ಶಿಯೋಮಿಯ ಅತ್ಯಂತ ಶಕ್ತಿಶಾಲಿ ಫೋನ್ 16,499 ರುಪಾಯಿಗೆ
ಇ-ಕಾಮರ್ಸ್ ಸೈಟ್ ಫ್ಲಿಪ್ ಕಾರ್ಟ್ ನಲ್ಲಿ ಪೋಕೋ ಡೇಸ್ ಸೇಲ್ ನಡೆಯುತ್ತಿದೆ. ಶಿಯೋಮಿಯ ಪೋಕೋ ಎಫ್1 ಸ್ಮಾರ್ಟ್ ಫೋನ್ ಗಳಿಗೆ ಇದೀಗ ಭರ್ಜರಿ ರಿಯಾಯಿತಿಯನ್ನು ಈ ಫ್ಲ್ಯಾಟ್ ಫಾರ್ಮ್ ನಲ್ಲಿ ನೀಡಲಾಗುತ್ತಿದೆ. ಐದು ದಿನಗಳು ನಡೆಯುವ ಸೇಲ್ ಮಾರ್ಚ್ 12 ರಿಂದ ಮಾರ್ಚ್ 16 ರ ವರೆಗೆ ನಡೆಯಲಿದೆ.

ಭಾರತದಲ್ಲಿ ಅತೀ ಕಡಿಮೆ ಬೆಲೆಯ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್ ಹೊಂದಿರುವ ಫೋನ್ ನ್ನು ಫ್ಲಿಪ್ ಕಾರ್ಟ್ ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಈ ಸೇಲಿನ ಭಾಗವಾಗಿ ನೀಡುತ್ತಿದೆ.

ಶಿಯೋಮಿ ಪೋಕೋ ಎಫ್1 ಆಫರ್ ಗಳು:
ಫ್ಲಿಪ್ ಕಾರ್ಟ್ ನಲ್ಲಿ ಪೋಕೋ ಎಫ್1 ಸ್ಮಾರ್ಟ್ ಫೋನಿಗೆ 3,000 ರುಪಾಯಿ ರಿಯಾಯಿತಿ ಬೆಲೆ ಲಭ್ಯವಿದೆ. ಐಸಿಐಸಿಐ ಬ್ಯಾಂಕಿನ ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಸಿ ಶಾಪಿಂಗ್ ಮಾಡಿದರೆ ಹೆಚ್ಚುವರಿಯಾಗಿ 1,500 ರುಪಾಯಿ ರಿಯಾಯಿತಿ ಸಿಗುತ್ತದೆ.
ಪೋಕೋ ಎಫ್1 ನ ಎಲ್ಲಾ ಮೂರು ಸ್ಟೋರೇಜ್ ವೇರಿಯಂಟ್ ನ ಫೋನ್ ಗಳಿಗೂ ಕೂಡ 3,500 ರುಪಾಯಿ ರಿಯಾಯಿತಿ ಬೆಲೆ ಲಭ್ಯವಿದೆ.ಮೂರು ವೇರಿಯಂಟ್ ಗಳು 6GB RAM+64GB ಇಂಟರ್ನಲ್ ಸ್ಟೋರೇಜ್, 6GB RAM+128GB ಇಂಟರ್ನಲ್ ಸ್ಟೋರೇಜ್ ಮತ್ತು 8GB RAM+256GB ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ. ರಿಯಾಯಿತಿಯ ನಂತರ ಪೋಕೋ ಎಫ್1 (6GB RAM+64GB ROM) ನ್ನು ರುಪಾಯಿ16,499 ಕ್ಕೆ (6GB RAM+128GB ROM) ನ್ನು ರುಪಾಯಿ 19,499ಕ್ಕೆ ಮತ್ತು (8GB RAM+256GB ROM) ನ್ನು ರುಪಾಯಿ 23,499 ಕ್ಕೆ ಖರೀದಿಸುವುದಕ್ಕೆ ಅವಕಾಶವಿದೆ.

