Home
ಮೊಬೈಲ್

ಮಾರುಕಟ್ಟೆಗೆ POCO M6 Plus 5G ಗ್ರ್ಯಾಂಡ್‌ ಎಂಟ್ರಿ.. ಕೇವಲ 11,999 ರೂ.!

ಮೊಬೈಲ್‌ ಪ್ರಿಯರಿಗೆ ಇದಕ್ಕಿಂತ ಖುಷಿ ಸುದ್ದಿ ಮತ್ತೊಂದಿಲ್ಲ! ಕೇವಲ 11,999 ರೂ.ಗೆ ಹೊಸ ಫೋನ್‌ ಭಾರತಕ್ಕೆ ಎಂಟ್ರಿ ಕೊಟ್ಟಿದೆ. ಹೌದು, ಪೊಕೊ (Poco) ಕಂಪನಿಯು ಭಾರತೀಯ ಗ್ರಾಹಕರಿಗಾಗಿ 'Poco M' ಸರಣಿಯಲ್ಲಿ ಹೊಸ 'Plus' ಫೋನನ್ನು ಬಿಡುಗಡೆ ಮಾಡಿದೆ. ಈ ಹೊಸ ಫೋನನ್ನು ಬಜೆಟ್ ಬೆಲೆಯಲ್ಲಿ ಪರಿಚಯಿಸಲಾಗಿದೆ. ನೀವು 12 ಅಥವಾ 14 ಸಾವಿರಕ್ಕಿಂತ ಕಡಿಮೆ ಬಜೆಟ್‌ನಲ್ಲಿ ಹೊಸ ಫೋನ್ ಖರೀದಿಸಲು ಬಯಸಿದರೆ, ಈ ಹೊಸ ಫೋನ್‌ ಫರ್ಪೆಕ್ಟ್‌ ಆಯ್ಕೆಯಾಗಲಿದೆ. ಹಾಗಿದ್ರೆ, ಈ ಫೋನಿನ ಫೀಚರ್ಸ್, ಬೆಲೆ ಮತ್ತು ಲಭ್ಯತೆ ಬಗ್ಗೆ ತಿಳಿಯೋಣ ಬನ್ನಿ.

ಹೌದು, ಪೊಕೊ ತನ್ನ ಬಹುನಿರೀಕ್ಷಿತ ಹೊಸ ಪೊಕೊ ಎಂ6 ಪ್ಲಸ್ 5G (Poco M6 Plus 5G) ಫೋನನ್ನು ಅನಾವರಣಗೊಳಿಸಿದೆ. ನೀವು ಕೈಗೆಟುಕುವ ದರದಲ್ಲಿ ಹೊಸ ಫೋನ್ ಖರೀದಿಸಲು ಪ್ಲ್ಯಾನ್ ಮಾಡಿದ್ದರೆ, 'Poco M' ಸರಣಿಯ ಈ ಹೊಸ ಫೋನ್ ಬಗ್ಗೆ ಒಮ್ಮೆ ತಿಳಿಯಲೇಬೇಕು. ಕಂಪನಿಯು ಫೋನ್ ಬಿಡುಗಡೆಯೊಂದಿಗೆ, ಮಾರಾಟದ ವಿವರಗಳು ಮತ್ತು ಬೆಲೆಯನ್ನು ಬಹಿರಂಗಪಡಿಸಿದೆ. 12 ಸಾವಿರಕ್ಕಿಂತ ಕಡಿಮೆ ಆರಂಭಿಕ ಬೆಲೆಯಲ್ಲಿ ಈ ಫೋನ್ ಖರೀದಿಸಲು ಅವಕಾಶವಿದೆ.

ಮಾರುಕಟ್ಟೆಗೆ POCO M6 Plus 5G ಎಂಟ್ರಿ.. ಕೇವಲ 11,999 ರೂ.!

Poco M6 Plus 5G ಫೋನಿನ ಬೆಲೆ

ಕಂಪನಿಯು Poco M6 Plus 5G ಫೋನನ್ನು ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಫೋನನ್ನು 12,000 ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಖರೀದಿಸುವ ಅವಕಾಶವನ್ನು ಕಲ್ಪಿಸಿದೆ. ಈ ಫೋನಿನ 6GB RAM + 128GB ಸ್ಟೋರೇಜ್ ವೇರಿಯಂಟ್‌ ಅನ್ನು 13,999 ರೂ.ಗೆ ಬಿಡುಗಡೆ ಮಾಡಲಾಗಿದೆ. 8GB RAM + 128GB ಸ್ಟೋರೇಜ್‌ ಮಾದರಿಯನ್ನು 14,999 ರೂ.ಗೆ ಬಿಡುಗಡೆ ಮಾಡಲಾಗಿದೆ.

ಆಫರ್‌ ಏನಿದೆ? ಮೊದಲ ಮಾರಾಟ ಯಾವಾಗ?

Poco M6 Plus 5G ಫೋನಿನ ಮೊದಲ ಮಾರಾಟವನ್ನು ಆಗಸ್ಟ್ 5 ರಂದು ಮಧ್ಯಾಹ್ನ 12 ಗಂಟೆಗೆ ನಿಗದಿಪಡಿಸಲಾಗಿದೆ. ಕಂಪನಿಯು ಈ ಫೋನಿನ ಖರೀದಿಯ ಮೇಲೆ ಲಾಂಚ್ ಆಫರ್‌ ಘೋಷಿಸಿದೆ. SBI, HDFC ಮತ್ತು ICICI ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು ಖರೀದಿಸುವ ಗ್ರಾಹಕರಿಗೆ 1,000 ರೂ.ಗಳ ಡಿಸ್ಕೌಂಟ್‌ ನೀಡಲಾಗುತ್ತದೆ. ಇದಲ್ಲದೆ, 6GB RAM ಮಾದರಿಯು ಹೆಚ್ಚುವರಿ 5,000 ರೂ.ಗಳ ಕೂಪನ್ ಅನ್ನು ಒಳಗೊಂಡಿದೆ.

