Home
ಮೊಬೈಲ್

Poco F7 ಸರಣಿಯಲ್ಲಿ Poco F7 Ultra ಮತ್ತು Poco F7 Pro ಫೋನ್‌ಗಳು ಬಿಡುಗಡೆ!

ವಿಶ್ವ ಮೊಬೈಲ್ ಮಾರುಕಟ್ಟೆಯು ಬಹುನಿರೀಕ್ಷೆಯಿಂದ ಎದುರುನೋಡುತ್ತಿದ್ದ Poco F7 ಸರಣಿಯಲ್ಲಿ Poco F7 Ultra ಮತ್ತು Poco F7 Pro ಎರಡು ಸ್ಮಾರ್ಟ್‌ಫೋನ್‌ಗಳು ಗುರುವಾರದಂದು ಆಯ್ದ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಿವೆ. ಮೊಬೈಲ್ ಮಾರುಕಟ್ಟೆಯ ನಿರೀಕ್ಷೆಯತೆಯೇ ಈ ಎರಡೂ ಸ್ಮಾರ್ಟ್‌ಫೋನ್‌ಗಳು ಮಿಡ್‌ರೇಂಜ್ ಬೆಲೆ ಮತ್ತು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೊಂಡಿದ್ದು, Poco F7 ಸರಣಿಯ ಈ ಎರಡೂ ಸ್ಮಾರ್ಟ್‌ಫೋನ್‌ಗಳು 3,200 ನಿಟ್‌ಗಳ ಗರಿಷ್ಠ ಹೊಳಪಿನ 6.67-ಇಂಚಿನ WQHD+ ಡಿಸ್ಪ್ಲೇಯನ್ನು ಹೊಂದಿವೆ. ಇವುಗಳಲ್ಲಿ Poco F7 Pro ಸ್ನಾಪ್‌ಡ್ರಾಗನ್ 8 ಜೆನ್ 3 SoC ಯಲ್ಲಿ ಕಾರ್ಯನಿರ್ವಹಿಸಿದರೆ, ಇದರ Ultra ಆವೃತ್ತಿಯು ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗಾದರೆ, Poco F7 Ultra ಮತ್ತು Poco F7 Pro ಎರಡು ಸ್ಮಾರ್ಟ್‌ಫೋನ್‌ಗಳು ಹೊಂದಿರುವ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಮತ್ತು ಬೆಲೆಗಳು ಎಷ್ಟು ನೋಡೋಣ ಬನ್ನಿ.

Poco F7 Ultra ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು

ಹೊಸ Poco F7 Ultra ಸ್ಮಾರ್ಟ್‌ಫೋನ್ 160.26 x 74.95 x 8.39 ಅಳತೆ ಮತ್ತು 212 ಗ್ರಾಂ ತೂಕ ಹೊಂದಿದೆ. ಇದರಲ್ಲಿ 120Hz ವರೆಗೆ ರಿಫ್ರೆಶ್ ರೇಟ್ ಮತ್ತು 3,200 nits ಗರಿಷ್ಠ ಹೊಳಪಿನೊಂದಿಗೆ 6.67-ಇಂಚಿನಷ್ಟು ದೊಡ್ಡ WQHD+ (1,440x3,200 ಪಿಕ್ಸೆಲ್‌ಗಳು) ಫ್ಲೋ AMOLED ಡಿಸ್ಪ್ಲೇಯನ್ನು ನೀಡಲಾಗಿದೆ. ಈ ಡಿಸ್‌ಪ್ಲೆಯು HDR10+ ಮತ್ತು ಡಾಲ್ಬಿ ವಿಷನ್ ಅನ್ನು ಬೆಂಬಲಿಸುತ್ತದೆ. ಹುಡ್ ಅಡಿಯಲ್ಲಿ, ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 ಎಲೈಟ್ SoC ನಿಂದ ಚಾಲಿತವಾಗಿದ್ದು, Xiaomi ಯ HyperOS 2 ಇಂಟರ್ಫೇಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಹಾಗೂ 16GB ವರೆಗೆ LPDDR5X RAM ಮತ್ತು 512GB ವರೆಗೆ UFS 4.1 ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದೆ. ಗೇಮ್‌ಗಳು ಮತ್ತು ವೀಡಿಯೊಗಳಲ್ಲಿ ಗ್ರಾಫಿಕ್ಸ್ ಮತ್ತು ಫ್ರೇಮ್ ದರಗಳನ್ನು ಹೆಚ್ಚಿಸಲು ಇದರಲ್ಲಿ VisionBoost D7 ಎಂಬ ಮೀಸಲಾದ ಗ್ರಾಫಿಕ್ಸ್ ಚಿಪ್ ಅನ್ನು ಒದಗಿಸಲಾಗಿದೆ

