ಇಂದು ಪೊಕೊ F1 ಫಸ್ಟ್‌ ಸೇಲ್: ಖರೀದಿಸುವ ಮುನ್ನ ತಿಳಿಯಲೇ ಬೇಕಾದ ವಿಷಯ..!

|

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಧ್ಯಾಯವನ್ನು ಶುರು ಮಾಡಲಿರುವ ಶಿಯೋಮಿ ಒಡೆತನದ ಪೊಕೊ F1 ಸ್ಮಾರ್ಟ್‌ಫೋನ್ ಇಂದು ಮಧ್ಯಾಹ್ನ 12ಕ್ಕೆ ಮೊದಲ ಬಾರಿಗೆ ಸೇಲ್‌ನಲ್ಲಿ ಕಾಣಿಸಿಕೊಳ್ಳಲಿದೆ. ಈಗಾಗಲೇ ಹಲವು ಮಂದಿ ಈ ಸ್ಮಾರ್ಟ್‌ಫೋನ್ ಅನ್ನು ಖರೀದಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಸ್ಮಾರ್ಟ್‌ಫೋನ್‌ನಲ್ಲಿರುವ ವಿಶೇಷತೆಗಳು ಬೇರೆ ಯಾವುದೇ ಸ್ಮಾರ್ಟ್‌ಫೋನ್‌ನಲ್ಲಿಯೂ ಕಾಣಲು ಸಾಧ್ಯವಿಲ್ಲ, ಇದಕ್ಕಾಗಿಯೇ ಹೆಚ್ಚಿನ ಬೇಡಿಕೆ ನಿರ್ಮಾಣವಾಗಿದೆ.

ಇಂದು ಪೊಕೊ F1 ಫಸ್ಟ್‌ ಸೇಲ್: ಖರೀದಿಸುವ ಮುನ್ನ ತಿಳಿಯಲೇ ಬೇಕಾದ ವಿಷಯ..!

ಮಾರುಕಟ್ಟೆಯಲ್ಲಿ ಇಷ್ಟು ಕಡಿಮೆ ಬೆಲೆಗೆ ಇಷ್ಟು ವಿಶೇಷತೆಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್ ಅನ್ನು ಶಿಯೋಮಿ ಬಿಟ್ಟರೆ ಬೇರೆ ಯಾರಿಂದಲೂ ಮಾರಾಟ ಮಾಡಲು ಸಾಧ್ಯವಿಲ್ಲ ಎನ್ನವ ಮಾತು ಮಾರುಕಟ್ಟೆಯಲ್ಲಿ ಕೇಳಿ ಬಂದಿದೆ. ಮಾರುಕಟ್ಟೆಯಲ್ಲಿ ಪ್ರೀಮಿಯಮ್ ಎನ್ನಿಸಿಕೊಂಡಿರುವ ಎಲ್ಲಾ ಸ್ಮಾರ್ಟ್‌ಫೋನ್‌ಗಳಿಗೂ ಇದು ನೇರವಾಗಿ ಸೆಡ್ಡು ಹೊಡೆಯಲಿದೆ. ಇದರ ವಿಶೇಷತೆಗಳು ಹೆಚ್ಚಿನ ಬೇಡಿಕೆಯನ್ನು ಕ್ರಿಯೇಟ್ ಮಾಡಿದೆ.

ಪೊಕೊ F1 ಸ್ಮಾರ್ಟ್‌ಫೋನ್ ಬೆಲೆ:

ಪೊಕೊ F1 ಸ್ಮಾರ್ಟ್‌ಫೋನ್ ಬೆಲೆ:

ಒಟ್ಟು ನಾಲ್ಕು ಆವೃತ್ತಿಯಲ್ಲಿ ಪೊಕೊ FI ಸ್ಮಾರ್ಟ್‌ಫೋನ್‌ ಮಾರಾಟವಾಗಲಿದೆ.

  • 6GB RAM + 64GB ಕೇವಲ ರೂ.20,999ಕ್ಕೆ
  • 6GB RAM + 128GB ಆವೃತ್ತಿಯೂ 23,999ಕ್ಕೆ
  • 8GB RAM + 256GB ರೂ.28,999ಕ್ಕೆ ಮಾರಾಟವಾಗಲಿದೆ.
  • ಸ್ಪೇಷಲ್ 8GB RAM + 256GB ಆವೃತ್ತಿಯೂ ರೂ.29999ಕ್ಕೆ ಲಭ್ಯವಿರಲಿದೆ.
  • ಮೊದಲ ಸೇಲ್‌ನಲ್ಲಿ ಬಂಪರ್:

    ಮೊದಲ ಸೇಲ್‌ನಲ್ಲಿ ಬಂಪರ್:

