Home
ಮೊಬೈಲ್

Poco F8 Ultra ಆಗಮನ ಖಚಿತ!...ಇಲ್ಲಿದೆ ಸಂಪೂರ್ಣ ಮಾಹಿತಿ!

Poco ತನ್ನ ಜನಪ್ರಿಯ F ಸರಣಿಗೆ ಮುಂದಿನ ಸೇರ್ಪಡೆಯಾಗಿ Poco F8 Ultra ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸುವುದು ಬಹುತೇಖ ಖಚಿತವಾಗಿದೆ. ಇತ್ತೀಚೆಗೆ Poco F8 Ultra ಎಂಬ ಹೆಸರಿನಲ್ಲಿ ಹೊಸ ಸ್ಮಾರ್ಟ್‌ಫೋನ್ ಮಾದರಿ ಕುರಿತ ಮಾಹಿತಿಯು ತಾಯ್ಲ್ಯಾಂಡ್‌ನ NBTC ಪ್ರಮಾಣೀಕರಣ ವೆಬ್‌ಸೈಟ್ನಲ್ಲಿ ಕಾಣಿಸಿಕೊಂಡಿದೆ. ಈ ಲಿಸ್ಟಿಂಗ್ ಮೂಲಕ Poco ತನ್ನ ಜನಪ್ರಿಯ F ಸರಣಿಗೆ ಹೊಸ ಸಾಧನವನ್ನು ಸೇರಿಸಲು ಸಿದ್ಧವಾಗಿರುವುದರ ಸುಳಿವು ಸಿಕ್ಕಿದ್ದು, ಈ ಫೋನ್ Snapdragon 8 Elite Gen 5 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.

Poco F8 Ultra: ಪ್ರಮುಖ ವೈಶಿಷ್ಟ್ಯಗಳು (ನಿರೀಕ್ಷಿತ)
ತಾಯ್ಲ್ಯಾಂಡ್‌ನ NBTC ವೆಬ್‌ಸೈಟ್‌ನಲ್ಲಿ Poco F8 Ultra ಸ್ಮಾರ್ಟ್‌ಫೋನ್ ಅನ್ನು ಮಾದರಿ ಸಂಖ್ಯೆ 25102PCBEG ಸಹಿತವಾಗಿ ದಾಖಲಿಸಲಾಗಿದೆ. ಈ ಸಾಧನವು GSM, WCDMA, LTE ಮತ್ತು NR ನೆಟ್ವರ್ಕ್‌ಗಳನ್ನು ಬೆಂಬಲಿಸುತ್ತದೆ, ಅಂದರೆ ಇದು 5G ಸಂಪರ್ಕ ಹೊಂದಿರುವುದು ದೃಢಪಟ್ಟಿದೆ. ಜೊತೆಗೆ, ಈ ಸಾಧನವನ್ನು ಚೀನಾದಲ್ಲೇ ತಯಾರಿಸಲಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಹಿಂದಿನ ಸೋರಿಕೆಗಳು ಸೂಚಿಸಿದಂತೆ, Poco F8 Ultra ಫೋನ್ Snapdragon 8 Elite Gen 5 ಪ್ರೊಸೆಸರ್ ಹೊಂದಿರಲಿದೆ. ಇದು 7,000mAh ಬ್ಯಾಟರಿ ಜೊತೆಗೆ 100W ವೇಗದ ವೈರ್ಡ್ ಚಾರ್ಜಿಂಗ್ ಹಾಗೂ ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿಸಲಿದೆ. ಡಿಸ್ಪ್ಲೇ ಭಾಗದಲ್ಲಿ, ಇದು LTPO OLED ಪರದೆ ಹೊಂದಿದ್ದು, 120Hz ರಿಫ್ರೆಶ್ ರೇಟ್ ಹಾಗೂ 1.5K ಅಥವಾ 2K ರೆಸಲ್ಯೂಶನ್ ನೀಡುವ ನಿರೀಕ್ಷೆಯಿದೆ.

Poco F8 Ultra ಆಗಮನ ಖಚಿತ!...ಇಲ್ಲಿದೆ ಸಂಪೂರ್ಣ ಮಾಹಿತಿ!

