ಒನ್‌ಪ್ಲಸ್‌ 6T ಪ್ರೀ ಬುಕ್‌ ಆರಂಭ..! ಹೊಸ ಫ್ಲಾಗ್‌ಶಿಪ್‌ ಖರೀದಿಯಲ್ಲಿ ನೀವೇ ಮೊದಲಿಗರಾಗಿ..!

|

ಪ್ರಮುಖ ಸ್ಮಾರ್ಟ್‌ಫೋನ್‌ ಉತ್ಪಾದನಾ ಕಂಪನಿಯಾಗಿರುವ ಒನ್‌ಪ್ಲಸ್‌ ಶೀಘ್ರದಲ್ಲಿಯೇ ಬಹು ನಿರೀಕ್ಷಿತ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ ಒನ್‌ಪ್ಲಸ್‌ 6T ಲಾಂಚ್‌ಗೆ ವೇದಿಕೆ ಸಿದ್ಧಗೊಳಿಸಿದೆ. ಅಕ್ಟೋಬರ್‌ 30ರಂದು ಭಾರತದಲ್ಲಿ ಲಾಂಚ್‌ ಆಗಲಿದ್ದು, ಭಾರತೀಯ ಮಾರುಕಟ್ಟೆ ಮತ್ತು ಜಾಗತಿಕ ಮೊಬೈಲ್‌ ಗ್ರಾಹಕರಿಗೆ ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿದ ಸ್ಮಾರ್ಟ್‌ಫೋನ್‌ನ್ನು ನೀಡಲು ಒನ್‌ಪ್ಲಸ್‌ ಕಂಪನಿ ಉತ್ಸುಕವಾಗಿದೆ.

ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಬಿಡುಗಡೆ ಸಮಯ ಹತ್ತಿರವಾಗುತ್ತಿದ್ದು, ಹೀಗಾಗಲೇ ಒನ್‌ಪ್ಲಸ್‌ ಹೈಪ್‌ ಸೃಷ್ಟಿಸಿ, ಜನರು ಕುತೂಹಲದಿಂದ ಕಾಯುವಂತೆ ಮಾಡಿದೆ. ಕಂಪೆನಿಯು ಇಷ್ಟೊಂದು ವಿಶಿಷ್ಟವಾಗಿ ಪ್ರಚಾರ ಮಾಡಿರುವ ಮೊದಲ ಡಿವೈಸ್‌ ಒನ್‌ಪ್ಲಸ್‌ 6T ಆಗಿದೆ. ಸ್ಮಾರ್ಟ್‌ಫೋನ್‌ ಪ್ರಿಯರಲ್ಲಿ ಕುತೂಹಲವನ್ನು ಕೆರಳಿಸಿದೆ.

ಒನ್‌ಪ್ಲಸ್‌ 6Tಯನ್ನು ನೀವೇ ಮೊದಲು ಪಡೆಯಿರಿ

ಒನ್‌ಪ್ಲಸ್‌ 6Tಯನ್ನು ನೀವೇ ಮೊದಲು ಪಡೆಯಿರಿ

ಒನ್‌ಪ್ಲಸ್‌ ಕಂಪನಿಯು ಮತ್ತೊಂದು ರೀತಿಯಲ್ಲಿ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನ್ನು ವೈಭವೀಕರಿಸಿದ್ದು, ಅಧಿಕೃತ ಬಿಡುಗಡೆಗೂ ಮುಂಚೆಯೇ ಅಭಿಮಾನಿಗಳು OnePlus 6Tಯನ್ನು ಪ್ರೀಬುಕ್‌ ಮಾಡಬಹುದೆಂದು ಕಂಪನಿ ಘೋಷಿಸಿದೆ. ಈ ಮೂಲಕ ನೀವು ಸ್ಮಾರ್ಟ್‌ಫೋನ್‌ನ್ನು ಮೊದಲು ಖರೀದಿಸುವುದು ಮಾತ್ರವಲ್ಲದೇ ಕೆಲವು ಹೆಚ್ಚುವರಿ ಪ್ರಯೋಜನಗಳನ್ನು ಪಡೆಯುತ್ತಿರಿ. ಅಮೆಜಾನ್‌ ಇಂಡಿಯಾ, ಕ್ರೋಮಾ ಔಟ್‌ಲೇಟ್‌ಗಳಲ್ಲಿ ಮತ್ತು ಒನ್‌ಪ್ಲಸ್‌ನ ಎಕ್ಸ್‌ಕ್ಲೂಸಿವ್‌ ಆಫ್‌ಲೈನ್‌ ಸ್ಟೋರ್‌ಗಳಲ್ಲಿ ಅಕ್ಟೋಬರ್‌ 9, ಮಧ್ಯಾಹ್ನ 12 ಗಂಟೆಯಿಂದ ಪ್ರೀ ಬುಕ್ಕಿಂಗ್‌ ಪ್ರಾರಂಭವಾಗಿದೆ.

