Home
ಮೊಬೈಲ್

ಗೀಕ್‌ಬೆಂಚ್‌ನಲ್ಲಿ ಕಾಣಿಸಿತು Poco X8 Pro: ಲಾಂಚ್‌ಗೆ ಮುನ್ನ ಸ್ಪೆಕ್ಸ್ ಲೀಕ್!

ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗೆ ಶೀಘ್ರದಲ್ಲೇ ಮಿಡ್‌-ರೇಂಜ್ Poco X8 Pro ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆ ಇದೆ. ಕಳೆದ ವರ್ಷದ ಜನಪ್ರಿಯ Poco X7 Pro ಫೋನ್‌ಗೆ ಉತ್ತರಾಧಿಕಾರಿಯಾಗಿ ಬರುತ್ತಿರುವ ಹೊಸ Poco X8 Pro ಸ್ಮಾರ್ಟ್‌ಫೋನ್ ಬಿಡುಗಡೆಗೆ ಮುನ್ನವೇ ಗೀಕ್‌ಬೆಂಚ್‌ನಲ್ಲಿ ಕಾಣಿಸಿಕೊಂಡಿದ್ದು, ಅದರ ಕಾರ್ಯಕ್ಷಮತೆ ಮತ್ತು ಪ್ರಮುಖ ಸ್ಪೆಕ್ಸ್ ಬಗ್ಗೆ ಮೊದಲ ಸುಳಿವು ನೀಡಿದೆ. ಈ ಫೋನ್ ಗೇಮಿಂಗ್ ಹಾಗೂ ಹೈ-ಪರ್ಫಾರ್ಮೆನ್ಸ್ ಬಳಕೆದಾರರನ್ನು ಗುರಿಯಾಗಿಸಿಕೊಳ್ಳುವ ಸಾಧ್ಯತೆ ಇದೆ.

ಗೀಕ್‌ಬೆಂಚ್ ಪಟ್ಟಿಯಲ್ಲಿ "Xiaomi 2511FPC34G" ಮಾದರಿ ಸಂಖ್ಯೆಯೊಂದಿಗೆ ಕಂಡುಬಂದಿರುವ ಈ ಸಾಧನ, ಗ್ಲೋಬಲ್ ವೇರಿಯಂಟ್ ಆಗಿ ಬರುತ್ತಿರುವ Poco X8 Pro ಸ್ಮಾರ್ಟ್‌ಫೋನ್ ಎಂದು ಊಹಿಸಲಾಗಿದೆ. ಗೀಕ್‌ಬೆಂಚ್ ಪರಿಕ್ಷಾ ಫಲಿತಾಂಶಗಳ ಪ್ರಕಾರ, ಈ ಸಾಧನವು ಸಿಂಗಲ್-ಕೋರ್ ಪರೀಕ್ಷೆಯಲ್ಲಿ 1,708 ಅಂಕಗಳು ಹಾಗೂ ಮಲ್ಟಿ-ಕೋರ್ ಪರೀಕ್ಷೆಯಲ್ಲಿ 6,297 ಅಂಕಗಳನ್ನು ಪಡೆದಿದೆ. ಈ ಅಂಕೆಗಳು Poco X8 Pro ಸ್ಮಾರ್ಟ್‌ಫೋನ್ ಮಧ್ಯಮ-ಪ್ರೀಮಿಯಂ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆಯನ್ನು ಸೂಚಿಸುತ್ತವೆ.

ಪಟ್ಟಿಯಲ್ಲಿರುವ ಪ್ರೊಸೆಸರ್ ವಿವರಗಳು ವಿಶೇಷ ಗಮನ ಸೆಳೆಯುತ್ತಿವೆ. ನಾಲ್ಕು ಕೋರ್‌ಗಳು 2.20GHz, ಮೂರು ಕೋರ್‌ಗಳು 3.20GHz ಮತ್ತು ಒಂದು ಪ್ರೈಮ್ ಕೋರ್ 3.40GHz ವೇಗದಲ್ಲಿ ಕಾರ್ಯನಿರ್ವಹಿಸುವ ಆಕ್ಟಾ-ಕೋರ್ ಚಿಪ್ ಬಳಸಲಾಗಿರುವ ಸೂಚನೆ ಇದೆ. Mali-G720 MC8 GPU ಉಲ್ಲೇಖಗೊಂಡಿರುವುದರಿಂದ, ಇದರಲ್ಲಿ MediaTek Dimensity 8500 Ultra ಚಿಪ್‌ಸೆಟ್ ಇರಬಹುದು ಎಂಬ ಮಾತು ಕೇಳಿಬರುತ್ತಿದೆ. ಲೀಕ್ ಮಾಹಿತಿ ಪ್ರಕಾರ, 12GB RAM ಹೊಂದಿರುವ ಪ್ರೋಟೋಟೈಪ್ ಮಾದರಿ ಆಧಾರಿತ HyperOS 3 ಇಂಟರ್ಫೇಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಗೀಕ್‌ಬೆಂಚ್‌ನಲ್ಲಿ ಕಾಣಿಸಿತು Poco X8 Pro: ಲಾಂಚ್‌ಗೆ ಮುನ್ನ ಸ್ಪೆಕ್ಸ್ ಲೀಕ್!

