Poco: ಪೋಕೋ F6 vs ಪೋಕೋ X6 ಪ್ರೊ; ನೀವು ಖರೀದಿಸಲು ಉತ್ತಮ ಆಯ್ಕೆ ಯಾವುದು?
ಪೋಕೋ ಸ್ಮಾರ್ಟ್‌ಫೋನ್‌ಗಳಿಗೆ (Smartphones) ಭಾರತೀಯ ಮಾರುಕಟ್ಟೆಯಲ್ಲಿ ವಿಶೇವಾದ ಬೇಡಿಕೆ ಇದೆ, ಅಗ್ಗದ ಬೆಲೆಯಲ್ಲಿ ಉತ್ತಮ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಬೇರೆ ಬೇರೆ ಕಂಪನಿಯ ಫೋನ್‌ಗಳಿಗೆ ಸ್ಪರ್ಧೆ ನೀಡುತ್ತಾ ಬಂದಿದೆ. ಈ ನಡೆವೆ ಪೋಕೋ ಸಂಸ್ಥೆ ಪೋಕೋ F6 5G (Poco F6 5G) ಮತ್ತು ಪೋಕೋ X6 (Poco X6) ಹೆಸರಿನ ಎರಡು ಮದ್ಯಮ ಶ್ರೇಣೀಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ನೀವೇನಾದರು ಉತ್ತಮ ಕಾರ್ಯವೈಕರಿಯ ಮೊಬೈಲ್ ಖರೀದಿಸಲು ಭಯಸಿದ್ದರೆ ಹೊಸದಾಗಿ ಬಿಡುಗಡೆಯಾಗಿರುವ ಈ ಎರಡೂ ಫೂನ್‌ಗಳ ನಡುವಿನ ವಿವರವಾದ ಹೋಲಿಕೆಯನ್ನು ನಾವು ನಿಮಗೆ ನೀಡಲಿದ್ದೇವೆ.
ಪೋಕೋ F6 (Poco F6) vs ಪೋಕೋ X6 Pro (Poco X6 Pro) ಬೆಲೆ:
ಭಾರತದಲ್ಲಿ ಪೋಕೋ F6 ನ 8GB/256GB ವೇರಿಯಂಟ್ ಬೆಲೆ 29,999 ರೂ. ಗಳಾಗಿದೆ, 12GB/256GB ವೇರಿಯಂಟ್‌ನ ಬೆಲೆ 31,999 ರೂ. ಗಳು ಮತ್ತು 12GB/512GB ವೇರಿಯಂಟ್‌ನ ಬೆಲೆ 33,999 ರೂ. ಗಳಾಗಿವೆ.
ಇನ್ನೂ ಪೋಕೋ X6 Pro ಅನ್ನು ಎರಡು ಸ್ಟೋರೇಜ್ ವೇರಿಯಂಟ್‌ನಲ್ಲಿ ಕಾಣಬಹುದಾಗಿದೆ. 8GB/256 ಮತ್ತು 12GB/512GB ವೇರಿಯಂಟ್‌ನಲ್ಲಿ ಕಂಡು ಬಂದಿದೆ, ಈ ಎರಡೂ ವೇರಿಯಂಟ್‌ಗಳ ಬೆಲೆ ಕ್ರಮವಾಗಿ 26,999 ಮತ್ತು 28,999 ರೂ. ಗಳಾಗಿವೆ ಇದರ ಹೊರತಾಗಿಯೂ ಈ ಫೋನ್ ಸದ್ಯ ಫ್ಲಿಪ್‌ಕಾರ್ಟ್‌ನಲ್ಲಿ 23,999 ರೂ. ಗಳ ಆರಂಭಿಕ ಬೆಲೆಯಲ್ಲಿ ಮಾರಾಟವಾಗುತ್ತಿದೆ.

ಪೋಕೋ F6 (Poco F6) vs ಪೋಕೋ X6 (Poco X6 Pro) ವಿನ್ಯಾಸ: ಈ ಎರಡೂ ಸ್ಮಾರ್ಟ್‌ಫೋನ್‌ಗಳ ಡಿಸ್‌ಪ್ಲೇ ಮತ್ತು ವಿನ್ಯಾಸ ನೋಡುವುದಾದರೆ ಪೋಕೋF6 ವಿಶಿಷ್ಟ ವಿನ್ಯಾಸವನ್ನು ಹೊಂದಿದೆ, ಹಿಂಬದಿಯ ಕ್ಯಾಮೆರಾಗೆ ಸೆನ್ಸಾರ್ ಅನ್ನು ಪ್ರತ್ಯೇಕವಾಗಿ ಇರಿಸಲಾಗಿದೆ ಮತ್ತು ಕೇವಲ 179 ಗ್ರಾಂ ತೂಕವಿದೆ. ಪೋಕೋ X6 Pro ಸ್ವಲ್ಪ ಭಾರವಾಗಿದ್ದು, ಪೋಕೋದ ಸಾಂಪ್ರದಾಯಿಕ ವಿನ್ಯಾಸ ಹೊಂದಿದೆ. ಎರಡೂ ಸ್ಮಾರ್ಟ್‌ಫೋನ್‌ಗಳಿಗೆ ವಿಭಿನ್ನವಾದ ಕಲರ್ ಹಾಗೂ ರೂಪಾಂತರ ನೀಡಲಾಗಿದೆ.
