Home
ಮೊಬೈಲ್

ಎಪ್ರಿಲ್ ನಾಲ್ಕರಿಂದ ಎಂಐ ಫ್ಯಾನ್ ಫೆಸ್ಟಿವಲ್ ಆರಂಭ

By Gizbot Bureau

ಶಿಯೋಮಿಯ ಎಂಐ ಫ್ಯಾನ್ ಫೆಸ್ಟಿವಲ್ 2019 ಆರಂಭವಾಗುತ್ತಿದೆ. ಇದೇ ಎಪ್ರಿಲ್ 4 ರಿಂದ ಶನಿವಾರದ ವರೆಗೆ ಅಂದರೆ ಎಪ್ರಿಲ್ 6ರ ವರೆಗೆ ಈ ಫೆಸ್ಟಿವಲ್ ನಡೆಯಲಿದೆ. ಮೂರು ದಿನಗಳ ಈ ಸೇಲ್ ನಲ್ಲಿ ಫೋನ್ ಗಳಾದ ಪೋಕೋ ಎಫ್1 ಮತ್ತು ರೆಡ್ಮಿ ನೋಟ್ 6 ಪ್ರೋ ಸೇರಿದಂತೆ ಇತರೆ ಪ್ರೊಡಕ್ಟ್ ಗಳಾಗಿರುವ ಎಂಐ ಎಲ್ಇಡಿ ಟಿವಿ 4 ಪ್ರೋ, ಎಂಐ ಬ್ಯಾಂಡ್ ಮತ್ತು ಎಂಐ ಏರ್ ಪ್ಯೂರಿಫೈಯರ್ 2ಎಸ್ ಗಳು ಕೂಡ ಕಡಿಮೆ ಬೆಲೆಯಲ್ಲಿ ಸಿಗಲಿದೆ.ಶಿಯೋಮಿ ತನ್ನ ಪ್ರೊಡಕ್ಟ್ ಗಳನ್ನು ಒಂದು ರುಪಾಯಿ ಬೆಲೆಗೆ ಮಾರಾಟ ಮಾಡುವ ಫ್ಲ್ಯಾಶ್ ಸೇಲ್ ಮತ್ತು ಹೊಸ ಮಿಸ್ಟ್ರಿ ಬಾಕ್ಸ್ ಸೇಲ್ ಗಳನ್ನು ಕೂಡ ಈ ಸಮಯದಲ್ಲಿ ನಡೆಸಲಿದೆ. ಎಂಐ.ಕಾಮ್ ಮತ್ತು ಅದರ ಸಹಯೋಗದ ಎಂಐ ಹೋಮ್ ,ಎಂಐ ಸ್ಟೋರ್ ಮತ್ತು ಪಾರ್ಟ್ನರ್ ಆಫ್ ಲೈನ್ ಸ್ಟೋರ್ ಗಳಲ್ಲಿ ನಡೆಯಲಿದೆ.

