Home
ಮೊಬೈಲ್

₹10,000 ರೇಂಜ್‌ನಲ್ಲಿ Poco M8 5G?..ಬಿಡುಗಡೆಗೆ ಒಂದು ದಿನ ಮೊದಲೇ ಸಿಹಿಸುದ್ದಿ!

ಭಾರತದಲ್ಲಿ Poco ತನ್ನ ಹೊಸ Poco M8 5G ಫೋನ್ ಅನ್ನು ನಾಳೆ ಬಿಡುಗಡೆಗೊಳಿಸುತ್ತಿದೆ. ಜನವರಿ 8ರಂದು ಅಧಿಕೃತ ಲಾಂಚ್ ನಡೆಯಲಿದ್ದು, ಈ ಬಿಡುಗಡೆಗೂ ಮುನ್ನವೇ ಫ್ಲಿಪ್‌ಕಾರ್ಟ್‌ನಲ್ಲಿ ಲೈವ್ ಆಗಿರುವ ಮೈಕ್ರೋಸೈಟ್ ಮೂಲಕ ಈ ಫೋನ್‌ನ ಪ್ರಮುಖ ಫೀಚರ್ಸ್‌ಗಳನ್ನು ಬಹಿರಂಗಪಡಿಸಲಾಗಿದೆ. ಈ ವೈಶಿಷ್ಟ್ಯಗಳನ್ನು ಗಮನಿಸಿದರೆ, Poco M8 5G ಸ್ಮಾರ್ಟ್‌ಫೋನ್ ಬಜೆಟ್-ರೇಂಜ್ ಸೆಗ್ಮೆಂಟ್‌ನಲ್ಲಿ ಭಾರತೀಯ ಮಾರುಕಟ್ಟೆಗೆ ಬರುತ್ತಿದೆ. ಹಾಗಾದರೆ, ಮುಂಬರುವ ಹೊಸ Poco M8 5G ಫೋನಿನ ಫೀಚರ್ಸ್ ಹೇಗಿವೆ?, ಬೆಲೆ ಎಷ್ಟಿರಬಹುದು ಎಂಬುದನ್ನು ನೋಡೋಣ ಬನ್ನಿ.

Poco M8 5G: ಬಹಿರಂಗಗೊಂಡಿರುವ ಪ್ರಮುಖ ವೈಶಿಷ್ಟ್ಯಗಳು
Poco M8 5G ಫೋನ್‌ನಲ್ಲಿ 6.77 ಇಂಚಿನ ಫುಲ್ HD+ 3D ಕರ್ವ್ಡ್ ಡಿಸ್ಪ್ಲೇ ನೀಡಲಾಗಿದ್ದು, ಇದು 120Hz ರಿಫ್ರೆಶ್ ರೇಟ್ ಮತ್ತು 3,200 ನಿಟ್ಸ್ ಪೀಕ್ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಜೊತೆಗೆ 100% DCI-P3 ಕಲರ್ ಗ್ಯಾಮಟ್ ಉತ್ತಮ ವಿಸುಯಲ್ ಅನುಭವವನ್ನು ನೀಡುವ ನಿರೀಕ್ಷೆಯಿದೆ.

ಬ್ಯಾಟರಿ ವಿಭಾಗದಲ್ಲಿ, Poco M8 5G ನಲ್ಲಿ 5,520mAh ಸಿಲಿಕಾನ್ ಕಾರ್ಬನ್ ಬ್ಯಾಟರಿ ಇದೆ. ಇದು 45W ಫಾಸ್ಟ್ ಚಾರ್ಜಿಂಗ್ ಮತ್ತು 18W ರಿವರ್ಸ್ ಚಾರ್ಜಿಂಗ್ ಬೆಂಬಲ ಹೊಂದಿದೆ. ಕಂಪನಿಯ ಪ್ರಕಾರ, ಮಧ್ಯಮ ಬಳಕೆಯಲ್ಲಿ ಫೋನ್ ಸುಮಾರು 1.6 ದಿನಗಳ ಬ್ಯಾಟರಿ ಬ್ಯಾಕಪ್ ನೀಡುತ್ತದೆ.

ಕಾರ್ಯಕ್ಷಮತೆಗಾಗಿ Poco M8 5G ನಲ್ಲಿ Snapdragon 6 Gen 3 ಪ್ರೊಸೆಸರ್ ಬಳಸಲಾಗಿದೆ. ಇದನ್ನು 8GB RAM ಜೊತೆ ಜೋಡಿಸಲಾಗಿದೆ.

ಸಾಫ್‌ವೇರ್ ವಿಭಾಗದಲ್ಲಿ, Android 15 ಆಧಾರಿತ HyperOS 2.0 ಜೊತೆಗೆ ಬರುತ್ತದೆ. ವಿಶೇಷವಾಗಿ, ನಾಲ್ಕು ವರ್ಷಗಳ Android ಅಪ್ಡೇಟ್‌ಗಳು ಮತ್ತು ಆರು ವರ್ಷಗಳ ಸೆಕ್ಯುರಿಟಿ ಅಪ್ಡೇಟ್‌ಗಳನ್ನು ನೀಡುವುದಾಗಿ ಪೊಕೊ ಭರವಸೆ ನೀಡಿದೆ.

