ಭಾರತದಲ್ಲಿ ಶೀಘ್ರವೇ POCO F7 ಬಿಡುಗಡೆ ಸಾಧ್ಯತೆ: ಗೀಕ್‌ಬೆಂಚ್‌ಗೆ ಎಂಟ್ರಿ!
ಭಾರತದಲ್ಲಿ POCO ತನ್ನ ಮುಂದಿನ F-ಸರಣಿಯ ಸ್ಮಾರ್ಟ್‌ಫೋನನ್ನು ಅನಾವರಣಗೊಳಿಸಲು ಸಜ್ಜಾಗಿದೆ. ಬ್ರ್ಯಾಂಡ್ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳ ಮೂಲಕ ಈ ಬಗ್ಗೆ ದೃಢಪಡಿಸಿದೆ. ಆದರೆ, ಈ ಸಾಧನದ ನಿಖರವಾದ ಹೆಸರು ಇನ್ನೂ ಗೌಪ್ಯವಾಗಿದೆ. ಆದಾಗ್ಯೂ, ಕಂಪೆನಿಯು POCO F7 ಸ್ಮಾರ್ಟ್‌ಫೋನ್ ಹೊರತುಪಡಿಸಿ ಇತರ ಯಾವುದೇ ಮಾದರಿಯ ಬಗ್ಗೆ ಮಾಹಿತಿ ನೀಡುತ್ತಿಲ್ಲ ಎಂದು ನಂಬಲಾಗಿದೆ. ಈ ವೇಳೆಯಲ್ಲೇ POCO F7 ಇತ್ತೀಚೆಗೆ ಗೀಕ್‌ಬೆಂಚ್ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ ಮತ್ತು ಪ್ರಮುಖ ಫೀಚರ್ಸ್ ಬಹಿರಂಗವಾಗಿವೆ..!
ಹೌದು, POCO F7 ಸ್ಮಾರ್ಟ್‌ಫೋನ್ ಗೀಕ್‌ಬೆಂಚ್ ನಲ್ಲಿ ಸ್ನಾಪ್‌ಡ್ರಾಗನ್ 8s ಜೆನ್ 4 ಜೊತೆಗೆ 1937 ಸಿಂಗಲ್-ಕೋರ್ ಸ್ಕೋರ್ ಮತ್ತು 6021 ಮಲ್ಟಿ-ಕೋರ್ ಸ್ಕೋರ್ ಗಳಿಸಿದೆ. ಈ ಅಂಕಗಳು iQOO ನಿಯೋ 10 ಗಿಂತ ಸ್ವಲ್ಪ ಕಡಿಮೆ ಇವೆ. iQOO ನಿಯೋ 10 ಸ್ನಾಪ್‌ಡ್ರಾಗನ್ 8s Gen 4 ಚಿಪ್‌ಸೆಟ್ (ಪ್ರೊಸೆಸರ್) ಅನ್ನು ಬಳಸುತ್ತದೆ ಮತ್ತು ಕ್ರಮವಾಗಿ 2093 ಮತ್ತು 6836 ಅಂಕಗಳನ್ನು ಗಳಿಸಿದೆ. POCO F7 ಅಂಕಗಳು ಸ್ವಲ್ಪ ಕಡಿಮೆ ಕಾರ್ಯಕ್ಷಮತೆಯ ಸೀಲಿಂಗ್ (ಗರಿಷ್ಠ ಸಾಮರ್ಥ್ಯ) ಅನ್ನು ಸೂಚಿಸಬಹುದಾದರೂ, ಇದು ಹೋಲಿಕೆಗೆ ಸೂಕ್ತವಲ್ಲ.
