Home
ಮೊಬೈಲ್

ಹೊಸ ವರ್ಷದ ಗಿಫ್ಟ್! ಭಾರತದಲ್ಲಿ POCO X7 ಸರಣಿ ಲಾಂಚ್; ಮಾರುಕಟ್ಟೆಗೆ ಬರ್ತಿವೆ 2 ಹೊಸ ಫೋನ್; ಬೆಲೆ, ವಿಶೇಷತೆಗಳೇನು?

ಪೊಕೊ ಕೊನೆಗೂ ತನ್ನ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದೆ. ಪೊಕೊ X7 (POCO X7) ಸರಣಿಯ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೊಷಿಸಿದೆ. ಹೌದು, ಈ ಸರಣಿಯಲ್ಲಿ ಎರಡು ಹೊಸ ಮೊಬೈಲ್‌ಗಳು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಅವುಗಳೇ ಪೊಕೊ X7 (Poco X7) ಮತ್ತು ಪೊಕೊ X7 ಪ್ರೊ (Poco X7 Pro) ಸ್ಮಾರ್ಟ್‌ಫೋನ್‌ಗಳು. ಕಂಪನಿಯು ಬಿಡುಗಡೆ ದಿನಾಂಕದ ಜೊತೆಗೆ, ಹೊಸ ಸರಣಿಯ ಪ್ರಮುಖ ವಿಶೇಷತೆಗಳನ್ನು ಬಹಿರಂಗಪಡಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಪೊಕೊ X7 ಸರಣಿಯನ್ನು ಭಾರತ ಸೇರಿದಂತೆ ಜಾಗತಿಕವಾಗಿ ಬಿಡುಗಡೆ ಮಾಡಲಾಗುತ್ತದೆ. ಈ ಹಿಂದೆ ಕಂಪನಿಯು ಪೊಕೊ X7 ನಿಯೋವನ್ನು ಮಾತ್ರ ಭಾರತದಲ್ಲಿ ಬಿಡುಗಡೆ ಮಾಡುತ್ತದೆ ಎಂದು ಹೇಳಲಾಗಿತ್ತು. ಆದರೆ, ಕಂಪನಿಯು ಹಾಗೆ ಮಾಡಲು ಹೋಗುತ್ತಿಲ್ಲ ಎಂದು ಪೊಕೊ ಇಂಡಿಯಾದ ಮುಖ್ಯಸ್ಥ ಹಿಮಾಂಶು ಟಂಡನ್ ದೃಢಪಡಿಸಿದ್ದಾರೆ. ಈ ಪೈಕಿ ಪೊಕೊ X7 5G ಫೋನ್ ಮೂರು ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ. ನೀವು ಹಸಿರು, ಬೆಳ್ಳಿ ಮತ್ತು ಕಪ್ಪು-ಹಳದಿ ಮಿಶ್ರಿತ ಬಣ್ಣದಲ್ಲಿ ಖರೀದಿಸಬಹುದು.

ಜ.9ಕ್ಕೆ POCO X7 ಸರಣಿ ಲಾಂಚ್; ಬಿಗ್ ಬ್ಯಾಟರಿ, ಬೃಹತ್ ಸ್ಟೋರೇಜ್‌; ಬೆಲೆ ನೋಡಿ

ಪೊಕೊ X7 ಸರಣಿಯ ಬಿಡುಗಡೆ ದಿನಾಂಕ

ನೀವು, ಹೊಸ ವರ್ಷಕ್ಕೆ ಹೊಸ ಫೋನ್‌ ಖರೀದಿಸಲು ಬಯಸಿದರೆ, ಪೊಕೊ X7 ಸರಣಿಯ ಉತ್ತಮ ಆಯ್ಕೆಯಾಗಿದೆ. ಈ ಮೊಬೈಲ್‌ಗಳನ್ನು ಮುಂದಿನ ವರ್ಷ, ಅಂದರೆ ಜನವರಿ 9 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ. ಕಂಪನಿಯು ಹೊಸ ಪೊಕೊ X7 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಮೂಲಕ ಸ್ಟ್ರೀಮ್ ಮಾಡುತ್ತದೆ. ಮುಂಬರುವ ಈ ಸ್ಮಾರ್ಟ್‌ಫೋನ್‌ಗಳು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಿರುತ್ತವೆ.

ಪೊಕೊ X7 5G ಬೆಲೆ ಎಷ್ಟು?

