ಭಾರತದಲ್ಲಿ Poco X8 Pro ಸರಣಿ ಲಾಂಚ್: 9,000mAh ಬ್ಯಾಟರಿ, 5,800 sq mm ಕೂಲ್!
ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ Poco ತನ್ನ ಹೊಸ X ಸರಣಿಯ ಮೂಲಕ ಮತ್ತೊಮ್ಮೆ ಗಮನ ಸೆಳೆದಿದೆ. ದೇಶದ ಮಾರುಕಟ್ಟೆಗೆ ಮಂಗಳವಾರದಂದು Poco X8 Pro ಸರಣಿಯಲ್ಲಿ ಹೊಸದಾಗಿ Poco X8 Pro Max 5G, Poco X8 Pro 5G ಹಾಗೂ ವಿಶೇಷ ಆವೃತ್ತಿಯಾಗಿ Poco X8 Pro Iron Man Edition ಫೋನ್‌ಗಳು ಮಧ್ಯಮ-ಪ್ರಿಮಿಯಂ ವಿಭಾಗದಲ್ಲಿ ಬಿಡುಗಡೆಗೊಂಡಿದ್ದು, ಅತ್ಯಂತ ಶಕ್ತಿಶಾಲಿ ಫೀಚರ್ಸ್, ದೊಡ್ಡ ಬ್ಯಾಟರಿ ಮತ್ತು ಫಾಸ್ಟ್ ಚಾರ್ಜಿಂಗ್‌ನೊಂದಿಗೆ ಗಮನಸೆಳೆಯುತ್ತಿವೆ. ಹಾಗಾದರೆ, ಹೊಸ Poco X8 Pro Max 5G, Poco X8 Pro 5G ಹಾಗೂ ವಿಶೇಷ ಆವೃತ್ತಿಯಾಗಿರುವ Poco X8 Pro Iron Man Edition ಫೋನ್‌ಗಳು ಹೇಗಿವೆ?, ಬೆಲೆ ಎಷ್ಟು ಮತ್ತು ಸಂಪೂರ್ಣ ಫೀಚರ್ಸ್ ಯಾವುವು ಎಂಬ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ ಬನ್ನಿ.
Poco X8 Pro ಸರಣಿ: ಬೆಲೆ ಮತ್ತು ಲಭ್ಯತೆ
ದೇಶದಲ್ಲಿ Poco X8 Pro 5G ಫೋನಿನ ಮೂಲ ಮಾದರಿಯ ಬೆಲೆ ₹32,999 (8GB + 256GB) ರಿಂದ ಆರಂಭವಾಗಿದ್ದು, ಇದರ ಟಾಪ್-ಆಫ್-ದಿ-ಲೈನ್ 12GB RAM + 256GB ಮಾದರಿಯ ಬೆಲೆ ₹35,999 ಆಗಿದೆ. ವಿಶೇಷ ಆವೃತ್ತಿಯಾಗಿ ಬಂದಿರುವ Poco X8 Pro Iron Man Edition ಫೋನ್ 12GB + 256GB ಸಾಮರ್ಥ್ಯದ ಒಂದೇ ಆಯ್ಕೆಯಲ್ಲಿ ₹37,999 ಬೆಲೆಯಲ್ಲಿ ಬಿಡುಗಡೆಯಾಗಿದೆ. ಇನ್ನೊಂದೆಡೆ, Poco X8 Pro Max 5G ₹42,999 (12GB + 256GB) ರಿಂದ ಆರಂಭವಾಗುತ್ತಿದ್ದು, 12GB + 512GB ಟಾಪ್ ಮಾದರಿ ₹46,999 ಬೆಲೆ ಹೊಂದಿದೆ.

