ಬಜೆಟ್ ಸೆಗ್ಮೆಂಟಿಗೆ ಬರುತ್ತಿರುವ Poco C85 5G ಫೀಚರ್ಸ್ ಬಹಿರಂಗ!
ಗೇಮಿಂಗ್ ಪ್ರಿಯರ ನೆಚ್ಚಿನ ಮೊಬೈಲ್ ಬ್ರ್ಯಾಂಡ್‌ಗಳಲ್ಲಿ ಒಂದಾದ Poco ತನ್ನ ಮುಂದಿನ ಬಜೆಟ್ 5G ಸ್ಮಾರ್ಟ್‌ಫೋನ್ Poco C85 5G ಅನ್ನು ಭಾರತದಲ್ಲಿ ಡಿಸೆಂಬರ್ 9 ರಂದು ಬಿಡುಗಡೆ ಮಾಡಲು ಸಜ್ಜಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಲೈವ್ ಆಗಿರುವ ವಿಶೇಷ ಪುಟದ ಮೂಲಕ ಈ ಮುಂಬರುವ Poco C85 5G ಫೋನ್‌ನ ಕೆಲವು ಪ್ರಮುಖ ವೈಶಿಷ್ಟ್ಯಗಳು ಈಗಲೇ ಹೊರಬಿದ್ದಿದ್ದು, Poco ಈ ಬಾರಿ ದೊಡ್ಡ ಡಿಸ್‌ಪ್ಲೇ, ಭಾರಿ ಬ್ಯಾಟರಿ ಹಾಗೂ ಬಳಕೆದಾರರಿಗೆ ಕಣ್ಣುಗಳಿಗೆ ಸುರಕ್ಷಿತವಾದ ಸ್ಕ್ರೀನ್ ಟೆಕ್ನಾಲಜಿ ನೀಡುವುದನ್ನು ಪ್ರಮುಖವಾಗಿ ಪ್ರಚಾರ ಮಾಡುತ್ತಿದೆ.!
120Hz ರಿಫ್ರೆಶ್ ರೇಟ್ ಇರುವ 6.9 ಇಂಚಿನ ದೊಡ್ಡ ಡಿಸ್‌ಪ್ಲೇ
Poco ದೃಢಪಡಿಸಿದಂತೆ, Poco C85 5G ಫೋನಿನಲ್ಲಿ 6.9 ಇಂಚಿನ HD+ ಡಿಸ್‌ಪ್ಲೇ ಇರುತ್ತದೆ. ಈ ಸ್ಕ್ರೀನ್ 120Hz ರಿಫ್ರೆಶ್ ರೇಟ್ ಬೆಂಬಲಿಸುತ್ತಿದ್ದು, ಗೇಮಿಂಗ್, ಸೋಶಿಯಲ್ ಮೀಡಿಯಾ ಸ್ಕ್ರೋಲಿಂಗ್ ಹಾಗೂ ವೀಡಿಯೊ ವೀಕ್ಷಣೆ ಎಲ್ಲವನ್ನೂ ಸ್ಮೂತ್ ಮಾಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಡಿಸ್ಪ್ಲೇ 810 ನಿಟ್ಸ್ ಪೀಕ್ ಬ್ರೈಟ್‌ನೆಸ್ ನೀಡುವುದರಿಂದ, ಹೊರಗಿನ ಬೆಳಕಿನಲ್ಲೂ ಸ್ಪಷ್ಟತೆ ಉತ್ತಮವಾಗಿರುತ್ತದೆ. ಇಷ್ಟೇ ಅಲ್ಲದೆ, ಈ ಡಿಸ್‌ಪ್ಲೇಯನ್ನು TÜV Low Blue Light, Flicker-Free, ಮತ್ತು Circadian Certification ಗಳೊಂದಿಗೆ ಒದಗಲಾಗಿದ್ದು, ದೀರ್ಘಕಾಲ ಫೋನ್ ಬಳಸುವವರ ಕಣ್ಣುಗಳ ಮೇಲೆ ಒತ್ತಡ ಕಡಿಮೆ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ ಎಂದು Poco ಹೇಳಿಕೊಂಡಿದೆ
ಸ್ಲಿಮ್ ಡಿಸೈನ್ ಮತ್ತು ಮೂರು ಆಕರ್ಷಕ ಬಣ್ಣಗಳು
ಈ ಹಿಂದೆ ಹೇಳಿದಂತೆ, Poco C85 5G ಫೋನ್ ಭಾರತದಲ್ಲಿ ಇದೇ ಡಿಸೆಂಬರ್ 9 ರಂದು ಮಧ್ಯಾಹ್ನ 12 ಗಂಟೆಗೆ IST ಕ್ಕೆ ಬಿಡುಗಡೆಯಾಗಲಿದೆ. ದೇಶದಲ್ಲಿ ಈ ಫೋನ್ ಅನ್ನು Mystic Purple, Spring Green, ಮತ್ತು Power Black ಎಂಬ ಮೂರು ಬಣ್ಣಗಳಲ್ಲಿ ಪರಿಚಯಿಸುವುದನ್ನು ಕಂಪೆನಿಯು ಅಧಿಕೃತಪಡಿಸಿದೆ. ಜೊತೆಗೆ, ಈ Poco C85 5G ಫೋನ್ ಕೇವಲ 7.99mm ದಪ್ಪ ಹೊಂದಿರುವ ಸ್ಲಿಮ್ ಬಾಡಿ ವಿನ್ಯಾಸದಲ್ಲಿ ಬರುತ್ತದೆ. ಫೋನ್‌ನ ಮುಂಭಾಗದಲ್ಲಿ ಸೆಲ್ಫಿ ಕ್ಯಾಮೆರಾ ಹೊಂದಿರುವ ವಾಟರ್‌ಡ್ರಾಪ್ ನಾಚ್ ಸ್ಟೈಲ್ ಇದೆ. ಜೊತೆಗೆ, ಹೊರಾಂಗಣದಲ್ಲಿ ಹೆಚ್ಚು ಜೋರಾಗಿ ಸಂಗೀತ ಕೇಳಲು ಈ ಫೋನಿನಲ್ಲಿ 200% Super Volume Mode ಸಹ ಲಭ್ಯವಿರಲಿದೆ ಎಂದು ತಿಳಿಸಲಾಗಿದೆ.