ಕ್ಯಾಮೆರಾ ವಿಭಾಗದಲ್ಲಿ, ಈ ಫೋನ್ ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಡ್ಯೂಯಲ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. f/1.8 ಅಪರ್ಚರ್ ಇರುವ ಪ್ರೈಮರಿ ಸೆನ್ಸರ್ ಲೋ-ಲೈಟ್ ಫೋಟೋಗ್ರಫಿಗೆ ಸಹಾಯ ಮಾಡುತ್ತದೆ. ಮುಂಭಾಗದಲ್ಲಿ 20 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

₹10,000 ರೇಂಜ್‌ನಲ್ಲಿ Poco M8 5G?..ಬಿಡುಗಡೆಗೆ ಒಂದು ದಿನ ಮೊದಲೇ ಸಿಹಿಸುದ್ದಿ!

ಕ್ಯಾಮೆರಾ ಸಾಮರ್ಥ್ಯದಲ್ಲಿ 4K ವೀಡಿಯೋ ರೆಕಾರ್ಡಿಂಗ್, 2x ಇನ್-ಸೆನ್ಸರ್ ಜೂಮ್ ಮತ್ತು ಲೈವ್ ಫೋಟೋ ಬೆಂಬಲದ ಜೊತೆಗೆ AI Magic Eraser Pro, AI Sky Replacement ಮತ್ತು AI Reflection Removal ನಂತಹ ಆಧುನಿಕ AI ಕ್ಯಾಮೆರಾ ಫೀಚರ್‌ಗಳು ಇವೆ.

Poco M8 5G ಫೋನ್ 300% ವಾಲ್ಯೂಮ್ ಬೂಸ್ಟ್ ಇರುವ ಡ್ಯುಯಲ್ ಸ್ಪೀಕರ್‌ಗಳೊಂದಿಗೆ Dolby Atmos ಬೆಂಬಲವನ್ನು ಹೊಂದಿರಲಿದೆ. ಜೊತೆಗೆ, ನೀರು ಮತ್ತು ಸಣ್ಣ ಫ್ಲಾಶ್‌ಗಳಿಂದ ರಕ್ಷಣೆಗಾಗಿ IP66 ರೇಟಿಂಗ್ ಇರುವುದನ್ನು ಖಚಿತಪಡಿಸಲಾಗಿದೆ.

ಬಣ್ಣ ಆಯ್ಕೆಗಳಲ್ಲಿ, Poco M8 5G Carbon Black, Glacial Blue ಮತ್ತು Frost Silver ಎಂಬ ಮೂರು ಆಕರ್ಷಕ ಕಲರ್ ವೇರಿಯಂಟ್‌ಗಳಲ್ಲಿ ಲಭ್ಯವಾಗಲಿದೆ. ಲಾಂಚ್ ನಂತರ ಫ್ಲಿಪ್‌ಕಾರ್ಟ್ ಮತ್ತು Xiaomi ಇಂಡಿಯಾ ಅಧಿಕೃತ ವೆಬ್‌ಸೈಟ್ ಮೂಲಕ ಖರೀದಿಸಬಹುದು.

Poco M8 5G: ನಿರೀಕ್ಷಿತ ಬೆಲೆ ಎಷ್ಟು?
ಸೊರಿಕೆಗಳ ಪ್ರಕಾರ, ಸ್ಟ್ಯಾಂಡರ್ಡ್ POCO M8 5G: ₹10,000 ರಿಂದ ₹15,000 ರ ನಡುವೆ ಬೆಲೆ ನಿಗದಿಯಾಗಬಹುದು. ಕೆಲವು ನಿರ್ದಿಷ್ಟ ಸೋರಿಕೆಗಳು ಅಂದಾಜು ₹14,990 ಆರಂಭಿಕ ಬೆಲೆ ನಿಗದಿಯನ್ನು ಸೂಚಿಸುತ್ತವೆ. ಇತ್ತ POCO M8 Pro 5G: ₹15,000 ರಿಂದ ₹20,000 ರ ನಡುವೆ ಬೆಲೆ ನಿಗದಿಯನ್ನು ನಿರೀಕ್ಷಿಸಲಾಗಿದೆ, ಕೆಲವು ವರದಿಗಳು ₹17,990 ಆರಂಭಿಕ ಬೆಲೆ ನಿಗದಿಯನ್ನು ಸಹ ಸೂಚಿಸುತ್ತವೆ.

ಒಟ್ಟಿನಲ್ಲಿ, Poco M8 5G ದೊಡ್ಡ ಡಿಸ್ಪ್ಲೇ, ಬಲವಾದ ಬ್ಯಾಟರಿ, ದೀರ್ಘಕಾಲದ ಸಾಫ್ಟ್‌ವೇರ್ ಅಪ್ಡೇಟ್ ಬೆಂಬಲ ಮತ್ತು ಆಧುನಿಕ ಕ್ಯಾಮೆರಾ ಫೀಚರ್‌ಗಳೊಂದಿಗೆ ಮಿಡ್-ರೇಂಜ್ 5G ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಬಲವಾದ ಆಯ್ಕೆಯಾಗಿ ಕಾಣುತ್ತಿದೆ. ಲಾಂಚ್ ಬೆಲೆ ಸ್ಪರ್ಧಾತ್ಮಕವಾಗಿದ್ದರೆ, ಈ ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುವ ಸಾಧ್ಯತೆ ಇದೆ. ಈ ಬಗ್ಗೆ ನೀವೇನಂತಿರಾ?..ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
POCO is set to launch the new Poco M8 5G smartphone in India on January 8. Ahead of the official launch, the Flipkart microsite has revealed key features, hinting that the device will target the budget segment with 5G connectivity, a modern design, and competitive specifications at an affordable price point.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+