Poco F8 Ultra ಮತ್ತು Poco F8 Pro ಫೋನ್‌ಗಳು ಬಿಡುಗಡೆ!
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ Poco ತನ್ನ ಹೊಸ F8 ಸರಣಿಯನ್ನು ಇಂದು (26,ಬುಧವಾರ) ಆಯ್ದ ಜಾಗತಿಕ ಮಾರುಕಟ್ಟೆಗಳಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಈ ಸರಣಿಯಲ್ಲಿ Poco F8 Ultra ಮತ್ತು Poco F8 Pro ಎರಡು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲಾಗಿದ್ದು, Ultra ಮಾದರಿಯು Snapdragon 8 Elite Gen 5 ಪ್ರೊಸೆಸರ್‌ನೊಂದಿಗೆ ಬಂದಿದೆ. ಇತ್ತ Pro ಮಾದರಿಯಲ್ಲಿ ಹಿಂದಿನ ತಲೆಮಾರಿನ Snapdragon 8 Elite ಚಿಪ್‌ಸೆಟ್ ಹೊಂದಿದೆ. ಈ ಎರಡೂ ಫೋನ್‌ಗಳಲ್ಲಿ Android 16 HyperOS 3 ಮತ್ತು Bose ಟ್ಯೂನ್ ಮಾಡಿದ ಸ್ಪೀಕರ್‌ಗಳನ್ನು ನೀಡಲಾಗಿದೆ. ಹಾಗಾದರೆ, ಹೊಸ Poco F8 Ultra ಮತ್ತು Poco F8 Pro ಸ್ಮಾರ್ಟ್‌ಫೋನ್‌ಗಳ ಸಂಪೂರ್ಣ ಫೀಚರ್ಸ್ ಯಾವುವು? ಬೆಲೆಗಳು ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.
Poco F8 Ultra: ಪ್ರಮುಖ ಫೀಚರ್ಸ್
ಹೊಸ Poco F8 Ultra ಫೋನ್ 6.9 ಇಂಚಿನ OLED ಡಿಸ್‌ಪ್ಲೇ (120Hz ರಿಫ್ರೆಶ್ ರೇಟ್, 3,500 ನಿಟ್ಸ್ ಬ್ರೈಟ್‌ನೆಸ್) ಹೊಂದಿದೆ. ಕಾರ್ಯಕ್ಷಮತೆಗಾಗಿ, Qualcomm ನ 3nm Snapdragon 8 Elite Gen 5 ಚಿಪ್ ಇದರ ಮುಖ್ಯ ಆಕರ್ಷಣೆ. ಇದು 16GB RAM ಮತ್ತು 512GB ವರೆಗೆ ಸ್ಟೋರೇಜ್ ನೊಂದಿಗೆ ಜೋಡಿಸಲ್ಪಟ್ಟಿದೆ. ಹಿಂದೆ ಟ್ರಿಪಲ್ 50MP ಕ್ಯಾಮೆರಾಗಳ ವ್ಯವಸ್ಥೆ ಇದ್ದು, ಇದು ಮುಖ್ಯ OIS ಸೆನ್ಸರ್, 5x ಆಪ್ಟಿಕಲ್ ಜೂಮ್ ಇರುವ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್, ಮತ್ತು ಅಲ್ಟ್ರಾವೈಡ್ ಕ್ಯಾಮೆರಾ ಸೆನ್ಸಾರ್‌ಗಳನ್ನು ಹೊಂದಿದೆ.

ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ, ಫೋನಿನಲ್ಲಿ 32MP ಕ್ಯಾಮೆರಾ ನೀಡಲಾಗಿದೆ. ಬ್ಯಾಟರಿ ವಿಭಾಗದಲ್ಲಿ, ಈUltra ಫೋನ್ 6,500mAh ಬ್ಯಾಟರಿ ಹೊಂದಿದೆ. ಇದು 100W ವೈರ್ಡ್ HyperCharge ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದಲ್ಲದೆ, Wi-Fi 7, Bluetooth 5.4, NFC, NavIC ಮುಂತಾದ ಸಂಪರ್ಕ ಆಯ್ಕೆಗಳು ಕೂಡ ಸೇರಿವೆ. ಗಮನಾರ್ಹವಾಗಿ, Bose ಟ್ಯೂನ್ ಮಾಡಿದ 2.1 ಸ್ಟೀರಿಯೋ ಸ್ಪೀಕರ್‌ಗಳು ಇವೆ ಮತ್ತು ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸೇರಿದಂತೆ ಹಲವಾರು ಫೀಚರ್ಸ್ ಹೊಂದಿದೆ.
Poco F8 Pro: ಪ್ರಮುಖ ಫೀಚರ್ಸ್
ಇತ್ತ Poco F8 Pro ಸ್ವಲ್ಪ ಚಿಕ್ಕದಾದ 6.59 ಇಂಚಿನ AMOLED ಡಿಸ್‌ಪ್ಲೇ ಜೊತೆಗೆ (120Hz, 3,500 ನಿಟ್ಸ್ ಬ್ರೈಟ್‌ನೆಸ್) ಬಂದಿದೆ. ಇದರಲ್ಲಿ Snapdragon 8 Elite ಹಿಂದಿನ ತಲೆಮಾರಿನ ಚಿಪ್, 12GB RAM ಮತ್ತು 512GB ವರೆಗೆ ಸ್ಟೋರೇಜ್ ಇದೆ,.ಕ್ಯಾಮೆರಾ ವಿಭಾಗದಲ್ಲಿ 50MP ಮುಖ್ಯ ಸೆನ್ಸರ್ (OIS), 50MP ಟೆಲಿಫೋಟೋ (2.5x ಜೂಮ್) ಮತ್ತು 8MP ಅಲ್ಟ್ರಾವೈಡ್ ಲೆನ್ಸ್ ಇವೆ. 20MP ಸೆಲ್ಫಿ ಕ್ಯಾಮೆರಾ ಇದೆ. 6,210mAh ಬ್ಯಾಟರಿ, 100W HyperCharge ಮತ್ತು 22.5W ರಿವರ್ಸ್ ವೈರ್ಡ್ ಚಾರ್ಜಿಂಗ್ ಸಪೋರ್ಟ್ ವಿಶೇಷತೆಯಾಗಿದೆ. ಸಂಪರ್ಕ ವೈಶಿಷ್ಟ್ಯಗಳು Ultra ಮಾದರಿಯಂತೆಯೇ ಇವೆ.

