Poco M7 Plus 5G: ಹೊಸದಾಗಿ 4GB RAM ನಲ್ಲಿ ಬಿಡುಗಡೆ, ಕಡಿಮೆ ಬೆಲೆ!
ಭಾರತದಲ್ಲಿ ಈಗಾಗಲೇ 6GB ಮತ್ತು 8GB RAM ಆವೃತ್ತಿಗಳಲ್ಲಿ ಲಭ್ಯವಿರುವ Poco M7 Plus 5G ಈಗ ಮತ್ತೊಂದು ಕೈಗೆಟುಕುವ Limited Edition ಮಾದರಿಯಲ್ಲಿ ಪರಿಚಯಗೊಂಡಿದೆ. ಈ ಆವೃತ್ತಿಯು Flipkart Big Billion Days Sale ನಲ್ಲಿ ಸೆಪ್ಟೆಂಬರ್ 23ರಿಂದ ಖರೀದಿಗೆ ಲಭ್ಯವಾಗಲಿದೆ. Flipkart Plus ಮತ್ತು Black ಸದಸ್ಯರಿಗೆ ಒಂದು ದಿನ ಮುಂಚಿತವಾಗಿ ಅಂದರೆ ಸೆಪ್ಟೆಂಬರ್ 22ರಿಂದಲೇ ಅವಕಾಶ ಸಿಗಲಿದೆ ಎಂದು ಕಂಪೆನಿಯು ತಿಳಿಸಿದೆ. ಹಾಗಾದರೆ, ಹೊಸ 4GB RAM + 128GB ಸ್ಟೋರೇಜ್ ಆವೃತ್ತಿಯ ಫೋನ್ ಹೇಗಿದೆ ಮತ್ತು ಬೆಲೆ ಎಷ್ಟು ಎಂಬುದನ್ನು ನೋಡೋಣ ಬನ್ನಿ.
Poco M7 Plus 5G : ಪ್ರಮುಖ ವೈಶಿಷ್ಟ್ಯಗಳು
ಹೊಸ Poco M7 Plus 5G ನಲ್ಲಿ 6.9 ಇಂಚಿನ Full HD+ ಡಿಸ್‌ಪ್ಲೇ ನೀಡಲಾಗಿದ್ದು, ಇದು 144Hz ರಿಫ್ರೆಶ್ ರೇಟ್‌ನ್ನು ಬೆಂಬಲಿಸುತ್ತದೆ.
ಕಾರ್ಯಕ್ಷಮತೆಗಾಗಿ, ಈ ಫೋನ್ Snapdragon 6s Gen 3 ಚಿಪ್‌ಸೆಟ್‌ನಿಂದ ಫೋನ್ ಶಕ್ತಿಶಾಲಿಯಾಗಿ ಕಾರ್ಯನಿರ್ವಹಿಸುತ್ತದೆ. ಮತ್ತು 4GB RAM + 128GB UFS 2.2 ಸ್ಟೋರೇಜ್‌ನೊಂದಿಗೆ ಈ ಹೊಸ ಮಾದರಿ ಲಭ್ಯವಿದೆ.
ಈ ಫೋನ್ ಆಂಡ್ರಾಯ್ಡ್ 15 ಆಧಾರಿತ HyperOS 2.0 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಕಂಪನಿಯು ಎರಡು ಪ್ರಮುಖ ಆಂಡ್ರಾಯ್ಡ್ ಅಪ್ಡೇಟ್‌ಗಳು ಮತ್ತು ನಾಲ್ಕು ವರ್ಷಗಳ ಸುರಕ್ಷತಾ ಅಪ್ಡೇಟ್‌ಗಳನ್ನು ನೀಡುವುದಾಗಿ ಭರವಸೆ ನೀಡಿದೆ.
ಕ್ಯಾಮೆರಾ ವಿಭಾಗದಲ್ಲಿ, ಈ Poco M7 Plus 5G ಫೋನ್ ಹಿಂಭಾಗದಲ್ಲಿ 50MP AI ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಮತ್ತು ಮುಂದೆ 8MP ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಇದು ಸೂಕ್ತವಾಗಿದೆ.

ಬ್ಯಾಟರಿ ಅದರ ದೊಡ್ಡ ಆಕರ್ಷಣೆ. Poco M7 Plus 5G ನಲ್ಲಿ 7,000mAh ಸಿಲಿಕಾನ್-ಕಾರ್ಬನ್ ಬ್ಯಾಟರಿ ನೀಡಲಾಗಿದೆ. ಇದು 33W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುವುದರ ಜೊತೆಗೆ, ಇತರ ಸಾಧನಗಳನ್ನು ಚಾರ್ಜ್ ಮಾಡುವಂತಹ 18W ರಿವರ್ಸ್ ಚಾರ್ಜಿಂಗ್ ವ್ಯವಸ್ಥೆಯನ್ನೂ ಹೊಂದಿದೆ.
ಸಂಪರ್ಕ ಆಯ್ಕೆಗಳಲ್ಲಿ ಈ ಫೋನ್ 5G, 4G, Bluetooth 5.1, Wi-Fi, GPS ಮತ್ತು USB Type-C ಪೋರ್ಟ್‌ಗಳು ಸೇರಿವೆ. ಫೋನ್ IP64 ರೇಟಿಂಗ್‌ನೊಂದಿಗೆ ಬರುತ್ತದೆ, ಅಂದರೆ ಧೂಳು ಮತ್ತು ನೀರಿನಿಂದ ರಕ್ಷಣೆ ದೊರೆಯುತ್ತದೆ.
ಈ ಹೊಸ Limited Edition Poco M7 Plus 5G ಫೋನ್ ಆವೃತ್ತಿಯು Aqua Blue, Carbon Black ಮತ್ತು Chrome Silver ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿರುತ್ತದೆ.
Poco M7 Plus 5G: ಬೆಲೆ ಎಷ್ಟು?
ಭಾರತದಲ್ಲಿ ಈ ಹೊಸ 4GB RAM + 128GB ಸ್ಟೋರೇಜ್ ಆವೃತ್ತಿಯ ಬೆಲೆ ₹13,999 ಎಂದು ಘೋಷಿಸಲಾಗಿದೆ. ಮೊದಲೇ ಹೇಳಿದಂತೆ, ಈ ಆವೃತ್ತಿಯು Flipkart Big Billion Days Sale ನಲ್ಲಿ ಸೆಪ್ಟೆಂಬರ್ 23ರಿಂದ ಖರೀದಿಗೆ ಲಭ್ಯವಾಗಲಿದೆ ಬೆಲೆಯಲ್ಲಿ ಸ್ವಲ್ಪ ಕಡಿತವಿರುವುದರಿಂದ, ಈ ಮಾದರಿಯುತನ್ನ ದೊಡ್ಡ ಬ್ಯಾಟರಿ, ಉತ್ತಮ ಡಿಸ್‌ಪ್ಲೇ ಮತ್ತು ಶಕ್ತಿಯುತ ಚಿಪ್‌ಸೆಟ್‌ನೊಂದಿಗೆ ₹13,999 ಬೆಲೆಯ ವಿಭಾಗದಲ್ಲಿ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಹೊಸ 4GB RAM Limited Edition ಆವೃತ್ತಿಯು Poco ಗೆ ಮಾರುಕಟ್ಟೆಯಲ್ಲಿ ಇನ್ನಷ್ಟು ಬಲ ನೀಡಬಹುದು. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








