ಭಾರತಕ್ಕೆ Poco X8 Pro ಆಗಮನ: BIS ಲಿಸ್ಟಿಂಗ್ ಮೂಲಕ ದೃಢಪಟ್ಟ ಸುಳಿವು!
ಭಾರತದಲ್ಲಿ Poco ತನ್ನ ಜನಪ್ರಿಯ X ಸರಣಿಯನ್ನು ಮತ್ತೊಮ್ಮೆ ವಿಸ್ತರಿಸುವುದು ಬಹುತೇಕ ಖಾತ್ರಿಯಾಗಿದೆ. Poco X ಸರಣಿಯ ಮುಂಬರುವ Poco X8 Pro ಸ್ಮಾರ್ಟ್‌ಫೋನ್ BIS (Bureau of Indian Standards) ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿದ್ದು, ಶೀಘ್ರವೇ ಈ ಪೋನ್ ಭಾರತದ ಮಾರುಕಟ್ಟೆಗೆ ಬರುತ್ತಿರುವುದು ಖಚಿತವಾಗಿದೆ. ಇನ್ನು ಈ ಮುಂಬರುವ ಫೋನ್ MediaTek Dimensity 8500 ಪ್ರೊಸೆಸರ್ ಹೊಂದಿರುವುದನ್ನು ಮತ್ತು 8,000mAh ಬ್ಯಾಟರಿ ಇರುವುದನ್ನು ನಿರೀಕ್ಷಿಸಲಿದೆ ಹಾಗಾದರೆ, ಮುಂಬರುವ Poco X8 Pro ಸ್ಮಾರ್ಟ್‌ಫೋನ್ ಹೇಗಿರಲಿದೆ ಎಂಬುದನ್ನು ನೋಡೋಣ ಬನ್ನಿ.
ಹೊಸ Poco ಫೋನ್ BIS ಪಟ್ಟಿಯಲ್ಲಿ
ಡಿಸೆಂಬರ್ 8ರಂದು BIS ಪೋರ್ಟಲ್‌ನಲ್ಲಿ 2511FPC34I ಎಂಬ ಮಾಡೆಲ್ ಸಂಖ್ಯೆಯ ಫೋನ್ ಪತ್ತೆಯಾಗಿದೆ. ಇದನ್ನೇ Poco X8 Pro ಯ ಭಾರತೀಯ ಆವೃತ್ತಿ ಎಂದು ತಂತ್ರಜ್ಞಾನ ವಲಯದಲ್ಲಿ ಊಹಿಸಲಾಗುತ್ತಿದೆ. ಪ್ರಸಿದ್ಧ ಟಿಪ್ಸ್‌ಟರ್ ಸುಧಾಂಶು ಅಂಭೋರೇ ಈ ಪಟ್ಟಿಯನ್ನು ಗುರುತಿಸಿದ್ದು, ಇದು Poco ಮುಂದಿನ ಲಾಂಚ್ ಬಗ್ಗೆ ಹೆಚ್ಚುವರಿ ಖಚಿತತೆ ನೀಡುತ್ತದೆ. BIS ನೋಂದಣಿಯಲ್ಲಿ ಯಾವುದೇ ಫೀಚರ್ಸ್ ಕಾಣಿಸದಿದ್ದರೂ, ಫೋನ್ ಮಾರುಕಟ್ಟೆಗೆ ಬರಲು ಹೆಚ್ಚು ಸಮಯ ಬಾಕಿಯಿಲ್ಲ ಎಂಬುದು ಸ್ಪಷ್ಟ.

Poco X8 Pro: ನಿರೀಕ್ಷಿಸಲಾಗುತ್ತಿರುವ ವೈಶಿಷ್ಟ್ಯಗಳು
ಭಾರತದಲ್ಲಿ Poco X8 Pro ಅನ್ನು ಚೀನಾ ಮಾರುಕಟ್ಟೆಗೆ ಬರುವ Redmi Turbo 5 ರ ಗ್ಲೋಬಲ್/ಇಂಡಿಯಾ ರೀಬ್ರ್ಯಾಂಡ್ ಆಗಿ ಪರಿಚಯಿಸುವ ಸಾಧ್ಯತೆ ಇದೆ. Redmi Turbo 5 ಬಗ್ಗೆ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ, Poco X8 Pro ಕೂಡ ಕೆಳಗಿನ ರೀತಿಯ ಸಾಮರ್ಥ್ಯಗಳನ್ನು ಹೊಂದಿರಬಹುದು.