ಇನ್ನು ಇತ್ತೀಚಿಗಷ್ಟೆ POCO ಇಂಡಿಯಾ ಮುಖ್ಯಸ್ಥ ಹಿಮಾಂಶು ಟಂಡನ್ ಅವರು ಎಕ್ಸ್ (ಟ್ಟಿಟ್ಟರ್) ತಾಣದಲ್ಲಿ ಒಂದು ಸಮೀಕ್ಷೆ ನಡೆಸಿದ್ದರು. ಈ ಸಮೀಕ್ಷೆಯಲ್ಲಿ, 80% ಕ್ಕೂ ಹೆಚ್ಚು ಬಳಕೆದಾರರು ತಮ್ಮ ಮುಂದಿನ ಸಾಧನದಲ್ಲಿ 12GB RAM ಅನ್ನು ಬಯಸಿದ್ದರು. ಇದಕ್ಕೆ ಅನುಗುಣವಾಗಿರುವಂತೆಯೇ, ಗೀಕ್‌ಬೆಂಚ್ ಪಟ್ಟಿಯು POCO F7 ಫೋನಿನಲ್ಲಿ 12GB RAM ಇರುವುದನ್ನು ದೃಢಪಡಿಸುತ್ತದೆ. ಅಂದರೆ, POCO F7 ಫೋನನ್ನು 12GB + 256GB ಮತ್ತು 12GB + 512GB ಸಂಗ್ರಹಣೆಯೊಂದಿಗೆ ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಸೋರಿಕೆಯ ಮಾಹಿತಿಗಳಂತೆ, POCO F7 ಸ್ಮಾರ್ಟ್‌ಫೋನ್ 6.83-ಇಂಚಿನ 1.5K AMOLED ಪ್ಯಾನೆಲ್ ಅನ್ನು ಹೊಂದಿರುತ್ತದೆ, ಇದು F6 ನಲ್ಲಿರುವ 6.67-ಇಂಚಿನ ಪರದೆಗಿಂತ ದೊಡ್ಡದಾಗಿದೆ. ಗರಿಷ್ಠ ಹೊಳಪು 3,200 ನಿಟ್‌ಗಳನ್ನು ತಲುಪಬಹುದು, ಇದು ಹಿಂದಿನ ಮಾದರಿಯ 2400-ನಿಟ್ ಮಿತಿಗಿಂತ ಗಮನಾರ್ಹ ಸುಧಾರಣೆಯಾಗಿದೆ ಎನ್ನಲಾಗಿದೆ. ಬ್ಯಾಟರಿ ಮತ್ತು ಚಾರ್ಜಿಂಗ್ ವಿಷಯದಲ್ಲಿ, POCO F7 ಫೋನ್ 7,550mAh ಬ್ಯಾಟರಿಯನ್ನು ಹೊಂದಿರಬಹುದು ಮತ್ತು ಸಾಧನವು 90W ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂದು ವದಂತಿಗಳಿವೆ.

ಕ್ಯಾಮೆರಾ ವಿಭಾಗದಲ್ಲಿ, POCO F7 ಸ್ಮಾರ್ಟ್‌ಫೋನ್ 50MP ಸೋನಿ LYT-600 ಪ್ರಾಥಮಿಕ ಸಂವೇದಕವನ್ನು ಹೊಂದಿರಬಹುದು, ಇದು iQOO ನಿಯೋ 10 ನಲ್ಲಿ ಕಂಡುಬರುವಂತೆಯೇ ಇರುತ್ತದೆ. ಇದು 8MP ಅಲ್ಟ್ರಾವೈಡ್ ಲೆನ್ಸ್‌ನೊಂದಿಗೆ ಜೋಡಿಸಲ್ಪಟ್ಟಿರುತ್ತದೆ, ಇದು ಇತ್ತೀಚಿನ POCO ಮಾದರಿಗಳಲ್ಲಿ ಕಂಡುಬರುವ ಡ್ಯುಯಲ್-ಕ್ಯಾಮೆರಾ ವಿನ್ಯಾಸವನ್ನು ಮುಂದುವರೆಸಿಕೊಂಡು ಹೋಗುವ ಸಾಧ್ಯತೆ ಇದೆ. ಒಟ್ಟರೆಆಯಾಗಿ, ಈ ಫೋನ್ ಕಾರ್ಯಕ್ಷಮತೆ-ಕೇಂದ್ರಿತ ಮಧ್ಯಮ-ಪ್ರೀಮಿಯಂ ವಿಭಾಗದಲ್ಲಿ ಬರಲಿದೆ ಎಂಬುದನ್ನು ಸೂಚಿಸಲಾಗಿದೆ.
ಶೀಘ್ರದಲ್ಲೇ ಭಾರತದಲ್ಲಿ ಹೊಸ F ಸರಣಿಯ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದಾಗಿ ಎರಡು ದಿನಗಳ ಹಿಂದೆಯಷ್ಟೇ POCO ಕಂಪೆನಿ ತಿಳಿಸಿತ್ತು. ಟೀಸರ್‌ನ ಚಿತ್ರದಲ್ಲಿ ಫೋನ್ ಮೇಲೆ ಪರದೆ ಹಾಕುವ ಮೂಲಕ POCO ಇನ್ನೂ ಅಧಿಕೃತ ಸಾಧನದ ಹೆಸರು ಮತ್ತು ದಿನಾಂಕವನ್ನು ದೃಢೀಕರಿಸಿಲ್ಲ. ಆದರೆ, ಗೀಕ್‌ಬೆಂಚ್ ಮತ್ತು ಸೋರಿಕೆಯ ಎಲ್ಲಾ ಸೂಚನೆಗಳು ಜೂನ್ ಅಂತ್ಯದಲ್ಲಿ POCO F7 ಸ್ಮಾರ್ಟ್‌ಫೋನ್ ಭಾರತದಲ್ಲಿ ಚೊಚ್ಚಲ ಪ್ರವೇಶವನ್ನು ಸೂಚಿಸುತ್ತವೆ, ನಂತರ ಸ್ವಲ್ಪ ಸಮಯದ ನಂತರ ಜಾಗತಿಕವಾಗಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.


Click it and Unblock the Notifications