ಕ್ಯಾಮೆರಾ ವಿಭಾಗದಲ್ಲಿ, ಈ Poco F7 Ulltra ಸ್ಮಾರ್ಟ್‌ಫೋನ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದರಲ್ಲಿ OIS ಬೆಂಬಲದೊಂದಿಗೆ 1/1.55-ಇಂಚಿನ 50-ಮೆಗಾಪಿಕ್ಸೆಲ್ ಲೈಟ್ ಫ್ಯೂಷನ್ 800 ಇಮೇಜ್ ಸೆನ್ಸರ್, OIS ಜೊತೆಗೆ 50-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಮತ್ತು 32-ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಇವೆ. 50-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ 2.5x ಆಪ್ಟಿಕಲ್ ಜೂಮ್, 60mm ಫೋಕಲ್ ಲೆಂತ್ ಮತ್ತು 10cm ಮ್ಯಾಕ್ರೋ ಛಾಯಾಗ್ರಹಣವನ್ನು ಬೆಂಬಲಿಸುತ್ತದೆ. ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ 32-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇದೆ. ಉಷ್ಣ ನಿರ್ವಹಣೆಗಾಗಿ ಈ ಫೋನಿನಲ್ಲಿ 5,400 ಎಂಎಂ ಚದರ ಡ್ಯುಯಲ್-ಚಾನೆಲ್ ಐಸ್‌ಲೂಪ್ ಸಿಸ್ಟಮ್‌ನೊಂದಿಗೆ ಲಿಕ್ವಿಡ್‌ಕೂಲ್ 4.0 ತಂತ್ರಜ್ಞಾನವನ್ನು ಬಳಸುತ್ತದೆ. ಇದು ಎಕ್ಸ್-ಆಕ್ಸಿಸ್ ಲೀನಿಯರ್ ವೈಬ್ರೇಶನ್ ಮೋಟಾರ್ ಅನ್ನು ಸಹ ಹೊಂದಿದೆ.

Poco F7 ಸರಣಿಯಲ್ಲಿ Poco F7 Ultra ಮತ್ತು Poco F7 Pro ಫೋನ್‌ಗಳು ಬಿಡುಗಡೆ!

Poco F7 Ultra ಸ್ಮಾರ್ಟ್‌ಫೋನ್ 120W ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,300mAh ಬ್ಯಾಟರಿಯನ್ನು ಹೊಂದಿದೆ. ಸಂಪರ್ಕ ಆಯ್ಕೆಗಳಲ್ಲಿ ನ್ಯಾವಿಕ್, ಎನ್‌ಎಫ್‌ಸಿ, ವೈ-ಫೈ 7, ಬ್ಲೂಟೂತ್ 6.0, ಜಿಪಿಎಸ್/ಎಜಿಪಿಎಸ್, ಗೆಲಿಲಿಯೋ, ಗ್ಲೋನಾಸ್, ಬೀಡೌ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ವೈಶಿಷ್ಟ್ಯಗಳಿವೆ ಬೋರ್ಡ್‌ನಲ್ಲಿರುವ ಸಂವೇದಕಗಳಲ್ಲಿ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಇ-ದಿಕ್ಸೂಚಿ, ಗೈರೊಸ್ಕೋಪ್, ಐಆರ್ ಬ್ಲಾಸ್ಟರ್, ಫ್ಲಿಕರ್ ಸೆನ್ಸರ್ ಮತ್ತು ಸಾಮೀಪ್ಯ ಸಂವೇದಕ ಸೇರಿವೆ. ಇದು ಅಲ್ಟ್ರಾಸಾನಿಕ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಎಐ-ಆಧಾರಿತ ಫೇಸ್-ಅನ್‌ಲಾಕಿಂಗ್ ಸಿಸ್ಟಮ್ ಅನ್ನು ಹೊಂದಿದೆ. ಇದು ಡಾಲ್ಬಿ ಅಟ್ಮಾಸ್ ಬೆಂಬಲ ಮತ್ತು ಹೈ-ರೆಸ್ ಪ್ರಮಾಣೀಕರಣದೊಂದಿಗೆ ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳನ್ನು ಹೊಂದಿದೆ. ಹಾಗೂ ಹೊಸ ಫೋನ್ IP68 ನೀರು ಮತ್ತು ಧೂಳಿನ ಪ್ರತಿರೋಧವನ್ನು ಹೊಂದಿದೆ.

