ಅಖಾಡಕ್ಕೆ Poco ಎಂಟ್ರಿ..! ಶೀಘ್ರದಲ್ಲೇ ಮತ್ತೊಂದು ಬಜೆಟ್ ಫೋನ್ ಬಿಡುಗಡೆ: ಎದುರಾಳಿಗಳಿಗೆ ನಡುಕ ಗ್ಯಾರಂಟಿ!
Poco ತನ್ನ ಹೊಸ M6 Plus 5G ಸ್ಮಾರ್ಟ್‌ಫೋನ್ ಅನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಇದು ಇತ್ತೀಚೆಗೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಪ್ರಮಾಣೀಕರಣ ಮತ್ತು ಗೀಕ್‌ಬೆಂಚ್ ಪಟ್ಟಿಗಳಲ್ಲಿ ಗುರುತಿಸಲ್ಪಟ್ಟಿದೆ. ಈ ಮೂಲಕ ಹೊಸ ಫೋನಿನ ಬಿಡುಗಡೆಯ ಸುಳಿವು ನೀಡಿದೆ. ಈ ಫೋನ್ ಬಗ್ಗೆ ಬ್ರ್ಯಾಂಡ್ ಅಧಿಕೃತವಾಗಿ ಯಾವುದೇ ಪ್ರಕಟಣೆಯನ್ನು ಮಾಡಿಲ್ಲ. ಆದರೆ, ಇತ್ತೀಚಿನ ಸೋರಿಕೆಯು ಫೋನ್‌ನ ವಿನ್ಯಾಸ, ಬೆಲೆ ಮತ್ತು ವಿಶೇಷತೆಗಳ ಬಹಿರಂಗಪಡಿಸಿದೆ.
91mobilesನ ಇತ್ತೀಚಿನ ಮಾಹಿತಿಯು POCO M6 Plus 5Gಯ ಫೀಚರ್‌ಗಳು ಮತ್ತು ಭಾರತದಲ್ಲಿನ ಬೆಲೆಯನ್ನು ಬಹಿರಂಗಪಡಿಸಿದೆ. ಭಾರತದಲ್ಲಿ Poco M6 Plus 5G ವಿನ್ಯಾಸ ಮತ್ತು ನಿರೀಕ್ಷಿತ ವೈಶಿಷ್ಟ್ಯಗಳು 91mobiles ಹಂಚಿಕೊಂಡ ಮಾಹಿತಿಯ ಪ್ರಕಾರ, ಈ ನೂತನ ಮೊಬೈಲ್ Poco M6 ಫೋನಿನಂತೆಯೇ ವಿನ್ಯಾಸವನ್ನು ಹೊಂದಿರುತ್ತದೆ. ಆದರೆ, ಮುಂಬರುವ ಈ ಸ್ಮಾರ್ಟ್‌ಫೋನ್ ಎಲ್ಇಡಿ ಫ್ಲ್ಯಾಷ್ ರಿಂಗ್ ಅನ್ನು ಹೊಂದಿರುತ್ತದೆ.

Poco M6 Plus 5G ಬೆಲೆ ಎಷ್ಟಿರಲಿದೆ?
91mobilesನ ವರದಿಯ ಪ್ರಕಾರ, Poco M6 Plus 5G ಫೋನ್ ಎರಡು ಆವೃತ್ತಿಗಳಲ್ಲಿ ಬರುತ್ತದೆ. ಇದರಲ್ಲಿ 6GB RAM ಮತ್ತು 128GB ಸ್ಟೋರೇಜ್ ಮಾದರಿಯ ಬೆಲೆ 13,999 ರೂ. ಇರಲಿದೆ. ಇನ್ನೂ 8GB RAM ಮತ್ತು 128GB ಸ್ಟೋರೇಜ್ ಮಾದರಿಯ ಬೆಲೆ 14,999 ರೂ. ಆಗಿದೆ. ಇದರ ಹೊರತಾಗಿ, ಕಂಪನಿಯಿಂದ ಬಿಡುಗಡೆಯ ಕೊಡುಗೆಯಾಗಿ 1,000 ರೂಪಾಯಿಗಳ ತ್ವರಿತ ಬ್ಯಾಂಕ್ ರಿಯಾಯಿತಿಯನ್ನು ಸಹ ಪಡೆಯಬಹುದು ಎಂದು ವರದಿ ಹೇಳುತ್ತದೆ. ಈ ಫೋನ್ ನೇರಳೆ, ಕಪ್ಪು ಮತ್ತು ಬೆಳ್ಳಿ ಬಣ್ಣಗಳಲ್ಲಿ ಬರಲಿದೆ.
