Home
ಮೊಬೈಲ್

ಆ.1ಕ್ಕೆ ಬರುತ್ತೆ Poco M6 Plus 5G ಫೋನ್: ವಿನ್ಯಾಸ, ಕ್ಯಾಮೆರಾ ಬಹಿರಂಗ.. ಬೆಲೆಯೂ ಅಗ್ಗ!

Poco M6 Plus 5G Launch date: ಪೊಕೊ ಮೊಬೈಲ್ ಪ್ರಿಯರಿಗೆ ಸಿಹಿ ಸುದ್ದಿ ಇದೆ. ಪೊಕೊ (Poco) ಕಂಪನಿಯು ತನ್ನ ಹೊಸ ಮೊಬೈಲ್‌ ಅನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲಿದೆ. ಹೌದು, ಸಂಸ್ಥೆಯು ತನ್ನ Poco M6 Plus 5G ಫೋನನ್ನು ಆಗಸ್ಟ್ 1 ರಂದು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುವ ಲ್ಯಾಂಡಿಂಗ್ ಪೇಜ್‌ ಹೊಸ ಫೋನಿನ ವಿನ್ಯಾಸ ಮತ್ತು ಕ್ಯಾಮೆರಾ ಸೆಟಪ್ ಬಹಿರಂಗಪಡಿಸಿದೆ. Poco M6 Plus 5G ಫೋನ್ 108MP ಕ್ಯಾಮೆರಾವನ್ನು ಹೊಂದಿರಲಿದೆ. ಈ ಪೋನಿನ ವಿಶೇಷತೆಗಳೇನು? ಬೆಲೆ ಎಷ್ಟು? ಎಂಬಿತ್ಯಾದಿ ವಿವರಗಳನ್ನು ತಿಳಿಯೋಣ ಬನ್ನಿ.

ಅಗ್ಗದ ಬೆಲೆಯ 5G ಸ್ಮಾರ್ಟ್‌ಫೋನ್‌ಗಳ ರೇಸ್‌ನಲ್ಲಿ 'Poco M' ಸರಣಿ ಮುಂಚೂಣಿಯಲ್ಲಿದೆ. POCO M6 5G ಅನ್ನು ಕೇವಲ 8,249 ರೂ.ಗಳಿಗೆ ಪರಿಚಯಿಸಿದ ನಂತರ, ಈಗ ಕಂಪನಿಯು ಅದೇ ಸರಣಿಯಲ್ಲಿ 'ಪ್ಲಸ್' ಮಾದರಿಯನ್ನು ತರುತ್ತಿದೆ. POCO M6 Plus 5G ಭಾರತದಲ್ಲಿ ಆಗಸ್ಟ್ 1 ರಂದು ಬಿಡುಗಡೆಯಾಗಲಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ದಿನಾಂಕವನ್ನು ಬಹಿರಂಗಪಡಿಸುವುದರ ಜೊತೆಗೆ, ಕಂಪನಿಯು ಫೋನಿನ ವಿನ್ಯಾಸವನ್ನು ಬಹಿರಂಗಪಡಿಸಿದೆ. ಇದು Poco M6 ಫೋನಿನಂತೆಯೇ ವಿನ್ಯಾಸವನ್ನು ಹೊಂದಿರುತ್ತದೆ.

ಆ.1ಕ್ಕೆ ಬರುತ್ತೆ Poco M6 Plus 5G: ವಿನ್ಯಾಸ, ಕ್ಯಾಮೆರಾ ಲೀಕ್.. ಬೆಲೆಯೂ ಅಗ್ಗ

Poco M6 Plus 5G ಫೋನ್ ಪುಟವನ್ನು ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಲೈವ್ ಮಾಡಲಾಗಿದೆ. ಈ ಮೈಕ್ರೋಸೈಟ್ ಮೂಲಕ, ಕಂಪನಿಯು POCO M6 Plus 5G ಅನ್ನು ಭಾರತದಲ್ಲಿ ಆಗಸ್ಟ್ 1 ರಂದು ಪ್ರಾರಂಭಿಸಲಾಗುವುದು ಎಂದು ಘೋಷಿಸಿದೆ. ಫೋನ್ ಬಿಡುಗಡೆ ಅಪ್ಡೇಟ್‌ಗಳನ್ನು ಬ್ರ್ಯಾಂಡ್‌ನ ಅಧಿಕೃತ ವೆಬ್‌ಸೈಟ್ ಮತ್ತು ಪೊಕೊ ಇಂಡಿಯಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಲೈವ್ ಆಗಿ ವೀಕ್ಷಿಸಬಹುದು. ಈ ಹೊಸ ಫೋನಿನ ಬೆಲೆ, ಲಭ್ಯತೆ ಮತ್ತು ಆಫರ್‌ಗಳನ್ನು ಆಗಸ್ಟ್ 1 ರಂದು ಬಹಿರಂಗಪಡಿಸಲಾಗುತ್ತದೆ.

