ಇಂದಿನಿಂದ Poco C85x 5G ಮೊದಲ ಸೇಲ್: ₹9,999 ಕ್ಕೆ ಬಜೆಟ್ 5G ಫೋನ್!
Poco ಕಂಪೆನಿಯು ಭಾರತದಲ್ಲಿ ಇತ್ತೀಚಿಗಷ್ಟೇ ಪರಿಚಯಿಸಿರುವ ಹೊಸ ಬಜೆಟ್ 5G ಸ್ಮಾರ್ಟ್‌ಫೋನ್ Poco C85x 5G ಇಂದಿನಿಂದ (ಮಾರ್ಚ್ 14 ) ಖರೀದಿಗೆ ಲಭ್ಯವಾಗುತ್ತಿದೆ. ಇಂದು ಮಧ್ಯಾಹ್ನ 12 ಗಂಟೆಯಿಂದ ಫ್ಲಿಪ್‌ಕಾರ್ಟ್ ನಲ್ಲಿ Poco C85x 5G ಫೋನ್ ಮಾರಾಟಕ್ಕೆ ಬರುತ್ತಿದ್ದು, ಗ್ರಾಹಕರು ಬ್ಲಾಕ್, ಗೋಲ್ಡ್ ಮತ್ತು ಗ್ರೀನ್ ಎಂಬ ಮೂರು ಬಣ್ಣಗಳ ಆಯ್ಕೆಗಳಲ್ಲಿ ಫೋನ್ ಅನ್ನು ಖರೀದಿಸಬಹುದು. ವಿಶೇಷವೆಂದರೆ, ಈ ಫೋನಿನ ಪ್ರಾರಂಭಿಕ ಬೆಲೆ (₹1,000 ಬ್ಯಾಂಕ್ ಕೊಡುಗೆ ಸೇರಿದಂತೆ) ಕೇವಲ ₹9,999 ರೂ. ಗಳಾಗಿದೆ. ಹಾಗಾದರೆ, ಹೊಸ Poco C85x 5G ಫೋನ್ ಹೇಗಿದೆ?, ಫೀಚರ್ಸ್ ಯಾವುವು ಎಂಬುದನ್ನು ನೋಡೋಣ ಬನ್ನಿ.
Poco C85x 5G : ಬೆಲೆ ಮಾಹಿತಿ
ಮೊದಲೇ ಹೇಳಿದಂತೆ, ದೇಶದಲ್ಲಿ Poco C85x 5G ಫೋನ್‌ನ ಪ್ರಾರಂಭಿಕ ಬೆಲೆ ₹10,999 ರೂ. ಆಗಿದೆ. ಈ ಬೆಲೆಯಲ್ಲಿ 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಮಾದರಿ ದೊರೆಯುತ್ತದೆ. ಮತ್ತೊಂದು 4GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಆವೃತ್ತಿಯ ಬೆಲೆ ₹11,999 ಆಗಿದೆ. ಆದರೆ, ಆಯ್ದ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಲ್ಲಿ (HDFC, ICICI, ಅಥವಾ SBI) ₹1,000 ರಷ್ಟು ತ್ವರಿತ ರಿಯಾಯಿತಿ ಅನ್ವಯವಾಗುತ್ತದೆ, ಇದು ಫೋನಿನ ಪರಿಣಾಮಕಾರಿ ಆರಂಭಿಕ ಬೆಲೆಯನ್ನು ₹9,999 ಕ್ಕೆ ಇಳಿಸುತ್ತದೆ.

