Home
ಮೊಬೈಲ್

ಶೀಘ್ರವೇ POCO M8 Pro ಆಗಮನ: ನಿರೀಕ್ಷಿತ ಫೀಚರ್ಸ್, ಬೆಲೆ ಮಾಹಿತಿ ನೋಡಿ!

ಜನಪ್ರಿಯ ಮೊಬೈಲ್ ಬ್ರ್ಯಾಂಡ್ POCO ಮುಂದಿನ ತಿಂಗಳು ಭಾರತದಲ್ಲಿ ತನ್ನ M ಸರಣಿಯ ಹೊಸ ಕೈಗೆಟುಕುವ ಸ್ಮಾರ್ಟ್‌ಫೋನ್ ಅನ್ನು ಅನಾವರಣಗೊಳಿಸಲು ಸಜ್ಜಾಗಿದೆ. ಈ ಹೊಸ ಫೋನ್ POCO M8 Pro ಎಂಬ ಹೆಸರಿನಲ್ಲಿ ಇಲ್ಲಿಯವರೆಗಿನ M ಸರಣಿಯಲ್ಲೇ ಅತ್ಯಂತ ಪ್ರೀಮಿಯಂ ಸ್ಮಾರ್ಟ್‌ಫೋನ್ ಆಗಿ ಅನಾವರಣಗೊಳ್ಳುವ ಸಾಧ್ಯತೆಯಿದೆ ಎಂಬ ಹಲವಾರು ವರದಿಗಳು ಇತ್ತೀಚಿಗಷ್ಟೇ ಹರಿದಾಡಿದ್ದವು. ಇದೀಗ ಈ POCO M8 Pro ನ ಸಂಪೂರ್ಣ ವಿಶೇಷಣಗಳನ್ನು ಬಹಿರಂಗಪಡಿಸುವ ಹೊಸ ಸೋರಿಕೆಯ ಮಾಹಿತಿಯೊಂದು ಬಂದಿದೆ.!

ಹೌದು, POCO ಪರಿಚಯಿಸುತ್ತಿರುವ POCO M8 Pro ಫೋನ್ ಸ್ನ್ಯಾಪ್‌ಡ್ರಾಗನ್ 7s Gen 4 ಚಿಪ್‌ಸೆಟ್‌ನಿಂದ ಚಾಲಿತವಾಗಲಿದ್ದು, ಇದು ಇಲ್ಲಿಯವರೆಗಿನ ಅತ್ಯಂತ ವೇಗದ M ಸರಣಿಯ ಫೋನ್ ಆಗಿದೆ ಎಂದು ಹೇಳಲಾಗಿದೆ. ಪ್ರಸಿದ್ಧ ಟಿಪ್‌ಸ್ಟಾರ್ 'ಸುದಾಂಶು ಅಂಭೋರೆ' ಅವರು ಈ ಫೋನ್ ಕುರಿತ ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದ್ದು, ಮುಂಬರುವ POCO M8 Pro ಫೋನಿನಲ್ಲಿ 120Hz ರಿಫ್ರೆಶ್ ರೇಟ್ ಇರುವ AMOLED ಡಿಸ್‌ಪ್ಲೇ ಮತ್ತು 100W ಫಾಸ್ಟ್ ಚಾರ್ಜಿಂಗ್ ಬೆಂಬಲದ 6,500mAh ಬ್ಯಾಟರಿಯನ್ನು ಸೂಚಿಸಿದ್ದಾರೆ.

POCO M8 Pro: ಸೋರಿಕೆಯ ಪ್ರಮುಖ ವೈಶಿಷ್ಟ್ಯಗಳು
ಸುದಾಂಶು ಅಂಭೋರೆ ಅವರ ಪ್ರಕಾರ, ಮುಂಬರುವ POCO M8 Pro ಫೋನ್ ಫ್ಲ್ಯಾಗ್‌ಶಿಪ್-ಗ್ರೇಡ್ Corning Gorilla Glass Victus 2 ರಕ್ಷಣೆಯೊಂದಿಗೆ ದೊಡ್ಡ 6.83-ಇಂಚಿನ ಕ್ವಾಡ್ ಕರ್ವ್ಡ್ AMOLED ಡಿಸ್ಪ್ಲೇಯನ್ನು ಸಹ ಹೊಂದಬಹುದು. ಇದಲ್ಲದೆ, M8 Pro ನ ಪರದೆಯು 120Hz ರಿಫ್ರೆಶ್ ದರ ಮತ್ತು 1.5K (2772 x 1280 ಪಿಕ್ಸೆಲ್‌ಗಳು) ರೆಸಲ್ಯೂಶನ್ ಅನ್ನು ಹೊಂದಿರುತ್ತದೆ ಎಂದು ಹೇಳಿದ್ದಾರೆ. Corning Gorilla Glass Victus 2 ರಕ್ಷಣೆಯು ಈ ಸರಣಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುವ ಫೀಚರ್ ಆಗಿರಬಹುದು.

ಶೀಘ್ರವೇ POCO M8 Pro ಆಗಮನ: ನಿರೀಕ್ಷಿತ ಫೀಚರ್ಸ್, ಬೆಲೆ ಮಾಹಿತಿ ನೋಡಿ!