ಅದಲ್ಲದೇ, ಮುಂದಿನ ಹಬ್ಬದ ಋತುವಿನಲ್ಲಿ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಖರೀದಿಸುವಾಗ ಗ್ರಾಹಕರು ಅನೇಕ ಕೊಡುಗೆಗಳನ್ನು ಪಡೆಯುತ್ತಾರೆ. ಒನ್‌ಪ್ಲಸ್‌ನ ಹೊಸ ಅತ್ಯಾಧುನಿಕ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ನ್ನು ಖರೀದಿಸಿದವರಲ್ಲಿ ನೀವು ಮೊದಲಿಗರಾಗಲು ಕೆಳಗಿನ ಸರಳ ಹಂತಗಳನ್ನು ಅನುಸರಿಸಿ.

ಪ್ರೀ ಬುಕ್ಕಿಂಗ್‌ ಆಫರ್‌ ಪಡೆಯುವುದು ಹೇಗೆ..?

ಪ್ರೀ ಬುಕ್ಕಿಂಗ್‌ ಆಫರ್‌ ಪಡೆಯುವುದು ಹೇಗೆ..?

ಅಕ್ಟೋಬರ್ 9 ಅಂದರೆ, ಇಂದು ಮಧ್ಯಾಹ್ನ 12 ಗಂಟೆಯಿಂದ ಅಮೆಜಾನ್‌ನಲ್ಲಿ ಪ್ರಾರಂಭವಾಗಿರುವ ಪ್ರೀ ಬುಕ್ಕಿಂಗ್‌ನಲ್ಲಿ ₹1000 ಮೌಲ್ಯದ ಇ-ಗಿಫ್ಟ್‌ ಕಾರ್ಡ್‌ನ್ನು ಖರೀದಿಸಬೇಕಾಗಿದ್ದು, ಇದು ನವೆಂವರ್‌ 2, 2018ರಂದು ನಡೆಯುವ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನ ಮೊದಲ ಸೇಲ್‌ನಲ್ಲಿ ಬಳಕೆಯಾಗಲಿದೆ. ಇದು ಉತ್ತಮವಾಗಿದ್ದು, ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನ್ನು ಮುಂಚಿತವಾಗಿ ಬುಕ್ ಮಾಡುವ ಗ್ರಾಹಕರು ₹1490 ಮೌಲ್ಯದ ಒನ್‌ಪ್ಲಸ್‌ನ ಎಲ್ಲಾ ಹೊಸ ಟೈಪ್‌-ಸಿ ಬುಲೆಟ್‌ ಇಯರ್‌ಫೋನ್‌ಗಳನ್ನು ಪಡೆಯಲಿದ್ದು, ಜತೆಗೆ ಅಮೆಜಾನ್‌ ಪೇ ಬ್ಯಾಲೆನ್ಸ್‌ನಲ್ಲಿ ಹೆಚ್ಚುವರಿ ₹500 ಸೇರಲಿದೆ. ಇದರಿಂದ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನ್ನು ಪ್ರೀ ಬುಕ್‌ ಮಾಡಿದ ಗ್ರಾಹಕರಿಗೆ ಪರಿಣಾಮಕಾರಿಯಾಗಿ ₹1,000 ಗಿಫ್ಟ್‌ ಕಾರ್ಡ್‌ನ ಮೌಲ್ಯ ₹1,500 ಆಗುತ್ತದೆ.

