ಭಾರತದಲ್ಲಿ Oppo F29 Pro+ 5G ಮತ್ತುF29 Pro 5G ಫೋನ್‌ಗಳ ಬೆಲೆ ಎಷ್ಟಿರಲಿದೆ ಗೊತ್ತಾ?
ಭಾರತದಲ್ಲಿ ಶೀಘ್ರದಲ್ಲೇ ಬಹು ನಿರೀಕ್ಷಿತ Oppo F29 Pro+ 5G ಮತ್ತು Oppo F29 Pro 5G ಸ್ಮಾರ್ಟ್‌ಫೋನ್‌ಗಳ ಬಿಡುಗಡೆ ನಡೆಯುವ ಸಾಧ್ಯತೆ ಇದೆ. ಇತ್ತೀಚೆಗೆ, ಈ ಎರಡು ಸ್ಮಾರ್ಟ್‌ಫೋನ್‌ಗಳ ಬೆಲೆಗಳ ಕುರಿತು ಮತ್ತೊಂದು ಸಂತೋಷದ ಸುದ್ದಿ ಬಂದಿದೆ. ಹೌದು, ಭಾರತೀಯ ಟೆಕ್ ಮಾರುಕಟ್ಟೆಯ ಪ್ರಸಿದ್ಧ ಟಿಪ್‌ಸ್ಟಾರ್ ಅಭಿಷೇಕ್ ಯಾದವ್ ಅವರು Oppo F29 Pro+ 5G ಮತ್ತು Oppo F29 Pro 5G ಸ್ಮಾರ್ಟ್‌ಫೋನ್‌ಗಳ ಬೆಲೆಗಳನ್ನು ಬಹಿರಂಗಪಡಿಸಿದ್ದಾರೆ. ಜೊತೆಗೆ, ಈ ಸ್ಮಾರ್ಟ್‌ಫೋನ್‌ಗಳಲ್ಲಿ ಇರುವ ವೈಶಿಷ್ಟ್ಯಗಳ ಬಗ್ಗೆ ಸಹ ಮಾಹಿತಿ ನೀಡಿದ್ದಾರೆ. ಡಿಸೆಂಬರ್ 2024 ರಲ್ಲಿ ಚೀನಾದಲ್ಲಿ ಪರಿಚಯಿಸಲಾದ Oppo A5 Pro 5G ಸ್ಮಾರ್ಟ್‌ಫೋನಿನಂತೆ, Oppo F29 Pro 5G ಸರಣಿಯ ಫೋನ್‌ಗಳು ಕೂಡ ಇದೇ ವೈಶಿಷ್ಟ್ಯಗಳನ್ನು ಹೊಂದಿರುವುದನ್ನು ನಾವು ನೋಡಬಹುದಾಗಿ. ಹಾಗಾದರೆ, ಈ ಎರಡು ಸ್ಮಾರ್ಟ್‌ಫೋನ್‌ಗಳ ಫೀಚರ್ಸ್ ಯಾವುವು ಮತ್ತು ಬೆಲೆಗಳು ಎಷ್ಟು ಎಂಬುದನ್ನು ನೋಡೋಣ ಬನ್ನಿ.
ಭಾರತದಲ್ಲಿ Oppo F29 Pro 5G ಮತ್ತು F29 Pro+ 5G ಸ್ಮಾರ್ಟ್‌ಫೋನ್‌ಗಳ ಬೆಲೆ ಮತ್ತು ವೈಶಿಷ್ಟ್ಯಗಳು (ನಿರೀಕ್ಷಿಸಲಾಗಿದೆ):
ಟಿಪ್‌ಸ್ಟರ್ ಅಭಿಷೇಕ್ ಯಾದವ್ (@yabhishekhd) ಅವರ X ಪೋಸ್ಟ್ ಪ್ರಕಾರ, Oppo F29 Pro 5G ಸ್ಮಾರ್ಟ್‌ಫೋನ್ 25,000 ರೂ. ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್ 8GB + 128GB ಮತ್ತು 8GB + 256GB ಮಾದರಿಗಳಲ್ಲಿ ಬರಲಿದೆ. ಇನ್ನೊಂದೆಡೆ, Oppo F29 Pro+ 5G ಸ್ಮಾರ್ಟ್‌ಫೋನ್ 30,000 ರೂ. ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಾಗಲಿದೆ, ಇದು 8GB + 128GB, 8GB + 256GB ಮತ್ತು 12GB + 256GB ಆಯ್ಕೆಗಳಲ್ಲಿ ದೊರಕಲಿದೆ ಎಂದು ಟಿಪ್‌ಸ್ಟರ್ ಅಭಿಷೇಕ್ ಯಾದವ್ ಹೇಳಿದ್ದಾರೆ.

