Home
ಮೊಬೈಲ್

9,999 ರೂ.ಬೆಲೆಯ Poco M7 5G vs Poco M7 Pro 5G: ಎಲ್ಲಾ ಪ್ರಮುಖ ವ್ಯತ್ಯಾಸಗಳಿವು!

ಇದೇ ಮಾರ್ಚ್ 3 ರಂದು ಭಾರತೀಯ ಮಾರುಕಟ್ಟೆಗೆ ಪೊಕೊದ ಹೊಸ ಸ್ಮಾರ್ಟ್‌ಫೋನ್ Poco M7 5G ಬಿಡುಗಡೆಯಾಗಿದೆ. ಇದು ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಿಡುಗಡೆಗೊಂಡ Poco M7 Pro 5G ಸ್ಮಾರ್ಟ್‌ಫೋನಿನ ಬೇಸಿಕ್ ವರ್ಷನ್ ಆಗಿದ್ದು, ಈ ಸಾಧನವು ಸ್ನಾಪ್‌ಡ್ರಾಗನ್ ಚಿಪ್‌ಸೆಟ್, ದೊಡ್ಡ ಬ್ಯಾಟರಿ ಮತ್ತು 50-ಮೆಗಾಪಿಕ್ಸೆಲ್ ಕ್ಯಾಮೆರಾದಂತಹ ವೈಶಿಷ್ಟ್ಯಗಳೊಂದಿಗೆ ₹9,999 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಿದೆ. ಹಾಗಾದರೆ, Poco M7 5G ಮತ್ತು Poco M7 Pro 5G ಸ್ಮಾರ್ಟ್‌ಫೋನ್‌ಗಳು ಹೇಗೆ ವಿಭಿನ್ನವಾಗಿವೆ, ಕಾರ್ಯಾಚರಣೆ ಮತ್ತು ಬೆಲೆಗಳು ಎಷ್ಟು ಎಂಬುದರ ಬಗ್ಗೆ ನಿಮಗೆ ಕುತೂಹಲವಿದ್ದರೆ, ನಾವು ಈ ಎರಡೂ ಸಾಧನಗಳನ್ನು ಹೋಲಿಸಿ ನೋಡಿದ್ದೇವೆ. ಬನ್ನಿ Poco M7 5G vs Poco M7 Pro 5G ಎರಡು ಸ್ಮಾರ್ಟ್‌ಫೋನ್‌ಗಳ ಹೇಗೆ ವಿಭಿನ್ನವಾಗಿವೆ ಎಂಬುದನ್ನು ನೊಡೋಣ.

Poco M7 5G vs Poco M7 Pro 5G: ಕಾರ್ಯಕ್ಷಮತೆ
ಕಾರ್ಯಕ್ಷಮತೆಯ ವಿಷಯಕ್ಕೆ ಬಂದಾಗ, Poco M7 5G vs Poco M7 Pro 5G ಎರಡು ಸ್ಮಾರ್ಟ್‌ಫೋನ್‌ಗಳ ಒಂದು ಪ್ರಮುಖ ವ್ಯತ್ಯಾಸವಿದೆ. Poco M7 5G ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 4 ಜನ್ 2 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ, ಆದರೆ Poco M7 Pro 5G ಮೀಡಿಯಾಟೆಕ್ ಡೈಮೆನ್ಸಿಟಿ 7025 ಅಲ್ಟ್ರಾ ಚಿಪ್‌ಸೆಟ್ ಅನ್ನು ಹೊಂದಿದೆ.RAM ವಿಷಯದಲ್ಲಿ, ಎರಡೂ ಮಾದರಿಗಳು 6GB ಯೊಂದಿಗೆ ಪ್ರಾರಂಭವಾಗುತ್ತವೆ. ಆದಾಗ್ಯೂ, Poco M7 Pro 5G ಫೋ್ 256GB ಸೇರಿದಂತೆ ಹೆಚ್ಚಿನ ಶೇಖರಣಾ ಆಯ್ಕೆಗಳನ್ನು ನೀಡುತ್ತದೆ, ಆದರೆ Poco M7 5G ಫೋನ್ 128GB ಗೆ ಸೀಮಿತವಾಗಿದೆ. ಎರಡೂ ಫೋನ್‌ಗಳು ತಮ್ಮ ಉನ್ನತ ರೂಪಾಂತರಗಳಲ್ಲಿ 8GB RAM ಅನ್ನು ಸಹ ಬೆಂಬಲಿಸುತ್ತವೆ.