Poco C85x 5G : ಪ್ರಮುಖ ವೈಶಿಷ್ಟ್ಯಗಳು
Poco C85x 5G ಫೋನ್‌ನಲ್ಲಿ 6.9 ಇಂಚಿನ HD+ (720×1600 ಪಿಕ್ಸೆಲ್) AdaptiveSync ಡಿಸ್ಪ್ಲೇ ನೀಡಲಾಗಿದೆ. ಇದರಲ್ಲಿ 120Hz ರಿಫ್ರೆಶ್ ರೇಟ್ ಇರುವುದರಿಂದ ಸ್ಕ್ರೋಲಿಂಗ್ ಹಾಗೂ ಗೇಮಿಂಗ್ ವೇಳೆ ಸ್ಮೂತ್ ಅನುಭವ ಸಿಗುತ್ತದೆ. 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಹಾಗೂ ಗರಿಷ್ಠ 800 ನಿಟ್ಸ್ ಬ್ರೈಟ್‌ನೆಸ್ ಕೂಡ ಇದೆ. ಕಣ್ಣುಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಡಿಸ್ಪ್ಲೇಗೆ ಸಂಸ್ಥೆಯ Circadian Friendly, Low Blue Light ಮತ್ತು Flicker Free ಪ್ರಮಾಣಪತ್ರಗಳನ್ನು ನೀಡಲಾಗಿದೆ ಎಂದು Poco ಕಂಪೆನಿ ತಿಳಿಸಿದೆ.
ಕಾರ್ಯಕ್ಷಮತೆಗಾಗಿ ಈ ಸ್ಮಾರ್ಟ್‌ಫೋನ್‌ನಲ್ಲಿ 2.2GHz ವೇಗದ ಆಕ್ಟಾ-ಕೋರ್ Unisoc T8300 ಪ್ರೊಸೆಸರ್ ಬಳಸಲಾಗಿದೆ. ಇದರೊಂದಿಗೆ Mali-G57 GPU, 4GB LPDDR4x RAM ಮತ್ತು ಗರಿಷ್ಠ 128GB ಇಂಟರ್ನಲ್ ಸ್ಟೋರೇಜ್ ನೀಡಲಾಗಿದೆ. ಹೆಚ್ಚುವರಿ ಸಂಗ್ರಹಣೆಯ ಅಗತ್ಯವಿರುವವರಿಗೆ ಮೈಕ್ರೋSD ಕಾರ್ಡ್ ಮೂಲಕ 2TB ವರೆಗೆ ಸ್ಟೋರೇಜ್ ವಿಸ್ತರಿಸುವ ಅವಕಾಶ ಕೂಡ ನೀಡಲಾಗಿದೆ. ಸಾಫ್ಟ್‌ವೇರ್ ವಿಭಾಗದಲ್ಲಿ, ಈ ಫೋನ್ ಶಿಯೋಮಿಯ ಆಂಡ್ರಾಯ್ಡ್ 16-ಆಧಾರಿತ ಹೈಪರ್‌ಓಎಸ್ 3 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಫೋಟೋಗ್ರಫಿಗಾಗಿ Poco C85x 5G ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ವ್ಯವಸ್ಥೆ ನೀಡಲಾಗಿದೆ. ಇದರಲ್ಲಿ 32 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ, ಇದು 10x ಡಿಜಿಟಲ್ ಜೂಮ್ ಬೆಂಬಲಿಸುತ್ತದೆ. ಜೊತೆಗೆ ಇನ್ನೊಂದು ಸಹಾಯಕ ಕ್ಯಾಮೆರಾ ಕೂಡ ಇದೆ, ಆದರೆ ಅದರ ವಿವರಗಳನ್ನು ಕಂಪನಿ ಬಹಿರಂಗಪಡಿಸಿಲ್ಲ. ಸೆಲ್ಫಿ ಹಾಗೂ ವಿಡಿಯೋ ಕಾಲ್‌ಗಳಿಗೆ ಫೋನ್ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ.