Poco F8 Ultra, Poco F8 Pro: ಬೆಲೆ ಮತ್ತು ಲಭ್ಯತೆ
Poco F8 Ultra ಫೋನ್ 12GB + 256GB ಮಾದರಿಯ ಪ್ರಾರಂಭಿಕ ಬೆಲೆ $729 (ಸುಮಾರು ₹65,100) ಆಗಿದೆ. ಇದರ 16GB + 512GB ಮಾದರಿಯು $799 (ಸುಮಾರು ₹71,300) ಬೆಲೆ ಹೊಂದಿದೆ. ಆದರೆ, ಆರಂಭಿಕ ಆಫರ್ ಸಮಯದಲ್ಲಿ, 12GB + 256GB ಆವೃತ್ತಿಯು $679 (ಸರಿಸುಮಾರು ರೂ. 60,600) ಮತ್ತು 16GB + 512GB ಆವೃತ್ತಿಯು $729 (ಸರಿಸುಮಾರು ರೂ. 65,100) ರೂ.ಗೆ ಲಭ್ಯವಿರಲಿವೆ.
ಇತ್ತ Poco F8 Pro 12GB + 256GB ಮಾದರಿಯ ಬೆಲೆ $579 (ಸುಮಾರು ₹51,700) ಬೆಲೆ ಹೊಂದಿದ್ದರೆ, ಇದರ 12GB + 512GB ಮಾದರಿಯು $629 (ಸುಮಾರು ₹56,100) ಬೆಲೆ ಹೊಂದಿದೆ. ಇದೂ ಕೂಡ ಆರಂಭಿಕ ಆಫರ್‌ನೊಂದಿಗೆ, 12GB + 256GB ಆವೃತ್ತಿಯು $529 (ಸರಿಸುಮಾರು ರೂ. 47,200) ಗೆ ಲಭ್ಯವಾಗಲಿದೆ, ಆದರೆ 12GB + 512GB ಆಯ್ಕೆಯು $579 (ಸರಿಸುಮಾರು ರೂ. 51,700) ಬೆಲೆಗೆ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.
ಈ ಬೆಲೆ ಕಡಿತದ ಜೊತೆಗೆ, ಆರಂಭಿಕ ಆಫರ್‌ನಲ್ಲಿ ಗ್ರಾಹಕರು ಹೆಚ್ಚಿನ ರಿಯಾಯಿತಿಯನ್ನು ಪಡೆಯಬಹುದು. ಇದರಲ್ಲಿ, Poco ಈ ಸರಣಿಯೊಂದಿಗೆ Spotify Premium, Google One 100GB, YouTube Premium ಮುಂತಾದ ಉಚಿತ ಸಬ್‌ಸ್ಕ್ರಿಪ್ಷನ್‌ಗಳನ್ನೂ ನೀಡುತ್ತಿದೆ. ಮೊದಲ ಆರು ತಿಂಗಳಲ್ಲಿ ಉಚಿತ ಸ್ಕ್ರೀನ್ ರಿಪ್ಲೇಸ್‌ಮೆಂಟ್ ಸಹ ಒದಗಿಸಲಾಗುತ್ತದೆ. ಬಣ್ಣ ಆಯ್ಕೆಗಳಲ್ಲಿ F8 Ultra - ಬ್ಲ್ಯಾಕ್, ಡೆನಿಂ ಬ್ಲೂ| F8 Pro - ಬ್ಲ್ಯಾಕ್, ಬ್ಲೂ ಮತ್ತು ಟೈಟಾನಿಯಂ ಸಿಲ್ವರ್ ಲಭ್ಯ.


Click it and Unblock the Notifications








