Home
ಮೊಬೈಲ್

ಜನವರಿ 8 ರಂದು ಭಾರತದಲ್ಲಿ Poco M8 5G ಲಾಂಚ್: ಹೇಗಿದೆ ನೋಡಿ ಪೋನ್!

ಇದೇ ಜನವರಿ 8 ರಂದು ಭಾರತದಲ್ಲಿ ಬಹುನಿರೀಕ್ಷಿತ Poco M8 5G ಸ್ಮಾರ್ಟ್‌ಫೋನ್ ಬಿಡುಗಡೆಯಾಗುವುದು ಖಚಿತವಾಗಿದೆ. ಇದಕ್ಕೂ ಮೊದಲೇ ಕಂಪೆನಿಯು ಈ Poco M8 5G ಫೋನಿನ ಪ್ರಮುಖ ವೈಶಿಷ್ಟ್ಯಗಳನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದು, ಡಿಸ್ಪ್ಲೇ, ಪ್ರೊಸೆಸರ್, ಸಾಫ್ಟ್‌ವೇರ್ ಅಪ್‌ಡೇಟ್‌ಗಳು ಹಾಗೂ ಡಿಸೈನ್ ವಿಷಯಗಳಲ್ಲಿ ಈ ಫೋನ್ ಸಾಕಷ್ಟು ಗಮನ ಸೆಳೆಯುವಂತೆ ಮಾರುಕಟ್ಟೆಗೆ ಬರುತ್ತಿದೆ. ಹಾಗಾದರೆ, ಮುಂಬರುವ Poco M8 5G ಸ್ಮಾರ್ಟ್‌ಫೋನ್ ಹೇಗಿರಲಿದೆ?, ಪ್ರಮುಖ ವೈಶಿಷ್ಟ್ಯಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

Poco M8 5G: ಪ್ರಸ್ತುತ ಅಧಿಕೃತವಾಗಿರುವ ಪ್ರಮುಖ ವೈಶಿಷ್ಟ್ಯಗಳು
ಮುಂಬರುವ Poco M8 5G ಫೋನಿನಲ್ಲಿ 6.77 ಇಂಚಿನ ದೊಡ್ಡ 3D ಕರ್ವ್ಡ್ AMOLED ಡಿಸ್ಪ್ಲೇ ನೀಡಲಾಗಿದೆ. ಈ ಸ್ಕ್ರೀನ್ ಫುಲ್ HD+ ರೆಸಲ್ಯೂಷನ್ (2392 x 1080 ಪಿಕ್ಸೆಲ್), 120Hz ರಿಫ್ರೆಶ್ ರೇಟ್ ಮತ್ತು ಗರಿಷ್ಠ 3,200 ನಿಟ್ಸ್ ಬ್ರೈಟ್‌ನೆಸ್ ಹೊಂದಿದೆ. ಹೊರಾಂಗಣದಲ್ಲಿ ಬಳಸುವಾಗಲೂ ಸ್ಪಷ್ಟ ವೀಕ್ಷಣಾ ಅನುಭವ ನೀಡುವಂತೆ ಈ ಡಿಸ್ಪ್ಲೇ ವಿನ್ಯಾಸಗೊಳಿಸಲಾಗಿದೆ. ಜೊತೆಗೆ, 100% DCI-P3 ಕಲರ್ ಗ್ಯಾಮಟ್ ಸಪೋರ್ಟ್ ಮತ್ತು Wet Touch 2.0 ತಂತ್ರಜ್ಞಾನವು ತೇವಯುಕ್ತ ಪರಿಸ್ಥಿತಿಗಳಲ್ಲಿಯೂ ಸುಗಮ ಟಚ್ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ.

ಕಾರ್ಯಕ್ಷಮತೆಯ ವಿಚಾರದಲ್ಲಿ, Poco M8 5G ಅನ್ನು Qualcomm Snapdragon 6 Gen 3 ಚಿಪ್‌ಸೆಟ್ ಪವರ್ ಮಾಡುತ್ತದೆ. ಈ ಪ್ರೊಸೆಸರ್ AnTuTu ಬೆಂಚ್‌ಮಾರ್ಕ್‌ನಲ್ಲಿ 8.25 ಲಕ್ಷಕ್ಕೂ ಹೆಚ್ಚು ಸ್ಕೋರ್ ಪಡೆದಿದ್ದು, ಹಿಂದಿನ Poco M7 5G ಗಿಂತ ಬಹಳಷ್ಟು ಉತ್ತಮ ಪರ್ಫಾರ್ಮೆನ್ಸ್ ನೀಡುತ್ತದೆ ಎಂದು ಕಂಪನಿ ತಿಳಿಸಿದೆ. ಫೋನ್‌ನಲ್ಲಿ ಗರಿಷ್ಠ 16GB RAM ಸಪೋರ್ಟ್ ಲಭ್ಯವಿದ್ದು, ಇದರಲ್ಲಿ 8GB ವರೆಗೆ ವರ್ಚುವಲ್ RAM ಕೂಡ ಸೇರಿದೆ. ಇದರಿಂದ ಮಲ್ಟಿಟಾಸ್ಕಿಂಗ್ ಮತ್ತು ಗೇಮಿಂಗ್ ಅನುಭವ ಇನ್ನಷ್ಟು ಸ್ಮೂತ್ ಆಗಿರಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಜನವರಿ 8 ರಂದು ಭಾರತದಲ್ಲಿ Poco M8 5G ಲಾಂಚ್: ಹೇಗಿದೆ ನೋಡಿ ಪೋನ್!

