Home
ಮೊಬೈಲ್

ಇಂದು Poco M7 Pro and Poco C75 ಲಾಂಚ್; 50MP ಸೋನಿ ಕ್ಯಾಮೆರಾ.. 5160mAh ಬ್ಯಾಟರಿ.. ಅಗ್ಗದ ಬೆಲೆ!

ಪೊಕೊ ಕಂಪನಿಯು ಭಾರತದಲ್ಲಿ ಎರಡು ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಲಿದೆ. ಪೊಕೊ M7 ಪ್ರೊ (POCO M7 Pro) ಮತ್ತು ಪೊಕೊ C75 5G (POCO C75 5G) ಮೊಬೈಲ್‌ಗಳು ಇಂದು (ಡಿಸೆಂಬರ್ 17) ಅಧಿಕೃತವಾಗಿ ಅನಾವರಣಗೊಳ್ಳಲಿವೆ. ಈಗಾಗಲೇ, ಈ ಸ್ಮಾರ್ಟ್‌ಫೋನ್‌ಗಳು ಗ್ರಾಹಕರ ಗಮನ ಸೆಳೆದಿವೆ. ಕಂಪನಿಯು 10 ಸಾವಿರ ಮತ್ತು 15 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಈ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಬನ್ನಿ ಈ ಫೋನ್‌ಗಳ ವಿಶೇಷತೆಗಳನ್ನು ತಿಳಿಯೋಣ.

ಪೊಕೊ C75 5G ಫೋನ್ 50 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಪೊಕೊ M7 ಪ್ರೊ ಮೊಬೈಲ್ 50 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ ಹೊಂದಿದೆ. ಪೊಕೊ C75 5G ಸ್ನಾಪ್‌ಡ್ರಾಗನ್ 4s ಜೆನ್ 2 ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಪೊಕೊ M7 ಪ್ರೊ ಮೀಡಿಯಾಟೆಕ್‌ ಡೈಮೆನ್ಸಿಟಿ 7025 ಅಲ್ಟ್ರಾ ಪ್ರೊಸೆಸರ್ ಹೊಂದಿದೆ. ಪೊಕೊ C75 5G ಫೋನಿನಲ್ಲಿ 6.68 ಇಂಚಿನ ಡಿಸ್ಪ್ಲೇ ಇದೆ. ಪೊಕೊ M7 ಪ್ರೊ 6.67 ಇಂಚಿನ ಡಿಸ್ಪ್ಲೇ ಹೊಂದಿದೆ.

ಇಂದು Poco M7 Pro and Poco C75 ಲಾಂಚ್; ಅಗ್ಗದ ಬೆಲೆ.. ವಿಶೇಷತೆಗಳೇನು?

ಪೊಕೊ C75 5G ಮತ್ತು ಪೊಕೊ M7 ಪ್ರೊ ಬೆಲೆ

ಕಂಪನಿಯು ಪೊಕೊ C75 5G ಫೋನನ್ನು 9,000 ರೂ. ಗಿಂತ ಕಡಿಮೆ ಬೆಲೆಗೆ ಬಿಡುಗಡೆ ಮಾಡುವ ಸಾಧ್ಯತೆಯಿದೆ. ವರದಿಯ ಪ್ರಕಾರ, ಈ ಅಗ್ಗದ ಫೋನ್‌ 8,999 ರೂ. ಅಥವಾ 8,499 ರೂ. ಆರಂಭಿಕ ಬೆಲೆಯಲ್ಲಿ ಮಾರುಕಟ್ಟೆಗೆ ಬರಲಿದೆ. ಹಾಗೆಯೇ ಪೊಕೊ M7 ಪ್ರೊ 5G ಫೋನ್ 15,000 ರೂ.ಗಿಂತ ಕಡಿಮೆ ಬೆಲೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ನೀವು, ಬಿಡುಗಡೆಯ ಬಳಿಕ ಫ್ಲಿಪ್‌ಕಾರ್ಟ್ ಮೂಲಕ ಈ ಫೋನ್‌ಗಳನ್ನು ಖರೀದಿಸಬಹುದು.

ಪೊಕೊ M7 ಪ್ರೊ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಪೊಕೊ M7 ಪ್ರೊ ಮೊಬೈಲ್ 6.67 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್ಪ್ಲೇ ಹೊಂದಿರುತ್ತದೆ. ಇದು 120Hz ರಿಫ್ರೆಶ್ ದರ ಮತ್ತು 2100 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಡಿಸ್ಪ್ಲೇಯು ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಸಹ ಹೊಂದಿರುತ್ತದೆ.

