Home
ಮೊಬೈಲ್

ಒನ್‌ಪ್ಲಸ್‌ಗೆ ಖಡಕ್ ಉತ್ತರ: ಪೊಕೊ ಫೋನ್ F1 ಫ್ಲಿಪ್‌ಕಾರ್ಟ್‌ನಲ್ಲಿ ಎಕ್ಸ್‌ಕ್ಲೂಸಿವ್ ಸೇಲ್..!

By Srinidhi

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಧ್ಯಾಯವನ್ನು ಶುರು ಮಾಡಲಿರುವ ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾಕರ ಹಾಗೂ ಭಾರತದಲ್ಲಿ ಅತೀ ಹೆಚ್ಚು ಸ್ಮಾರ್ಟ್‌ಫೋನ್ ಮಾರಾಟ ಮಾಡುವ ಶಿಯೋಮಿ, ಭಾರತೀಯರಿಗೆ ಟಾಪ್ ಎಂಡ್ ಫೋನ್‌ಗಳನ್ನು ಹೊಸ ಮಾದರಿಯಲ್ಲಿ ನೀಡಲು ಪೊಕೊ ಎನ್ನುವ ಹೊಸ ಸಬ್ ಬ್ರಾಂಡ್ ಅನ್ನು ಪರಿಚಯ ಮಾಡಲು ಮುಂದಾಗಿದೆ. ಟಾಪ್ ಎಂಡ್ ಮಾರುಕಟ್ಟೆಯನ್ನು ಗುರಿಯಾಗಿ ಇಟ್ಟುಕೊಂಡು ಪೊಕೊ ಫೋನ್ F1 ಅನ್ನು ಇಂದು ಮಧ್ಯಾಹ್ನ 12 ಗಂಟೆಗೆ ಲಾಂಚ್ ಮಾಡಲಿದೆ.

ಪೊಕೊ ಫೋನ್ F1 ಫ್ಲಿಪ್‌ಕಾರ್ಟ್‌ನಲ್ಲಿ ಎಕ್ಸ್‌ಕ್ಲೂಸಿವ್ ಸೇಲ್..!

ಭಾರತೀಯ ಮಾರುಕಟ್ಟೆಯಲ್ಲಿ ಶಿಯೋಮಿ ಬಜೆಟ್ ಬೆಲೆಯ ಮತ್ತು ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿ ಯಶಸ್ಸು ಗಳಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಟಾಪ್ ಎಂಡ್ ಫೋನ್‌ಗಳನ್ನು ಪೊಕೊ ಎನ್ನುವ ಹೊಸ ಸಬ್ ಬ್ರಾಂಡ್ ನಲ್ಲಿ ಮಾರಾಟ ಮಾಡಲಿದೆ. ಈ ಪೊಕೊ ಸ್ಮಾರ್ಟ್‌ಫೋನ್ ಮಾರಾಟ ಮಾಡಲು ಫ್ಲಿಪ್‌ಕಾರ್ಟ್ ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಪೊಕೊ ಫೋನ್ F1 ಫ್ಲಿಪ್‌ಕಾರ್ಟ್‌ನಲ್ಲಿ ಎಕ್ಸ್‌ಕ್ಲೂಸಿವ್ ಆಗಿ ಸೇಲ್ ಆಗಲಿದೆ.

ಟಾಪ್ ಆಟರ್ಗಾತಿಯರು:

ಟಾಪ್ ಆಟರ್ಗಾತಿಯರು:

ಈ ಹೊಸ ಮೊಬೈಲ್‌ಗೆ ಬಾಡ್ಮಿಂಟನ್ ಆಟಗಾರ್ತಿ PV ಸಿಂಧು ಮತ್ತು ದ್ಯುತಿ ಚಾಂದ್ ರಾಯಭಾರಿಗಳಾಗಿದ್ದು, #AsFastAsYou ಹ್ಯಾಷ್ ಟಾಗ್‌ನಲ್ಲಿ ಈ ಸ್ಮಾರ್ಟ್‌ಫೋನ್ ಕುರಿತು ಮಾಹಿತಿಗಳನ್ನು ನೀಡಲಾಗುತ್ತಿದೆ. ಇದರಲ್ಲಿ ಈ ಹೊಸ ಸ್ಮಾರ್ಟ್‌ಫೋನ್ ಎಷ್ಟು ವೇಗವಾಗಿ ಕಾರ್ಯನಿರ್ವಹಿಸಲಿದೆ ಎನ್ನುವುದನ್ನು ತಿಳಿಸಲಾಗುತ್ತಿದೆ.