ಎಂಐ ಫ್ಯಾನ್ ಫೆಸ್ಟಿವಲ್ ನಲ್ಲಿ ಶಿಯೋಮಿ ಮೊಬೈಲ್ ಮತ್ತು ಇತರೆ ಪ್ರೊಡಕ್ಟ್ ಗಳು

ಎಂಐ ಫ್ಯಾನ್ ಫೆಸ್ಟಿವಲ್ ನಲ್ಲಿ ಶಿಯೋಮಿ ಮೊಬೈಲ್ ಮತ್ತು ಇತರೆ ಪ್ರೊಡಕ್ಟ್ ಗಳು

ಶಿಯೋಮಿ ತಿಳಿಸಿರುವಂತೆ ಪೋಕೋ ಎಫ್1 6GB RAM + 128GB ವೇರಿಯಂಟ್ ನ ಫೋನ್ 20,999 ರುಪಾಯಿ ಬೆಲೆಗೆ ಸಿಗುತ್ತದೆ. ಇತ್ತೀಚೆಗೆ ಈ ಫೋನಿನ ಬೆಲೆ 22,999 ಕ್ಕೆ ಇಳಿಕೆಯಾಗಿತ್ತು ಎಂಬುದು ನಿಮಗೆ ನೆನಪಿರಲಿ. ರೆಡ್ಮಿ ನೋಟ್ 5 ಪ್ರೋ 4GB RAM + 64GB ಸ್ಟೋರೇಜ್ ಆಯ್ಕೆಯ ಫೋನ್ ಮತ್ತು 6GB RAM + 64GB ಸ್ಟೋರೇಜ್ ಆಯ್ಕೆಯ ಫೋನ್ ಕ್ರಮವಾಗಿ 10,999 ರುಪಾಯಿ ಮತ್ತು 11,999 ರುಪಾಯಿ ಬೆಲೆಗೆ ಸಿಗುತ್ತದೆ. ಇದರ ನೈಜ ಬೆಲೆ ಕ್ರಮವಾಗಿ 12,999 ರುಪಾಯಿ ಮತ್ತು 13,999 ರುಪಾಯಿಗಳಾಗಿದೆ. ರೆಡ್ಮಿ ನೋಟ್ 6 ಪ್ರೋ 4GB+64GB ಕೂಡ ಕಡಿಮೆ ಬೆಲೆಯಲ್ಲಿ ಸಿಗುತ್ತಿದ್ದು 3,000 ರುಪಾಯಿ ಇಳಿಕೆಯಾಗಿದೆ ಅಂದರೆ ನೀವಿದನ್ನು 10,999 ರುಪಾಯಿಗೆ ಖರೀದಿಸಬಹುದು.

ಇತರೆ ಕೆಲವು ವಸ್ತುಗಳು:

ಇತರೆ ಕೆಲವು ವಸ್ತುಗಳು:

ಹೊಸದಾಗಿ ಬಿಡುಗಡೆಗೊಂಡಿರುವ ರೆಡ್ಮಿ ನೋಟ್ 7, ರೆಡ್ಮಿ ನೋಟ್ 7 ಪ್ರೋ, ರೆಡ್ಮಿ ಗೋ ಗಳು ಕೂಡ ಈ ಸೇಲ್ ನಲ್ಲಿ ಮಾರಾಟ ಮಾಡಲಾಗುತ್ತದೆ. ಎಪ್ರಿಲ್ 4ರಂದು ಭಾರತೀಯ ಕಾಲಮಾನ12pm IST ಯಿಂದ ಸೇಲ್ ಆರಂಭವಾಗುತ್ತದೆ. ರೆಡ್ಮಿನ6, ರೆಡ್ಮಿ 6 ಪ್ರೋ. ರೆಡ್ಮಿ 6ಎ ಮತ್ತು ಹೆಚ್ಚಿನ ಫೋನ್ ಗಳ ಬೆಲೆಯನ್ನು ತಿಳಿಯಲು ಎಂಐ ಫ್ಯಾನ್ಸ್ ಫೆಸ್ಟಿವಲ್ ಪೇಜ್ ಗೆ ತೆರಳಿ. ಎಂಐ ಕಾಂಪ್ಯಾಕ್ಟ್ ಬ್ಲೂಟೂತ್ ಸ್ಪೀಕರ್ 2 (Rs. 699), ಎಂಐ ಇಯರ್ ಫೋನ್ ಗಳು (Rs. 599), ಎಂಐ ಬಾಡಿ ಕಂಪೋಸಿಷನ್ (Rs. 1,499), ಎಂಐ ಏರ್ ಪ್ಯೂರಿಫೈಯರ್ 2ಎಸ್ (Rs 8,499) ಮತ್ತು ಎಂಐ ಬ್ಯಾಂಡ್ HRX ಎಡಿಷನ್ (Rs. 999) ಗಳು ಈ ಸೇಲ್ ನಲ್ಲಿ ರಿಯಾಯಿತಿ ಬೆಲೆಯಲ್ಲಿ ಸಿಗುತ್ತದೆ ಎಂದು ಶಿಯೋಮಿ ತಿಳಿಸಿದೆ.

