Home
ಮೊಬೈಲ್

ಇಂದು POCO M6 Plus 5G ಫೋನ್‌ ಲಾಂಚ್‌: ಕಡಿಮೆ ಬೆಲೆ.. ರಗಡ್ ಲುಕ್‌!

ಪೊಕೊ (Poco) ಕಂಪನಿಯ ಬಹುನಿರೀಕ್ಷಿತ ಹೊಸ ಫೋನ್‌ ಇಂದು (ಆಗಸ್ಟ್ 1) ಭಾರತದಲ್ಲಿ ಬಿಡುಗಡೆಯಾಗಲಿದೆ. ಇದುವೇ ಪೊಕೊ ಎಂ6 ಪ್ಲಸ್ 5G (Poco M6 Plus 5G) ಸ್ಮಾರ್ಟ್‌ಫೋನ್‌. ಮೊಬೈಲ್‌ ಪ್ರಿಯರ ಗಮನ ಸೆಳೆದಿರುವ ಈ ಫೋನ್ ಇಂದು ಅಧಿಕೃತವಾಗಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಹೊಸ ಪೊಕೊ ಎಂ6 ಪ್ಲಸ್ 5G ಸ್ಮಾರ್ಟ್‌ಫೋನ್ 108MP ಕ್ಯಾಮೆರಾದೊಂದಿಗೆ ಬರಲಿದೆ. Qualcomm Snapdragon 4 Gen 2 ಆಕ್ಟಾಕೋರ್ ಪ್ರೊಸೆಸರ್‌ನೊಂದಿಗೆ ಈ ಫೋನ್ ಕಾರ್ಯನಿರ್ವಹಿಸುವುದು ಖಚಿತವಾಗಿದೆ.

ಹೌದು, ಪೊಕೊ ಕಂಪನಿಯು'Poco M' ಸರಣಿಯಲ್ಲಿ ಹೊಸ 'Plus' ಫೋನನ್ನು ತರುತ್ತಿದೆ. ಇಂದು ಸಂಜೆ 4 ಗಂಟೆಗೆ ಪೊಕೊ ಎಂ6 ಪ್ಲಸ್ 5G (Poco M6 Plus 5G) ಮೊಬೈಲ್‌ ಅನ್ನು ಲಾಂಚ್ ಮಾಡಲಿದೆ. ಈ ಸ್ಮಾರ್ಟ್‌ಫೋನ್‌ ವಿಭಿನ್ನ ಡಿಸೈನ್‌ ಜೊತೆಗೆ ಕೆಲವು ಅತ್ಯಾಕರ್ಷಕ ಫೀಚರ್ಸ್‌ಗಳನ್ನು ಹೊಂದಿದೆ. ಇನ್ನು ಈ ಫೋನ್ ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ. ಪ್ರಾರಂಭಿಕ ಬೆಲೆ 13,999 ರೂ. ಎನ್ನಲಾಗಿದೆ.

ಇಂದು POCO M6 Plus 5G ಫೋನ್‌ ಲಾಂಚ್‌: ಕಡಿಮೆ ಬೆಲೆ.. ರಗಡ್ ಲುಕ್‌!

ಫ್ಲಿಪ್‌ಕಾರ್ಟ್‌ನಲ್ಲಿ Poco M6 Plus 5G ಫೋನ್ ಪೇಜ್‌ ಲೈವ್

ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ Poco M6 Plus 5G ಫೋನ್ ಪುಟವನ್ನು ಲೈವ್ ಮಾಡಲಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುವ ಲ್ಯಾಂಡಿಂಗ್ ಪೇಜ್‌ ಹೊಸ ಫೋನಿನ ಡಿಸೈನ್ ಮತ್ತು ಕ್ಯಾಮೆರಾ ಸೆಟಪ್ ಬಹಿರಂಗಪಡಿಸಿದೆ. ಈ ಮೈಕ್ರೋಸೈಟ್ ಮೂಲಕ, ಕಂಪನಿಯು POCO M6 Plus 5G ಸ್ಮಾರ್ಟ್‌ಫೋನ್‌ ಅನ್ನು ಅನಾವರಣಗೊಳಿಸಲಿದೆ. ಫೋನ್ ಬಿಡುಗಡೆ ಅಪ್ಡೇಟ್‌ಗಳನ್ನು ಬ್ರ್ಯಾಂಡ್‌ನ ಅಧಿಕೃತ ವೆಬ್‌ಸೈಟ್ ಮತ್ತು ಪೊಕೊ ಇಂಡಿಯಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಲೈವ್ ಆಗಿ ವೀಕ್ಷಿಸಬಹುದು.