ಇದು POCO M6 ಪ್ಲಸ್ 5G ವಿನ್ಯಾಸವಾಗಿದೆ
ಕಳೆದ ಡಿಸೆಂಬರ್‌ನಲ್ಲಿ ದೇಶಿಯ ಮಾರುಕಟ್ಟೆಯನ್ನು ಪ್ರವೇಶಿಸಿದ Poco M6 5G ಫೋನ್‌ನ ಮುಂದುವರಿದ ಭಾಗವಾಗಿ Poco M6 Plus 5G ಫೋನ್ ಬರುತ್ತಿದೆ. ಈ ಮುಂಬರುವ Poco ಫೋನ್ ವಾಲ್ಯೂಮ್ ಕೀಗಳನ್ನು ಹೊಂದಿರುವ ಫ್ಲಾಟ್ ಫ್ರೇಮ್ ಮತ್ತು ಬಲಭಾಗದಲ್ಲಿ ಪವರ್ ಬಟನ್ ಅನ್ನು ಹೊಂದಿದೆ. ಮುಂಭಾಗದಲ್ಲಿ ತೆಳುವಾದ ಬೆಜೆಲ್‌ಗಳು ಮತ್ತು ಪಂಚ್-ಹೋಲ್ ಡಿಸ್ಪ್ಲೇ ಇವೆ. ಇದು ಹಿಂಭಾಗದಲ್ಲಿ ಪ್ರಮುಖ ಎಲ್ಇಡಿ ಫ್ಲ್ಯಾಷ್ ರಿಂಗ್ ಅನ್ನು ಒಳಗೊಂಡಿದೆ.
Poco M6 5G ಸ್ಮಾರ್ಟ್‌ಫೋನ್ Redmi Note 13R ನ ಮರುಬ್ರಾಂಡೆಡ್ ಆವೃತ್ತಿಯಾಗಿದೆ ಎಂದು ಸೋರಿಕೆ ಬಹಿರಂಗಪಡಿಸಿದೆ. ಇದು ನಿಜವಾದಲ್ಲಿ, POCO M6 Plus 5G ಮೊಬೈಲ್ 120Hz ರಿಫ್ರೆಶ್‌ನೊಂದಿಗೆ 6.79-ಇಂಚಿನ LCD ಪ್ಯಾನೆಲ್ ಅನ್ನು ಹೊಂದಿರುತ್ತದೆ. ಮತ್ತು Qualcomm Snapdragon 4 Gen 2 ಪ್ರೊಸೆಸರ್‌ನಿಂದ ಚಾಲಿತವಾಗುತ್ತದೆ ಎಂದು ನಿರೀಕ್ಷಿಸಬಹುದು.
108MP ಕ್ಯಾಮೆರಾ, 'ಪವರ್' ಫುಲ್ ಬ್ಯಾಟರಿ
ಕ್ಯಾಮರಾಗೆ ಸೆಟಪ್‌ಗೆ ಸಂಬಂಧಿಸಿದಂತೆ, ಇದು ಬಹುಶಃ 108MP ಪ್ರಾಥಮಿಕ ಕ್ಯಾಮೆರಾ, 2MP ಸೆಕೆಂಡರಿ ಸಂವೇದಕ ಮತ್ತು 13MP ಮುಂಭಾಗದ ಕ್ಯಾಮೆರಾವನ್ನು ಒಳಗೊಂಡಿರುತ್ತದೆ. ಈ ಸ್ಮಾರ್ಟ್‌ಫೋನ್‌ನಲ್ಲಿ 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಶಕ್ತಿಯುತ 5,030mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಅಳವಡಿಸಲಾಗಿದೆ.
ಈ ಸ್ಮಾರ್ಟ್‌ಫೋನ್ ಬಿಡುಗಡೆ ಯಾವಾಗ?
ಇತರ ವೈಶಿಷ್ಟ್ಯಗಳ ಪೈಕಿ, ಈ ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿದೆ ಎಂದು ಹೇಳಲಾಗುತ್ತದೆ. ಡ್ಯುಯಲ್ ಸಿಮ್ ಸಪೋರ್ಟ್, ಯುಎಸ್‌ಬಿ ಟೈಪ್-ಸಿ ಪೋರ್ಟ್, ಯುಎಫ್‌ಎಸ್ 2.2 ಸ್ಟೋರೇಜ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಐಪಿ53 ರೇಟಿಂಗ್ ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ.
ಮುಂಬರುವ ಈ ಸ್ಮಾರ್ಟ್‌ಫೋನ್ ಅನ್ನು ಗೀಕ್‌ಬೆಂಚ್‌ನಲ್ಲಿ 6GB RAM ಮತ್ತು ಸ್ನಾಪ್‌ಡ್ರಾಗನ್ 4 Gen 2 AE ಚಿಪ್‌ಸೆಟ್‌ನೊಂದಿಗೆ ಗುರುತಿಸಲಾಗಿದೆ. ಪ್ರಸ್ತುತ ಕಂಪನಿಯು ತನ್ನ ಅಧಿಕೃತ ಬೆಲೆ ಮತ್ತು ಬಿಡುಗಡೆ ದಿನಾಂಕವನ್ನು ಪ್ರಕಟಿಸಿಲ್ಲ. ಆದ್ದರಿಂದ, ಈ ಮಾಹಿತಿಗಳೆಲ್ಲವೂ ನಿರೀಕ್ಷಿತ ಎಂದು ಪರಿಗಣಿಸಲಾಗುತ್ತಿದೆ.


Click it and Unblock the Notifications








