ಭಾರತಕ್ಕೆ ಬರುತ್ತಿದೆ Poco X8 Pro ಸರಣಿ: ಮಾರ್ಚ್ ಮಧ್ಯದಲ್ಲಿ ಲಾಂಚ್ ಸಾಧ್ಯತೆ!
ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ Poco ತನ್ನ ಹೊಸ ಇತ್ತೀಚಿನ X ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲು ಸಜ್ಜಾಗಿದೆ ಎನ್ನುವ ಸುಳಿವುಗಳು ಲಭ್ಯವಾಗಿವೆ. ಇತ್ತೀಚಿನ ಲೀಕ್ ವರದಿಗಳ ಪ್ರಕಾರ, ಕಂಪನಿಯ ಮುಂದಿನ ಪ್ರೀಮಿಯಂ ಮಧ್ಯಮ ವರ್ಗದ ಫೋನ್‌ಗಳಾದ Poco X8 Pro ಮತ್ತು Poco X8 Pro Max ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡುವ ನಿರೀಕ್ಷೆಯಿದ್ದು, ಮಾರ್ಚ್ ಮಧ್ಯಭಾಗದಲ್ಲಿ ಈ ಸಾಧನಗಳು ಮಾರುಕಟ್ಟೆ ಪ್ರವೇಶಿಸಬಹುದು ಎಂದು ಜನಪ್ರಿಯ ಟಿಪ್‌ಸ್ಟರ್ ಅಭಿಷೇಕ್ ಯಾದವ್ (@yabhishekhd) ಅವರು ಹೇಳಿದ್ದಾರೆ.
ಹೌದು, ಟಿಪ್‌ಸ್ಟರ್ ಅಭಿಷೇಕ್ ಯಾದವ್ (@yabhishekhd) ಅವರ X ಪೋಸ್ಟ್ ಪ್ರಕಾರ, Poco X8 Pro Max ಮಾರ್ಚ್ ಮಧ್ಯದ ವೇಳೆಗೆ ಭಾರತದಲ್ಲಿ ಬಿಡುಗಡೆಯಾಗಲಿದೆ. ಈ Pro Max ಮಾದರಿಯ ಪರೀಕ್ಷಾ ಯುನಿಟ್ ಸುಮಾರು 36 ಲಕ್ಷಕ್ಕಿಂತ ಹೆಚ್ಚು AnTuTu ಸ್ಕೋರ್ ಗಳಿಸಿದೆ ಎನ್ನಲಾಗುತ್ತಿದೆ. ಈ ಅಂಕಿ ಅಧಿಕೃತವಾಗಿ ದೃಢಪಟ್ಟಿಲ್ಲದಿದ್ದರೂ, ಇದು ಸಾಧನವು ಗೇಮಿಂಗ್ ಹಾಗೂ ಹೆವಿ-ಪರ್ಫಾರ್ಮೆನ್ಸ್ ಬಳಕೆಗಯ ಸಾಮರ್ಥ್ಯ ಹೊಂದಿರಬಹುದೆಂಬ ಸೂಚನೆಯನ್ನು ನೀಡುತ್ತದೆ. ಹೀಗಾಗಿ, "ಮಿಡ್ ರೇಂಜ್ ಫ್ಲ್ಯಾಗ್‌ಶಿಪ್ ವಿಭಾಗದಲ್ಲಿ ಈ ಫೋನ್ ಸ್ಪರ್ಧಿಸಬಹುದು.

ಇತ್ತೀಚಿನ TDRA ಪಟ್ಟಿಯು 2511FPC34G ಮತ್ತು 2602BPC18G ಮಾದರಿ ಸಂಖ್ಯೆಗಳು ಕಂಡುಬಂದದ್ದವು. ಈ 2511FPC34G ಮತ್ತು 2602BPC18G ಸಂಕ್ಯೆಗಳು ಕ್ರಮವಾಗಿ Poco X8 Pro ಮತ್ತು Poco X8 Pro Max ಹೆಸರಿನಲ್ಲಿ ಭಾರತದಲ್ಲಿ ಲಾಂಚ್ ಆಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಚೀನಾದಲ್ಲಿ ಇತ್ತೀಚೆಗೆ ಬಿಡುಗಡೆಯಾದ Redmi Turbo 5 ಮತ್ತು Redmi Turbo 5 Pro Max ಮಾದರಿಗಳ ಆಧಾರಿತ ಮರುಬ್ರ್ಯಾಂಡ್ ಆವೃತ್ತಿಗಳಾಗಿರಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ. ಆದರೆ ಕಂಪನಿಯಿಂದ ಅಧಿಕೃತ ಘೋಷಣೆ ಹೊರಬರುವವರೆಗೆ ಈ ಮಾಹಿತಿ ಊಹಾಪೋಹಗಳಷ್ಟೇ.