ಸಾಫ್ಟ್‌ವೇರ್ ವಿಭಾಗದಲ್ಲಿ, ಈ ಸ್ಮಾರ್ಟ್‌ಫೋನ್ Android 15 ಆಧಾರಿತ HyperOS 2 ನೊಂದಿಗೆ ಲಾಂಚ್ ಆಗಲಿದೆ. ದೀರ್ಘಾವಧಿಯ ಬಳಕೆಯನ್ನು ಗಮನದಲ್ಲಿಟ್ಟುಕೊಂಡು, ಪೊಕೊ ಕಂಪನಿ 4 ವರ್ಷಗಳ Android ಅಪ್‌ಡೇಟ್‌ಗಳು ಮತ್ತು 6 ವರ್ಷಗಳ ಸೆಕ್ಯೂರಿಟಿ ಪ್ಯಾಚ್‌ಗಳನ್ನು ನೀಡುವುದಾಗಿ ಭರವಸೆ ನೀಡಿದೆ. ಇದಲ್ಲದೆ, ಭವಿಷ್ಯದಲ್ಲಿ Android 16 ಆಧಾರಿತ HyperOS 3 ಅಪ್‌ಡೇಟ್ ಕೂಡ ಲಭ್ಯವಾಗಲಿದೆ ಎಂಬುದು ಬಳಕೆದಾರರಿಗೆ ಹೆಚ್ಚುವರಿ ಲಾಭ.

ಡಿಸೈನ್ ವಿಷಯಕ್ಕೆ ಬಂದರೆ, Poco M8 5G ಕೇವಲ 7.35mm ದಪ್ಪ ಮತ್ತು 178 ಗ್ರಾಂ ತೂಕ ಹೊಂದಿದ್ದು, ಹಿಡಿದಾಗ ಹಗುರವಾಗಿರುವ ಅನುಭವ ನೀಡುವ ಭರವಸೆ ತಂದಿದೆ. ಫೋನ್‌ಗೆ IP66 ರೇಟಿಂಗ್ ನೀಡಲಾಗಿದ್ದು, ಧೂಳು ಮತ್ತು ನೀರಿನಿಂದ ರಕ್ಷಣೆ ದೊರೆಯುತ್ತದೆ. ಜೊತೆಗೆ, SGS MIL-STD-810 ಪ್ರಮಾಣೀಕರಣ ಇರುವುದರಿಂದ ದೈನಂದಿನ ಬಳಕೆಯಲ್ಲಿ ಹೆಚ್ಚುವರಿ ನಂಬಿಕೆ ಒದಗಿಸುತ್ತದೆ. ಕ್ಯಾಮೆರಾ ವಿಭಾಗದಲ್ಲಿ, 50 ಮೆಗಾಪಿಕ್ಸೆಲ್ AI ಪ್ರೈಮರಿ ಕ್ಯಾಮೆರಾ ನೀಡಲಾಗಿದ್ದು, ಮಧ್ಯಭಾಗದಲ್ಲಿ ಸ್ಕ್ವೈರ್ ವಿನ್ಯಾಸದ ಕ್ಯಾಮೆರಾ ಮಾಡ್ಯೂಲ್ ಫೋನ್‌ಗೆ ಪ್ರೀಮಿಯಂ ಲುಕ್ ನೀಡುತ್ತದೆ.

Poco M8 5G ಭಾರತದಲ್ಲಿ ಜನವರಿ 8ರಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಲಾಂಚ್ ಆಗಲಿದೆ. ಈ ಫೋನ್ ಫ್ಲಿಪ್‌ಕಾರ್ಟ್ ಮೂಲಕ ಮಾರಾಟಕ್ಕೆ ಲಭ್ಯವಾಗಲಿದ್ದು, ಬೆಲೆ ಮತ್ತು ಇತರೆ ವಿವರಗಳನ್ನು ಲಾಂಚ್ ದಿನದಂದು ಘೋಷಿಸುವ ಸಾಧ್ಯತೆ ಇದೆ. ಬಲಿಷ್ಠ ಡಿಸ್ಪ್ಲೇ, ಹೊಸ ತಲೆಮಾರಿನ Snapdragon ಚಿಪ್‌ಸೆಟ್ ಮತ್ತು ದೀರ್ಘಾವಧಿಯ ಸಾಫ್ಟ್‌ವೇರ್ ಸಪೋರ್ಟ್‌ನೊಂದಿಗೆ,ಮಿಡ್-ರೇಂಜ್ ವಿಭಾಗದಲ್ಲಿ ಉತ್ತಮ ಪರ್ಫಾರ್ಮೆನ್ಸ್ ಹುಡುಕುತ್ತಿರುವ ಭಾರತೀಯ ಬಳಕೆದಾರರ ಗಮನ ಸೆಳೆಯುವ ಸ್ಮಾರ್ಟ್‌ಫೋನ್ ಆಗಿ Poco M8 5G ಹೊರಹೊಮ್ಮುವ ನಿರೀಕ್ಷೆಯಿದೆ.

Best Mobiles in India

English summary
The Poco M8 5G is set to launch in India on January 8. Ahead of its official debut, the company has revealed key features highlighting a modern design, smooth display, capable 5G processor, and long-term software support. The smartphone is expected to target budget users looking for reliable performance and next-generation connectivity.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+