹೆಲಿಯೋ G85 ಪ್ರೊಸೆಸರ್ ಹೊಂದಿದೆ.
ಸ್ಟೋರೇಜ್ ಆಯ್ಕೆ
ಪೊಕೊ C75 ಸ್ಮಾರ್ಟ್‌ಫೋನ್ 4GB RAM ಮತ್ತು 64GB ಸ್ಟೋರೇಜ್ ಹೊಂದಿದೆ. ಮೈಕ್ರೊ ಎಸ್‌ಡಿ ಕಾರ್ಡ್‌ನ ಸಹಾಯದಿಂದ 1TB ವರೆಗೆ ಸ್ಟೋರೇಜ್ ಹೆಚ್ಚಿಸಬಹುದು. ಸ್ಯಾಮ್‌ಸಂಗ್ ಗ್ಯಾಲಕ್ಸಿ F05 ಫೋನ್ ವರ್ಚುವಲ್ RAM ಹೊಂದಿದೆ. ನೀವು 8GB ವರೆಗೆ ವಿಸ್ತರಿಸಬಹುದು. ಮೈಕ್ರೊ ಎಸ್‌ಡಿ ಕಾರ್ಡ್ ಸಹಾಯದಿಂದ 1TB ವರೆಗೆ ಸ್ಟೋರೇಜ್ ವಿಸ್ತರಿಸಬಹುದು.
ಕ್ಯಾಮೆರಾ ಸೆಟಪ್
ಪೊಕೊ C75 ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ F05 ಎರಡೂ ಫೋನ್‌ಗಳು 50 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿವೆ. ಪೊಕೊ C75 ಫೋನ್ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಆದರೆ, ಸ್ಯಾಮ್‌ಸಂಗ್ ಗ್ಯಾಲಕ್ಸಿ F05 ಫೋನ್ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.
ಬ್ಯಾಟರಿ ಬ್ಯಾಕಪ್
ಹೊಸ ಪೊಕೊ C75 ಫೋನ್ 5160mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ಚಾರ್ಜ್ ಮಾಡಲು, 18W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ F05 ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ಚಾರ್ಜ್ ಮಾಡಲು, 25W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.
ಎರಡೂ ಫೋನ್‌ಗಳ ಬೆಲೆ ಎಷ್ಟು?
ಪೊಕೊ C75 ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ F05 ಮೊಬೈಲ್ 4GB + 64GB ಸ್ಟೋರೇಜ್ ರೂಪಾಂತರಗಳಲ್ಲಿ ಮಾರಾಟವಾಗುತ್ತಿವೆ. ಎರಡೂ ಫೋನ್‌ಗಳು ಕೇವಲ 7,999 ರೂ.ಗೆ ಖರೀದಿಗೆ ಲಭ್ಯವಿದೆ. ಈ ಲೇಖನದಲ್ಲಿ ಎರಡೂ ಮೊಬೈಲ್‌ಗಳ ಎಲ್ಲಾ ವೈಶಿಷ್ಟ್ಯಗಳ ಬಗ್ಗೆ ವಿವರವಾಗಿ ತಿಳಿಸಲಾಗಿದೆ. ನಿಮಗೆ ಯಾವ ಫೋನ್ ಉತ್ತಮ ಎನಿಸುತ್ತದೆಯೋ, ಅದನ್ನು ಖರೀದಿಸಬಹುದು.


Click it and Unblock the Notifications