ಯುರೋಪ್ ಮಾರುಕಟ್ಟೆಗಾಗಿ ನಿರೀಕ್ಷಿಸಲಾದ ಬೆಲೆ ವಿವರಗಳ ಪ್ರಕಾರ, 8GB + 256GB ಮಾದರಿಯ ಆರಂಭಿಕ ಬೆಲೆ EUR 399 (ಸುಮಾರು ರೂ. 43,000) ಇರಬಹುದು. 8GB + 512GB ಮತ್ತು 12GB + 512GB ಆಯ್ಕೆಗಳು ಕ್ರಮವಾಗಿ EUR 449 (ಸುಮಾರು ರೂ. 48,000) ಹಾಗೂ EUR 479 (ಸುಮಾರು ರೂ. 51,000) ದಲ್ಲಿ ಲಭ್ಯವಾಗುವ ಸಾಧ್ಯತೆ ಇದೆ. ಕಪ್ಪು, ಬಿಳಿ ಮತ್ತು ಹಸಿರು ಬಣ್ಣಗಳಲ್ಲಿ ಈ ಫೋನ್ ಪರಿಚಯವಾಗಬಹುದು. ಭಾರತದಲ್ಲಿ ಬಿಡುಗಡೆಯ ದಿನಾಂಕ ಹಾಗೂ ಬೆಲೆ ಕುರಿತು ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಇನ್ನೊಂದು ಪ್ರಮುಖ ಅಂಶವೆಂದರೆ, ಈ ಫೋನ್ ಅನ್ನು ಚೀನಾದಲ್ಲಿ ಇತ್ತೀಚೆಗೆ ಬಿಡುಗಡೆಯಾದ Redmi Turbo 5 ಮಾದರಿಯ ರೀಬ್ರ್ಯಾಂಡ್ ಆವೃತ್ತಿಯಾಗಿರಬಹುದು ಎಂಬ ಮಾಹಿತಿ. ಆ ಸಾಧನದಲ್ಲಿ 6.59 ಇಂಚಿನ AMOLED ಡಿಸ್ಪ್ಲೇ, 50MP ಡ್ಯುಯಲ್ ರಿಯರ್ ಕ್ಯಾಮೆರಾ (8MP ಅಲ್ಟ್ರಾವೈಡ್), 20MP ಸೆಲ್ಫಿ ಕ್ಯಾಮೆರಾ ಮತ್ತು 7,560mAh ದೊಡ್ಡ ಬ್ಯಾಟರಿ ನೀಡಲಾಗಿದೆ. ಜೊತೆಗೆ 100W ವೇಗದ ಚಾರ್ಜಿಂಗ್ ಹಾಗೂ 27W ರಿವರ್ಸ್ ಚಾರ್ಜಿಂಗ್ ಬೆಂಬಲವೂ ಇದೆ. ಇದರಿಂದ ಮಿಡ್‌-ರೇಂಜ್ ವಿಭಾಗದಲ್ಲಿ ಹೊಸ ಸ್ಪರ್ಧಿಯಾಗುವ ನಿರೀಕ್ಷೆ ಮೂಡಿದೆ.

ಭಾರತದಲ್ಲಿ ಜನವರಿ 9, 2025 ರಂದು ಸ್ಟ್ಯಾಂಡರ್ಡ್ POCO X7 5G ಜೊತೆಗೆ POCO X7 Pro 5G ಸ್ಮಾರ್ಟ್‌ಫೋನ್ ಬಿಡುಗಡೆಯಾಗಿತ್ತು. ಇದು 6.67-ಇಂಚಿನ 1.5K AMOLED ಡಿಸ್ಪ್ಲೇ, ಮೀಡಿಯಾ ಟೆಕ್ ಡೈಮೆನ್ಸಿಟಿ 8400 ಅಲ್ಟ್ರಾ ಚಿಪ್‌ಸೆಟ್ ಮತ್ತು ದೊಡ್ಡ 6,550mAh ಬ್ಯಾಟರಿಯನ್ನು ಹೊಂದಿದೆ. ಇದೀಗ Poco X8 Pro ಮಧ್ಯಮ ಬೆಲೆಯ ವಿಭಾಗದಲ್ಲಿ ಶಕ್ತಿಶಾಲಿ ಆಯ್ಕೆಯಾಗುವ ಲಕ್ಷಣಗಳನ್ನು ತೋರಿಸುತ್ತಿದೆ. ಉತ್ತಮ ಪ್ರೊಸೆಸರ್, ಹೆಚ್ಚಿನ RAM ಆಯ್ಕೆಗಳು ಮತ್ತು ದೊಡ್ಡ ಬ್ಯಾಟರಿ ಸಾಮರ್ಥ್ಯ ಇದನ್ನು ಗೇಮಿಂಗ್ ಹಾಗೂ ಮಲ್ಟಿಟಾಸ್ಕಿಂಗ್ ಬಳಕೆದಾರರಿಗೆ ಆಕರ್ಷಕವಾಗಿಸಬಹುದು.

Best Mobiles in India

English summary
Poco X8 Pro has appeared on Geekbench with strong benchmark scores, hinting at a Dimensity 8500 Ultra chipset, 12GB RAM, and HyperOS 3 ahead of its global launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+