ಬಿಡುಗಡೆಗೆ ಸಾಕ್ಷಿಯಾಗಿ

ಬಿಡುಗಡೆಗೆ ಸಾಕ್ಷಿಯಾಗಿ

ನಿಮ್ಮಲ್ಲಿ ಯಾರಾದರೂ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಡಿವೈಸ್‌ನ ಅನುಭವ ಪಡೆಯಲು ಆಸಕ್ತಿ ಹೊಂದಿದ್ದರೆ, ಅದಕ್ಕೂ ಸಹ ಒನ್‌ಪ್ಲಸ್‌ ಅವಕಾಶ ಮಾಡಿಕೊಟ್ಟಿದೆ. ಇದೇ ಅಕ್ಟೋಬರ್ 30, ರಾತ್ರಿ 8:30ಕ್ಕೆ ನವದೆಹಲಿಯ ಇಂದಿರಾ ಗಾಂಧಿ ಕ್ರೀಡಾ ಸಂಕೀರ್ಣದಲ್ಲಿರುವ KDJW ಕ್ರೀಡಾಂಗಣದಲ್ಲಿ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಬಿಡುಗಡೆಯನ್ನು ಆಯೋಜಿಸಲಾಗಿದೆ.

ಬಿಡುಗಡೆಯ ಆಹ್ವಾನ ಪತ್ರಿಕೆಗಳು ಅಕ್ಟೋಬರ್‌ 17, ಬುಧವಾರ ಬೆಳಿಗ್ಗೆ 10ರಿಂದ ಒನ್‌ಪ್ಲಸ್‌ನ ಅಧಿಕೃತ ವೆಬ್‌ಸೈಟ್‌ oneplus.in ನಲ್ಲಿ ₹999ಕ್ಕೆ ಲಭ್ಯವಿದೆ. ಬಿಡುಗಡೆಗೆ ಬರುವವರು ವಿಶ್ವದಲ್ಲಿಯೇ ಮೊದಲಿಗರಾಗಿ ಒನ್‌ಪ್ಲಸ್‌ 6Tಯ ಶೈಲಿ ಮತ್ತು ಶಕ್ತಿಯನ್ನು ಲಾಂಚ್‌ ಸ್ಥಳದಲ್ಲಿ ಸೃಷ್ಟಿಸಿರುವ ಅನುಭವ ವಲಯದಲ್ಲಿ ಅನುಭವಿಸುತ್ತಾರೆ. ಬಿಡುಗಡೆ ಸಮಾರಂಭಕ್ಕೆ ಹಾಜರಾಗುವ ಎಲ್ಲಾ ಅಭಿಮಾನಿಗಳು ಸೂಪರ್ ಆಡ್-ಆನ್‌ಗಳು ಹಾಗೂ ಒನ್‌ಪ್ಲಸ್‌ನ ಉತ್ಪನ್ನಗಳನ್ನು ಹೊಂದಿದ ಉಡಗೊರೆಗಳನ್ನು ಪಡೆಯಲಿದ್ದಾರೆ. ಇವೆಂಟ್‌ನಲ್ಲಿ ಭಾಗವಹಿಸಲು ಸಾಧ್ಯವಾಗದವರಿಗೆ ಕಂಪನಿಯ ಭಾರತದ ಅಧಿಕೃತ ವೆಬ್‌ಸೈಟ್ ಮೂಲಕ ಕಾರ್ಯಕ್ರಮದ ನೇರಪ್ರಸಾರ ಮಾಡಲಾಗುತ್ತದೆ.

