ಬಜೆಟ್ ಗೇಮಿಂಗ್ ಪ್ರಿಯರಿಗೆ ಗುಡ್ ನ್ಯೂಸ್: Poco M8 ಸರಣಿ ಲಾಂಚ್ ಹತ್ತಿರ!
ಬಜೆಟ್ ಬೆಲೆಯ ಗೇಮಿಂಗ್ ಫೋನ್‌ಗಳಿಗೆ ಹೆಸರಾಂತ ಬ್ರ್ಯಾಂಡ್ Poco ಭಾರತದಲ್ಲಿ ತನ್ನ ಹೊಸ M-ಸರಣಿ ಸ್ಮಾರ್ಟ್‌ಫೋನ್‌ಗಳ ಬಿಡುಗಡೆಯನ್ನು ಅಧಿಕೃತವಾಗಿ ಟೀಸ್ ಮಾಡಿದೆ. ಈಗಾಗಲೇ ದೇಶದಲ್ಲಿ Poco M ಸರಣಿ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುವ ಬಗ್ಗೆ ಹಲವಾರು ಲೀಕ್‌ಗಳು ತಿಳಿಸಿದ್ದವು. ಇದೀಗ Poco ಈ ಮಾಹಿತಿಯನ್ನು ಅಧಿಕೃತವಾಗಿ ದೃಢಪಡಿಸಿದೆ. ಆದರೆ, Poco ತನ್ನ ಮುಂಬರುವ M-ಸರಣಿ ಫೋನ್‌ಗಳ ನಿಖರ ಹೆಸರು ಅಥವಾ ವಿನ್ಯಾಸವನ್ನು ಇನ್ನೂ ಬಹಿರಂಗಪಡಿಲ್ಲ. ಅದಾಗ್ಯೂ, ಇತ್ತೀಚೆಗೆ ಲಭ್ಯವಾದ ಲೀಕ್‌ಗಳು ಮತ್ತು ಪ್ರಮಾಣೀಕರಣ ದಾಖಲೆಗಳು ಶೀಘ್ರದಲ್ಲೇ ಬಿಡುಗಡೆಯನ್ನು ಸೂಚಿಸುತ್ತಿವೆ.
ಇತ್ತೀಚಿನ ವರದಿಗಳ ಪ್ರಕಾರ, Poco M ಸರಣಿಯಲ್ಲಿ Poco M8 ಮತ್ತು Poco M8 Pro ಎಂಬ ಎರಡು ಫೋನ್‌ಗಳು ಪರಿಚಯಗೊಳ್ಳಬಹುದು. ಈ ಎರಡು ಮಾದರಿಗಳು ಭಾರತ ಮತ್ತು ಜಾಗತಿಕ ಮಾರುಕಟ್ಟೆಗಳನ್ನು ಗುರಿಯಾಗಿರಿಸಿಕೊಂಡಿದ್ದು, ಬೆಲೆ ಮತ್ತು ವೈಶಿಷ್ಟ್ಯಗಳ ವಿಷಯದಲ್ಲಿ ವಿಭಿನ್ನ ಆವೃತ್ತಿಗಳನ್ನು ಪಡೆಯಬಹುದು. ಇದರಲ್ಲಿ Poco M8 ಸೀರೀಸ್ Redmi Note 15 ಸರಣಿಯನ್ನು ಆಧರಿಸಿರಬಹುದು. Poco M8 ಅನ್ನು Redmi Note 15 5G ಯ ಮರುಬ್ರ್ಯಾಂಡ್ ಆವೃತ್ತಿಯಾಗಿ, ಹಾಗೂ Poco M8 Pro ಅನ್ನು Redmi Note 15 Pro+ ಹಾರ್ಡ್‌ವೇರ್ ಮೇಲೆ ರೂಪಿಸಿರುವ ಸಾಧ್ಯತೆಗಳು ಸಹ ಇವೆ.
ಇನ್ನು Poco M ಸರಣಿಯಲ್ಲಿ ಭಾರತ ಮತ್ತು ಜಾಗತಿಕ ಆವೃತ್ತಿಗಳ ನಡುವೆ ಪ್ರಮುಖ ವ್ಯತ್ಯಾಸಗಳು ಇರಬಹುದು. ವರದಿಗಳ ಪ್ರಕಾರ, Poco M8 Pro ಭಾರತ ಆವೃತ್ತಿಯಲ್ಲಿ 50MP ಪ್ರೈಮರಿ ಕ್ಯಾಮೆರಾ ಇರಲಿದೆ. ಇದು ಚೀನಾದ Redmi Note 15 Pro+ ಮಾದರಿಯಂತೆಯೇ ಇರಬಹುದು. ಆದರೆ ಜಾಗತಿಕ ಮಾರುಕಟ್ಟೆಗೆ ಲಭ್ಯವಾಗುವ Redmi Note 15 Pro+ ನಲ್ಲಿ 200MP ಕ್ಯಾಮೆರಾ ಸೆನ್ಸರ್ ನೀಡಲಾಗುತ್ತದೆ ಎನ್ನಲಾಗಿದೆ. ಪ್ರದೇಶದ ಪ್ರಕಾರ ಕ್ಯಾಮೆರಾ ಹಾರ್ಡ್‌ವೇರ್ ಬದಲಾಗುವ ಸಾಧ್ಯತೆ ಇದೆ. ಗಮನಿಸುವುದಾದರೆ, Poco M8 ಮತ್ತು Poco M8 Pro ಹಲವು ಪ್ರಮಾಣೀಕರಣ ತಾಣಗಳಲ್ಲಿ ಕಾಣಿಸಿಕೊಂಡಿವೆ.
