Home
ಮೊಬೈಲ್

Poco X5 Pro vs Redmi Note 13 Pro: ಬೆಲೆ ಎಷ್ಟು? ಫೀಚರ್ಸ್ ಹೇಗಿವೆ ಗೊತ್ತಾ?

ಭಾರತದಲ್ಲಿ ಬಜೆಟ್ ಬೆಲೆಗೆ ವಿವಿಧ 5G ಸ್ಮಾರ್ಟ್‌ಫೋನ್‌​ಗಳು ಲಭ್ಯವಿದೆ. ಅದುಕೂಡ ಅತ್ಯುತ್ತಮ ಬ್ರಾಂಡ್‌ಗಳಿಂದ ಬಂದ ಫೋನ್‌ಗಳೇ ಆಗಿದೆ. ಪ್ರಸಿದ್ಧ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಾದ ರೆಡ್ಮಿ Redmi Note 13 5G ಮತ್ತು ಪೋಕೋ ಕಂಪನಿಯು POCO X5 Pro 5G ಉನ್ನತ ದರ್ಜೆಯ ಮೊಬೈಲ್‌ಗಳನ್ನು ಕೈಗೆಟುಕುವ ಬೆಲೆಯಲ್ಲಿ ಪರಿಚಯಿಸಿವೆ. ಈ ಮೊಬೈಲ್‌ಗಳು ಅತ್ಯಾಕರ್ಷಕ ಫೀಚರ್ಸ್ ಮತ್ತು ವಿನ್ಯಾಸದೊಂದಿಗೆ ಮೊಬೈಲ್‌ ಪ್ರಿಯರನ್ನು ಆಕರ್ಷಿಸುತ್ತಿವೆ. ಡಿಸ್ ಪ್ಲೇ, ಪ್ರೊಸೆಸರ್, RAM, ಕ್ಯಾಮೆರಾ ಮತ್ತು ಬ್ಯಾಟರಿ ಬ್ಯಾಕಪ್ ಎಲ್ಲವೂ ಇದರಲ್ಲಿದೆ. ಹಾಗಿದ್ರೆ, ಈ ಎರಡರಲ್ಲಿ ಯಾವುದು ಬೆಸ್ಟ್ ಎನ್ನುವುದನ್ನು ನೋಡೋಣ ಬನ್ನಿ.

ರೆಡ್ಮಿ ಕಂಪನಿಯು Redmi Note 13 5G ಅನ್ನು ಲೇಟೆಸ್ಟ್ ಫೀಚರ್‌ಗಳೊಂದಿಗೆ ಬಜೆಟ್‌ ಬೆಲೆಯಲ್ಲಿ ಪರಿಚಯಿಸಿದೆ. ಪೊಕೋ ಕಂಪನಿಯು ಸಹ POCO X5 Pro 5G ಅನ್ನು ಬಿಡುಗಡೆ ಮಾಡಿದೆ. ನೀವೇನಾದರೂ ಈ ಎರಡು ಮೊಬೈಲ್‌ಗಳಲ್ಲಿ ಒಂದನ್ನು ಖರೀದಿಸಲು ಬಯಸಿದರೆ, ನಾವು ನಿಮಗೆ ಎರಡೂ ಸ್ಮಾರ್ಟ್‌ಫೋನ್‌ಗಳ ಫೀಚರ್‌ಗಳ ಬಗ್ಗೆ ತಿಳಿಸಿಕೊಡುತ್ತೇವೆ. ಇವೆರಡು ಫೋನ್‌ಗಳ ಡಿಸ್ಪ್ಲೇ, ಕ್ಯಾಮೆರಾ, ಬ್ಯಾಟರಿ, ಹಾರ್ಡ್‌ವೇರ್‌, ಸೆನ್ಸರ್, ಬೆಲೆ ಮತ್ತು ಲಭ್ಯತೆ ಬಗ್ಗೆ ತಿಳಿಯಲು ಮುಂದೆ ಓದಿ.

Poco X5 Pro vs Redmi Note 13 Pro: ಬೆಲೆ ಎಷ್ಟು? ಫೀಚರ್ಸ್ ಹೇಗಿವೆ ಗೊತ್ತಾ?

ಈ ಮೊಬೈಲ್‌ಗಳ ಬೆಲೆ ಎಷ್ಟು ಗೊತ್ತಾ?

