ಮೊಬೈಲಿನಿಂದ ಪಡ್ಡೆಗಳು ಮಾಡುವ ತರ್ಲೆಗಳು

Posted By: Varun
ಮೊಬೈಲಿನಿಂದ ಪಡ್ಡೆಗಳು ಮಾಡುವ ತರ್ಲೆಗಳು

ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಕೈಯಲ್ಲಿ ಒಂದು ಮೊಬೈಲ್ ಇರಲೇಬೇಕು. ಅಷ್ಟರ ಮಟ್ಟಿಗೆ ಮೊಬೈಲ್ ಅನ್ನೋದು ನಮ್ಮ ಜೀವನದಲ್ಲಿನ ಅತ್ಯಾವಶ್ಯಕ ವಸ್ತುವಾಗಿ ಬಿಟ್ಟಿದೆ.

ಇನ್ನು ಕಾಲೇಜು ಹುಡುಗರ ವಿಷಯಕ್ಕೆ ಬಂದರಂತೂ ಮೊಬೈಲ್ ಅನ್ನೋದು ಆಟದ ವಸ್ತುವಾಗಿಬಿಟ್ಟಿದೆ. ತಲೆಹರಟೆ ಮಾಡಲು ಮೊಬೈಲ್ ಫೋನ್ ಗಿಂತಾ ಒಳ್ಳೆ ಸಾಧನ ಇಲ್ಲ. ಕೆಲವು ಸಲಿ ಅದು ಅತಿರೇಕಕ್ಕೆ ಹೋಗಿ ಬೇರೆಯವರಿಗೂ ತೊಂದರೆ ಆಗುವ ಸಾಧ್ಯತೆ ಇದೆ. ನಾವೂ ಒಂದು ಕಾಲದಲ್ಲಿ ಮೊಬೈಲ್ ಬಂದ ಹೊಸತರಲ್ಲಿ ಈ ತರಲೆಗಳನ್ನೂ ಮಾಡೇ ಇರುತ್ತೀವಿ. ಈಗ ಸ್ವಲ್ಪ ಡೀಸೆಂಟ್ ಆಗಿರೋದ್ರಿಂದ ಕೆಲವೊಂದನ್ನು ಮಾಡಕ್ಕೆ ಆಗಲ್ಲ. ಆದರೂ ಒಂದು ಸರಿ ಮೊಬೈಲ್ ನಿಂದ ಮಾಡಬಹುದಾದ ತರಲೆಗಳನ್ನು ಒಮ್ಮೆ ಓದಿದರೆ ಸಣ್ಣಗೆ ನಕ್ಕಿ ಖುಷಿ ಪಡಬಹುದು.

ಇಲ್ಲಿದೆ ನೋಡಿ ಮೊಬೈಲ್ ನಿಂದ ಮಾಡಬಹುದಾದ ತರಲೆಗಳು.

1) ಕಿವಿಗೆ ಬ್ಲೂಟೂತ್ ಸಾಧನ ಹಾಕಿಕೊಂಡು ಪರೀಕ್ಷೆಯಲ್ಲಿ ಕಾಪಿ ಹೊಡೆಯುವುದು (ಮುನ್ನಾಭಾಯಿ MBBS ಚಿತ್ರದಲ್ಲಿ ಸಂಜಯ್ ದತ್ ಕಾಪಿ ಹೊಡೆಯೋ ಸೀನ್ ನೋಡಿದ್ದೀರ ಅಲ್ವಾ)

2) ಒಂದು ಕೈಯಲ್ಲಿ ಗಾಡಿ ಓಡಿಸುತ್ತಾ, ಹೆಲ್ಮೆಟ್ ಒಳಗೆ ಮೊಬೈಲ್ ಸಿಕ್ಕಿಸಿಕೊಂಡೇ ಮಾತಾಡುತ್ತಾ ಗಾಡಿ ಓಡಿಸುವುದು.

3) ರೋಡಿನಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಎದುರುಗಡೆ ಯಾವುದಾದರೂ ಹುಡುಗಿ ನಡೆದುಕೊಂಡು ಬರುತ್ತಿದ್ದರೆ ಅವಳಿಗೆ ಗೊತ್ತಾಗುವಂತೆ ಮೊಬೈಲ್ ತೆಗೆದು ಅವಳ ಫೋಟೋ ತೆಗೆಯುವಂತೆ ಮಾಡಿ ಮಜಾ ತೆಗೆದುಕೊಳ್ಳುವುದು.

4) ಕ್ಲಾಸ್ ಒಳಗೆ ಇದ್ದರೆ ಪೋಲಿ ಚಿತ್ರಗಳನ್ನು ನೋಡುವುದು.

5) ಫ್ರೆಂಡ್ ನ ಮೊಬೈಲ್ ಇಸ್ಕೊಂಡು ಕಸ್ಟಮರ್ ಕೇರ್ ಗೆ ಫೋನ್ ಮಾಡಿ ಹುಡುಗಿ ಫೋನ್ ಎತ್ತಿಕೊಂಡರೆ ಅವಳ ಜೊತೆ ತಲೆಹರಟೆ ಮಾಡುವುದು.

6) ತಂದೆ ತಾಯಿ ಏನಾದರೂ ಬೈತಾ ಇದ್ದರೆ ಇಯರ್ ಫೋನ್ ಹಾಕೊಂಡು, ಇವ್ರು ಬೈತಾ ಇರೋದು ನಮಗೆ ಅಲ್ವೇ ಅಲ್ಲ ಅನ್ನ ಅನ್ಕೊಂಡು ಹಾಡನ್ನ್ ಎಂಜಾಯ್ ಮಾಡೋದು.

7) ಚೆನ್ನಾಗಿರುವ ಹುಡುಗಿಯರ ನಂಬರ್ ಹೆಂಗಾದ್ರೂ ಇಸ್ಕೊಂಡು ಮಿಸ್ಡ್ ಕಾಲ್ ಕೊಡೋದು.

8 ) ಮೊಬೈಲ್ ಫೋನ್ ನ ಕ್ಯಾಮರಾ ಇಟ್ಕೊಂಡು ವಿಚಿತ್ರ ಭಂಗಿಗಳಲ್ಲಿ ತಮ್ಮದೇ ಫೋಟೋ ತೆಗೆಯೋದು.

9) ಮತ್ತೊಬ್ಬರ ಫೋನ್ ಇಸ್ಕೊಂಡು ಆಗದೆ ಇರೋರಿಗೆ ಬಾಯಿಗೆ ಬಂದಂತೆ ಬೈದು ಫೋನ್ ಇಟ್ಟುಬಿಡೋದು.

10) ಯಾವುದೋ ನಂಬರ್ ಒತ್ತಿ ಮಿಸ್ಡ್ ಕಾಲ್ ಕೊಟ್ಟು, ಮತ್ತೆ ಅವರೇನಾದರೂ ವಾಪಸ್ ಫೋನ್ ಮಾಡಿದರೆ ನೀವ್ಯಾರು ಅಂತ ಕೇಳೋದು.

 

ಇಷ್ಟೆಲ್ಲಾ ಓದಿದ ಮೇಲೆ ನಿಮಗೂ ಯಾವುದಾದರೂ ತರ್ಲೆ ಐಡಿಯಾ ಬಂದ್ರೆ ನಮಗೂ ತಿಳಿಸಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot