ಜೂನ್ 11 ರಂದು Poco M6 4G ಸ್ಮಾರ್ಟ್‌ಫೋನ್ ಲಾಂಚ್ ! ಬೆಲೆ ಎಷ್ಟು ? ಫೀಚರ್ಸ್ ಏನಿರಲಿವೆ ?
ಪೋಕೋ ಸಂಸ್ಥೆಯ ಸ್ಮಾರ್ಟ್‌ಫೋನ್‌ಗಳಿಗೆ (Smartphones) ಮಾರುಕಟ್ಟೆಯಲ್ಲಿ ತನ್ನದೇ ಆದ ಬೇಡಿಕೆ ಇದೆ, ಪೋಕೋ (Poco) ಮೊಬೈಲ್‌ಗಳು ತನ್ನ ವಿಶಿಷ್ಟ ಫೀಚರ್ಸ್ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿವೆ. ಅಗ್ಗದ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಮೊಬೈಲ್ ಒದಗಿಸುವಲ್ಲಿ ಈ ಮೊಬೈಲ್‌ಗಳು ಯಶಸ್ವಿಯಾಗಿವೆ, ಈ ನಡುವೆ ಪೋಕೋ ಕಡಿಮೆ ಬೆಲೆಯ 4G ಸ್ಮಾರ್ಟ್‌ಫೋನ್ ಒಂದನ್ನು ಲಾಂಚ್ ಮಾಡಲಿರುವ ಕುರಿತು ಸ್ಪಷ್ಟನೆ ನೀಡಿದೆ. ಈಗಾಗಲೆ ಅದರ ಫೀಚರ್ಸ್ ಕುರಿತು ಮಾಹಿತಿ ನೀಡಿದೆ. ಹಾಗಿದ್ರೆ ಪೋಕೋ ಬಿಡುಗಡೆ ಮಾಡಲಿರುವ ನೂತನ ಸ್ಮಾರ್ಟ್‌ಫೋನ್ ಏನೆಲ್ಲಾ ಫೀಚರ್ಸ್ ಹೊಂದಿದೆ ಬೆಲೆ ಎಷ್ಟು ಎಂಬ ಹಲವು ವಿಚಾರಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
Poco M6 4G ಹೆಸರಿನ ಮೊಬೈಲ್ ಅನ್ನು ಜೂನ್ 11 ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ ಎಂದು ಕಂಪನಿ ದೃಢೀಕರಿಸಿದೆ. ಪೋಕೋ ಈ ಸ್ಮಾರ್ಟ್‌ಫೋನ್ ಕುರಿತಾದ ವಿನ್ಯಾಸ, ಬಣ್ಣ ಮತ್ತು ಪ್ರಮುಖ ಫೀಚರ್ಸ್‌ಗಳ ಮಾಹಿತಿಯನ್ನು ಸಹ ಬಹಿರಂಗಪಡಿಸಿದೆ. ಇದು Poco M6 5G, M6 Pro 5G ಮತ್ತು M6 Pro 4G ಹ್ಯಾಂಡ್‌ಸೆಟ್‌ಗಳ ಸಾಲಿಗೆ ಸೇರುತ್ತದೆ ಎಂದು ತಿಳಿದು ಬಂದಿದೆ. ಇತ್ತೀಚೆಗೆ ಪೋಕೋ M6 Plus 5G ವೇರಿಯಂಟ್ ಅನ್ನು BIS ಪ್ರಮಾಣೀಕರಣ ಸೈಟ್‌ಗಳಲ್ಲಿ ಗುರುತಿಸಲಾಗಿದೆ.

Poco M6 4G ಫೀಚರ್ಸ್:
ಪೋಕೋ ಬಿಡುಗಡೆ ಮಾಡಲಿರುವ ಈ ಸ್ಮಾರ್ಟ್‌ಫೋನ್ 6.79 ಇಂಚಿನ IPS LCD ಪ್ಯಾನೆಲ್ ಅನ್ನು ಹೊಂದಿದೆ, ಇದು ಫುಲ್ HD ಪ್ಲಸ್ ರೆಸಲ್ಯೂಶನ್‌ನೊಂದಿಗೆ ಬರುತ್ತಿದೆ. ಈ ಫೋನ್‌ನ ಆಕಾರ ಅನುಪಾತವು 20.5:9 ಮತ್ತು 550 ಗರಿಷ್ಠ ಬ್ರೈಟ್‌ನೆಸ್ ಹೊಂದಿರಲಿದೆ ಎಂದು ಸ್ಪಷ್ಟಪಡಿಸಿದೆ. ಇದು Helio G91 ಅಲ್ಟ್ರಾ ಚಿಪ್‌ಸೆಟ್, 8GB RAM ಮತ್ತು 256GB ವರೆಗಿನ ಗರಿಷ್ಟ ಶೇಖರಣಾ ಸಾಮರ್ಥ್ಯ ಹೊಂದಿರಲಿದೆ. ಈ ಫೋನ್ ಆಂಡ್ರಾಯ್ಡ್ 14 ಆಧಾರಿತ HyperOS ನಲ್ಲಿ ಕಾರ್ಯನಿರ್ವಹಿಸುತ್ತದೆ.
ವಿನ್ಯಾಸ:
ಈ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಗೆ ಪಂಚ್ ಹೋಲ್ ನೀಡಲಾಗಿದೆ, ಇದರಲ್ಲಿ 108 MP ಪ್ರಾಥಮಿಕ ಕ್ಯಾಮೆರಾ, 2 MP ಮ್ಯಾಕ್ರೋ ಕ್ಯಾಮೆರಾ ಹೊಂದಿದೆ. ಇದರೊಂದಿಗೆ, ಇದು ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ 13 MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಈ ಡಿವೈಸ್ 5,030mAh ಬ್ಯಾಟರಿ ಜೊತೆಗೆ 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಹೊರತಾಗಿ ನಾವು ಇತರ ವೈಶಿಷ್ಟ್ಯಗಳ ಬಗ್ಗೆ ನೋಡುವುದಾದರೆ ಇದು ಫೋನ್‌ನಲ್ಲಿ ಮೈಕ್ರೊ ಎಸ್‌ಡಿ ಕಾರ್ಡ್ ಬೆಂಬಲ ಮತ್ತು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ಹೊಂದಿದೆ. ಈ ಫೋನ್ ಡ್ಯುಯಲ್ ಸಿಮ್, 3.5mm ಹೆಡ್‌ಫೋನ್ ಜ್ಯಾಕ್, ಬ್ಲೂಟೂತ್ 5.4, NFC, USB-C, 4G VoLTE ಮತ್ತು Wi-Fi ಸಂಪರ್ಕವನ್ನು ಹೊಂದಿದೆ. ಆಯಾಮಗಳ ಬಗ್ಗೆ ನೋಡುವುದಾದರೆ ಅದರ ತೂಕ 205 ಗ್ರಾಂ. ಇದೆ.
Poco M6 ಬೆಲೆ:
ನೀವು ಈ ಮೊಬೈಲ್ ಅನ್ನು 6GB/ 128GB ಸ್ಟೋರೇಜ್ ಮತ್ತು 8GB/ 256GB ಸ್ಟೋರೇಜ್ ವೇರಿಯಂಟ್‌ಗಳಲ್ಲಿ ಖರೀದಿಸಲು ಸಾಧ್ಯವಾಗುತ್ತದೆ. ಇದರ 6GB RAM ವೇರಿಯಂಟ್‌ನ ಬೆಲೆ $129 ಅಂದರೆ ಅಂದಾಜು ರೂ. 10,700 ಆಗಿರಲಿದೆ ಹಾಗೂ 8GB ವೇರಿಯಂಟ್‌ನ ಬೆಲೆ ಬೆಲೆ $149 ಅಂದಾಜು ರೂ. 12,400 ಆಗಿರಲಿದೆ. ಕಪ್ಪು, ಸಿಲ್ವರ್ ಮತ್ತು ನೇರಳೆ ಈ ಮೂರು ಬಣ್ಣಗಳಲ್ಲಿ ಲಭ್ಯವಿದೆ.


Click it and Unblock the Notifications