- ಪ್ರೊಸೆಸರ್: MediaTek Dimensity 8500
- ಡಿಸ್‌ಪ್ಲೇ: 6.67-ಇಂಚಿನ AMOLED LTPS ಪರದೆ, 120Hz ರಿಫ್ರೆಶ್ ರೇಟ್, 1.5K ರೆಸಲ್ಯೂಶನ್
- ರಚನೆ: ಸ್ಲೀಕ್ ಮೆಟಲ್ ಫ್ರೇಮ್ + IP68 ಧೂಳು/ನೀರು ರಕ್ಷಣಾ ಮಾನದಂಡ
- ಬ್ಯಾಟರಿ: ದೊಡ್ಡ 8,000mAh ಬ್ಯಾಟರಿ ಮತ್ತು 100W ಫಾಸ್ಟ್ ಚಾರ್ಜಿಂಗ್
- ಕ್ಯಾಮೆರಾ: 50MP ಮುಖ್ಯ ಕ್ಯಾಮೆರಾ + 8MP ಅಲ್ಟ್ರಾ ವೈಡ್ ಲೆನ್ಸ್ ಇರುವ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್
- ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್: ಅಲ್ಟ್ರಾಸಾನಿಕ್ ತಂತ್ರಜ್ಞಾನ
Redmi Turbo 5 ಚೀನಾದಲ್ಲಿ ಮುಂದಿನ ವರ್ಷ ಆರಂಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, Poco X8 Pro ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅದರ ನಂತರ ಬರುವ ಸಾಧ್ಯತೆ ಇದೆ.
ಭಾರತದಲ್ಲಿ ನಿರೀಕ್ಷಿತ ಬೆಲೆ ಮತ್ತು X ಸರಣಿಯ ಹೋಲಿಕೆ
Poco X8 Pro ಭಾರತದಲ್ಲಿ ₹30,000 ಕ್ಕಿಂತ ಮೇಲಿನ ಬೆಲೆಯಲ್ಲಿ ಬರುತ್ತದೆ ಎಂದು ವರದಿಗಳು ಸೂಚಿಸುತ್ತವೆ. ಈ ವರ್ಷದ ಆರಂಭದಲ್ಲಿ Poco X7 Pro ಅನ್ನು ₹27,999 ಕ್ಕೆ ಲಾಂಚ್ ಮಾಡಲಾಗಿತ್ತು. ಇದೀಗ ಹೊಸ Poco X8 Pro ಹಿಂದಿನ ಮಾದರಿಗಿಂತ ಉತ್ತಮ ಪ್ರೊಸೆಸರ್, ಬಲವಾದ ಬ್ಯಾಟರಿ, ಹೆಚ್ಚಿನ ಚಾರ್ಜಿಂಗ್ ವೇಗ ಹಾಗೂ ಪ್ರೀಮಿಯಂ ರಚನೆ ನೀಡುವ ನಿರೀಕ್ಷೆ ಇದೆ. ಮಧ್ಯ-ಪ್ರೀಮಿಯಂ ಸೆಗ್ಮೆಂಟ್‌ನಲ್ಲಿ ಇದು ಗಮನ ಸೆಳೆಯುವ ಸ್ಮಾರ್ಟ್‌ಫೋನ್ ಆಗಲಿದೆ.
ಗೇಮಿಂಗ್ ಪ್ರಿರಿಗಂತೂ Poco X8 Pro ಭಾರತೀಯ ಮಾರುಕಟ್ಟೆಗೆ ಬರಲಿರುವ ಅತ್ಯಂತ ನಿರೀಕ್ಷಿತ ಫೋನ್‌ಗಳಲ್ಲಿ ಒಂದಾಗಿದೆ. ದೊಡ್ಡ ಬ್ಯಾಟರಿ, ಹೆಚ್ಚು ದಕ್ಷತೆ ಇರುವ MediaTek ಚಿಪ್‌ಸೆಟ್, IP68 ರಕ್ಷಣೆ ಮತ್ತು 100W ಚಾರ್ಜಿಂಗ್ ಈ ಎಲ್ಲಾ ವೈಶಿಷ್ಟ್ಯಗಳು Poco ಯ ಈ ಹೊಸ ಮಾದರಿಯನ್ನು ಸ್ಪರ್ಧಾತ್ಮಕ ಬೆಲೆಯಲ್ಲಿಯೇ ಪ್ರೀಮಿಯಂ ಅನುಭವ ನೀಡುವ ಸಾಧನವಾಗಿಸುತ್ತವೆ. Poco ಅಧಿಕೃತ ಘೋಷಣೆ ಹೊರಬರುವವರೆಗೆ, BIS ಪಟ್ಟಿಯ ಈ ಹೊಸ ಮಾಹಿತಿ Poco ಅಭಿಮಾನಿಗಳು ಮತ್ತು ಟೆಕ್ ಪ್ರೇಮಿಗಳಿಗೆ ಉತ್ಸಾಹ ಮೂಡಿಸಿದೆ ಎನ್ನಬಹುದು.


Click it and Unblock the Notifications