* ಡಿಸ್‌ಪ್ಲೇ: 6.67-ಇಂಚಿನ WQHD+ ಫ್ಲೋ AMOLED, 120Hz ರಿಫ್ರೆಶ್ ರೇಟ್, 3,200 ನಿಟ್‌ಗಳ ಗರಿಷ್ಠ ಹೊಳಪು.
* ಪ್ರೊಸೆಸರ್: ಸ್ನಾಪ್‌ಡ್ರಾಗನ್ 8 ಎಲೈಟ್ SoC.
* RAM: 16GB ವರೆಗೆ LPDDR5X RAM.
* ಶೇಖರಣೆ: 512GB ವರೆಗೆ UFS 4.1 ಸಂಗ್ರಹಣೆ.
* ಹಿಂಬದಿಯ ಕ್ಯಾಮೆರಾ: 50MP (OIS), 50MP (ಟೆಲಿಫೋಟೋ), 32MP (ಅಲ್ಟ್ರಾ-ವೈಡ್).
* ಮುಂಭಾಗದ ಕ್ಯಾಮೆರಾ: 32MP.
* ಬ್ಯಾಟರಿ: 5,300mAh, 120W ವೈರ್ಡ್ ಚಾರ್ಜಿಂಗ್, 50W ವೈರ್‌ಲೆಸ್ ಚಾರ್ಜಿಂಗ್.
* ಇತರೆ: IP68 ರೇಟಿಂಗ್, ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳು, ಅಲ್ಟ್ರಾಸಾನಿಕ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್.

Poco F7 Pro ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು

ಇತ್ತ Poco F7 Pro ಸ್ಮಾರ್ಟ್‌ಫೋನ್ ಕೂಡ Poco F7 Ultra ನಂತೆಯೇ ಸಾಫ್ಟ್‌ವೇರ್ ಮತ್ತು ಡಿಸ್‌ಪ್ಲೇ ವಿಶೇಷಣಗಳನ್ನು ಹೊಂದಿದೆ. ಆದರೆ, ಈ Pro ಮಾದರಿಯು Snapdragon 8 Gen 3 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಜೊತೆಗೆ 12GB RAM ಮತ್ತು ಗರಿಷ್ಠ 512GB ಸಂಗ್ರಹಣೆಯನ್ನು ಹೊಂದಿದೆ. ಕ್ಯಾಮೆರಾ ವಿಭಾಗದಲ್ಲಿ, ಈ Poco F7 Pro ಸ್ಮಾರ್ಟ್‌ಫೋನ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಘಟಕವನ್ನು ಹೊಂದಿದೆ, ಇದರಲ್ಲಿ OIS ಬೆಂಬಲದೊಂದಿಗೆ 1/1.55-ಇಂಚಿನ 50-ಮೆಗಾಪಿಕ್ಸೆಲ್ ಲೈಟ್ ಫ್ಯೂಷನ್ 800 ಇಮೇಜ್ ಸೆನ್ಸರ್ ಮತ್ತು 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಸೇರಿವೆ. ಇದು ಮುಂಭಾಗದಲ್ಲಿ 20-ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ಹೊಂದಿದೆ. ಸಂಪರ್ಕ ಆಯ್ಕೆಗಳು ಮತ್ತು ಸಂವೇದಕಗಳು Poco F7 Ultra ಗೆ ಬಹುತೇಕ ಹೋಲುತ್ತವೆ. ಹಾಗೆಯೇ, ಈ ಸ್ಮಾರ್ಟ್‌ಫೋನ್ ಅಲ್ಟ್ರಾಸಾನಿಕ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ರೀಡರ್, IP68-ರೇಟೆಡ್ ಬಿಲ್ಡ್, AI ಫೇಸ್-ಅನ್‌ಲಾಕಿಂಗ್ ವೈಶಿಷ್ಟ್ಯ ಮತ್ತು ಸ್ಟೀರಿಯೊ ಸ್ಪೀಕರ್‌ಗಳನ್ನು ಸಹ ಹೊಂದಿದೆ. ಇದು ಉಷ್ಣ ನಿರ್ವಹಣೆಗಾಗಿ LiquidCool 4.0 ತಂತ್ರಜ್ಞಾನವನ್ನು ಹೊಂದಿದೆ. ಇನ್ನು Poco F7 Pro ಸ್ಮಾರ್ಟ್‌ಫೋನ್ 90W ಚಾರ್ಜಿಂಗ್ ಬೆಂಬಲದೊಂದಿಗೆ 6,000mAh ಬ್ಯಾಟರಿಯನ್ನು ಹೊಂದಿದೆ. ಹಾಗೂ 160.26x74.95x8.12mm ಅಳತೆ ಮತ್ತು 206 ಗ್ರಾಂ ತೂಗುತ್ತದೆ.