ಮೊದಲಿಗೆ Redmi Note 13 5G ಮತ್ತು POCO X5 Pro 5G ಸ್ಮಾರ್ಟ್‌ಫೋನ್‌ಗಳ ಬೆಲೆ ಮತ್ತು ಲಭ್ಯತೆ ಬಗ್ಗೆ ತಿಳಿಯೋಣ. Redmi Note 13 5G ಮೂರು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಇದರ ಫಸ್ಟ್ ಸೇಲ್ ಭಾರತದಲ್ಲಿ ಜನವರಿ 2024ರಲ್ಲಿ ಅಮೆಜಾನ್ ಇಂಡಿಯಾದ ಮೂಲಕ ಆರಂಭವಾಯಿತು. POCO X5 Pro 5G ಕೇವಲ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದ್ದು, ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಬಹುದು. Redmi Note 13 Pro ಬೆಲೆ 22,999 ಮತ್ತು Poco X5 Pro ಬೆಲೆ 17,790 ರೂ. ಇದೆ.

ಈ ಮೊಬೈಲ್‌ನ ಡಿಸ್ಪ್ಲೇ ಬೆಸ್ಟ್!

ಈ ಸ್ಮಾರ್ಟ್‌ಫೋನ್‌ಗಳ ಡಿಸ್ಪ್ಲೇ ಬಗ್ಗೆ ನೋಡುವುದಾದರೆ, ಈ ಎರಡು ಫೋನ್‌ಗಳು ಡಿಸ್ಪ್ಲೇಯಲ್ಲಿ ಅಷ್ಟಾಗಿ ಯಾವುದೇ ವ್ಯತ್ಯಾಸಗಳನ್ನು ಹೊಂದಿಲ್ಲ. 6.67 ಇಂಚಿನ AMOLED ಡಿಸ್ಪ್ಲೇಯೊಂದಿಗೆ 120Hz ರಿಫ್ರೆಶ್ ರೇಟ್‌ನೊಂದಿಗೆ 1080 x 2400 ಪಿಕ್ಸೆಲ್ ರೆಸುಲ್ಯೂಷನ್ ಅನ್ನು ಹೊಂದಿದೆ. ಮೊಬೈಲ್‌ ಡಿಸ್ಪ್ಲೇ ಪ್ರೊಟೆಕ್ಷನ್‌ಗಾಗಿ Corning Gorilla Glass 5 ಅನ್ನು ನೀಡಲಾಗಿದೆ. ಡಿಸ್ಪ್ಲೇಯ ವೀಕ್ಷಣಾ ಅನುಭವವನ್ನು ಹೆಚ್ಚಿಸಲು ಇದರಲ್ಲಿ 395 ಪಿಪಿಐ ಪಿಕ್ಸೆಲ್ ಡೆನ್ಸಿಟಿಯನ್ನು ಈ ಮೊಬೈಲ್‌ಗಳು ಹೊಂದಿವೆ.

POCO X5 Pro ಮತ್ತು Redmi Note 13 ಪ್ರೊಸೆಸರ್ ಏನು?

ಈ ಸ್ಮಾರ್ಟ್‌ಫೋನ್‌ಗಳ ಹಾರ್ಡ್‌ವೇರ್‌ ಬಗ್ಗೆ ಹೇಳುವುದಾದರೆ, POCO X5 Pro 5G Qualcomm Snapdragon 778G 5G ಪ್ರೊಸೆಸರ್‌ ಹೊಂದಿದೆ. 6GB RAM ಮತ್ತು 128GB ಸ್ಟೋರೇಜ್‌ನೊಂದಿಗೆ ಆರಂಭವಾಗುವ ಈ ಮೊಬೈಲ್‌ ಆಂಡ್ರಾಯ್ಡ್ 13 ಮತ್ತು MIUI 14 ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದೆ. Redmi Note 13 5G Mediatek Dimensity 6080 ಪ್ರೊಸೆಸರ್‌ ಹೊಂದಿದೆ. 6GB RAM ಮತ್ತು 128GB ಸ್ಟೋರೇಜ್‌ನೊಂದಿಗೆ ಆರಂಭವಾಗುವ ಈ ಮೊಬೈಲ್‌ ಆಂಡ್ರಾಯ್ಡ್ 13 ಮತ್ತು MIUI 14 ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದೆ.

ಈ ಫೋನ್‌ಗಳ ಬ್ಯಾಟರಿ ಬ್ಯಾಕಪ್ ಹೇಗಿದೆ?

