ಭಾರತದ ಟಾಪ್ 5 ಬೆಸ್ಟ್ ಪ್ರೀಮಿಯಂ ಫೋನ್‌ಗಳ ಬೆಲೆಯಲ್ಲಿ ಭಾರೀ ಇಳಿಕೆ!

|

ಭಾರತದಲ್ಲಿ ಒನ್‌ಪ್ಲಸ್ 7 ಮತ್ತು ಹುವಾವೇ ಪಿ20 ಸರಣಿ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾದ ನಂತರ, ಆಪಲ್, ಸ್ಯಾಮ್ ಸಂಗ್ ಸೇರಿದಂತೆ ಬಹುತೇಕ ಎಲ್ಲಾ ಮೊಬೈಲ್ ಕಂಪೆನಿಗಳು ಸಹ ತಮ್ಮ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳ ಬೆಲೆಗಳನ್ನು ಕಡಿಮೆ ಮಾಡಿವೆ. ಅಂದರೆ, ಈ ಮೊದಲು ಭಾರತದಲ್ಲಿ ಲಭ್ಯವಿದ್ದ ಟಾಪ್ 5 ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಾದ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್9, ಹುವಾಯಿ ಮೇಟ್ 20 ಪ್ರೋ, ಒನ್ ಪ್ಲಸ್ 6ಟಿ, ಗೂಗಲ್ ಪಿಕ್ಸಲ್ 3ಎಕ್ಸ್ಎಲ್ ಮತ್ತು ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್ ನ ಬೆಲೆಗಳು ಇದೀಗ ಇಳಿಕೆಕಂಡಿವೆ.

ಭಾರತದ ಟಾಪ್ 5 ಬೆಸ್ಟ್ ಪ್ರೀಮಿಯಂ ಫೋನ್‌ಗಳ ಬೆಲೆಯಲ್ಲಿ ಭಾರೀ ಇಳಿಕೆ!

ಹೌದು, 2018 ಮತ್ತು 2019 ನೇ ವರ್ಷದ ಆರಂಭದಲ್ಲಿ ಭಾರತದಲ್ಲಿ ಲಭ್ಯವಿದ್ದ ಟಾಪ್ 5 ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಾಗಿ ಈ ಮೇಲಿನ ಐದೂ ಸ್ಮಾರ್ಟ್‌ಫೋನ್‌ಗಳು ಮಿಂಚಿದ್ದವು. ಆದರೆ, ಇದೀಗ ಮತ್ತಷ್ಟು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳು ಭಾರತದ ಮಾರುಕಟ್ಟೆಗೆ ಎಂಟ್ರಿಯಾದ ನಂತರ ಇವುಗಳು ಬೆಲೆಗಳನ್ನು ಕಳೆದುಕೊಂಡಿವೆ. ಹಾಗಾಗಿ, ಇಂದಿನ ಲೇಖನದಲ್ಲಿ ಬೆಲೆ ಕಳೆದುಕೊಂಡಿರುವ ಎಲ್ಲಾ ಟಾಪ್ 5 ಸ್ಮಾರ್ಟ್‌ಫೋನ್‌ಗಳ ವೈಶಿಷ್ಟ್ಯತೆಗಳನ್ನು ಹೋಲಿಕೆ ಮಾಡಿ ವಿವರಿಸಿದ್ದೇವೆ ಮತ್ತು ಅವುಗಳ ಹೊಸ ಬೆಲೆಗಳನ್ನು ಸಹ ಪಟ್ಟಿ ಮಾಡಿದ್ದೇವೆ.

ಡಿಸ್ಲ್ಪೇ:

ಡಿಸ್ಲ್ಪೇ:

 • ಹುವಾವೇ ಮೇಟ್ 20 ಪ್ರೋ: 6.39-ಇಂಚಿನ 2K+ (3120x1440 ಪಿಕ್ಸಲ್ಸ್) OLED ಡಿಸ್ಪ್ಲೇ
 • ಒನ್ ಪ್ಲಸ್ 6ಟಿ: 6.41-ಇಂಚಿನ ಫುಲ್ HD+ (1080x2246 ಪಿಕ್ಸಲ್ಸ್) ಆಪ್ಟಿಕ್ AMOLED ಡಿಸ್ಪ್ಲೇ
 • ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9: 6.4-ಇಂಚಿನ Quad HD+ (2960x1440 ಪಿಕ್ಸಲ್ಸ್) ಸೂಪರ್ AMOLED ಡಿಸ್ಪ್ಲೇ
 • ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್: 6.5-ಇಂಚಿನ (2688x1242 ಪಿಕ್ಸಲ್ಸ್) OLED ಸೂಪರ್ ರೆಟಿನಾ HD ಡಿಸ್ಪ್ಲೇ
 • ಗೂಗಲ್ ಪಿಕ್ಸಲ್ 3ಎಕ್ಸ್ಎಲ್: 6.3-ಇಂಚಿನ (2560x1440 ಪಿಕ್ಸಲ್ಸ್) QHD+ OLED ಡಿಸ್ಪ್ಲೇ
 • ಪ್ರೊಸೆಸರ್:

  ಪ್ರೊಸೆಸರ್:

  • ಹುವಾವೇ ಮೇಟ್ 20 ಪ್ರೋ: ಆಕ್ಟಾ ಕೋರ್ Kirin 980
  • ಒನ್ ಪ್ಲಸ್ 6ಟಿ: ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್
  • ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್9: ಆಕ್ಟಾ-ಕೋರ್ Exynos 9810 ಪ್ರೊಸೆಸರ್
  • ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್: A12 ಬಯೋನಿಕ್ ಚಿಪ್
  • ಗೂಗಲ್ ಪಿಕ್ಸಲ್ 3 ಎಕ್ಸ್ಎಲ್: ಆಕ್ಟಾ-ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್
  • ಆಪರೇಟಿಂಗ್ ಸಿಸ್ಟಮ್:

   ಆಪರೇಟಿಂಗ್ ಸಿಸ್ಟಮ್:

   • ಹುವಾವೇ ಮೇಟ್ 20 ಪ್ರೋ: EMUI 9 ಆಧಾರಿತ ಆಂಡ್ರಾಯ್ಡ್ 9 ಪೈ
   • ಒನ್ ಪ್ಲಸ್ 6ಟಿ: OxygenOS 9.0.4 ಆಧಾರಿತ ಆಂಡ್ರಾಯ್ಡ್ 9 ಪೈ
   • ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್9: ಸ್ಯಾಮ್ ಸಂಗ್ ಎಕ್ಸ್ ಪೀರಿಯನ್ಸ್ 9.5 ಆಧಾರಿತ ಆಂಡ್ರಾಯ್ಡ್ 8.0 ಓರಿಯೋ
   • ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್: iOS 12
   • ಗೂಗಲ್ ಪಿಕ್ಸಲ್ 3ಎಕ್ಸ್ಎಲ್: ಆಂಡ್ರಾಯ್ಡ್ 9 ಪೈ
   • RAM:

    RAM:

    • ಹುವಾವೇ ಮೇಟ್ 20 ಪ್ರೋ: ಕೇವಲ 6ಜಿಬಿ RAM ಆಯ್ಕೆ
    • ಒನ್ ಪ್ಲಸ್ 6ಟಿ: 6ಜಿಬಿ RAM ಮತ್ತು 8ಜಿಬಿ RAM ಆಯ್ಕೆಗಳು
    • ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್9: ಕೇವಲ 8ಜಿಬಿ RAM
    • ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್: 4ಜಿಬಿ (as per ifixit)
    • ಗೂಗಲ್ ಪಿಕ್ಸಲ್ 3ಎಕ್ಸ್ಎಲ್: ಕೇವಲ 4ಜಿಬಿ RAM ಆಯ್ಕೆ.
    • ಸ್ಟೋರೇಜ್

     ಸ್ಟೋರೇಜ್

     • ಹುವಾವೇ ಮೇಟ್ 20 ಪ್ರೋ: ಕೇವಲ 128ಜಿಬಿ ಸ್ಟೋರೇಜ್
     • ಒನ್ ಪ್ಲಸ್ 6ಟಿ: 128ಜಿಬಿ ಮತ್ತು 256ಜಿಬಿ ಸ್ಟೋರೇಜ್ ಆಯ್ಕೆಗಳು
     • ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್9: 128ಜಿಬಿ ಮತ್ತು 512ಜಿಬಿ ಸ್ಟೋರೇಜ್ ಆಯ್ಕೆಗಳು
     • ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್: 64ಜಿಬಿ, 256ಜಿಬಿ ಮತ್ತು 512ಜಿಬಿ ಸ್ಟೋರೇಜ್ ಆಯ್ಕೆಗಳು
     • ಗೂಗಲ್ ಪಿಕ್ಸಲ್ 3ಎಕ್ಸ್ಎಲ್: 64ಜಿಬಿ ಮತ್ತು 128ಜಿಬಿ ಸ್ಟೋರೇಜ್ ಆಯ್ಕೆಗಳು
     • ಹಿಂಭಾಗದ ಕ್ಯಾಮರಾ:

      ಹಿಂಭಾಗದ ಕ್ಯಾಮರಾ:

      • ಹುವಾವೇ ಮೇಟ್ 20 ಪ್ರೋ: 40MP (f/1.8 ಅಪರ್ಚರ್), 20MP (f/2.2 ಅಪರ್ಚರ್), 8MP (f/2.2 ಅಪರ್ಚರ್)
      • ಒನ್ ಪ್ಲಸ್ 6ಟಿ: 16MP (f/1.7 ಅಪರ್ಚರ್) + 20MP (f/1.7 ಅಪರ್ಚರ್)
      • ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್9: 12MP (f/1.5-f/2.4 Dual ಅಪರ್ಚರ್) + 12MP (f/2.4 ಅಪರ್ಚರ್)
      • ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್: 12MP (f/1.8 ಅಪರ್ಚರ್) + 12MP (f/2.4 ಅಪರ್ಚರ್)
      • ಗೂಗಲ್ ಪಿಕ್ಸಲ್ 3ಎಕ್ಸ್ಎಲ್: 12.2 MP (f/1.8 ಅಪರ್ಚರ್)
      • ಮುಂಭಾಗದ ಕ್ಯಾಮರಾ:

       ಮುಂಭಾಗದ ಕ್ಯಾಮರಾ:

       • ಹುವಾವೇ ಮೇಟ್ 20 ಪ್ರೋ: 24MP (f/2.0 ಅಪರ್ಚರ್)
       • ಒನ್ ಪ್ಲಸ್ 6ಟಿ: 16MP (f/2.0 ಅಪರ್ಚರ್)
       • ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್9: 8MP (f/1.7 ಅಪರ್ಚರ್)
       • ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್: 7MP (f/2.2 ಅಪರ್ಚರ್)
       • ಗೂಗಲ್ ಪಿಕ್ಸಲ್ 3ಎಕ್ಸ್ಎಲ್: 8 MP (f/2.2 ಅಪರ್ಚರ್)
       • ಬ್ಯಾಟರಿ:

        ಬ್ಯಾಟರಿ:

        • ಹುವಾವೇ ಮೇಟ್ 20 ಪ್ರೋ: 4200 mAh ಬ್ಯಾಟರಿ ಜೊತೆಗೆ ಕ್ವಿಕ್ ಚಾರ್ಜ್ ಮತ್ತು ವಯರ್ ಲೆಸ್ ಚಾರ್ಜಿಂಗ್ ಗೆ ಬೆಂಬಲ
        • ಒನ್ ಪ್ಲಸ್ 6ಟಿ: 3700mAh ಬ್ಯಾಟರಿ ಜೊತೆಗೆ ಡ್ಯಾಷ್ ಚಾರ್ಜಿಂಗ್
        • ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್9: 4000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್ ಮತ್ತು ವಯರ್ ಲೆಸ್ ಚಾರ್ಜಿಂಗ್ ಗೆ ಬೆಂಬಲ
        • ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್: 3,174mAh ಬ್ಯಾಟರಿಜೊತೆಗೆ ಫಾಸ್ಟ್ ಚಾರ್ಜಿಂಗ್ ಮತ್ತು ವಯರ್ ಲೆಸ್ ಚಾರ್ಜಿಂಗ್ ಗೆ ಬೆಂಬಲ
        • ಗೂಗಲ್ ಪಿಕ್ಸಲ್ 3ಎಕ್ಸ್ಎಲ್: 3430 mAh ಬ್ಯಾಟರಿ ಜೊತೆಗೆ ವಯರ್ ಲೆಸ್ ಚಾರ್ಜಿಂಗ್ ಗೆ ಬೆಂಬಲ
        • ಬೆಲೆಗಳು ಇಂತಿವೆ

         ಬೆಲೆಗಳು ಇಂತಿವೆ

         • ಹುವಾವೇ ಮೇಟ್ 20 ಪ್ರೋ: 6ಜಿಬಿ RAM + 128ಜಿಬಿ ಫೋನ್ ಬೆಲೆ 65,990 ರೂ.
         • ಒನ್ ಪ್ಲಸ್ 6ಟಿ: 6ಜಿಬಿ RAM + 128ಜಿಬಿ ಫೋನ್ ಬೆಲೆ 24,999 ಹಾಗೂ 8ಜಿಬಿ RAM + 128ಜಿಬಿ ಫೋನ್ ಬೆಲೆ 27,999 ರೂ.
         • ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9: 6 ಜಿಬಿ RAM + 128 ಜಿಬಿ ಫೋನ್ ಬೆಲೆ 67,900 ರೂ. ಮತ್ತು 8ಜಿಬಿ RAM + 512ಜಿಬಿ ಫೋನ್ ಬೆಲೆ 77,900 ರೂ.
         • ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್: 64ಜಿಬಿ ಫೋನ್ ಬೆಲೆ 1,09,890 ರೂ. ಮತ್ತು 256ಜಿಬಿ ಫೋನ್ ಬೆಲೆ 1,24,900 ರೂ.
         • ಗೂಗಲ್ ಪಿಕ್ಸಲ್ 3ಎಕ್ಸ್ಎಲ್: 4ಜಿಬಿ RAM + 64ಜಿಬಿ ಫೋನ್ ಬೆಲೆ 55,490 ರೂ.

Best Mobiles in India

English summary
premium Smartphones: 5 premium smartphones that got price-cuts of up to Rs 25,000. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X