ಡಿಸ್ಕೌಂಟ್‌ ಮತ್ತು ಕೂಪನ್‌ನೊಂದಿಗೆ ಈ ಫೋನನ್ನು 11,999 ರೂ. ಮತ್ತು 13,499 ರೂ.ಗಳ ಆರಂಭಿಕ ಬೆಲೆಯಲ್ಲಿ ಖರೀದಿಸಬಹುದು. ಈ ಫೊನ್ ಮೂರು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಮಿಸ್ಟಿ ಲ್ಯಾವೆಂಡರ್, ಐಸ್ ಸಿಲ್ವರ್ ಮತ್ತು ಗ್ರ್ಯಾಫೈಟ್ ಬ್ಲಾಕ್ ಬಣ್ಣಗಳಲ್ಲಿ ಲಾಂಚ್ ಮಾಡಲಾಗಿದೆ. ಆಗಸ್ಟ್ 5 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟವಾಗುತ್ತದೆ.

ಮಾರುಕಟ್ಟೆಗೆ POCO M6 Plus 5G ಎಂಟ್ರಿ.. ಕೇವಲ 11,999 ರೂ.!

Poco M6 Plus ಫೋನಿನ ವಿಶೇಷತೆಗಳು

ಡಿಸ್ಪ್ಲೇ: Poco M6 Plus ಫೋನ್ 6.79 ಇಂಚಿನ LCD ಡಿಸ್ಪ್ಲೇ ಹೊಂದಿದೆ. ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು ಮುಂಭಾಗದಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿದೆ. ಡಿಸ್ಲ್ಪೇಯು 2400 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 550 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೆಚ್ಚಿನ ಬ್ರೈಟ್‌ನೆಸ್ (450 ನಿಟ್‌ಗಳ ವಿಶಿಷ್ಟ ಬ್ರೈಟ್‌ನೆಸ್) ಮೋಡ್‌ನಲ್ಲಿ ಹೊಂದಿದೆ.

ಪ್ರೊಸೆಸರ್‌: ಇದು ಇತ್ತೀಚಿನ Qualcomm Snapdragon 4 Gen 2 AE ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಎಲ್ಲಾ ಗ್ರಾಫಿಕ್ಸ್ ತೀವ್ರವಾದ ಕಾರ್ಯಗಳನ್ನು ನಿರ್ವಹಿಸಲು Adreno A613 GPU ನೊಂದಿಗೆ ಜೋಡಿಸಲಾಗಿದೆ. ಇದು ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಬರುತ್ತದೆ. 6GB RAM + 128GB ಸ್ಟೋರೇಜ್ ಮತ್ತು 8GB RAM + 128GB ಸ್ಟೋರೇಜ್‌ ಹೊಂದಿದೆ.

ಮಾರುಕಟ್ಟೆಗೆ POCO M6 Plus 5G ಎಂಟ್ರಿ.. ಕೇವಲ 11,999 ರೂ.!

ಕ್ಯಾಮೆರಾ: ಇದು Samsung ISOCELL HM6 ಸಂವೇದಕದೊಂದಿಗೆ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಜೊತೆಗೆ, 2MP ಮ್ಯಾಕ್ರೋ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 13MP ಫ್ರಂಟ್‌ ಕ್ಯಾಮೆರಾ ಕೂಡ ಇದೆ.

ಬ್ಯಾಟರಿ: ಈ ಫೋನ್ 5,030mAh ಬ್ಯಾಟರಿಯೊಂದಿಗೆ ಬರುತ್ತದೆ. ಇದನ್ನು 33W ಚಾರ್ಜರ್ ಮೂಲಕ ವೇಗವಾಗಿ ಚಾರ್ಜ್ ಮಾಡಬಹುದು. IR ಬ್ಲಾಸ್ಟರ್ ಮತ್ತು ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP53 ರೇಟಿಂಗ್ ಪಡೆದುಕೊಂಡಿದೆ.

ಇತರೆ ಫೀಚರ್ಸ್: ಇದು ಆಂಡ್ರಾಯ್ಡ್ 14 ಆಧಾರಿತ ಇತ್ತೀಚಿನ ಹೈಪರ್‌ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 2 ವರ್ಷಗಳ ಓಎಸ್ ನವೀಕರಣಗಳು ಮತ್ತು 4 ವರ್ಷಗಳ ಭದ್ರತಾ ಪ್ಯಾಚ್‌ಗಳೊಂದಿಗೆ ಬರುತ್ತದೆ. 5G, ಡ್ಯುಯಲ್ 4G VoLTE, Wi-Fi 6 802.11 ac (2.4GHz + 5GHz), ಬ್ಲೂಟೂತ್ 5.1, ಜಿಪಿಎಸ್ + ಗ್ಲೋನಾಸ್, ಯುಎಸ್‌ಬಿ ಟೈಪ್-ಸಿ ನಂತಹ ಸೌಲಭ್ಯ ಹೊಂದಿದೆ.

Best Mobiles in India

English summary
Poco M6 Plus 5G Price In India Starts At Rs 11,999: Check Specifications, price and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+