ಸೋರಿಕೆಯಾದ ಮಾಹಿತಿಗಳಿಂದ, Poco X8 Pro ಸರಣಿಯು ಆಧುನಿಕ ಮತ್ತು ಕ್ಲೀನ್ ಲುಕ್ ನೀಡುವ ಸಾಧ್ಯತೆ ಇದೆ. ಮ್ಯಾಟ್ ಫಿನಿಶ್ ಹಿಂಭಾಗ, ಸ್ವಲ್ಪ ವಕ್ರ ಅಂಚುಗಳು ಹಾಗೂ ಲಂಬ ವಿನ್ಯಾಸದ ಡ್ಯುಯಲ್ ಕ್ಯಾಮೆರಾ ಮೋಡ್ಯೂಲ್ ಗಮನ ಸೆಳೆಯಬಹುದು. ಸ್ಲಿಮ್ ಬೆಜೆಲ್‌ಗಳೊಂದಿಗೆ ಫ್ಲ್ಯಾಟ್ ಡಿಸ್‌ಪ್ಲೇ, ಮಧ್ಯಭಾಗದಲ್ಲಿ ಹೋಲ್-ಪಂಚ್ ಸೆಲ್ಫಿ ಕ್ಯಾಮೆರಾ ಮತ್ತು ವಿಶಿಷ್ಟ ಬಣ್ಣದ ಪವರ್ ಬಟನ್ ವಿನ್ಯಾಸವನ್ನು ಇನ್ನಷ್ಟು ಆಕರ್ಷಕಗೊಳಿಸಬಹುದು. Pro Max ಮಾದರಿಯಲ್ಲಿ ಸ್ವಲ್ಪ ದೊಡ್ಡ ಕ್ಯಾಮೆರಾ ರಿಂಗ್‌ಗಳು ಕಾಣಿಸಿಕೊಳ್ಳಬಹುದಾದ್ದರಿಂದ ಕ್ಯಾಮೆರಾ ಹಾರ್ಡ್‌ವೇರ್ ಸುಧಾರಣೆ ನಿರೀಕ್ಷಿಸಲಾಗಿದೆ.
ಇನ್ನು ವೈಶಿಷ್ಟ್ಯಗಳ ಕುರಿತು ಮಾತನಾಡುವುದಾದರೆ, Poco X8 Pro ನಲ್ಲಿ 6.59 ಇಂಚಿನ 1.5K OLED ಡಿಸ್‌ಪ್ಲೇ ಮತ್ತು 120Hz ರಿಫ್ರೆಶ್ ರೇಟ್ ಇರಬಹುದೆಂದು ಹೇಳಲಾಗಿದೆ. ಇದು MediaTek Dimensity 8500 Ultra ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಬಹುದು. 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್, 20 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹಾಗೂ 6,500mAh ಬ್ಯಾಟರಿ 100W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರಬಹುದು ಎಂಬ ನಿರೀಕ್ಷೆ ಇದೆ.
ಇನ್ನೊಂದೆಡೆ, Poco X8 Pro Max ನಲ್ಲಿ 6.83 ಇಂಚಿನ ದೊಡ್ಡ 1.5K OLED ಡಿಸ್‌ಪ್ಲೇ ಮತ್ತು ಹೆಚ್ಚು ಸಾಮರ್ಥ್ಯದ Dimensity 9500s ಚಿಪ್‌ಸೆಟ್ ಇರಬಹುದೆಂದು ಹೇಳಲಾಗಿದೆ. 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ (OIS ಬೆಂಬಲದೊಂದಿಗೆ), 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು ಸುಮಾರು 8,500mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಇದರ ಪ್ರಮುಖ ಹೈಲೈಟ್ ಆಗಬಹುದು. ದೀರ್ಘಕಾಲ ಬ್ಯಾಟರಿ ಬ್ಯಾಕಪ್ ಬಯಸುವ ಬಳಕೆದಾರರಿಗೆ ಇದು ಆಕರ್ಷಕ ಆಯ್ಕೆಯಾಗುವ ಸಾಧ್ಯತೆ ಇದೆ.
ಒಟ್ಟಾರೆಯಾಗಿ, Poco X8 Pro ಸರಣಿ ಭಾರತದಲ್ಲಿ ಮಧ್ಯಮ ವರ್ಗದ ಸ್ಮಾರ್ಟ್‌ಫೋನ್ ಸೆಗ್ಮೆಂಟ್‌ನಲ್ಲಿ ಸ್ಪರ್ಧೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಸಾಧ್ಯತೆ ಇದೆ. ಅಧಿಕೃತ ಬಿಡುಗಡೆ ದಿನಾಂಕ ಮತ್ತು ಬೆಲೆ ವಿವರಗಳು ಹೊರಬಂದ ಬಳಿಕವೇ ಸಂಪೂರ್ಣ ಚಿತ್ರ ಸ್ಪಷ್ಟವಾಗಲಿದೆ. ಹೊಸ ಫೀಚರ್‌ಗಳು, ಶಕ್ತಿಶಾಲಿ ಪ್ರೊಸೆಸರ್ ಮತ್ತು ದೊಡ್ಡ ಬ್ಯಾಟರಿ ನಿರೀಕ್ಷೆಯೊಂದಿಗೆ ಟೆಕ್ ಪ್ರಿಯರು ಈ ಸರಣಿಯತ್ತ ಕಣ್ಣಿಟ್ಟಿದ್ದಾರೆ. ನೀವು ಕೂಡ ಹೊಸ ಪ್ರೀಮಿಯಂ ಸ್ಮಾರ್ಟ್‌ಫೋನ್ ಒಂದನ್ನು ಖರೀದಿಸಲು ಇಚ್ಚಿಸಿದ್ದರೆ Poco X8 Pro ಸರಣಿ ಆಗಮನವನ್ನು ಎದುರುನೋಡಬಹುದು.


Click it and Unblock the Notifications