ಈ Poco C85x 5G ಸ್ಮಾರ್ಟ್‌ಫೋನ್‌ನ ಪ್ರಮುಖ ಆಕರ್ಷಣೆ ಅದರ ದೊಡ್ಡ 6,300mAh ಬ್ಯಾಟರಿ. ಕಂಪನಿಯ ಹೇಳಿಕೆಯ ಪ್ರಕಾರ ಸಾಮಾನ್ಯ ಬಳಕೆಯಲ್ಲಿ ಇದು ಎರಡು ದಿನಗಳವರೆಗೆ ಬ್ಯಾಟರಿ ಬ್ಯಾಕಪ್ ನೀಡಬಹುದು. ಫೋನ್ 15W ವೈರ್‌ಡ್ ಚಾರ್ಜಿಂಗ್ ಬೆಂಬಲಿಸುತ್ತದೆ. ಜೊತೆಗೆ 7.5W ವೈರ್‌ಡ್ ರಿವರ್ಸ್ ಚಾರ್ಜಿಂಗ್ ಸೌಲಭ್ಯವೂ ಇದೆ, ಇದರ ಮೂಲಕ ಇತರ ಸಾಧನಗಳನ್ನು ಕೂಡ ಚಾರ್ಜ್ ಮಾಡಬಹುದು. ಧೂಳು ಮತ್ತು ಸಣ್ಣ ನೀರಿನ ಚಿಮುಕಿನಿಂದ ರಕ್ಷಣೆಗಾಗಿ IP52 ರೇಟಿಂಗ್ ಕೂಡ ಇದೆ.
ಕನೆಕ್ಟಿವಿಟಿ ವಿಷಯದಲ್ಲಿ Poco C85x 5G ಫೋನ್ 5G, 4G LTE, Wi-Fi 5, Bluetooth 5.4 ಮತ್ತು GPS ಬೆಂಬಲವನ್ನು ಹೊಂದಿದೆ. ಇದರ ಜೊತೆಗೆ 3.5mm ಆಡಿಯೋ ಜ್ಯಾಕ್ ಮತ್ತು USB Type-C ಪೋರ್ಟ್ ಕೂಡ ನೀಡಲಾಗಿದೆ. ಸುರಕ್ಷತೆಗಾಗಿ ಫಿಂಗರ್‌ಪ್ರಿಂಟ್ ಸೆನ್ಸರ್ ಸೇರಿ ಪ್ರಾಕ್ಸಿಮಿಟಿ ಸೆನ್ಸರ್, ಅಕ್ಸೆಲರೋಮೀಟರ್, ಆಂಬಿಯಂಟ್ ಲೈಟ್ ಸೆನ್ಸರ್ ಮತ್ತು ಇ-ಕಂಪಾಸ್ ಸೇರಿದಂತೆ ಹಲವು ಸೆನ್ಸರ್‌ಗಳನ್ನು ಒಳಗೊಂಡಿದೆ. ಫೋನ್‌ನ ಗಾತ್ರ 171.56×79.47×8.15mm ಆಗಿದ್ದು ತೂಕ ಸುಮಾರು 210 ಗ್ರಾಂ ಆಗಿದೆ.
Poco C-ಸೀರೀಸ್‌ನ ಹೊಸ ಸೇರ್ಪಡೆಯಾದ ಈ ಫೋನ್ ಕಡಿಮೆ ಬೆಲೆಯಲ್ಲೇ 6,300mAh ನಷ್ಟು ದೊಡ್ಡ ಬ್ಯಾಟರಿ, 120Hz ರಿಫ್ರೆಶ್ ರೇಟ್ ಡಿಸ್ಪ್ಲೇ ಮತ್ತು 5G ಸಂಪರ್ಕವನ್ನು ನೀಡುವ ಮೂಲಕ ಸಾಮಾನ್ಯ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ದೈನಂದಿನ ಬಳಕೆ, ವಿಡಿಯೋ ವೀಕ್ಷಣೆ ಮತ್ತು ಸೋಶಿಯಲ್ ಮೀಡಿಯಾ ಬಳಸುವವರಿಗೆ ಇದು ಸರಳ ಹಾಗೂ ಶಕ್ತಿಯುತ ಆಯ್ಕೆಯಾಗಬಹುದು. ಹಾಗಾಗಿ, ಇದು ನೀವು ಗಮನಿಸಬಹುದಾದ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್.


Click it and Unblock the Notifications