ಮೊಬೈಲ್ ಖರೀದಿಸುವಾಗ ನೀವು ಬ್ಯಾಟರಿ ಬಗ್ಗೆ ಹೆಚ್ಚು ಗಮನಹರಿಸಬೇಕು. POCO X5 Pro 5G ಮೊಬೈಲ್ 67W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡಲಿದ್ದು, 5000mAh ಬ್ಯಾಟರಿ ಬ್ಯಾಕಪ್ ಹೊಂದಿದೆ. Redmi Note 13 5G ಸ್ಮಾರ್ಟ್‌ಫೋನ್‌ 33W ಫಾಸ್ಟ್ ಚಾರ್ಜಿಂಗ್ ಜೊತೆಗೆ 5000mAh ಬ್ಯಾಟರಿ ಬ್ಯಾಕಪ್ ಹೊಂದಿರಲಿದೆ. ಇವೆರಡೂ ಸ್ಮಾರ್ಟ್‌ಫೋನ್‌ ಟೈಪ್ C ಚಾರ್ಜ್ ಪೋರ್ಟ್ ಅನ್ನು ಸಪೋರ್ಟ್ ಮಾಡುತ್ತವೆ. ಜೊತೆಗೆ, OTG ಅನ್ನು ಸಹ ಪಡೆಯಬಹುದು.

ಎರಡರಲ್ಲೂ ಒಂದೇ ಮಾದರಿಯ ಕ್ಯಾಮೆರಾ ಲೆನ್ಸ್

ಮೊಬೈಲ್‌ ಎಂದಾಕ್ಷಣ ನಾವು ಕಣ್ಣಾಯಿಸುವುದೇ ಕ್ಯಾಮೆರಾ ಕಡೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ಒಂದೇ ಮಾದರಿಯ ಲೆನ್ಸ್ ಹೊಂದಿವೆ. f/1.8 ಅಪರ್ಚರ್ನೊಂದಿಗೆ 108MP ಪ್ರೈಮರಿ ವೈಡ್ ಕ್ಯಾಮೆರಾವನ್ನು ಹೊಂದಿವೆ. ಎರಡನೇಯದು 8MP ಅಲ್ಟ್ರಾ ವೈಡ್ ಸೆನ್ಸರ್ f/2.2 ಅಪರ್ಚರ್ನೊಂದಿಗೆ ಬಂದಿದೆ. ಕೊನೆಯದಾಗಿ 2MP ಮ್ಯಾಕ್ರೋ ಸೆನ್ಸರ್ f/2.4 ಅಪರ್ಚರ್ನೊಂದಿಗೆ ಒಳಗೊಂಡಿವೆ. ಅಲ್ಲದೆ, ಎರಡು ಸ್ಮಾರ್ಟ್‌ಫೋನ್‌ಗಳಿಗೆ 16MP ವೈಡ್ f/2.4 ಅಪರ್ಚರ್ನೊಂದಿಗೆ ಸೆಲ್ಫಿ ಕ್ಯಾಮೆರಾವನ್ನು ಪಂಚ್ ಹೋಲ್ ಡಿಸ್ಪ್ಲೇಯಲ್ಲಿ ನೀಡಲಾಗಿದೆ.

ಒಟ್ಟಾರೆ, POCO X5 Pro ಮತ್ತು Redmi Note 13 ಸ್ಮಾರ್ಟ್‌ಫೋನ್‌ಗಳು ಮೇಲೆ ತಿಳಿಸಿರುವಂತೆ ವಿಭಿನ್ನವಾದ ಫೀಚರ್ಸ್‌ಗಳನ್ನು ಹೊಂದಿವೆ. ನಾವು ತಿಳಿಸಿರುವ ಮಾಹಿತಿಗಳೊಂದಿಗೆ ಎರಡೂ ಮೊಬೈಲ್‌ಗಳನ್ನು ಹೋಲಿಕೆ ಮಾಡಿ. ಫೀಚರ್‌ಗಳ ಆಧಾರದ ಮೇಲೆ ಯಾವ ಸ್ಮಾರ್ಟ್‌ಫೋನ್ ಬೆಸ್ಟ್‌ ಎನಿಸುತ್ತದೆ ನೋಡಿ. ಬಳಿಕ, ನಿಮ್ಮ ಬಜೆಟ್‌ ಲಭ್ಯತೆಯೊಂದಿಗೆ ಎರಡರಲ್ಲಿ ಒಂದು ಮೊಬೈಲ್‌ ಅನ್ನು ಕೊಂಡುಕೊಳ್ಳಬಹುದು.

Best Mobiles in India

English summary
Redmi Company in India has launched their Redmi Note 13 5G smartphone with latest features at an affordable price. At this price, Poco is already offering POCO X5 Pro 5G in India at affordable price
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+