ಪೊಕೊ X7 5G ಫೋನನ್ನು ಪೊಕೊ X7 F6 ಫೋನಿನ ಉತ್ತರಾಧಿಕಾರಿಯಾಗಿ ಬಿಡುಗಡೆ ಮಾಡಲಾಗುತ್ತದೆ. ಪೊಕೊ X7 F6 ಮೊಬೈಲ್ ಈ ವರ್ಷದ ಮೇ ತಿಂಗಳಲ್ಲಿ ಲಾಂಚ್ ಆಗಿತ್ತು. ಇದರ ಬೆಲೆ 29,999 ರೂ. ಆಗಿದೆ. ಪೊಕೊ X7 5G ಅನ್ನು ಸಹ ಇದೇ ಬಜೆಟ್‌ನಲ್ಲಿ ಬರಲಿದೆ.

ಪೊಕೊ X7 ಸರಣಿಯ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಪೊಕೊ X7 ಮತ್ತು ಪೊಕೊ X7 ಪ್ರೊ ಸ್ಮಾರ್ಟ್‌ಫೋನ್‌ಗಳು 6.67 ಇಂಚಿನ ಓಎಲ್‌ಇಡಿ ಡಿಸ್ಪ್ಲೇ ಹೊಂದಿರುತ್ತವೆ. ಇದು 1.5K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದ ಬೆಂಬಲ ಪಡೆದಿರುತ್ತದೆ. ಈ ಡಿಸ್ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಹೊಂದಿರುತ್ತದೆ.

ಪ್ರೊಸೆಸರ್ ಸಾಮರ್ಥ್ಯ

ಪೊಕೊ X7 5G ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಅಲ್ಟ್ರಾ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಪೊಕೊ X7 ಪ್ರೊ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8400 ಅಲ್ಟ್ರಾ ಪ್ರೊಸೆಸರ್‌ ಹೊಂದಿರುತ್ತದೆ. ಈ ಸ್ಮಾರ್ಟ್‌ಫೋನ್ 12GB RAM ಮತ್ತು 512GB ಸ್ಟೋರೇಜ್‌ ಆಯ್ಕೆಯನ್ನು ಒಳಗೊಂಡಿರಲಿದೆ. ಈ ಸ್ಮಾರ್ಟ್‌ಫೋನ್‌ಗಳು ಇತ್ತೀಚಿನಆಂಡ್ರಾಯ್ಡ್‌ 15 ಓಎಸ್‌ನಲ್ಲಿ ಕೆಲಸ ಮಾಡುತ್ತವೆ.

ಜ.9ಕ್ಕೆ POCO X7 ಸರಣಿ ಲಾಂಚ್; ಬಿಗ್ ಬ್ಯಾಟರಿ, ಬೃಹತ್ ಸ್ಟೋರೇಜ್‌; ಬೆಲೆ ನೋಡಿ

ಕ್ಯಾಮೆರಾ ಸೆಟಪ್

ಪೊಕೊ X7 ಸರಣಿಯು ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಲಭ್ಯವಿರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇರುತ್ತದೆ. ವರದಿಯ ಪ್ರಕಾರ, ಪೊಕೊ X7 5G ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಈ ಫೋನಿನಲ್ಲಿ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 20 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿರುತ್ತದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಪೊಕೊ X7 5G ಮೊಬೈಲ್ 5110mAh ಸಾಮರ್ಥ್ಯ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ. ಆದರೆ, ಪೊಕೊ X7 ಪ್ರೊ ಮೊಬೈಲ್ 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿರುತ್ತದೆ. ಇದನ್ನು ಚಾರ್ಜ್ ಮಾಡಲು, 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ.

ಇತರೆ ವೈಶಿಷ್ಟ್ಯಗಳು

ಪೊಕೊ X7 5G ಸ್ಮಾರ್ಟ್‌ಫೋನ್ ಹಲವು ಎಐ (AI) ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಈ ಫೋನಿನಲ್ಲಿ ಎಐ ಇಮೇಜ್ ವಿಸ್ತರಣೆ, ಎಐ ಫಿಲ್ಮ್, ಎಐ ಎರೇಸ್ ಪ್ರೊ ಮತ್ತು ಇನ್ನಿತರ ಎಐ ಕ್ಯಾಮೆರಾ ವೈಶಿಷ್ಟ್ಯಗಳು ಲಭ್ಯವಿರುತ್ತವೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, ಬ್ಲೂಟೂತ್, ವೈ-ಫೈ ಮತ್ತು ಎನ್‌ಎಫ್‌ಸಿ ಸೇರಿದಂತೆ ಹಲವು ಆಯ್ಕೆಗಳನ್ನು ಒಳಗೊಂಡಿರುತ್ತದೆ.

Best Mobiles in India

English summary
Poco X7 series india launch date confirmed: Check expected specs, price here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+