ಡ್ಯುಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಲಾಂಚ್

Poco M6 Plus 5G ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನಲ್ಲಿ ಬಿಡುಗಡೆಯಾಗಲಿದೆ. 1.75 ಇಂಚಿನ ದೊಡ್ಡ ಅಪರ್ಚರ್‌ ಅನ್ನು ಬೆಂಬಲಿಸುವ ಫೋನ್‌ನ ಹಿಂಭಾಗದಲ್ಲಿ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇರುತ್ತದೆ. ಇದು 3x ಇನ್-ಸೆನ್ಸಾರ್ ಜೂಮ್ ವೈಶಿಷ್ಟ್ಯವನ್ನು ಹೊಂದಿರಲಿದೆ. ರಾತ್ರಿ ವೇಳೆ ಉತ್ತಮ ಫೋಟೋ ಕ್ಲಿಕ್ಕಿಸಲು ಆಟೋ ನೈಟ್ ಮೋಡ್ ಇರುತ್ತದೆ. ಫೋನ್‌ನ ಹಿಂದಿನ ಕ್ಯಾಮೆರಾ ಸೆಟಪ್‌ನಲ್ಲಿ ರಿಂಗ್ ಫ್ಲ್ಯಾಷ್ ಲೈಟ್ ಅನ್ನು ಒದಗಿಸಲಾಗಿದೆ.

POCO M6 Plus 5G ನಿರೀಕ್ಷಿತ ಬೆಲೆ

ಮಾಹಿತಿಯ ಪ್ರಕಾರ, Poco M6 Plus 5G ಫೋನ್ ಭಾರತದಲ್ಲಿ ಎರಡು RAM ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ. ಇದರ 6GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ 13,999 ರೂ. ಎಂದು ಹೇಳಲಾಗುತ್ತಿದೆ. ಸೋರಿಕೆಯ ಪ್ರಕಾರ, POCO M6+ 5G 8GB RAM + 128GB ಸ್ಟೋರೇಜ್ ಮಾದರಿಯನ್ನು 14,999 ರೂ.ಗೆ ಬಿಡುಗಡೆ ಮಾಡಲಾಗುತ್ತದೆ. ಟಿಪ್‌ಸ್ಟರ್ ಪ್ರಕಾರ, ಈ ಮೊಬೈಲ್‌ನಲ್ಲಿ 1000 ರೂಪಾಯಿಗಳ ಬ್ಯಾಂಕ್ ರಿಯಾಯಿತಿಯನ್ನು ಸಹ ನೀಡಲಾಗುತ್ತದೆ.

POCO M6 Plus 5G ನಿರೀಕ್ಷಿತ ಫೀಚರ್ಸ್

ಡಿಸ್‌ಪ್ಲೇ: POCO M6 Plus 5G ಫೋನ್ 6.79-ಇಂಚಿನ LCD ಡಿಸ್‌ಪ್ಲೇಯಲ್ಲಿ ಬಿಡುಗಡೆಯಾಗಲಿದೆ. 120Hz ರಿಫ್ರೆಶ್ ರೇಟ್ ಬೆಂಬಲವನ್ನು ಈ ಡಿಸ್ಲ್ಪೇಯಲ್ಲಿ ಕಾಣಬಹುದು.

ಪ್ರೊಸೆಸರ್: ಈ ಮೊಬೈಲ್ ಆಂಡ್ರಾಯ್ಡ್ 14 ನಲ್ಲಿ ಬಿಡುಗಡೆಯಾಗುತ್ತದೆ. ಮತ್ತು ಹೈಪರ್‌ ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್‌ಫೋನ್‌ನಲ್ಲಿ Qualcomm Snapdragon 4 Gen 2 ಆಕ್ಟಾಕೋರ್ ಪ್ರೊಸೆಸರ್ ಅನ್ನು ಒದಗಿಸಬಹುದು.

ಕ್ಯಾಮೆರಾ: ಇದು 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ 2 ಮೆಗಾಪಿಕ್ಸೆಲ್ ಸೆಕೆಂಡರಿ ಲೆನ್ಸ್ ಹೊಂದಿರಲಿದೆ. ಇದು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 13 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿರುತ್ತದೆ.

ಬ್ಯಾಟರಿ: ಈ ಫೋನ್‌ನಲ್ಲಿ 5,030mAh ಬ್ಯಾಟರಿಯನ್ನು ಒದಗಿಸಬಹುದು. ಇದು 33W ವೇಗದ ಚಾರ್ಜಿಂಗ್ ಬೆಂಬಲವನ್ನು ಪಡೆಯಬಹುದು.

ಇತರೆ ಫೀಚರ್ಸ್: ಈ ಫೋನ್ IP53 ರೇಟಿಂಗ್‌ನೊಂದಿಗೆ ಬರುತ್ತದೆ. ಇದನ್ನು 3.5 ಎಂಎಂ ಜ್ಯಾಕ್‌ನೊಂದಿಗೆ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ನೊಂದಿಗೆ ಒದಗಿಸಬಹುದು.

Best Mobiles in India

English summary
POCO M6 Plus 5G launch date in India on August 1 with 108MP camera : Expected specs, price and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+