ಟಾಪ್ ಎಂಡ್ ಫೋನ್:

ಟಾಪ್ ಎಂಡ್ ಫೋನ್:

ಈಗಾಗಲೇ ಭಾರತೀಯ ಮಾರುಕಟ್ಟೆಗೆ ಶಿಯೋಮಿ ಬಿಡುಗಡೆ ಮಾಡಿರುವ ಸ್ಮಾರ್ಟ್‌ಫೋನ್‌ಗಳಲ್ಲೇ ಅತೀ ವೇಗದ ಪೋನ್ ಮತ್ತು ಟಾಪ್ ಎಂಡ್ ಫೋನ್ ಇದಾಗಲಿದೆ. ಈ ಹೊಸ ಸ್ಮಾರ್ಟ್‌ಫೋನ್ ಲಾಂಚ್ ಕುರಿತಂತೆ ಪೊಕೊ, ಶಿಯೋಮಿ ಮತ್ತು ಫ್ಲಿಪ್‌ಕಾರ್ಟ್‌ಗಳು ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ ಗಳಲ್ಲಿ ಮಾಹಿತಿಯನ್ನು ನೀಡಲಾಗುತ್ತಿದೆ. ಅಲ್ಲದೇ ಹೆಚ್ಚಿನ ಪ್ರಮಾಣದ ಹೈಪ್ ಅನ್ನು ನೀಡಲಾಗುತ್ತಿದೆ.

ಟಾಪ್ ಮಾರಾಟ:

ಟಾಪ್ ಮಾರಾಟ:

ಈಗಾಗಲೇ ಮಾರುಕಟ್ಟೆಯಲ್ಲಿ ಶಿಯೋಮಿ ಬಿಡುಗಡೆ ಮಾಡಿರುವ ನೋಟ್ 5 ಮತ್ತು ನೋಟ್ 5 ಪ್ರೋ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಸೇಲ್‌ ಆಗುತ್ತಿದೆ. ಇದರಲ್ಲದೇ Mi A2 ಸ್ಮಾರ್ಟ್‌ಫೋನ್ ಸಹ ಸದ್ದು ಮಾಡುತ್ತಿದೆ. ಇದರೊಂದಿಗೆ ಈಗ ಪೊಕೊ ಪೋನ್‌ ಸಹ ಹೆಚ್ಚಿನ ಮಾರುಕಟ್ಟೆ ಪಾಲನ್ನು ಪಡೆದುಕೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನಲಾಗಿದೆ.

ಟಾಪ್ ಫ್ರೋಸೆಸರ್:

ಟಾಪ್ ಫ್ರೋಸೆಸರ್:

ಪೊಕೊ ಫೋನ್ F1 ಗೇಮರ್ ಗಳಿಗಾಗಿಯೇ ಲಾಂಚ್ ಮಾಡುತ್ತಿರುವ ಫೋನ್‌ ಆಗಿರುವುದರಿಂದಾಗಿ ಮಾರುಕಟ್ಟೆಯಲ್ಲಿ ಟಾಪ್ ಎಂಡ್ ಪ್ರೊಸೆಸರ್ ಆಗಿರುವ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 845 SOC ಪ್ರೊಸೆಸರ್ ಅಳವಡಿಸಿದೆ. ಇದರಿಂದಾಗಿ ಪೊಕೊ ಫೋನ್ F1 ಸ್ಮಾರ್ಟ್‌ಫೋನ್ ವೇಗವಾಗಿ ಕಾರ್ಯನಿರ್ವಹಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕೆಲವೇ ಗಂಟೆಗಳು..!

ಕೆಲವೇ ಗಂಟೆಗಳು..!

ಇಂದು ಪೊಕೊ ಫೋನ್ F1 ಬಿಡುಗಡೆಯಾಗಲಿದ್ದು, ಈ ಸ್ಮಾರ್ಟ್‌ಫೋನ್ ಯಾವ ವಿಶೇಷತೆಗಳನ್ನು ಹೊಂದಿರಲಿದೆ ಮತ್ತು ನೀವು ಖರೀದಿಸಲೇ ಬೇಕಾ ಎನ್ನುವ ಮಾಹಿತಿಗಳನ್ನು ಇನ್ನು ಕೆಲವೇ ಗಂಟೆಗಳಲ್ಲಿ ನಿಮ್ಮ ಮುಂದೆ ಇಡಲಿದ್ದೇವೆ ಅಲ್ಲಿಯವರೆಗೂ ಕಾಯುತ್ತಿರಿ.

Best Mobiles in India

English summary
Xiaomi POCO F1 will be unveiled as a Flipkart exclusive product. to konw more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+