POCO: 10,000ಕ್ಕಿಂತ ಕಡಿಮೆ.. ಟ್ರಿಪಲ್ ಕ್ಯಾಮೆರಾ.. ಡಿ.17ಕ್ಕೆ 2 ಹೊಸ ಫೋನ್ ಲಾಂಚ್
ಪೊಕೊ ಎರಡು ಹೊಸ ಮೊಬೈಲ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಇಂದು ಈ ಫೋನ್‌ಗಳ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಅವುಗಳೇ, ಪೊಕೊ M7 ಪ್ರೊ 5G (POCO M7 Pro 5G) ಮತ್ತು ಪೊಕೊ C75 5G (POCO C75 5G) ಸ್ಮಾರ್ಟ್‌ಫೋನ್‌ಗಳು. ಇವು 10 ಸಾವಿರ ಮತ್ತು 15 ಸಾವಿರಕ್ಕಿಂತ ಕಡಿಮೆ ಬೆಲೆ ಹೊಂದಿರಲಿವೆ. ಬನ್ನಿ, ಮುಂಬರುವ ಮೊಬೈಲ್‌ಗಳ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಕಂಪನಿಯು, ಫ್ಲಿಪ್‌ಕಾರ್ಟ್‌ನಲ್ಲಿ ಮುಂಬರುವ ಫೋನ್‌ಗಳ ಮೈಕ್ರೋಸೈಟ್ ಅನ್ನು ಲೈವ್ ಮಾಡಿದೆ. ಈ ಮೂಲಕ ಬಿಡುಗಡೆ ದಿನಾಂಕ, ವಿಶೇಷತೆಗಳು ಮತ್ತು ಎರಡೂ ಫೋನ್‌ಗಳ ವಿನ್ಯಾಸವನ್ನು ಬಹಿರಂಗಪಡಿಸಿದೆ. ಎರಡೂ ಮೊಬೈಲ್‌ಗಳನ್ನು ಡಿಸೆಂಬರ್ 17 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ. ಈ ಸ್ಮಾರ್ಟ್‌ಫೋನ್‌ಗಳನ್ನು ಬಜೆಟ್ ಬೆಲೆಯಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗುತ್ತದೆ. ನೀವು, ಕಡಿಮೆ ಬೆಲೆಯ ಹೊಸ 5G ಮೊಬೈಲ್‌ಗಳನ್ನು ಹುಡುಕುತ್ತಿದ್ದರೆ, ಡಿ.17ರ ವರೆಗೆ ಕಾಯುವುದು ಉತ್ತಮ.

ಪೊಕೊ M7 ಪ್ರೊ 5G ವೈಶಿಷ್ಟ್ಯಗಳು
ಪೊಕೊ M7 ಪ್ರೊ 5G ಮೊಬೈಲ್ 6.67 ಅಮೋಲೆಡ್ ಇಂಚಿನ ಡಿಸ್ಪ್ಲೇ ಹೊಂದಿದೆ ಎಂದು ಕಂಪನಿ ಖಚಿತಪಡಿಸಿದೆ. ಇದು ಪೂರ್ಣ ಎಚ್‌ಡಿ ಪ್ಲಸ್ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದ ಬೆಂಬಲ ಹೊಂದಿದೆ. ಡಿಸ್ಪ್ಲೇಯು 2,100 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಸಪೋರ್ಟ್ ಪಡೆದಿದೆ.
ಇದು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಹೊಂದಿದೆ. ಪೊಕೊ M7 ಪ್ರೊ 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಈ ಫೋನ್ ಸಿಮ್ ಕಾರ್ಡ್ ಟ್ರೇ, ಯುಎಸ್‌ಬಿ ಟೈಪ್ ಸಿ ಪೋರ್ಟ್, ಮೈಕ್ರೊಫೋನ್ ಮತ್ತು ಕೆಳಭಾಗದಲ್ಲಿ ಸ್ಪೀಕರ್ ಗ್ರಿಲ್ ಅನ್ನು ಹೊಂದಿದೆ.
ಪೊಕೊ C75 5G ಫೋನಿನ ವೈಶಿಷ್ಟ್ಯಗಳು
ಪೊಕೊ C75 5G ಫೋನ್ 6.88 ಇಂಚಿನ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ. ಪೊಕೊ C75 5G ಮೊಬೈಲ್ ಸ್ನಾಪ್ ಡ್ರಾಗನ್ 4S ಜೆನ್ 2 ಪ್ರೊಸೆಸರ್‌ನೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಇದನ್ನು 4nm ಪ್ರಕ್ರಿಯೆಯಲ್ಲಿ ನಿರ್ಮಿಸಲಾಗಿದೆ. ಈ ಫೋನ್ 4GB RAM, 4GB ಟರ್ಬೊ RAM ಹೊಂದಿರಲಿದೆ. ನೀವು ಮೈಕ್ರೋ ಎಸ್ಡಿ ಕಾರ್ಡ್ ಸ್ಲಾಟ್ ಮೂಲಕ 1TB ವರೆಗೆ ಸ್ಟೋರೇಜ್ ಹೆಚ್ಚಿಸಬಹುದು. ಇದು ಆಂಡ್ರಾಯ್ಡ್ 14 ಆಧಾರಿತ ಹೈಪರ್ ಓಎಸ್ನಲ್ಲಿ ಕೆಲಸ ಮಾಡುತ್ತದೆ.
ಮುಂಬರುವ ಪೊಕೊ C75 5G ಫೋನ್ ಸೋನಿ ಕ್ಯಾಮೆರಾ ಹೊಂದಿರಲಿದೆ. ಇದು ಈ ವಿಭಾಗದಲ್ಲಿ ಸೋನಿ ಕ್ಯಾಮೆರಾ ಹೊಂದಿರುವ ಏಕೈಕ ಸ್ಮಾರ್ಟ್ ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈ ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2 ಮೆಗಾಪಿಕ್ಸೆಲ್ ದ್ವಿತೀಯ ಮತ್ತು 5 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಲಭ್ಯವಿದೆ. ಇದು ಟೆಕ್ಸ್ಚರ್ಡ್ ಪ್ಯಾಟರ್ನ್ ವಿನ್ಯಾಸ ಮತ್ತು ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿದೆ.
ಪೊಕೊ M7 ಪ್ರೊ 5G ಮತ್ತು ಪೊಕೊ C75 5G ಬೆಲೆ
ಪೊಕೊ M7 ಪ್ರೊ 5G ಮತ್ತು ಪೊಕೊ C75 5G ಫೋನ್‌ಗಳು ಬಿಡುಗಡೆಯ ಬಳಿಕ ಫ್ಲಿಪ್ಕಾರ್ಟ್ ಮೂಲಕ ಮಾರಾಟವಾಗಲಿವೆ. ಪೊಕೊ C75 5G ಫೋನಿನ ಬೆಲೆ 10,000 ರೂ.ಗಿಂತ ಕಡಿಮೆ ಇರುತ್ತದೆ. ಪೊಕೊ M7 ಪ್ರೊ 5G ಮೊಬೈಲ್ 15,000 ರೂ.ಗಿಂತ ಕಡಿಮೆ ಬೆಲೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.


Click it and Unblock the Notifications