ಆದರೆ, ಬಿಡುಗಡೆ ಕೊಡುಗೆಯಾಗಿ ಕಂಪೆನಿಯು HDFC ಬ್ಯಾಂಕ್, ICICI ಬ್ಯಾಂಕ್ ಮತ್ತು SBI ಕಾರ್ಡ್‌ಗಳೊಂದಿಗೆ ರೂ. 3,000 ವರೆಗೆ ಬ್ಯಾಂಕ್ ರಿಯಾಯಿತಿಯನ್ನು ನೀಡುತ್ತಿದೆ. ಇನ್ನು ಈ ಎಲ್ಲಾ ಮೂರು ಫೋನ್‌ಗಳು ಮಾರ್ಚ್ 23 ರಂದು ಮಧ್ಯಾಹ್ನ 12 ಗಂಟೆಗೆ IST ಮೂಲಕ ದೇಶದಲ್ಲಿ Flipkart ಮೂಲಕ ಎಸ್‌ಕ್ಲೂಸಿವ್ ಆಗಿ ಮಾರಾಟಕ್ಕೆ ಬರಲಿವೆ. ಗ್ರಾಹಕರು Poco X8 Pro 5G ಫೋನ್ ಅನ್ನು ಕಪ್ಪು, ಹಸಿರು ಮತ್ತು ಬಿಳಿ ಬಣ್ಣಗಳಲ್ಲಿ ಹಾಗೂ Poco X8 Pro Max 5G ಫೋನ್ ಅನ್ನು ಕಪ್ಪು, ನೀಲಿ ಮತ್ತು ಬಿಳಿ ಬಣ್ಣಗಳಲ್ಲಿ ಖರೀದಿಸಬಹುದು ಎಂದು ಕಂಪೆನಿಯು ತಿಳಿಸಿದೆ.
Poco X8 Pro ಸರಣಿ: ಪ್ರಮುಖ ವೈಶಿಷ್ಟ್ಯಗಳು
Poco X8 Pro Max 5G ನಲ್ಲಿ 6.83 ಇಂಚಿನ 1.5K AMOLED ಡಿಸ್‌ಪ್ಲೇ ನೀಡಲಾಗಿದ್ದು, ಇದು 120Hz ರಿಫ್ರೆಶ್ ರೇಟ್, 3,500 ನಿಟ್ಸ್ ಪೀಕ್ ಬ್ರೈಟ್‌ನೆಸ್ ಮತ್ತು 3840Hz PWM ಡಿಮ್ಮಿಂಗ್ ಸಪೋರ್ಟ್ ಹೊಂದಿದೆ. ಇತ್ತ Poco X8 Pro 5G ನಲ್ಲಿ 6.59 ಇಂಚಿನ AMOLED ಡಿಸ್‌ಪ್ಲೇ ಇದೆ ಮತ್ತು ಅದೇ ಮಟ್ಟದ ರಿಫ್ರೆಶ್ ರೇಟ್ ಮತ್ತು ಗುಣಮಟ್ಟವನ್ನು ನೀಡುತ್ತದೆ. ಇದರ ಜೊತೆಗೆ, ಎರಡೂ ಫೋನ್‌ಗಳು IP66, IP68, IP69 ಮತ್ತು IP69K ರೇಟಿಂಗ್‌ಗಳೊಂದಿಗೆ ನೀರು ಮತ್ತು ಧೂಳು ಪ್ರತಿರೋಧ ಸಾಮರ್ಥ್ಯ ಹೊಂದಿವೆ.