Poco M7 5G vs Poco M7 Pro: ಕ್ಯಾಮೆರಾ
ಕ್ಯಾಮೆರಾ ವಿಭಾಗದಲ್ಲಿ, Poco M7 5G ಸ್ಮಾರ್ಟ್‌ಫೋನ್ f/1.8 ಅಪಾರ್ಚರ್‌ನೊಂದಿಗೆ 50-ಮೆಗಾಪಿಕ್ಸೆಲ್ ಮುಖ್ಯ ವೈಡ್ ಕ್ಯಾಮೆರಾವನ್ನು ಹೊಂದಿದೆ. ಇದು 30 FPS ನಲ್ಲಿ 1080p ವೀಡಿಯೊವನ್ನು ರೆಕಾರ್ಡ್ ಮಾಡಬಹುದು. ಸೆಲ್ಫಿಗಳಿಗಾಗಿ, ಇದು 8-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದ್ದು ಅದು 30 FPS ನಲ್ಲಿ 1080p ವೀಡಿಯೊ ಚಿತ್ರಿಕರಣವನ್ನು ಬೆಂಬಲಿಸುತ್ತದೆ. ಇತ್ತ Poco M7 5G Pro f/1.5 ಅಪಾರ್ಚರ್ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಹೊಂದಿರುವ ನವೀಕರಿಸಿದ 50-ಮೆಗಾಪಿಕ್ಸೆಲ್ ಮುಖ್ಯ ವೈಡ್ ಕ್ಯಾಮೆರಾವನ್ನು ಹೊಂದಿದೆ. ಇದು 2-ಮೆಗಾಪಿಕ್ಸೆಲ್ ಡೆಪ್ತ್ ಸಂವೇದಕವನ್ನು ಸಹ ಒಳಗೊಂಡಿದೆ. ಈ ಕ್ಯಾಮೆರಾ 30 FPS ನಲ್ಲಿ 1080p ವೀಡಿಯೊವನ್ನು ಸಹ ರೆಕಾರ್ಡ್ ಮಾಡಬಹುದು. ಮುಂಭಾಗದಲ್ಲಿ, ಇದು 20-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದು,ಇದು 30 FPS ನಲ್ಲಿ 1080p ವೀಡಿಯೊವನ್ನು ಸಹ ಬೆಂಬಲಿಸುತ್ತದೆ.

9,999 ರೂ.ಬೆಲೆಯ Poco M7 5G vs Poco M7 Pro 5G:ಎಲ್ಲಾ ಪ್ರಮುಖ ವ್ಯತ್ಯಾಸಗಳಿವು

Poco M7 5G vs Poco M7 Pro: ಡಿಸ್‌ಪ್ಲೇ ಮತ್ತು ವಿನ್ಯಾಸ
Poco M7 5G ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್‌ನೊಂದಿಗೆ 6.88-ಇಂಚಿನ IPS LCD ಪ್ಯಾನೆಲ್ ಅನ್ನು ಹೊಂದಿದೆ. ಇದು 600 nits ಗರಿಷ್ಠ ಬ್ರೈಟ್‌ನೆಸ್ ಮತ್ತು ಸುಮಾರು 260 PPI ಪಿಕ್ಸೆಲ್ ಸಾಂದ್ರತೆಯನ್ನು ನೀಡುತ್ತದೆ.ಮತ್ತೊಂದೆಡೆ, Poco M7 5G Pro ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್ ಮತ್ತು 395 PPI ಜೊತೆಗೆ 6.67-ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು ಯಾವಾಗಲೂ ಆನ್ ಡಿಸ್ಪ್ಲೇ (AOD) ಅನ್ನು ಸಹ ಬೆಂಬಲಿಸುತ್ತದೆ.ಬಾಳಿಕೆಗೆ ಸಂಬಂಧಿಸಿದಂತೆ, Poco M7 Pro ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP64 ರೇಟಿಂಗ್ ಅನ್ನು ಹೊಂದಿದೆ, ಆದರೆ Poco M7 5G ಹೊಂದಿಲ್ಲ.