ಹೆಚ್ ಡಿಎಫ್ ಸಿ ಆಫರ್ :

ಶಿಯೋಮಿಯು ಹೆಚ್ ಡಿಎಫ್ ಸಿ ಬ್ಯಾಂಕ್ ಜೊತೆಗೆ ಕೈಜೋಡಿಸಿದ್ದು ಹೆಚ್ಚುವರಿ 5% ಇನ್ಸೆಂಟ್ ರಿಯಾಯಿತಿಯು 500 ರುಪಾಯಿ ವರೆಗೆ ಹೆಚ್ ಡಿಎಫ್ ಸಿ ಕಾರ್ಡ್ ಬಳಸಿ ಎಂಐ ಎಲ್ಇಡಿ ಟಿವಿ ಮತ್ತು ಎಂಐ ಸೌಂಡ್ ಬಾರ್ ನ್ನು ಇಎಂಐಯಲ್ಲಿ ಖರೀದಿಸಿದವರಿಗೆ ಲಭ್ಯವಾಗುತ್ತದೆ.

ಮೊಬಿಕ್ ವಿಕ್ ಆಫರ್:

ಮೊಬಿಕ್ ವಿಕ್ ಆಫರ್:

ಈ ಸೇಲ್ ನಲ್ಲಿ ಯಾವುದೇ ವಸ್ತುವನ್ನು ಮೊಬಿಕ್ ವಿಕ್ ನಲ್ಲಿ ಖರೀದಿಸಿದರೆ ಇನ್ಸೆಂಟ್ ಸೂಪರ್ ಕ್ಯಾಷ್ ಆಫರ್ ಇದ್ದು 2,000 ರುಪಾಯಿವರೆಗೆ ಪಡೆಯುವ ಅವಕಾಶವಿದೆ. ಎಂಐ ಪೇ ಎಂಟಿಟಿ ಗ್ರಾಹಕರಿಗೆ ಎಂಐ ಟಿವಿಗಳು ಮತ್ತು ರೆಡ್ಮಿ ನೋಟ್ 7 ಗೆಲ್ಲುವ ಅವಕಾಶ ಪ್ರತಿದಿನ ಲಭ್ಯವಾಗುತ್ತದೆ.

ಗೇಮ್ ಪ್ಲಾನ್ ಗಳು:

ಗೇಮ್ ಪ್ಲಾನ್ ಗಳು:

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶಿಯೋಮಿ ಆಕರ್ಷಕ ಗೇಮ್ ಗಳನ್ನು ಪ್ಲಾನ್ ಮಾಡಿದೆ ಉದಾಹರಣೆಗೆ ಫನ್ ಎಂಡ್ ಫ್ಯೂರಿಯಸ್. ಇದರಲ್ಲಿ ಗ್ರಾಹಕರಿಗೆ ರೆಡ್ಮಿ ನೋಟ್ 7 ಗೆಲ್ಲುವ ಅವಕಾಶವಿದೆ. ಪ್ಲೇ ಎಂಡ್ ವಿನ್ ಗೇಮ್ ನಲ್ಲಿ ಬಳಕೆದಾರರಿಗೆ ಪೋಕೋ ಎಫ್1, ಎಂಐ ಬ್ಯಾಂಡ್ 3, ಎಂಐ ಕೂಪನ್ ಗಳನ್ನು ಗೆಲ್ಲುವ ಸದವಕಾಶವಿದೆ.

ಒಂದು ರುಪಾಯಿ ಫ್ಲ್ಯಾಶ್ ಸೇಲ್:

ಒಂದು ರುಪಾಯಿ ಫ್ಲ್ಯಾಶ್ ಸೇಲ್:

ಒಂದು ರುಪಾಯಿಯ ಫ್ಲ್ಯಾಶ್ ಸೇಲ್ ನಲ್ಲಿ ರೆಡ್ಮಿ ನೋಟ್ 7 ಪ್ರೋ, ಪೋಕೋ ಎಫ್1,ಎಂಐ ಸೌಂಡ್ ಬಾರ್, ಎಂಐ ಎಲ್ಇಡಿ ಟಿವಿ 4ಎ ಪ್ರೋ (32ಇಂಚು), ಹೋಮ್ ಸೆಕ್ಯುರಿಟಿ ಕ್ಯಾಮರಾ ಮತ್ತು ಎಂಐ ಸ್ಪೋರ್ಟ್ಸ್ ಬ್ಲೂಟೂತ್ ಇಯರ್ ಫೋನ್ ಗಳನ್ನು ಖರೀದಿಸುವ ಅವಕಾಶವಿದೆ. ಈ ಸೇಲ್ ನ್ನು ಫೆಸ್ಟಿವಲ್ ದಿನಗಳಲ್ಲಿ ಪ್ರತಿದಿನ ಭಾರತೀಯ ಕಾಲಮಾನ 2pm ಗೆ ನಡೆಸಲಾಗುತ್ತದೆ.

