ಒಂದೇ ದಿನ ಬಾಕಿ! ನಾಳೆ ಹೊಸ POCO ಫೋನ್ ಲಾಂಚ್: ಬೆಲೆಯೂ ಕಡಿಮೆ!
POCO M6 Plus 5G India Launch: ಸ್ಮಾರ್ಟ್‌ಫೋನ್ ಪ್ರಿಯರಿಗೆ ಆಗಸ್ಟ್ ತಿಂಗಳ ಮೊದಲ ದಿನವೇ ಭರ್ಜರಿ ಸಿಹಿ ಸುದ್ದಿ ಇದೆ. ಪೊಕೊ (Poco) ಕಂಪನಿಯು ತನ್ನ ಬಹುನಿರೀಕ್ಷಿತ ಹೊಸ ಫೋನನ್ನು ನಾಳೆ (ಆಗಸ್ಟ್ 1) ಬಿಡುಗಡೆ ಮಾಡಲಿದೆ. ಹೌದು, ಪೊಕೊ ಎಂ6 ಪ್ಲಸ್ 5G (Poco M6 Plus 5G) ಸ್ಮಾರ್ಟ್‌ಫೋನ್ ನಾಳೆ ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಎಂಟ್ರಿ ಕೊಡಲಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುವ ಲ್ಯಾಂಡಿಂಗ್ ಪೇಜ್ ಹೊಸ ಫೋನಿನ ಡಿಸೈನ್ ಮತ್ತು ಕ್ಯಾಮೆರಾ ಸೆಟಪ್ ಬಹಿರಂಗಪಡಿಸಿದೆ. ಅದರಂತೆ, ಪೊಕೊ ಎಂ6 ಪ್ಲಸ್ 5G ಫೋನ್ 108MP ಕ್ಯಾಮೆರಾ ಹೊಂದಿರುವುದು ಖಚಿತವಾಗಿದೆ.
ಅಗ್ಗದ ಬೆಲೆಯ 5G ಫೋನ್‌ಗಳ ರೇಸ್‌ನಲ್ಲಿ 'Poco M' ಸರಣಿ ಮುಂಚೂಣಿಯಲ್ಲಿದೆ. POCO M6 5G ಫೋನನ್ನು ಕೇವಲ 8,249 ರೂ.ಗಳಿಗೆ ಪರಿಚಯಿಸಿದ ಬಳಿಕ, ಇದೀಗ ಕಂಪನಿಯು ಅದೇ ಸರಣಿಯಲ್ಲಿ 'ಪ್ಲಸ್' ಫೋನನ್ನು ತರುತ್ತಿದೆ. Poco M6 Plus 5G ನಾಳೆ ಭಾರತದಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ, ಕಂಪನಿಯು ಫೋನಿನ ವಿನ್ಯಾಸವನ್ನು ಬಹಿರಂಗಪಡಿಸಿದೆ. ಇದು Poco M6 ಫೋನಿನಂತೆಯೇ ಡಿಸೈನ್ ಹೊಂದಿರಲಿದೆ. ಈ ಫೋನಿನ ಸ್ಟೈಲಿಶ್ ಲುಕ್ ಮತ್ತು ಫೀಚರ್ಸ್‌ಗೆ ಮೊಬೈಲ್ ಪ್ರಿಯರು ಫಿದಾ ಆಗಿದ್ದಾರೆ.