* ಡಿಸ್‌ಪ್ಲೇ: 6.67-ಇಂಚಿನ WQHD+ ಫ್ಲೋ AMOLED, 120Hz ರಿಫ್ರೆಶ್ ರೇಟ್, 3,200 ನಿಟ್‌ಗಳ ಗರಿಷ್ಠ ಹೊಳಪು.
* ಪ್ರೊಸೆಸರ್: ಸ್ನಾಪ್‌ಡ್ರಾಗನ್ 8 ಜೆನ್ 3 SoC.
* RAM: 12GB RAM.
* ಶೇಖರಣೆ: 512GB ವರೆಗೆ ಸಂಗ್ರಹಣೆ.
* ಹಿಂಬದಿಯ ಕ್ಯಾಮೆರಾ: 50MP (OIS), 8MP (ಅಲ್ಟ್ರಾ-ವೈಡ್).
* ಮುಂಭಾಗದ ಕ್ಯಾಮೆರಾ: 20MP.
* ಬ್ಯಾಟರಿ: 6,000mAh, 90W ಚಾರ್ಜಿಂಗ್.
* ಇತರೆ: IP68 ರೇಟಿಂಗ್, ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳು, ಅಲ್ಟ್ರಾಸಾನಿಕ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್.
Poco F7 Ultra, Poco F7 Pro ಬೆಲೆಗಳು

Take a Poll

Poco F7 Ultra, Poco F7 Pro ಬೆಲೆಗಳು

ಇದೀಗ ಆಯ್ದ ಜಾಗತಿ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಿರುವ Poco F7 Ultra ಸ್ಮಾರ್ಟ್‌ಫೋನಿನ 12GB+ 256GB ಮತ್ತು 16GB+ 512GB RAM ಮತ್ತು ಶೇಖರಣಾ ಆಯ್ಕೆಗಳ ಬೆಲೆಯ ಕ್ರಮವಾಗಿ $599 (ಸರಿಸುಮಾರು ರೂ. 51,000) ಮತ್ತು $649 (ಸರಿಸುಮಾರು ರೂ. 55,000) ಎಂದು ನಿಗದಿಪಡಿಸಲಾಗಿದೆ.ಮತ್ತು ಇದು ಕಪ್ಪು ಮತ್ತು ಹಳದಿ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ. ಇತ್ತ Poco F7 Pro ಸ್ಮಾರ್ಟ್‌ಫೋನ್ 12GB RAM + 256GB ಶೇಖರಣಾ ಮಾದರಿಗೆ $449 (ಸರಿಸುಮಾರು ರೂ. 38,000) ಬೆಲೆಯನ್ನು ಹೊಂದಿದೆ. ಮತ್ತು 12GB RAM + 512GB ಶೇಖರಣಾ ಮಾದರಿಯ ಬೆಲೆ $499 (ಸರಿಸುಮಾರು ರೂ. 42,000) ಆಗಿದೆ. ಈ ಫೋನ್ ಕಪ್ಪು, ನೀಲಿ ಮತ್ತು ಸಿಲ್ವರ್ ಬಣ್ಣಗಳಲ್ಲಿ ಬಿಡುಗಡೆಯಾಗಿದೆ. ಇನ್ನು ಈ ಎರಡು ಸ್ಮಾರ್ಟ್‌ಫೋನ್‌ಗಳು ಭಾರತದ ಮಾರುಕಟ್ಟೆಗೆ ಯಾವಾಗ ಬರಲಿವೆ ಎಂಬುದನ್ನು ಪೊಕೊ ಇನ್ನೂ ಖಚಿತಪಡಿಸಿಲ್ಲ. ಆದರೆ, ಶೀಘ್ರದಲ್ಲೇ ಬರುವ ನಿರೀಕ್ಷೆ ಇದೆ.

Poco F7 Ultra: $599 (ಸರಿಸುಮಾರು ರೂ. 51,000) ಮತ್ತು $649 (ಸರಿಸುಮಾರು ರೂ. 55,000)
Poco F7 Pro: $449 (ಸರಿಸುಮಾರು ರೂ. 38,000) ಮತ್ತು $499 (ಸರಿಸುಮಾರು ರೂ. 42,000)

Best Mobiles in India

English summary
The Poco F7 Ultra features a 5,300mAh battery, while the Poco F7 Pro is equipped with a 6,000mAh cell. Both models come with a 50-megapixel Light Fusion 800 primary camera sensor on the back.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+