ಭಾರತಕ್ಕೆ ಮತ್ತೊಂದು ಬಜೆಟ್ ಸ್ಮಾರ್ಟ್ ಪೋನ್ ಎಂಟ್ರಿ... 5,999 ರೂ. ಗೆ ಸಿಗಲಿದೆ ರೀಚ್ ಅಲ್ಯೂರ್ ರೈಸ್ 2..!
ಈಗಾಗಲೇ ಹಲವು ಸ್ಮಾರ್ಟ್ ಪೋನ್ಗರಳನ್ನು ಬಿಡುಗಡೆ ಮಾಡಿರುವ ರೀಚ್ ಮೊಬೈಲ್, ತನ್ನ ಹಿಂದಿನ ಮೊಬೈಲ್ ಸರಣಿಗಿಂತಲೂ ಉತ್ತಮ ಫೀಚರ್ಸ ಹೊಂದಿರುವ ರೀಚ್ ಅಲ್ಯೂರ್ ರೈಸ್ 2 ಫೋನ್ ಅನ್ನು ರೀಚ್ ಕಂಪನಿ ಇತ್ತೀಚಿಗೆ ಬಿಡುಗಡೆ ಮಾಡಿದೆ.
ರೀಚ್ ಅಲ್ಯೂರ್ ರೈಸ್ 2 ಫೋನ್ ನಿಮಗೆ ರೂ. 5999 ಗಳಿಗೆ ದೊರೆಯಲಿದೆ. ಇದರೊಂದಿಗೆ ಜಿಯೋ ಕ್ಯಾಶ್ ಬ್ಯಾಕ್ ಆಫರ್ ಲಭ್ಯವಿದ್ದು, ರೂ. 2200 ಕ್ಯಾಶ್ ಬ್ಯಾಕ್ ನೊಂದಿಗೆ ಈ ಸ್ಮಾರ್ಟ್ ಫೋನ್ ನೀವು ಕೊಳ್ಳಬಹುದು.

ರೀಚ್ ಅಲ್ಯೂರ್ ರೈಸ್ 2 ಫೋನ್ ನ ವಿಶೇಷತೆಗಳು
ರೀಚ್ ಅಲ್ಯೂರ್ ರೈಸ್ 2 ಫೋನಿನ್ನಲಿ 5.5 ಇಂಚಿನ ಡಿಸ್ಪ್ಲೇ ಕಾಣಬಹುದಾಗಿದ್ದು, ಇದು 1280*720 ಪಿಕ್ಸೆಲ್ ರೆಸೊಲ್ಯೂಷನ್ ಹೊಂದಿದೆ. ಈ ಡಿಸ್ಪ್ಲೇ ಸ್ಕ್ರಾಚ್ ಪ್ರೂಫ್ ಗ್ಲಾಸ್ ರಕ್ಷಣೆ ಹೊಂದಿದೆ.
ರೀಚ್ ಅಲ್ಯೂರ್ ರೈಸ್ 2 ಫೋನ್ ನಲ್ಲಿ 1.3GHz ವೇಗದ ಪ್ರೋಸೆಸರ್ ಹೊಂದಿದ್ದು ಇದರೊಂದಿಗೆ 3GB ಮತ್ತು 16GB ಇಂಟರ್ನಲ್ ಮೆಮೊರಿ ಹೊಂದಿದ್ದು ಇದರೊಂದಿಗೆ 64GB ವರೆಗೆ ಮೊಮೊರಿ ವಿಸ್ತರಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ.

ರೀಚ್ ಅಲ್ಯೂರ್ ರೈಸ್ 2 ಆಂಡ್ಯರಾಯಿಡ್ 7.0 ನ್ಯೂಗಾದಲ್ಲಿ ಕಾರ್ಯನಿರ್ವಹಿಸಲಿದ್ದು 2,600mAh ಸಾಮರ್ಥ್ಯದ L-ion ರಿಮೂವಬಲ್ ಬ್ಯಾಟರಿ ಇದೆ
ರೀಚ್ ಅಲ್ಯೂರ್ ರೈಸ್ 2 ನ ಕ್ಯಾಮರಾ ವಿಷಯಕ್ಕೆ ಬಂದರೆ, ಹಿಂಬಾಗದಲ್ಲಿ 8MP ಕ್ಯಾಮರಾ ದ ಜೊತೆಗೆ ಎಲ್ಈ ಡಿ ಫ್ಲಾಶ್ ಲೈಟ್ ನೀಡಲಾಗಿದೆ ಮತ್ತು ಮುಂಭಾಗದಲ್ಲಿ ಸೆಲ್ಫೇ್ ಗಾಗಿ 5 MP ಕ್ಯಾಮರಾ ಹೊಂದಿದೆ. ಇದರೊಂದಿಗೆ ಗಿoಐಖಿಇ/ಗಿiಐಖಿ ಸಪೊರ್ಟ ಆಯ್ಕೆಯನ್ನು ಹೊಂದಿದ್ದು ನೀವು ಹೆಚ್ ಡಿ ಕರೆಗಳನ್ನು ಮಾಡಬಹುದು. ಒಟ್ಟಿನಲ್ಲಿ ನೀವು ಕೊಡುವ ಬೆಲೆಗೆ ಉತ್ತಮ ಸ್ಮಾರ್ಟ್ ಪೋನ್ ಎನ್ನಬಹುದಾಗಿದೆ.


Click it and Unblock the Notifications