ಅತ್ಯಾಧುನಿಕ ಸ್ಕ್ರೀನ್‌ ಅನ್‌ಲಾಕ್‌

ಅತ್ಯಾಧುನಿಕ ಸ್ಕ್ರೀನ್‌ ಅನ್‌ಲಾಕ್‌

ಒನ್‌ಪ್ಲಸ್‌ ಹೀಗಾಗಲೇ ಖಚಿತಪಡಿಸಿರುವಂತೆ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಭವಿಷ್ಯದ ಸ್ಕ್ರೀನ್‌ ಅನ್‌ಲಾಕ್‌ ತಂತ್ರಜ್ಞಾನವನ್ನು ಹೊಂದಿರಲಿದೆ. ಕಂಪೆನಿಯು ಬಹು ನಿರೀಕ್ಷಿತ ಹೊಸ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ನಲ್ಲಿ ಭವಿಷ್ಯದ ಸ್ಕ್ರೀನ್ ಅನ್‌ಲಾಕ್ ತಂತ್ರಜ್ಞಾನದ ಸುಳಿವು ನೀಡುವ ಸಣ್ಣ ವಿಡಿಯೋ ಒಂದನ್ನು ಬಿಡುಗಡೆಗೊಳಿಸಿದ ಒನ್‌ಪ್ಲಸ್‌ ಹೊಸ ಫೀಚರ್‌ ಬಗ್ಗೆ ಕುತೂಹಲ ಮೂಡಿಸಿದೆ.

ಈ ತಂತ್ರಜ್ಞಾನ ಸ್ಮಾರ್ಟ್‌ಫೋನ್‌ನ್ನು ಹೆಚ್ಚು ಸುರಕ್ಷಿತಗೊಳಿಸಿದೆ. ಒನ್‌ಪ್ಲಸ್‌ ಹಾರ್ಡ್‌ವೇರ್‌ ಮತ್ತು ಸ್ವಯಂ-ಕಲಿಕೆಯ ಕ್ರಮಾವಳಿಗಳನ್ನು ಸಂಯೋಜಿಸಿ ನಿಮ್ಮ ಬಯೋಮೆಟ್ರಿಕ್‌ ಮಾಹಿತಿಯನ್ನು ಪೂರ್ವಭಾವಿಯಾಗಿ ಲೋಡ್ ಮಾಡುವ ಸಾಮರ್ಥ್ಯ ಹೊಂದಿದೆ. ಇದರಿಂದ ನಿಮಗೆ ಝಿಪ್ಪಿ ಅನ್‌ಲಾಕ್‌ ಅನುಭವ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನಲ್ಲಿ ಸಿಗಲಿದೆ. ಒನ್‌ಪ್ಲಸ್‌ನಲ್ಲಿರುವ ಇಂಜಿನಿಯರ್‌ಗಳು ನಿಮ್ಮ ಫಿಂಗರ್‌ಪ್ರಿಂಟ್‌ ಮಾಹಿತಿ ಸಂಗ್ರಹಿಸಲು ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್‌ 845ನಲ್ಲಿನ 'Trust Zone' ಬಳಸಿದ್ದಾರೆ. ಇದು ಗೌಪ್ಯತೆಗಾಗಿರುವ ಪ್ರತ್ಯೇಕ ಸ್ಥಳವಾಗಿ ಕಾರ್ಯನಿರ್ವಹಿಸುತ್ತದೆ.

ಯಾವಾಗಲೂ ನಿಮ್ಮನ್ನು  ಸಕ್ರಿಯರನ್ನಾಗಿಸುವ ಬ್ಯಾಟರಿ

ಯಾವಾಗಲೂ ನಿಮ್ಮನ್ನು ಸಕ್ರಿಯರನ್ನಾಗಿಸುವ ಬ್ಯಾಟರಿ

ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಉತ್ತಮ ಬ್ಯಾಟರಿ ಸಾಮರ್ಥ್ಯ ಹೊಂದಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ನೀವು ಡ್ಯಾಶ್‌ ಚಾರ್ಜರ್‌ ಹುಡುಕುವುದಕ್ಕಿಂತ ಮುಂಚೆ ಸ್ಮಾರ್ಟ್‌ಫೋನ್‌ನ್ನು ದೀರ್ಘಕಾಲದವರೆಗೆ ಕಾರ್ಯನಿರ್ವಹಿಸಲು ಹೆಚ್ಚಿನ ಬ್ಯಾಟರಿ ಸಾಮರ್ಥ್ಯದೊಂದಿಗೆ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಬಿಡುಗಡೆಯಾಗುತ್ತಿರುವುದನ್ನು ಹೀಗಾಗಲೇ ಖಚಿತಪಡಿಸಲಾಗಿದೆ.