ಪ್ರೊಸೆಸರ್ ಮತ್ತು ಕಾರ್ಯಕ್ಷಮತೆ
ಕಾರ್ಯಕ್ಷಮತೆಗಾಗಿ, Poco X8 Pro Max 5G ನಲ್ಲಿ 3nm ತಂತ್ರಜ್ಞಾನ ಆಧಾರಿತ MediaTek Dimensity 9500s ಚಿಪ್‌ಸೆಟ್ ಇದ್ದು, ಇದು 12GB LPDDR5x RAM ಮತ್ತು 512GB ವರೆಗೆ UFS 4.1 ಸ್ಟೋರೇಜ್ ಸಪೋರ್ಟ್ ಹೊಂದಿದೆ. ಜೊತೆಗೆಉಷ್ಣ ನಿರ್ವಹಣೆಗಾಗಿ, ಫೋನ್ 5,800 sq mm ಶಾಖ ಪ್ರಸರಣ ಪ್ರದೇಶದೊಂದಿಗೆ Poco 3D ಐಸ್ ಲೂಪ್ ಕೂಲಿಂಗ್ ವ್ಯವಸ್ಥೆಯನ್ನು ಪಡೆಯುತ್ತದೆ. ಇತ್ತ Poco X8 Pro 5G ನಲ್ಲಿ 4nm MediaTek Dimensity 8500 Ultra ಪ್ರೊಸೆಸರ್ ಇದ್ದು, 12GB RAM ಮತ್ತು 256GB ಸ್ಟೋರೇಜ್ ಆಯ್ಕೆಗಳು ಲಭ್ಯ. ಇದಕ್ಕೂ 5,300 sq mm ಹೀಟ್ ಡಿಸಿಪೇಶನ್ ಹೊಂದಿರುವ ಕೂಲಿಂಗ್ ವ್ಯವಸ್ಥೆ ನೀಡಲಾಗಿದೆ. ಇನ್ನು ಈ ಎರಡು ಸ್ಮಾರ್ಟ್‌ಫೋನ್‌ಗಳು Android 16 ಆಧಾರಿತ Xiaomi HyperOS 3 ನಲ್ಲಿ ಕಾರ್ಯನಿರ್ವಹಿಸುತ್ತವೆ.
ಕ್ಯಾಮೆರಾ ವೈಶಿಷ್ಟ್ಯಗಳು
ಫೋಟೋಗ್ರಫಿ ವಿಭಾಗದಲ್ಲಿ, ಎರಡೂ ಫೋನ್‌ಗಳು ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿವೆ ಎರಡೂ ಫೋನ್‌ಗಳು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಹೊಂದಿರುವ 50-ಮೆಗಾಪಿಕ್ಸೆಲ್ (f/1.8) ಪ್ರಾಥಮಿಕ ಹಿಂಭಾಗದ ಕ್ಯಾಮೆರಾಗಳನ್ನು ಒಳಗೊಂಡಿದ್ದು, 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ (120° ಫೀಲ್ಡ್ ಆಫ್ ವ್ಯೂ) ಕ್ಯಾಮೆರಾಗಳೊಂದಿಗೆ ಜೋಡಿಸಲ್ಪಟ್ಟಿವೆ. ಮುಂಭಾಗದಲ್ಲಿ, ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಳಿಗೆ 20 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ. ಇನ್ನು ಈ ಎರಡೂ ಫೋನ್‌ಗಳು 4K/60 fps ನಲ್ಲಿ ವೀಡಿಯೊಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿವೆ.
ಬ್ಯಾಟರಿ ಮತ್ತು ಚಾರ್ಜಿಂಗ್
Poco X8 Pro Max 5G ನಲ್ಲಿ 9,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಇದ್ದು, ಸಾಮಾನ್ಯ ಬಳಕೆಯಲ್ಲಿ ಮೂರು ದಿನಗಳವರೆಗೆ ಬ್ಯಾಕಪ್ ನೀಡುತ್ತದೆ ಎಂದು ಕಂಪನಿ ಹೇಳಿದೆ. ಇದು 18 ದಿನಗಳ ಸ್ಟ್ಯಾಂಡ್‌ಬೈ ಮತ್ತು 30 ಗಂಟೆಗಳ ವಿಡಿಯೋ ಪ್ಲೇಬ್ಯಾಕ್ ನೀಡುವ ಸಾಮರ್ಥ್ಯ ಹೊಂದಿದೆ. ಮತ್ತೊಂದೆಡೆ Poco X8 Pro 5G ನಲ್ಲಿ 6,500mAh ಬ್ಯಾಟರಿ ಇದೆ. ಎರಡೂ ಫೋನ್‌ಗಳು 100W ವೇಗದ ವೈರ್ಡ್ ಚಾರ್ಜಿಂಗ್ ಹಾಗೂ 27W ರಿವರ್ಸ್ ಚಾರ್ಜಿಂಗ್ ಸಪೋರ್ಟ್ ಹೊಂದಿವೆ.


Click it and Unblock the Notifications