Poco M7 5G vs Poco M7 5G Pro: ಬ್ಯಾಟರಿ, ಸಾಫ್ಟ್‌ವೇರ್ ಮತ್ತು ಇನ್ನಷ್ಟು
Poco M7 5G ಸ್ಮಾರ್ಟ್‌ಫೋನ್ 18W ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುವ 5,160mAh ಬ್ಯಾಟರಿಯನ್ನು ಹೊಂದಿದ್ದರೆ, Poco M7 5G Pro ಸ್ಮಾರ್ಟ್‌ಫೋನ್ 5,110mAh ಬ್ಯಾಟರಿಯನ್ನು ಹೊಂದಿದೆ ಆದರೆ 45W ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.ಬಯೋಮೆಟ್ರಿಕ್ಸ್‌ಗಾಗಿ, ಎರಡೂ ಫೋನ್‌ಗಳು ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ಗಳನ್ನು ಹೊಂದಿವೆ, ಆದರೆ Poco M7 5G ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ, ಆದರೆ Poco M7 5G Pro ಅಂಡರ್-ಡಿಸ್ಪ್ಲೇ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ.ಸಾಫ್ಟ್‌ವೇರ್ ವಿಭಾಗದಲ್ಲಿ , ಎರಡೂ ಫೋನ್‌ಗಳು Xiaomi ಯ ಹೈಪರ್‌ಓಎಸ್‌ನೊಂದಿಗೆ Android 14 ಅನ್ನು ರನ್ ಮಾಡುತ್ತವೆ ಮತ್ತು ಅವು ಎರಡು ಪ್ರಮುಖ Android ನವೀಕರಣಗಳನ್ನು ಪಡೆಯುವ ಭರವಸೆ ಇದೆ.

Poco M7 5G vs Poco M7 Pro 5G:ಬೆಲೆಗಳ ಹೋಲಿಕೆ
ಇದೀಗ ಬಿಡುಗಡೆಯಾಗಿರುವ Poco M7 5G ಸ್ಮಾರ್ಟ್‌ಫೋನನ್ನು ಅಗ್ಗದ ಬೆಲೆಯಲ್ಲಿ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದರ 6GB RAM + 128GB ಸ್ಟೋರೇಜ್ ಮಾದರಿಯ ಬೆಲೆ ಕೇವಲ 9,999 ರೂ.ಆಗಿದೆ. ಹಾಗೆಯೇ, ಇದರ 8GB RAM + 128GB ಸ್ಟೋರೇಜ್ ಮಾದರಿಯು 10,999 ರೂ. ಬೆಲೆಗಲ್ಲಿ ಬಿಡುಗಡೆಯಾಗಿದೆ. ಇತ್ತ Poco M7 Pro 5G ಸ್ಮಾರ್ಟ್‌ಫೋನ್ 6GB RAM + 128GB ಸ್ಟೋರೇಜ್ ಮಾದರಿಗೆ 13,999 ಬೆಲೆ ಇದೆ.

Best Mobiles in India

English summary
The Poco M7 5G smartphone has been introduced at an affordable price point. The model featuring 6GB of RAM and 128GB of storage is available for only Rs 9,999. Poco M7 5G
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+