ಪ್ರೊಸೆಸರ್ ಸಾಮರ್ಥ್ಯ

ಪೊಕೊ M7 ಪ್ರೊ ಸ್ಮಾರ್ಟ್‌ಫೋನ್ ಮೀಡಿಯಾಟೆಕ್‌ ಡೈಮೆನ್ಸಿಟಿ 7025 ಅಲ್ಟ್ರಾ ಪ್ರೊಸೆಸರ್ ಹೊಂದಿರಲಿದೆ. ಈ ಫೋನ್ 16GB RAM ಹೊಂದಿದೆ. 8GB ಆನ್‌ಬೋರ್ಡ್ ಜೊತೆಗೆ, 8GB ವರ್ಚುವಲ್ ವಿಸ್ತರಣೆಯೊಂದಿಗೆ ಬರಲಿದೆ. ಈ ಮೊಬೈಲ್ ಆಂಡ್ರಾಯ್ಡ್‌ 14 ಆಧಾರಿತ ಹೈಪರ್‌ ಓಎಸ್‌ನಲ್ಲಿ ಕೆಲಸ ಮಾಡುತ್ತದೆ.

ಕ್ಯಾಮೆರಾ ಸೆಟಟ್‌

ಪೊಕೊ M7 ಪ್ರೊ ಫೋನಿನ ಪ್ರಮುಖ ವಿಶೇಷತೆಯೆಂದರೆ, ಕ್ಯಾಮೆರಾ ಸೆಟಪ್ ಆಗಿದೆ. ಇದು ಸೋನಿ LYTIA LYT-600 ಕ್ಯಾಮೆರಾ ಹೊಂದರಲಿದೆ. ಫೋನಿನಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 20 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.

ಇಂದು Poco M7 Pro and Poco C75 ಲಾಂಚ್; ಅಗ್ಗದ ಬೆಲೆ.. ವಿಶೇಷತೆಗಳೇನು?

ಪೊಕೊ C75 5G ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಪೊಕೊ C75 5G ಮೊಬೈಲ್ 6.68 ಇಂಚಿನ ಹೆಚ್‌ಡಿ ಪ್ಲಸ್ ಎಲ್‌ಸಿಡಿ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ, 240Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 600 ನಿಟ್ಸ್‌ ಬ್ರೈಟ್‌ನೆಸ್ ಬೆಂಬಲ ಪಡೆದಿದೆ.

ಪ್ರೊಸೆಸರ್ ಸಾಮರ್ಥ್ಯ

ಪೊಕೊ C75 5G ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 4s ಜೆನ್ 2 ಪ್ರೊಸೆಸರ್‌ ಹೊಂದಿದೆ. ಈ ಮೊಬೈಲ್ ಆಂಡ್ರಾಯ್ಡ್ 14 ಆಧಾರಿತ ಹೈಪರ್ ಆಪರೇಟಿಂಗ್ ಸಿಸ್ಟಂನಲ್ಲಿ ಕೆಲಸ ಮಾಡುತ್ತದೆ. ಜೊತೆಗೆ ಆಂಡ್ರಾಯ್ಡ್ 16 ಬೆಂಬಲ ಸಹ ಬೆಂಬಲ ಹೊಂದಿರಲಿದೆ. ಈ ಫೋನ್ 4GB RAM ಹೊಂದಿದೆ. ಜೊತೆಗೆ 64GB ಮತ್ತು 128GB ಸ್ಟೋರೇಜ್‌ ಆಯ್ಕೆ ಹೊಂದಿದೆ.

ಕ್ಯಾಮೆರಾ ಸೆಟಪ್

ಪೊಕೊ C75 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 5 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್‌

ಪೊಕೊ C75 5G ಮೊಬೈಲ್ 5000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿದೆ. ಬಹುಶಃ ಇದು 5160mAh ಬ್ಯಾಟರಿ ಹೊಂದಿರಲಿದೆ. ಇದನ್ನು ಚಾರ್ಜ್‌ ಮಾಡಲು, 18W ವೇಗದ ಚಾರ್ಜಿಂಗ್ ಸೌಲಭ್ಯ ಕಲ್ಪಿಸಲಾಗಿದೆ.

Best Mobiles in India

English summary
Poco M7 Pro 5G and Poco C75 5G to Launch in India on Today: know Top specs and pricing.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+