ಮಿಸ್ಟ್ರಿ ಬಾಕ್ಸ್ ಸೇಲ್:

ಮಿಸ್ಟ್ರಿ ಬಾಕ್ಸ್ ಸೇಲ್ ನ್ನು ಕೂಡ ಶಿಯೋಮಿ ಆಯೋಜಿಸಿದ್ದು ಇಲ್ಲಿ ಗ್ರಾಹಕರಿಗೆ ಆಕರ್ಷಕ ಸಪ್ರೈಸ್ ಪ್ರೊಡಕ್ಟ್ ಗಳನ್ನು ಗೆಲ್ಲುವ ಅವಕಾಶವಿದೆ. ಇದರಲ್ಲಿ 2,400 ರುಪಾಯಿ ವಸ್ತುಗಳನ್ನು ಕೇವಲ 99 ರುಪಾಯಿಗೆ ಗೆಲ್ಲಬಹುದು. ಮಿಸ್ಟ್ರಿ ಬಾಕ್ಸ್ ಸೇಲ್ ಫೆಸ್ಟಿವಲ್ ನಲ್ಲಿ ಪ್ರತಿದಿನ ಭಾರತೀಯ ಕಾಲಮಾನ 4pm ಗೆ ನಡೆಸಲಾಗುತ್ತದೆ.

ಶಿಯೋಮಿ ಮುಖ್ಯಸ್ಥರ ಹೇಳಿಕೆ:

ಕೆಟಗರೀಸ್ ಮತ್ತು ಆನ್ ಲೈನ್ ಸೇಲ್ ಇಂಡಿಯಾ ವಿಭಾಗದ ಮುಖ್ಯಸ್ಥರಾಗಿರುವ ರಾಘು ರೆಡ್ಡಿಯವರು ಹೇಳುವ ಪ್ರಕಾರ ಶಿಯೋಮಿ ಸಂಸ್ಥೆ ಕಳೆದ ಏಳು ವರ್ಷಗಳಲ್ಲಿ ಜಗತ್ತಿನಾದ್ಯಂತ ಹೆಚ್ಚು ಪ್ರಸಿದ್ಧಿಯಾಗಿದೆ ಮತ್ತು ಮಿಲಿಯನ್ ಗಟ್ಟಲೆ ಎಂಐ ಅಭಿಮಾನಿ ಬಳಗವನ್ನು ಹೊಂದಿದೆ. ಭಾರತದಲ್ಲೂ ಕೂಡ ನಮ್ಮ ಬ್ರ್ಯಾಂಡ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸ್ಮಾರ್ಟ್ ಫೋನ್ ಗಳು, ಸ್ಮಾರ್ಟ್ ಟಿವಿಗಳು, ಪವರ್ ಬ್ಯಾಂಕ್ ಗಳು ಇತ್ಯಾದಿ ಪ್ರೊಡಕ್ಟ್ ಗಳಿಗೆ ಒಳ್ಳೆಯ ಅಭಿಪ್ರಾಯವಿದೆ. ಉತ್ತಮ ಬೆಲೆ ಮತ್ತು ಹೊಸದಾಗಿ ಅನ್ವೇಷಿಸಿದ ನಮ್ಮ ವಸ್ತುಗಳಿಗೆ ಜನರು ನಂಬಿಕೆ ಇಡುತ್ತಾರೆ. ಎಂಐ ಅಭಿಮಾನಿಗಳಿಗಾಗಿ ಈ ಸೇಲ್ ನ್ನು ಆಯೋಜಿಸಲಾಗಿದ್ದು ಈ ಹಬ್ಬದ ಸಂಭ್ರಮಕ್ಕೆ ನಾವು ಅಣಿಯಾಗಿದ್ದೇವೆ ಎಂದಿದ್ದಾರೆ.

Best Mobiles in India

English summary
Poco F1 Discounts, Redmi Note 7 Pro Sale, Re. 1 Flash Sale, and More in Mi Fan Festival 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+