POCO M6 Plus 5G ನಿರೀಕ್ಷಿತ ಬೆಲೆ

ಮಾಹಿತಿಯ ಪ್ರಕಾರ, Poco M6 Plus 5G ಫೋನ್ ಭಾರತದಲ್ಲಿ ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ. ಇದರ 6GB RAM + 128GB ಸ್ಟೋರೇಜ್ ವೇರಿಯಂಟ್‌ ಬೆಲೆ 13,999 ರೂ. ಇರಬಹುದು. ಈ ಫೋನಿನ 8GB RAM + 128GB ಸ್ಟೋರೇಜ್ ಮಾದರಿಯನ್ನು 14,999 ರೂ.ಗೆ ಬಿಡುಗಡೆ ಮಾಡಬಹುದು. ಬಿಡುಗಡೆ ಕೊಡುಗೆಯ ಭಾಗವಾಗಿ, ಈ ಮೊಬೈಲ್‌ ಖರೀದಿಸುವ ಗ್ರಾಹಕರಿಗೆ 1,000 ರೂ.ಗಳ ಬ್ಯಾಂಕ್ ರಿಯಾಯಿತಿ ನೀಡಲಾಗುತ್ತದೆ.

108 ಮೆಗಾಪಿಕ್ಸೆಲ್ ಕ್ಯಾಮೆರಾ ಖಚಿತ!

Poco M6 Plus 5G ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿರಲಿದೆ. ಫೋನಿನ ಹಿಂಭಾಗದಲ್ಲಿ 1.75 ಇಂಚಿನ ದೊಡ್ಡ ಅಪರ್ಚರ್‌ ಬೆಂಬಲಿಸುವ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇರಲಿದೆ. ಇದು 3x ಇನ್-ಸೆನ್ಸಾರ್ ಜೂಮ್ ಫೀಚರ್‌ ಅನ್ನು ಹೊಂದಿರಲಿದೆ. ರಾತ್ರಿ ವೇಳೆ ಉತ್ತಮ ಫೋಟೋ ಕ್ಲಿಕ್ಕಿಸಲು ಆಟೋ ನೈಟ್ ಮೋಡ್ ಇರುತ್ತದೆ. ಫೋನಿನ ಹಿಂದಿನ ಕ್ಯಾಮೆರಾ ಸೆಟಪ್‌ನಲ್ಲಿ ರಿಂಗ್ ಫ್ಲ್ಯಾಷ್ ಲೈಟ್ ಅಳವಡಿಸಲಾಗಿದೆ.

ಇಂದು POCO M6 Plus 5G ಫೋನ್‌ ಲಾಂಚ್‌: ಕಡಿಮೆ ಬೆಲೆ.. ರಗಡ್ ಲುಕ್‌!

POCO M6 Plus 5G ಫೋನಿನ ನಿರೀಕ್ಷಿತ ಫೀಚರ್ಸ್

ಹೊಸ ಪೊಕೊ ಫೋನ್ 6.79-ಇಂಚಿನ LCD ಡಿಸ್‌ಪ್ಲೇಯನ್ನು ಹೊಂದಿರಲಿದೆ. ಈ ಡಿಸ್ಲ್ಪೇಯಲ್ಲಿ 120Hz ರಿಫ್ರೆಶ್ ರೇಟ್ ಸಪೋರ್ಟ್‌ ಕಾಣಬಹುದು. ಈ ಸ್ಮಾರ್ಟ್‌ಫೋನ್‌ನಲ್ಲಿ Qualcomm Snapdragon 4 Gen 2 ಆಕ್ಟಾಕೋರ್ ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. ಇದು ಆಂಡ್ರಾಯ್ಡ್ 14 ನಲ್ಲಿ ಬಿಡುಗಡೆಯಾಗುತ್ತದೆ. ಮತ್ತು ಹೈಪರ್‌ ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಅದ್ಭುತ ಕ್ಯಾಮೆರಾ ಸೆಟಪ್

ಮೊದಲೇ ಹೇಳಿದಂತೆ, ಇದು 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿರಲಿದೆ. ಇದೊಂದಿಗೆ 2 ಮೆಗಾಪಿಕ್ಸೆಲ್ ಸೆಕೆಂಡರಿ ಲೆನ್ಸ್ ಇರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 13 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿರುತ್ತದೆ.

ಬ್ಯಾಟರಿ ಬ್ಯಾಕಪ್ ಮತ್ತು ಚಾರ್ಜಿಂಗ್

ಕಂಪನಿಯು ಈ ಫೋನ್‌ನಲ್ಲಿ 5,030mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಿದೆ. ಇದು 33W ವೇಗದ ಚಾರ್ಜಿಂಗ್ ಸಪೋರ್ಟ್‌ ಪಡೆದಿರಲಿದೆ. ಈ ಫೋನ್ IP53 ರೇಟಿಂಗ್‌ನೊಂದಿಗೆ ಬರುತ್ತದೆ. ಇದನ್ನು 3.5 ಎಂಎಂ ಜ್ಯಾಕ್‌ನೊಂದಿಗೆ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ನೊಂದಿಗೆ ಪರಿಚಯಿಸಬಹುದು.

Best Mobiles in India

English summary
Poco M6 Plus 5G will be launching India Today : Expected specs, price and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+