ಶಿಯೋಮಿ ಪೋಕೋ ಎಫ್1 ವೈಶಿಷ್ಟ್ಯತೆಗಳು :
ಪೋಕೋ ಎಫ್1 ಪಾಲಿಕಾರ್ಬೋನೇಟ್ ಯುನಿಬಾಡಿ ಡಿಸೈನ್ ಮತ್ತು 6.18- ಇಂಚಿನ ಸ್ಕ್ರೀನ್ FHD+ ರೆಸಲ್ಯೂಷನ್ (2340 x 1080 ಪಿಕ್ಸಲ್ಸ್) ಜೊತೆಗೆ ನಾಚ್ ಡಿಸ್ಪ್ಲೇ ಯನ್ನು ಹೊಂದಿದ್ದು ಅದರ ಅನುಪಾತ 19:9 ಆಗಿದೆ. ಇದು ಕ್ವಾಲ್ಕಂ 2.8Ghz 10nn ಫಿನ್ಫಿಟ್ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್ ಜೊತೆಗೆ Adreno 630 GPUವನ್ನು ಹೊಂದಿದೆ.

ಇತರೆ ಫೀಚರ್ ಗಳು:
ಇದು MIUI ನಲ್ಲಿ ರನ್ ಆಗುತ್ತದೆ. ಶಿಯೋಮಿಯ ಸ್ವಂತ ಕಸ್ಟಮ್ UI ಜೊತೆಗೆ ಪೋಕೋ ಲಾಂಚರ್ ನ್ನು ಇದು ಹೊಂದಿದ್ದು ಆಂಡ್ರಾಯ್ಡ್ 8.1 ಓರಿಯೋ ಆಪರೇಟಿಂಗ್ ಆಧಾರಿತವಾಗಿ ರನ್ ಆಗುತ್ತದೆ. 4000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು 8 ಘಂಟೆಗಳ ಗೇಮಿಂಗ್, 30 ಘಂಟೆಗಳ ಟಾಕ್ ಟೈಮ್ ಮತ್ತು 15 ದಿನಗಳ ಸ್ಟ್ಯಾಂಡ್ ಬೈ ಸಮಯವನ್ನು ಇದು ನೀಡುತ್ತದೆ ಜೊತೆಗೆ ಕ್ವಿಕ್ ಚಾರ್ಜ್ 3.0ಗೆ ಬೆಂಬಲ ನೀಡುತ್ತದೆ.

ಕ್ಯಾಮರಾ ವೈಶಿಷ್ಟ್ಯತೆಗಳು:
ಫೋಟೋ ಕ್ಲಿಕ್ಕಿಸುವುದಕ್ಕೆ ಶಿಯೋಮಿ ಪೋಕೋ ಎಫ್1 ನಲ್ಲಿ ಸೆಲ್ಫೀ ಕ್ಯಾಮರಾ ವ್ಯವಸ್ಥೆ ಇದ್ದು 20- ಮೆಗಾಪಿಕ್ಸಲ್ ಸೆನ್ಸರ್ ನ್ನು ಹೊಂದಿದೆ ಜೊತೆಗೆ ಬ್ಯುಟಿಫಿಕೇಷನ್ ಫೀಚರ್ ನ್ನು ಒಳಗೊಂಡಿದೆ. ಹಿಂಭಾಗದಲ್ಲಿ ಡುಯಲ್ ಕ್ಯಾಮರಾ ವ್ಯವಸ್ಥೆ ಇದ್ದು 12 ಮೆಗಾಪಿಕ್ಸಲ್ ನ ಸೋನಿ IMX363 ಸೆನ್ಸರ್ ಮತ್ತು 5 ಮೆಗಾಪಿಕ್ಸಲ್ ನ ಸೆಕೆಂಡರಿ ಸೆನ್ಸರ್ ಕಾರ್ಯ ನಿರ್ವಹಿಸುತ್ತದೆ. ಇದು ಡುಯಲ್ ಪಿಕ್ಸಲ್ ಆಟೋ ಫೋಕಸ್ ಫೀಚರ್ ಮತ್ತು ರಿಯಲ್ ಟೈಮ್ ಎಐ ಫೋಟೋಗ್ರಫಿಗೆ ಬೆಂಬಲ ನೀಡುತ್ತದೆ. ಒಂದೇ ಸಮಯಕ್ಕೆ ಕ್ಯಾಮರಾವು 206 ಸೀನ್ ಗಳನ್ನು ಕ್ಯಾಪ್ಚರ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.


Click it and Unblock the Notifications