108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಖಚಿತ
Poco M6 Plus 5G ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಫೋನಿನ ಹಿಂಭಾಗದಲ್ಲಿ 1.75 ಇಂಚಿನ ದೊಡ್ಡ ಅಪರ್ಚರ್ ಬೆಂಬಲಿಸುವ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇರಲಿದೆ. ಇದು 3x ಇನ್-ಸೆನ್ಸಾರ್ ಜೂಮ್ ಫೀಚರ್ ಅನ್ನು ಹೊಂದಿರಲಿದೆ. ರಾತ್ರಿ ವೇಳೆ ಉತ್ತಮ ಫೋಟೋ ಕ್ಲಿಕ್ಕಿಸಲು ಆಟೋ ನೈಟ್ ಮೋಡ್ ಇರುತ್ತದೆ. ಫೋನಿನ ಹಿಂದಿನ ಕ್ಯಾಮೆರಾ ಸೆಟಪ್‌ನಲ್ಲಿ ರಿಂಗ್ ಫ್ಲ್ಯಾಷ್ ಲೈಟ್ ಅಳವಡಿಸಲಾಗಿದೆ.
POCO M6 Plus 5G ನಿರೀಕ್ಷಿತ ಫೀಚರ್ಸ್
ಡಿಸ್‌ಪ್ಲೇ: ಹೊಸ ಪೊಕೊ ಫೋನ್ 6.79-ಇಂಚಿನ LCD ಡಿಸ್‌ಪ್ಲೇಯನ್ನು ಹೊಂದಿರಲಿದೆ. ಈ ಡಿಸ್ಲ್ಪೇಯಲ್ಲಿ 120Hz ರಿಫ್ರೆಶ್ ರೇಟ್ ಸಪೋರ್ಟ್ ಕಾಣಬಹುದು.
ಪ್ರೊಸೆಸರ್: ಈ ಸ್ಮಾರ್ಟ್‌ಫೋನ್‌ನಲ್ಲಿ Qualcomm Snapdragon 4 Gen 2 ಆಕ್ಟಾಕೋರ್ ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. ಇದು ಆಂಡ್ರಾಯ್ಡ್ 14 ನಲ್ಲಿ ಬಿಡುಗಡೆಯಾಗುತ್ತದೆ. ಮತ್ತು ಹೈಪರ್ ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
ಕ್ಯಾಮೆರಾ: ಮೊದಲೇ ಹೇಳಿದಂತೆ, ಇದು 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿರಲಿದೆ. ಇದೊಂದಿಗೆ 2 ಮೆಗಾಪಿಕ್ಸೆಲ್ ಸೆಕೆಂಡರಿ ಲೆನ್ಸ್ ಇರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 13 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿರುತ್ತದೆ.

ಬ್ಯಾಟರಿ: ಕಂಪನಿಯು ಈ ಫೋನ್‌ನಲ್ಲಿ 5,030mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಿದೆ. ಇದು 33W ವೇಗದ ಚಾರ್ಜಿಂಗ್ ಸಪೋರ್ಟ್ ಪಡೆದಿರಲಿದೆ.
ಇತರೆ ಫೀಚರ್ಸ್: ಈ ಫೋನ್ IP53 ರೇಟಿಂಗ್‌ನೊಂದಿಗೆ ಬರುತ್ತದೆ. ಇದನ್ನು 3.5 ಎಂಎಂ ಜ್ಯಾಕ್‌ನೊಂದಿಗೆ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ನೊಂದಿಗೆ ಪರಿಚಯಿಸಬಹುದು.
POCO M6 Plus 5G ಬೆಲೆ ಎಷ್ಟಿರಲಿದೆ?
ವರದಿಯ ಪ್ರಕಾರ, Poco M6 Plus 5G ಫೋನ್ ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ. ಇದರ 6GB RAM + 128GB ಸ್ಟೋರೇಜ್ ವೇರಿಯಂಟ್ ಬೆಲೆ 13,999 ರೂ. ಎಂದು ಹೇಳಲಾಗುತ್ತಿದೆ. ಈ ಫೋನಿನ 8GB RAM + 128GB ಸ್ಟೋರೇಜ್ ಮಾದರಿಯನ್ನು 14,999 ರೂ.ಗೆ ಬಿಡುಗಡೆ ಮಾಡಲಾಗುತ್ತದೆ. ಲಾಂಚ್ ಆಫರ್ ಭಾಗವಾಗಿ, ಈ ಮೊಬೈಲ್ ಖರೀದಿ ಮೇಲೆ 1,000 ರೂ.ಗಳ ಬ್ಯಾಂಕ್ ಡಿಸ್ಕೌಂಟ್ ಸಹ ನೀಡಲಾಗುತ್ತದೆ.
ಪೊಕೊ ಇಂಡಿಯಾ ಸೈಟ್, ಫ್ಲಿಪ್‌ಕಾರ್ಟ್‌ನಲ್ಲಿ ಲೈವ್
ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ Poco M6 Plus 5G ಫೋನ್ ಪುಟವನ್ನು ಲೈವ್ ಮಾಡಲಾಗಿದೆ. ಈ ಮೈಕ್ರೋಸೈಟ್ ಮೂಲಕ, ಕಂಪನಿಯು POCO M6 Plus 5G ಸ್ಮಾರ್ಟ್‌ಫೋನ್ ಅನ್ನು ನಾಳೆ (ಆಗಸ್ಟ್ 1) ಅನಾವರಣಗೊಳಿಸಲಿದೆ. ಫೋನ್ ಬಿಡುಗಡೆ ಅಪ್ಡೇಟ್‌ಗಳನ್ನು ಬ್ರ್ಯಾಂಡ್‌ನ ಅಧಿಕೃತ ವೆಬ್‌ಸೈಟ್ ಮತ್ತು ಪೊಕೊ ಇಂಡಿಯಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಲೈವ್ ಆಗಿ ವೀಕ್ಷಿಸಬಹುದು.


Click it and Unblock the Notifications