ಕ್ಯಾಮೆರಾ ವಿಭಾಗದಲ್ಲಿ, ಈ ಫೋನ್ ಫೋನ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್ (OIS), 50 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಹಾಗೂ 50 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಸೆನ್ಸರ್ ಒಳಗೊಂಡ ಮೂರು ಹಿಂಭಾಗದ ಕ್ಯಾಮೆರಾಗಳನ್ನು ಹೊಂದಿರಲಿದೆ. ಮುಂದೆ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗುತ್ತದೆ. ಸುರಕ್ಷತೆಗಾಗಿ ಅಲ್ಟ್ರಾಸೋನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು IP69 ರೇಟಿಂಗ್ ಸಹ ನೀಡುವ ಸಾಧ್ಯತೆ ಇದೆ.

Poco F8 Ultra: ಬಿಡುಗಡೆ ಮತ್ತು ಬೆಲೆ ನಿರೀಕ್ಷೆ
ಈ ಹೊಸ ಫೋನ್‌ Poco F7 Ultra ಯ ಉತ್ತರಾಧಿಕಾರಿಯಾಗಿ ಬರಲಿದೆ. Poco F7 Ultra ಮಾರ್ಚ್ ತಿಂಗಳಲ್ಲಿ ಜಾಗತಿಕವಾಗಿ ಬಿಡುಗಡೆಯಾಗಿ, ಸುಮಾರು $599 (ಅಂದಾಜು ರೂ. 51,000) ದ ಬೆಲೆಯೊಂದಿಗೆ ಲಭ್ಯವಿತ್ತು. ಅದರಲ್ಲಿ 6.67 ಇಂಚಿನ AMOLED ಪರದೆ, 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, Snapdragon 8 Elite ಚಿಪ್‌ಸೆಟ್, 16GB RAM, ಮತ್ತು 512GB ಸ್ಟೋರೇಜ್ ನೀಡಲಾಗಿತ್ತು.ಹೊಸ Poco F8 Ultra ಯು ಇದರಿಗಿಂತ ಹೆಚ್ಚು ಶಕ್ತಿಶಾಲಿ ಬ್ಯಾಟರಿ, ನವೀನ ಕ್ಯಾಮೆರಾ ತಂತ್ರಜ್ಞಾನ ಮತ್ತು ಹೆಚ್ಚಿದ ಪ್ರದರ್ಶನ ಸಾಮರ್ಥ್ಯಗಳೊಂದಿಗೆ ಬರುವ ನಿರೀಕ್ಷೆಯಿದೆ.

ಇದೇ Redmi K90 Pro?
Poco ತನ್ನ Poco F8 Ultra ಸ್ಮಾರ್ಟ್‌ಫೋನನ್ನೇ ಜಾಗತಿಕವಾಗಿ Redmi K90 Pro ಆವೃತ್ತಿಯಂತೆ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತಿವೆ. ಕಂಪನಿಯು ಇನ್ನೂ ಅಧಿಕೃತ ದೃಢೀಕರಣ ನೀಡದಿದ್ದರೂ ಇಂತಹದೊಂದು ಮಾಹಿತಿ ಸುದ್ದಿ ಜಾಗತಿಕ ಪ್ರಮುಖ ಟೆಕ್ ಸುದ್ದಿಸಂಸ್ಥೆಗಳಲ್ಲಿ ಹರಿದಾಡುತ್ತಿದೆ. ಇನ್ನು ಸೋರಿಕೆಯ ವೈಶಿಷ್ಟ್ತಗಳಂತೆಈ Poco F8 Ultra ಬಿಡುಗಡೆಗೊಂಡರೆ, ಅದು ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ OnePlus, iQOO ಮತ್ತು Realme ಮುಂತಾದ ಕಂಪನಿಗಳಿಗೆ ಗಂಭೀರ ಸ್ಪರ್ಧೆ ನೀಡುವ ಸಾಧ್ಯತೆಯಿದೆ.

Best Mobiles in India

English summary
The upcoming release of the Poco F8 Ultra smartphone is likely, as recent information regarding this model has surfaced on Thailand's NBTC certification website. This listing suggests that Poco is preparing to expand its well-known F series with a new device.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+