ಕ್ಯಾಮೆರಾ ವಿಭಾಗದಲ್ಲಿ, ಈ POCO M8 Pro ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ, ಇದು OIS ಜೊತೆಗೆ 50MP ಪ್ರಾಥಮಿಕ ಸಂವೇದಕ ಮತ್ತು 8MP ಅಲ್ಟ್ರಾವೈಡ್ ಲೆನ್ಸ್ ಅನ್ನು ಒಳಗೊಂಡಿರಬಹುದು. ಹೆಚ್ಚುವರಿಯಾಗಿ, ಇದು ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾವನ್ನು ಸಹ ಪಡೆಯುತ್ತದೆ. ಅಂಬೋರ್ ಅವರ ಪೋಸ್ಟ್‌ನಲ್ಲಿ ಫೋನ್ ಆಂಡ್ರಾಯ್ಡ್ 15 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಹೈಪರ್‌ಓಎಸ್ 2.0 ಸ್ಕಿನ್ ಅನ್ನು ಮೇಲ್ಭಾಗದಲ್ಲಿ ಹೊಂದಿದೆ ಎಂದು ಬಹಿರಂಗಪಡಿಸಲಾಗಿದೆ.

ಪರ್ಫಾರ್ಮೆನ್ಸ್ ವಿಷಯದಲ್ಲಿ POCO ಈ ಬಾರಿ ದೊಡ್ಡ ಜಿಗಿತಕ್ಕೆ ಮುಂದಾಗಿದೆ. ಮಧ್ಯಮ ಬೆಲೆಯ ಈ ಫೋನಿನಲ್ಲಿ ಸ್ವಲ್ಪ ಶಕ್ತಿಯುತವಾದ Snapdragon 7s Gen 4 ಚಿಪ್‌ಸೆಟ್ ನೀಡಲಾಗುವ ನಿರೀಕ್ಷೆಯಿದ್ದು, ಇದು ಗೇಮಿಂಗ್, ಮಲ್ಟಿಟಾಸ್ಕಿಂಗ್ ಮತ್ತು ದಿನನಿತ್ಯದ ಬಳಕೆಯಲ್ಲಿ ವೇಗವಾದ ಅನುಭವ ನೀಡುವ ಭರವಸೆಯನ್ನು ನೀಡುತ್ತದೆ. ಜೊತೆಗೆ, 6,500mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಮತ್ತು 100W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಇರುವುದರಿಂದ, ಕಡಿಮೆ ಸಮಯದಲ್ಲಿ ಫುಲ್ ಚಾರ್ಜ್ ಮತ್ತು ದೀರ್ಘ ಬ್ಯಾಟರಿ ಬ್ಯಾಕ್‌ಅಪ್ ಅನ್ನು ನಾವು ನಿರೀಕ್ಷಿಸಬಹುದು.

POCO M8 Pro: ಬಿಡುಗಡೆ ಯಾವಾಗ?
ಭಾರತದಲ್ಲಿ POCO M8 Pro ಲಾಂಚ್ ಟೈಮ್‌ಲೈನ್ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಆದರೆ, ವಿನ್ಯಾಸದಲ್ಲಿ 7.35 ಮಿಮೀ ಸ್ಲಿಮ್ ಫೋನ್ ಇದು ಎಂಬುದನ್ನು ಕಂಪೆನಿ ದೃಢಪಡಿಸಿದೆ. ಇತ್ತೀಚಿನ ಲೀಕ್‌ಗಳು ಮತ್ತು ಮಾರುಕಟ್ಟೆ ಮೂಲಗಳ ಪ್ರಕಾರ, ಜನವರಿ 2026ರ ಮೊದಲ ವಾರಗಳಲ್ಲಿ POCO M8 Pro ಭಾರತದಲ್ಲಿ ಬಿಡುಗಡೆ ಆಗುವ ಸಾಧ್ಯತೆ ಹೆಚ್ಚು. ಲಾಂಚ್ ಬಳಿಕ ಈ ಫೋನ್ ಆನ್‌ಲೈನ್‌ನಲ್ಲಿ Flipkart ಮೂಲಕ ಲಭ್ಯವಾಗಬಹುದು. ಏಕೆಂದರೆ, POCO ಫೋನ್‌ಗಳ ಪ್ರಮುಖ ಮಾರಾಟ ವೇದಿಕೆಯಾಗಿ Flipkart ಗುರುತಿಸಿಕೊಂಡಿದೆ.

POCO M8 Pro: ಬೆಲೆ ಎಷ್ಟು?
ಬೆಲೆ ವಿಚಾರದಲ್ಲಿ POCO ಈ ಬಾರಿ ವಿಭಿನ್ನ ತಂತ್ರ ಅನುಸರಿಸಬಹುದು. ವರದಿಗಳ ಪ್ರಕಾರ, POCO M8 Pro ದರ ರೂ.20,000ಕ್ಕಿಂತ ಕಡಿಮೆ ಇರುವುದು ಸಾಧ್ಯ, ಆದರೆ ಇದು ಹಿಂದಿನ M ಸರಣಿ ಫೋನ್‌ಗಳಿಗಿಂತ ಸ್ವಲ್ಪ ಹೆಚ್ಚು. ಆದರೂ ಪ್ರೊಸೆಸರ್, ಡಿಸ್‌ಪ್ಲೇ ಮತ್ತು ಚಾರ್ಜಿಂಗ್ ಸಾಮರ್ಥ್ಯಗಳನ್ನು ಗಮನಿಸಿದರೆ, ಈ ಬೆಲೆ ಶ್ರೇಣಿ ಭಾರತೀಯ ಬಳಕೆದಾರರಿಗೆ ಆಕರ್ಷಕವಾಗಬಹುದು. ಇದರಿಂದಗಿ, ಈ ಪೋನ್ 2026ರ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಚರ್ಚೆಯಾಗುವ ಫೋನ್‌ಗಳ ಪಟ್ಟಿಗೆ ಸೇರುವ ಸಾಧ್ಯತೆ ಇದೆ.

Best Mobiles in India

English summary
POCO M8 Pro is expected to launch in India next month with Snapdragon 7s Gen 4, a 120Hz AMOLED display, and a 6,500mAh battery with 100W fast charging.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+