ಇತ್ತೀಚಿಗಷ್ಟೇ, Poco M8 Pro ಫೋನ್ TDRA (UAE), FCC, IMEI ಡೇಟಾಬೇಸ್ ಮತ್ತು IMDA ತಾಣಗಳಲ್ಲಿ ದಾಖಲಾಗಿದೆ. ಇತ್ತ Poco M8 5G ಭಾರತದಲ್ಲಿ BIS ಸೇರಿದಂತೆ NBTC ಮತ್ತು TDRA ಪ್ರಮಾಣೀಕರಣಗಳನ್ನು ಪಡೆದುಕೊಂಡಿದೆ. ಇದು Poco M ಸರಣಿ ಫೋನ್‌ಗಳು ಶೀಘ್ರದಲ್ಲೇ ಅಧಿಕೃತವಾಗಿ ಘೋಷಣೆಯಾಗಲಿವೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಲೀಕ್ ಆದ ರೆಂಡರ್‌ಗಳ ಪ್ರಕಾರ, Poco M8 ಸೀರೀಸ್ ಆಕರ್ಷಕ ವಿನ್ಯಾಸವನ್ನು ಹೊಂದಿರಲಿದೆ. ಈ ಫೋನ್‌ಗಳು ಕಪ್ಪು, ನೀಲಿ ಮತ್ತು ಸಿಲ್ವರ್-ಕಪ್ಪು ಡ್ಯುಯಲ್-ಟೋನ್ ಬಣ್ಣಗಳಲ್ಲಿ ಲಭ್ಯವಾಗಬಹುದು ಎಂದು ಹೇಳಲಾಗಿದೆ.

ವಿನ್ಯಾಸದ ವಿಭಾಗದಲ್ಲಿ, ಈ ಫೋನ್‌ಗಳ ಹಿಂಭಾಗದಲ್ಲಿ Poco ಲೋಗೋ ಇರಲಿದ್ದು, ಸ್ಕ್ವಿರ್ಕಲ್ ಆಕಾರದ ಕ್ಯಾಮೆರಾ ಮಾಡ್ಯೂಲ್‌ನಲ್ಲಿ ಮೂರು ಹಿಂಬದಿ ಕ್ಯಾಮೆರಾಗಳು ಇರಲಿವೆ ಎಂದು ವರದಿಗಳು ಹೇಳುತ್ತಿವೆ. ಮುಂಭಾಗದಲ್ಲಿ, ಎರಡೂ ಮಾದರಿಗಳಲ್ಲೂ ಹೋಲ್-ಪಂಚ್ ಸೆಲ್ಫಿ ಕ್ಯಾಮೆರಾ ಮತ್ತು ಸ್ವಲ್ಪ ದಪ್ಪ ಬೇಝೆಲ್‌ಗಳು ಇರಲಿವೆ. ಪವರ್ ಮತ್ತು ವಾಲ್ಯೂಮ್ ಬಟನ್‌ಗಳನ್ನು ಬಲಭಾಗದಲ್ಲಿ ನೀಡಲಾಗುತ್ತಿದ್ದು, ಕೆಳಭಾಗದಲ್ಲಿ USB Type-C ಪೋರ್ಟ್, ಸ್ಪೀಕರ್ ಗ್ರಿಲ್ ಮತ್ತು ಮೈಕ್ರೋಫೋನ್ ಇರಲಿದೆ ಎನ್ನಲಾಗಿದೆ. ಇದರಿಂದಾಗಿ Poco ಅಭಿಮಾನಿಗಳಲ್ಲಿ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
ಒಟ್ಟಾರೆಯಾಗಿ, Poco M8 ಸೀರೀಸ್ ಭಾರತದಲ್ಲಿ ಬಜೆಟ್ ಮತ್ತು ಮಿಡ್-ರೇಂಜ್ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಹೊಸ ಆಯ್ಕೆಯಾಗಿ ಬರಬಹುದು. Poco ಕಂಪನಿ ಮುಂದಿನ ದಿನಗಳಲ್ಲಿ ಅಧಿಕೃತ ಬಿಡುಗಡೆ ದಿನಾಂಕ, ಬೆಲೆ ಹಾಗೂ ಸಂಪೂರ್ಣ ಫೀಚರ್ಸ್ ಅನ್ನು ಘೋಷಿಸುವ ನಿರೀಕ್ಷೆಯಿದೆ. ಗಮನಿಸುವುದಾದರೆ, ಶಿಯೋಮಿ ಮತ್ತು ಇದರ ಒಡೆತನದ ಪೊಕೊ ಮತ್ತು ರೆಡ್‌ಮಿ ಕಂಪೆನಿಗಳು 2026 ರ ಆರಂಭದಲ್ಲಿ ಹಲವಾರು ಸ್ಮಾರ್ಟ್‌ಫೋನ್‌ಗಳ ಬಿಡುಗಡೆಯನ್ನು ಸೂಚಿಸಿವೆ. ಬಹುಶಃ ಮುಂದಿನ ವರ್ಷದಲ್ಲಿ ಶಿಯೋಮಿ ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸುವ ಗುರಿಯನ್ನು ಹೊಂದಿರಬಹುದು. ಈ ಕುರಿತಂತೆ ನಿಮ್ಮ ಅನಿಸಿಕೆ ಏನು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








