Home
ಮೊಬೈಲ್

ಬಂದೇ ಬಿಡ್ತು ಹೊಸ POCO M7 Pro ಫೋನ್; 256GB ಸ್ಟೋರೇಜ್‌.. 5110mAh ಬ್ಯಾಟರಿ.. ಕಡಿಮೆ ಬೆಲೆ!

ಪೊಕೊ ಭಾರತದಲ್ಲಿ ಹೊಸ ಫೋನನ್ನು ಬಿಡುಗಡೆ ಮಾಡಿದೆ. ಇದು ಪೊಕೊ M7 ಪ್ರೊ (POCO M7 Pro) ಹೆಸರಿನೊಂದಿಗೆ ದೇಶಿಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹೌದು, ಕಂಪನಿಯು ನಿರೀಕ್ಷೆಯಂತೆಯೇ, ಕೈಗೆಟುಕುವ ಬೆಲೆಯಲ್ಲಿ ಪೊಕೊ M7 ಪ್ರೊ ಫೋನನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್‌ ಹಲವು ಎಐ (AI) ವೈಶಿಷ್ಟ್ಯಗಳನ್ನು ಒಂಗೊಂಡಿದೆ. ಇದನ್ನು ಖರೀದಿಸಲು ಗ್ರಾಹಕರು ಕಾತುರದಿಂದ ಕಾಯುತ್ತಿದ್ದಾರೆ. ಬನ್ನಿ, ಈ ಹೊಸ ಫೋನಿನ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಪೊಕೊ M7 ಪ್ರೊ ಫೋನ್ ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ. ನೀವು, 15 ಸಾವಿರ ರೂ.ಗಳ ಒಳಗೆ ಹೊಸ ಮೊಬೈಲ್ ಖರೀದಿಸಲು ಬಯಸಿದರೆ, ಇದು ಉತ್ತಮ ಆಯ್ಕೆಯಾಗಿದೆ. ಈ ಫೋನ್ 50 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ ಹೊಂದಿದೆ. ಜೊತೆಗೆ 20 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7025 ಅಲ್ಟ್ರಾ ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಜೊತೆಗೆ 6.67 ಇಂಚಿನ ಡಿಸ್ಪ್ಲೇ ಮತ್ತು 5110mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಹೊಸ POCO M7 Pro ಲಾಂಚ್; 256GB ಸ್ಟೋರೇಜ್‌..  5110mAh ಬ್ಯಾಟರಿ.. ಕಡಿಮೆ ಬೆಲೆ

ಪೊಕೊ M7 ಪ್ರೊ ಬೆಲೆ ಮತ್ತು ಲಭ್ಯತೆ

ಪೊಕೊ M7 ಪ್ರೊ ಫೋನಿನ 6GB + 128GB ಸ್ಟೋರೇಜ್‌ ರೂಪಾಂತರವನ್ನು 14,999 ರೂ.ಗೆ ಬಿಡುಗಡೆ ಮಾಡಲಾಗಿದೆ. ಹಾಗೆಯೇ 8GB + 256GB ಸ್ಟೋರೇಜ್‌ ಆಯ್ಕೆಯ ಬೆಲೆ 16,999 ರೂ. ಆಗಿದೆ. ನೀವು, ಲೂನಾರ್ ಡಸ್ಟ್, ಲ್ಯಾವೆಂಡರ್ ಫ್ರಾಸ್ಟ್ ಮತ್ತು ಆಲಿವ್ ಟ್ವಿಲೈಟ್ ಬಣ್ಣಗಳಲ್ಲಿ ಈ ಫೋನನ್ನು ಖರೀದಿಸಬಹುದು. ಇದು ಡಿಸೆಂಬರ್ 20 ರಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್‌ ಮೂಲಕ ತನ್ನ ಮೊದಲ ಮಾರಾಟವನ್ನು ಪ್ರಾರಂಭಿಸಲಿದೆ.

ಪೊಕೊ M7 ಪ್ರೊ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಪೊಕೊ M7 ಪ್ರೊ ಮೊಬೈಲ್ 6.67 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಸೂಪರ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 1080 × 2400 ಪಿಕ್ಸೆಲ್‌ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು 2100 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಹೊಸ ಪೊಕೊ M7 ಪ್ರೊ ಸ್ಮಾರ್ಟ್‌ಫೋನ್ ಮೀಡಿಯಾಟೆಕ್‌ ಡೈಮೆನ್ಸಿಟಿ 7025 ಅಲ್ಟ್ರಾ ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಈ ಮೊಬೈಲ್ ಆಂಡ್ರಾಯ್ಡ್‌ 14 ಆಧಾರಿತ ಶಿಯೋಮಿ ಹೈಪರ್‌ ಓಎಸ್‌ನಲ್ಲಿ ಕೆಲಸ ಮಾಡುತ್ತದೆ.

ಸ್ಟೋರೇಜ್ ಆಯ್ಕೆ

ಪೊಕೊ M7 ಪ್ರೊ ಫೋನ್ 16GB RAM ಹೊಂದಿದೆ. 8GB ಆನ್‌ಬೋರ್ಡ್ ಜೊತೆಗೆ, 8GB ವರ್ಚುವಲ್ ವಿಸ್ತರಣೆಯೊಂದಿಗೆ ಬರಲಿದೆ. ಇದು 128GB ಮತ್ತು 256GB ಆಂತರಿಕ ಸ್ಟೋರೇಜ್‌ ಹೊಂದಿದೆ. ನೀವು, ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ ಸ್ಟೋರೇಜ್ ವಿಸ್ತರಿಸಬಹುದು.

ಕ್ಯಾಮೆರಾ ಸೆಟಪ್‌

ನೂತನ ಪೊಕೊ M7 ಪ್ರೊ ಮೊಬೈಲ್‌ನ ವಿಶೇಷತೆ ಎಂದರೆ, ಕ್ಯಾಮೆರಾ ಸೆಟಪ್ ಆಗಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ ಲಭ್ಯವಿದೆ. ಜೊತೆಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು ಎಲ್‌ಇಡಿ ಫ್ಲಾಷ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 20 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಕಂಪನಿಯು ಪೊಕೊ M7 ಪ್ರೊ ಫೋನನ್ನು 5110mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದನ್ನು ಚಾರ್ಜ್ ಮಾಡಲು, 45W ವೇಗದ ಚಾರ್ಜಿಂಗ್‌ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ಪೊಕೊ M7 ಪ್ರೊ ಸ್ಮಾರ್ಟ್‌ಫೋನ್‌ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಮತ್ತು ಇನ್ಫ್ರಾರೆಡ್ ಸಂವೇದಕ ಹೊಂದಿದೆ. ಇದು ಸ್ಪ್ಲಾಶ್ ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP64 ರೇಟಿಂಗ್ ಪಡೆದಿದೆ. ಇದು ಹೈಬ್ರಿಡ್ ಡ್ಯುಯಲ್ ಸಿಮ್, 3.5 ಎಂಎಂ ಆಡಿಯೋ ಜಾಕ್, ಸ್ಟೀರಿಯೋ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್ ಸಹ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ 4G VoLTE, ವೈ-ಫೈ, ಬ್ಲೂಟೂತ್ 5.3, ಜಿಪಿಎಸ್‌, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
POCO M7 Pro with MediaTek Dimensity 7025 Ultra launched in India starting at Rs. 14,999: Specifications and More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+