ಎರಡೂ ಫೋನ್‌ಗಳು 120Hz ರಿಫ್ರೆಶ್ ರೇಟ್ ಜೊತೆಗೆ 1.5K ಡಿಸ್‌ಪ್ಲೇಯನ್ನು ಹೊಂದಿವೆ, ಆದಾಗ್ಯೂ ಪೋಕೋ F6 X6 Pro ನಲ್ಲಿ 1,800 nits ಗರಿಷ್ಠ ಬ್ರೈಟ್‌ನೆಸ್‌ಗೆ ಬದಲಾಗಿ 2,400 nits ನ ಗರಿಷ್ಠ ಬ್ರೈಟ್‌ನೆಸ್ ನೀಡಲಾಗಿದೆ.
ಪೋಕೋ F6 (Poco F6) vs ಪೋಕೋ X6 Pro (Poco X6 Pro) ಕಾರ್ಯಕ್ಷಮತೆ:
ಎರಡೂ ಸ್ಮಾರ್ಟ್‌ಫೋನ್‌ಗಳು ಕೂಡ ಉತ್ತಮ ಕಾರ್ಯಕ್ಷಮತೆ ಹೊಂದಿದ್ದು, ಪೋಕೋ F6 ಸ್ನಾಪ್‌ಡ್ರಾಗನ್ 8s Gen 3 ಪ್ರೊಸೆಸರ್‌ನೊಂದಿಗೆ ಬರುತ್ತದೆ, ಆದರೆ ಪೋಕೋ X6 Pro ಮೀಡಿಯಾ ಟೆಕ್ ಡೈಮೆನ್ಸಿಟಿ 8300 ಅಲ್ಟ್ರಾ ಚಿಪ್‌ಸೆಟ್ ಬೆಂಬಲ ಪಡೆದಿದೆ.
ಪೋಕೋ F6 (Poco F6) vs ಪೋಕೋ X6 Pro (Poco X6 Pro) ಬ್ಯಾಟರಿ ಮತ್ತು ಸಾಫ್ಟ್‌ವೇರ್: ಈ ಎರಡೂ ಸ್ಮಾರ್ಟ್‌ಫೋನ್‌ಗಳು 5,000 mAh ಬ್ಯಾಟರಿ ಹೊಂದಿವೆ. ಅದರ ಹೊರತಾಗಿ F6 90W ಚಾರ್ಜರ್ ಅನ್ನು ಬೆಂಬಲಿಸುತ್ತದೆ. ಆದರೆ X6 ಪ್ರೊ 67W ಜಾರ್ಜರ್ ಹೊಂದಿದೆ. ಎರಡೂ ವೇರಿಯಂಟ್‌ಗಳು ಕೂಡ ಆಂಡ್ರಾಯ್ಡ್ 14 ಆಧಾರಿತ ಹೈಪರ್OS ಹೊಂದಿವೆ ಹಾಗೂ ಮೂರು ವರ್ಷಗಳ ಆಂಡ್ರಾಯ್ಡ್ OS ನವೀಕರಣಕ್ಕೆ ಮತ್ತು ನಾಲ್ಕು ವರ್ಷಗಳ ನಿಯಮಿತ ಸೆಕ್ಯೂರಿಟಿ ಭರವಸೆ ನೀಡಿದೆ.
ಕ್ಯಾಮೆರಾ: ಪೊಕೋ F6 5G ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ, ಇದರಲ್ಲಿ OIS ಬೆಂಬಲದೊಂದಿಗೆ 50MP ಸೋನಿ LYT-600 ಪ್ರಾಥಮಿಕ ಸೆನ್ಸಾರ್ ಮತ್ತು 8MP ಅಲ್ಟ್ರಾವೈಡ್ ಲೆನ್ಸ್ ಇದೆ. ಮತ್ತೊಂದೆಡೆ, X6 ಪ್ರೊ ಟ್ರಿಪಲ್ ಕ್ಯಾಮೆರಾ ಸಿಸ್ಟಮ್ ಅನ್ನು ಒಳಗೊಂಡಿದೆ, ಇದು OIS ಜೊತೆಗೆ 64MP ಪ್ರಾಥಮಿಕ ಕ್ಯಾಮೆರಾ, 8MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 2MP ಮ್ಯಾಕ್ರೋ ಕ್ಯಾಮೆರಾವನ್ನು ಒಳಗೊಂಡಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ಕ್ರಮವಾಗಿ 20MP ಮತ್ತು 16MP ಸೆಲ್ಫಿ ಕ್ಯಾಮೆರಾಗಳನ್ನು ಹೊಂದಿವೆ. ಹೆಚ್ಚುವರಿಯಾಗಿ ಇತ್ತೀಚೆಗೆ ಬಿಡುಗಡೆಯಾದ Poco F6 ನಲ್ಲಿ AI ವೈಶಿಷ್ಟ್ಯಗಳನ್ನು ಬಳಸಿಕೊಂಡಿದೆ.
ನೀವು ಯಾವುದನ್ನು ಖರೀದಿಸಬಹುದು ?: ಎರಡೂ ಫೋನ್‌ಗಳ ಬೆಲೆ, ವೈಶಿಷ್ಟ್ಯ, ಬ್ಯಾಟರಿ ಗಮನಿಸಿದರೆ ಎರಡೂ ಬಹುತೇಕ ಒಂದೇ ರೀತಿಯಾದ ಫೀಚರ್ಸ್ ಹೊಂದಿವೆ ಆದರೆ F6 ಇತ್ತೀಚಿನ AI ವೈಶಿಷ್ಟ್ಯ ಅಳವಡಿಸಿಕೊಂಡಿರುವುದರಿಂದ ಹಾಗೂ ನಯವಾದ ಆಧುನಿಕ ವಿನ್ಯಾಸ ಹೊಂದಿರುವುದರಿಂದ ನೀವು ಉತ್ತಮ ಅನುಭವ ಪಡೆಯಲು ಸಹಕಾರಿಯಾಗಲಿದೆ.


Click it and Unblock the Notifications