    ಮೊದಲ ಸೇಲ್‌ನಲ್ಲಿ ಪೊಕೊ F1 ಸ್ಮಾರ್ಟ್‌ಫೋನ್ ಖರೀದಿ ಮಾಡುವವರು ಬೊಂಬಾಟ್ ಆಫರ್ ಅನ್ನು ಪಡೆದುಕೊಳ್ಳಬಹುದಾಗಿದೆ. ಮೊದಲ ಸೇಲ್‌ಗೆ ಮಾತ್ರವೇ ರೂ,1000 ಕ್ಯಾಷ್ ಬ್ಯಾಕ್ ನೀಡಲಾಗಿದೆ. ಇದರಿಂದಾಗಿ

    • 6GB RAM + 64GB ರೂ.19999ಕ್ಕೆ,
    • 6GB RAM + 128GB ಆವೃತ್ತಿಯೂ 22,999ಕ್ಕೆ
    • 8GB RAM + 256GB ಆವೃತ್ತಿಯೂ ರೂ.27,999ಕ್ಕೆ ದೊರೆಯಲಿದೆ.
    • ಇದರೊಂದಿಗೆ ಜಿಯೋ 6T ಡೇಟಾವನ್ನು ಉಚಿತವಾಗಿ ನೀಡಲಿದೆ.
    • ಸ್ಮಾರ್ಟ್‌ಫೋನ್ ವಿಶೇಷತೆ:

      ಸ್ಮಾರ್ಟ್‌ಫೋನ್ ವಿಶೇಷತೆ:

      6.18 ಇಂಚಿನ FHD+ ಗುಣಮಟ್ಟದ ಡಿಸ್‌ಪ್ಲೇಯನ್ನು ನೀಡಲಾಗಿದೆ ಇದರೊಂದಿಗೆ ನೋಚ್ ನೀಡಲಾಗಿದೆ. ನಿಮಗೆ ನೋಚ್ ಇಷ್ಟವಾಗದೆ ಇದ್ದರೆ ಅನ್ನು ತೆಗೆದು ಹಾಕುವ ಅವಕಾಶವು ಇದೆ. ಜೊತೆಗೆ ಇನ್‌ಫಾರೆಡ್ ಫೇಸ್‌ ಆನ್‌ಲಾಕ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಇದು ಕತ್ತಲೆಯಲ್ಲಿಯೂ ನಿಮ್ಮ ಫೇಸ್‌ ಅನ್ನು ಗುರುತಿಸಿ ಫೇಸ್‌ಆನ್‌ಲಾಕ್ ಮಾಡಲಿದೆ ಎನ್ನಲಾಗಿದೆ.

      ವೇಗದ ಪ್ರೋಸೆಸರ್:

      ವೇಗದ ಪ್ರೋಸೆಸರ್:

      ಪೊಕೊ FI ಸ್ಮಾರ್ಟ್‌ಫೋನ್ ಗೇಮರ್‌ಗಳಿಗೆ ವಿನ್ಯಾಸ ಮಾಡಲಾಗಿದ್ದು, ಇದಕ್ಕಾಗಿಯೇ ಸ್ನಾಪ್‌ಡ್ರಾಗನ್ 845 ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. ಜೊತೆಗೆ ಆಡ್ರಿನೋ 630 GPUವನ್ನು ನೀಡಲಾಗಿದ್ದು, 2.8GHz ವೇಗದ CPUವ್ನು ನೀಡಲಾಗಿದೆ.

      ಉತ್ತಮ ಬ್ಯಾಟರಿ:

      ಉತ್ತಮ ಬ್ಯಾಟರಿ:

      ಪೊಕೊ FI ಸ್ಮಾರ್ಟ್‌ಫೋನಿನಲ್ಲಿ ದೊಡ್ಡ ಬ್ಯಾಟರಿ ನೀಡಲಾಗಿದೆ. 4000mAh ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಇದು ಹೆಚ್ಚಿನ ಪ್ರಮಾಣದ ಬಾಳಿಕೆಯನ್ನು ನೀಡಲಿದೆ. ವೇಗವಾಗಿ ಚಾರ್ಜ್ ಆಗುವ ಸಲುವಾಗಿ ಕ್ವಿಕ್ ಚಾರ್ಜ್ 3.0ವನ್ನು ಅಳವಡಿಸಲಾಗಿದೆ.

      ಬೆಸ್ಟ್ ಸೆಲ್ಫಿ:

      ಬೆಸ್ಟ್ ಸೆಲ್ಫಿ:

      ಪೊಕೊ FI ಸ್ಮಾರ್ಟ್‌ಫೋನಿನಲ್ಲಿ 20 ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಇದರಿಂದಾಗಿ ಬೆಸ್ಟ್ ಸೆಲ್ಪಿಗಳನ್ನು ತೆಗೆಯಬಹುದಾಗಿದೆ. ಇದಕ್ಕದಾಗಿ AI ಬ್ಯೂಟಿಫೈ ಅನ್ನು ಅಳವಡಿಸಲಾಗಿದ್ದು, ಬಳಕೆದಾರರು ಉತ್ತಮ ಸೆಲ್ಫಿಗಳನ್ನು ಕ್ಲಿಕಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

Best Mobiles in India

English summary
poco F1 Smartphone First Sales Today. to know more visit kannada.news.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X