ಹೊಸ ಸ್ಮಾರ್ಟ್‌ಫೋನ್‌ನ ಬ್ಯಾಟರಿ 3700 mAh ಸಾಮರ್ಥ್ಯ ಹೊಂದಿದ್ದು, ಒನ್‌ಪ್ಲಸ್‌ 6 ಸ್ಮಾರ್ಟ್‌ಫೋನ್‌ನ 3300 mAh ಬ್ಯಾಟರಿಗಿಂತ ಹೆಚ್ಚಿನ ಸಾಮರ್ಥ್ಯ ಹೊಂದಿದೆ. ನಿಮ್ಮ ಸ್ಮಾರ್ಟ್‌ಫೋನ್‌ನ ಹೆಚ್ಚು ಸಮಯ ಬಳಸಲು ಇದು ಭರವಸೆ ನೀಡುತ್ತದೆ. ಇದಕ್ಕೆಲ್ಲಕ್ಕಿಂತ ಹೆಚ್ಚಾಗಿ ಜನಪ್ರಿಯ ಡ್ಯಾಶ್ ಚಾರ್ಜ್‌ರ್‌ನ ಮುಂದುವರೆದ ಆವೃತ್ತಿಯನ್ನು ಒನ್‌ಪ್ಲಸ್‌ 6Tಯಲ್ಲಿ ತರಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಹೊಸ OnePlus 6T ಸ್ಮಾರ್ಟ್‌ಫೋನ್‌ನ್ನು ಕಂಪನಿಯ ಸುಧಾರಿತ ಡ್ಯಾಶ್ ಚಾರ್ಜಿಂಗ್ ತಂತ್ರಜ್ಞಾನದ ಮೂಲಕ ಬೆಂಬಲಿಸಲಾಗುತ್ತದೆ. ಇದರ ಅರ್ಥ ನಿಮಗೆ ಅಗತ್ಯವಿದ್ದ ಸಮಯದಲ್ಲಿ ಆದಷ್ಟು ಬೇಗ ಸ್ಮಾರ್ಟ್‌ಫೋನ್‌ನ್ನು ಚಾರ್ಜ್‌ ಮಾಡಬಹುದಾಗಿದೆ.

ದೊಡ್ಡ ಮತ್ತು ಉತ್ಕೃಷ್ಟ ಡಿಸ್‌ಪ್ಲೇ

ದೊಡ್ಡ ಮತ್ತು ಉತ್ಕೃಷ್ಟ ಡಿಸ್‌ಪ್ಲೇ

ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ತನ್ನ ಬೆಲೆ ವರ್ಗದ ಇತರ ಸ್ಮಾರ್ಟ್‌ಫೋನ್‌ಗಳಿಗಿಂತ ಹೆಚ್ಚು ಆಕರ್ಷಕವಾದ ಮಲ್ಟಿಮೀಡಿಯಾ ಅನುಭವವನ್ನು ನೀಡುತ್ತದೆ. ದೊಡ್ದ್ ಡಿಸ್‌ಪ್ಲೇ ಹೊಂದಿದ್ದು, ಬೆಜೆಲ್‌ ಲೆಸ್‌ AMOLED ಡಿಸ್‌ಪ್ಲೇ ವಾಟರ್‌ ಡ್ರಾಪ್‌ ನೋಚ್‌ನೊಂದಿಗೆ ಅಳವಡಿಸಲಾಗಿದೆ. ಫ್ರಾಂಟ್‌ ಕ್ಯಾಮೆರಾವನ್ನು ಸಣ್ಣ ನೀರಿನ ಬಿಂದುವಿನಂತ ಜಾಗದಲ್ಲಿ ಅಳವಡಿಸಿದ್ದು, ಆಕರ್ಷಕವಾಗಿದೆ. ಎಡ್ಜ್‌-ಟು-ಎಡ್ಜ್‌ ಸ್ಕ್ರೀನ್ ವೀಕ್ಷಣೆ ಅನುಭವವನ್ನು ನೀಡುವ ಒನ್‌ಪ್ಲಸ್‌ 6T ಗೇಮಿಂಗ್ ಮತ್ತು ಮಲ್ಟಿಮೀಡಿಯಾ ಬಳಕೆಗೆ ಹೇಳಿ ಮಾಡಿಸಿದಂತಿದೆ.

Best Mobiles in India

English summary
Pre-book your OnePlus 6T today to be the first to get it when its launched. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X