6,000mAh ದೊಡ್ಡ ಬ್ಯಾಟರಿ: ದಿನಪೂರ್ತಿ ಬಳಕೆಗೆ!
ಮುಂಬರುವ Poco C85 5G ಫೋನಿನನ ಮತ್ತೊಂದು ಮುಖ್ಯ ಆಕರ್ಷಣೆ ಅದರ 6,000mAh ಬ್ಯಾಟರಿ. Poco ನೀಡಿರುವ ಅಂದಾಜು ಬಳಕೆಗಳ ಪ್ರಕಾರ, ಈ ಬ್ಯಾಟರಿಯು 29 ಗಂಟೆಗಳಿಗಿಂತ ಹೆಚ್ಚು ಸೋಶಿಯಲ್ ಮೀಡಿಯಾ ಬಳಕೆ,16 ಗಂಟೆಗಳ Instagram Reels ವೀಕ್ಷಣೆ,106 ಗಂಟೆಗಳಿಗಿಂತ ಹೆಚ್ಚು ಮ್ಯೂಸಿಕ್ ಪ್ಲೇಬ್ಯಾಕ್,23 ಗಂಟೆಗಳ WhatsApp ಮೆಸೇಜಿಂಗ್ ಬಳಕೆಗೆ ಸಾಕಾಗುತ್ತದೆ. ಚಾರ್ಜಿಂಗ್ ವಿಷಯದಲ್ಲಿ, ಈ ಫೋನ್ 33W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತಿದ್ದು, 1% ರಿಂದ 50% ಕೇವಲ 28 ನಿಮಿಷಗಳಲ್ಲಿ ಚಾರ್ಜ್ ಆಗುತ್ತದೆ. ಜೊತೆಗೆ 10W ರಿವರ್ಸ್ ಚಾರ್ಜಿಂಗ್ ಸಹ ಇದೆ, ಇದರಿಂದ ನೀವು ಇನ್ನೊಂದು ಸಾಧನವನ್ನು ಚಾರ್ಜ್ ಮಾಡಬಹುದು.
50MP AI ಕ್ಯಾಮೆರಾ ಮತ್ತು Dimensity 6100+ ಪ್ರೊಸೆಸರ್
ಫೋಟೊಗ್ರಫಿಗಾಗಿ Poco C85 5G ಫೋನಿನಲ್ಲಿ 50MP AI ಪ್ರೈಮರಿ ಕ್ಯಾಮೆರಾ ಇರುವ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಇದೆ. ಕಾರ್ಯಕ್ಷಮತೆಗಾಗಿ, Poco C85 5G ಫೋನ್ ಅನ್ನು MediaTek Dimensity 6100+ 5G ಚಿಪ್‌ಸೆಟ್ ಚಾಲನೆ ಮಾಡುತ್ತದೆ. ಇದು ಎರಡು Cortex-A76 ಕೋರ್‌ಗಳು ಮತ್ತು ಆರು Cortex-A55 ಕೋರ್‌ಗಳೊಂದಿಗೆ ಬರುತ್ತದೆ ಮತ್ತು ಗರಿಷ್ಠ 2.20GHz ವೇಗ ಒದಗಿಸುತ್ತದೆ. ಇಷ್ಟು ಅಧಿಕೃತ ವಿಷಯಗಳು ತಿಳಿದುಬಂದ ನಂತರ, ಸಾಫ್ಟ್‌ವೇರ್ ವಿಭಾಗದಲ್ಲಿ ಈ ಫೋನ್ Android 16 ಮೇಲೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ.


Click it and Unblock the Notifications