Oppo F29 Pro ಸರಣಿಯಲ್ಲಿ ಬೇಸಿಕ್ Oppo F29 Pro+ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 6 Gen 3 ಚಿಪ್‌ಸೆಟ್‌ನಿಂದ ಚಾಲಿತವಾಗುವ ಸಾಧ್ಯತೆಯಿದೆ. ಇದು 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲಿತ 6,500mAh ಬ್ಯಾಟರಿಯೊಂದಿಗೆ ಬರುವ ನಿರೀಕ್ಷೆಯಿದೆ. ಮತ್ತೊಂದು ಪೋಸ್ಟ್‌ನಲ್ಲಿ ಅವರೇ ಹೇಳಿರುವಂತೆ, ಈ Oppo F29 Pro ಹ್ಯಾಂಡ್‌ಸೆಟ್ ಬಾಗಿದ ಡಿಸ್ಪ್ಲೇ ಮತ್ತು IP69 ರೇಟಿಂಗ್ ಹೊಂದಿರುವ ಧೂಳು ಮತ್ತು ನೀರಿನ ಪ್ರತಿರೋಧವನ್ನು ಹೊಂದಿರುತ್ತದೆ ಎಂದು ತಿಳಿದುಬಂದಿದೆ.
ಮತ್ತೊಂದೆಡೆ, Oppo F29 Pro 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 SoC ಅನ್ನು ಹೊಂದಿರುವ ಸಾಧ್ಯತೆಯಿದೆ. ಇದು ಹಿಂದಿನ ಸೋರಿಕೆಯೊಂದಿಗೆ ಹೊಂದಿಕೆಯಾಗುತ್ತದೆ. ಇಷ್ಟೇ ಅಲ್ಲದೇ, ಈ ಸ್ಮಾರ್ಟ್‌ಫೋನ್ LPDDR4X RAM ಮತ್ತು UFS 3.1 ಆನ್‌ಬೋರ್ಡ್ ಸಂಗ್ರಹಣೆಯನ್ನು ಬೆಂಬಲಿಸುತ್ತದೆ ಮತ್ತು ಆಂಡ್ರಾಯ್ಡ್ 15 ಆಧಾರಿತ ColorOS 15 ನೊಂದಿಗೆ ಬರುವ ನಿರೀಕ್ಷೆಯಿದೆ ಹಾಗೂ 6,000mAh ಬ್ಯಾಟರಿಯನ್ನು ಹೊಂದಿರುತ್ತದೆ ಎನ್ನಲಾಗಿದೆ. ಪ್ರೊ+ ಆವೃತ್ತಿಯಂತೆ, ಈ ಸ್ಮಾರ್ಟ್‌ಫೋನ್ ಕೂಡ ಚಾರ್ಜಿಂಗ್ ವೇಗವನ್ನು ಬೆಂಬಲಿಸಬಹುದು .
ಹಳೆಯ ಸೋರಿಕೆಯ ಪ್ರಕಾರ, Oppo F29 Pro 5G ಸ್ಮಾರ್ಟ್‌ಫೋನ್ 6.7-ಇಂಚಿನ 120Hz ಪೂರ್ಣ-HD+ ಕ್ವಾಡ್-ಕರ್ವ್ಡ್ AMOLED ಡಿಸ್ಪ್ಲೇ ಹೊಂದಿರಬಹುದು. ಇದು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಬೆಂಬಲಿಸುವ ನಿರೀಕ್ಷೆಯಿದೆ. ಈ ಹ್ಯಾಂಡ್‌ಸೆಟ್ 50-ಮೆಗಾಪಿಕ್ಸೆಲ್ ಪ್ರಾಥಮಿಕ ಹಿಂಭಾಗದ ಸೆನ್ಸರ್, 2-ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸರ್ ಮತ್ತು 16-ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಜೊತೆಗೆ OIS ಬೆಂಬಲವನ್ನು ಹೊಂದಿರಬಹುದು. ಆದರೆ, ಕಂಪೆನಿಯಿಂದ ಈ ವಿಷಯಗಳ ಕುರಿತಂತೆ ಯಾವುದೇ ಅಧಿಕೃತ ದೃಢೀಕರಣ ಇನ್ನೂ ದೊರಕಿಲ್ಲ.


Click it and Unblock the Notifications








