Home
ಮೊಬೈಲ್

ಶಿಯೋಮಿ ಕಥೆ ಮುಗಿತು: 4 ತಿಂಗಳಲ್ಲಿ 10 ಲಕ್ಷ ಫೋನ್ ಮಾರಾಟ ಮಾಡಿದ ಹೊಸ ಕಂಪನಿ..!

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಶಿಯೋಮಿಗೆ ಸೆಡ್ಡು ಹೊಡೆಯುವ ಸಲುವಾಗಿ ಲಾಂಚ್ ಆಗಲಿರುವ ಮತ್ತೊಂದು ಚೀನಾ ಮೂಲಕದ ರಿಯಲ್ ಮಿ ಸ್ಮಾರ್ಟ್‌ಫೋನ್, ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿರುವ ರಿಯಲ್ ಮಿ ಭಾರತೀಯ ಮಾರುಕಟ್ಟೆಯಲ್ಲಿ ಕೇವಲ ನಾಲ್ಕು ತಿಂಗಳಿನಲ್ಲಿ 10 ಲಕ್ಷ ಸ್ಮಾರ್ಟ್‌ಫೋನ್ ಅನ್ನು ಮಾರಾಟ ಮಾಡಿದೆ ಎಂದು ತಿಳಿಸಿದೆ.

ಶಿಯೋಮಿ ಕಥೆ ಮುಗಿತು: 4 ತಿಂಗಳಲ್ಲಿ 10 ಲಕ್ಷ ಫೋನ್ ಮಾರಾಟ ಮಾಡಿದ ಹೊಸ ಕಂಪನಿ

ಈ ಹಿಂದೆ ಮಾರುಕಟ್ಟೆಯಲ್ಲಿ ಶಿಯೋಮಿ ಕಾಲಿಟ್ಟ ಸಂದರ್ಭದಲ್ಲಿ ಇದೇ ಮಾದರಿಯಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡ ಮಾದರಿಯಲ್ಲಿ, ಇದಕ್ಕೆ ಸೆಡ್ಡು ಹೊಡೆಯುವಂತೆ ರಿಯಲ್ ಮಿ ಯಶಸ್ಸು ಕಾಣುತ್ತಿದೆ. ಮೊದಲ ಬಾರಿಗೆ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡ ರಿಯಲ್ ಮಿ 1 ಅತೀ ದೊಡ್ಡ ಮಾದರಿಯಲ್ಲಿ ಯಶಸ್ಸು ಕಂಡಿತ್ತು, ಅದೇ ಮಾದರಿಯಲ್ಲಿ ಕಾಣಿಸಿಕೊಂಡ ರಿಯಲ್ ಮಿ 2 ಸ್ಮಾರ್ಟ್‌ಫೋನ್ ಸಹ ಯಶಸ್ಸು ಕಂಡಿದೆ. ಈ ಹಿನ್ನಲೆಯಲ್ಲಿ ಸಾಕಷ್ಟು ರಿಯಲ್ ಮಿ ಸಹ ದೊಡ್ಡ ಮಾದರಿಯ ಕನಸು ಕಾಣುತ್ತಿದೆ.

ಒಂದು ನಿಮಿಷಕ್ಕೆ 8333 ಸ್ಮಾರ್ಟ್‌ಫೋನ್:

ಒಂದು ನಿಮಿಷಕ್ಕೆ 8333 ಸ್ಮಾರ್ಟ್‌ಫೋನ್:

ಇದುವರೆಗೂ ಭಾರತೀಯ ಮಾರುಕಟ್ಟೆಯಲ್ಲಿ ಕೇವಲ ಎರಡು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿರುವ ರಿಯಲ್‌ಮಿ, ಒಂದು ದಿನಕ್ಕೆ 8333 ರಿಯಲ್ ಮಿ ಸ್ಮಾರ್ಟ್‌ಫೋನ್‌ಗಳು ಮಾರಾಟ ಮಾಡುತ್ತಿದೆ ಎನ್ನಲಾಗಿದೆ. ಇದು ಹೊಸದೊಂದು ಸ್ಮಾರ್ಟ್‌ಫೋನ್ ಕಂಪನಿಗೆ ದೊಡ್ಡ ಮಟ್ಟದ ಯಶಸ್ಸು ಎನ್ನಲಾಗಿದೆ.

ರೂ.15000ರ ಒಳಗೆ:

ರೂ.15000ರ ಒಳಗೆ:

ರಿಯಲ್ ಮಿ 1 ಹಾಗೂ ರಿಯಲ್ ಮಿ 2 ಸ್ಮಾರ್ಟ್‌ಫೋನ್ ವಿವಿಧ ಆವೃತ್ತಿಗಳಲ್ಲಿ ಕಾಣಿಸಿಕೊಳ್ಳಲಿದ್ದು, ಈ ಎಲ್ಲಾ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಆಯ್ಕೆಗಳನ್ನು ಕಾಣಿಸಿಕೊಳ್ಳಲಿದೆ. ಆದರೆ ಈ ಫೋನ್‌ಗಳ ಬೆಲೆಯೂ ರೂ.15,000ಕ್ಕಿಂತ ಹೆಚ್ಚಾಗಿಲ್ಲ. ಇದರಿಂದಾಗಿ ಹೆಚ್ಚಿನ ಮಂದಿ ಬಳಕೆದಾರರು ಈ ಸ್ಮಾರ್ಟ್‌ಫೋನ್ ಅನ್ನು ಖರೀದಿ ಮಾಡಲು ಮುಂದಾಗಿದ್ದಾರೆ.

ಮತ್ತೊಂದು ಫೋನ್:

ಮತ್ತೊಂದು ಫೋನ್:

ಇದಲ್ಲದೇ ಭಾರತೀಯ ಮಾರುಕಟ್ಟೆಯಲ್ಲಿ ಇಷ್ಟು ದೊಡ್ಡ ಮಟ್ಟದ ಯಶಸ್ಸು ಗಳಿಸಿಕೊಂಡಿರುವ ಹಿನ್ನಲೆಯಲ್ಲಿ ರಿಯಲ್ ಮಿ ಮತ್ತೊಂದು ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲು ಮೂಂದಾಗಿದೆ. ಶೀಘ್ರವೇ ಮಾರುಕಟ್ಟೆಗೆ ರಿಯಲ್ ಮಿ 2 ಪ್ರೋ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲಿದೆ ಎನ್ನಲಾಗಿದೆ.

ರಿಯಲ್ ಮಿ 2 ಬೆಲೆ:

ರಿಯಲ್ ಮಿ 2 ಬೆಲೆ:

ರಿಯಲ್ ಮಿ 2 ಸ್ಮಾರ್ಟ್‌ಫೋನ್ 3 GB RAM ಮತ್ತು 32 GB ಇಂಟರ್ನಲ್ ಮೆಮೊರಿ ಆವೃತ್ತಿ ರೂ.8990ಕ್ಕೆ ಮಾರಾಟವಾಗಲಿದ್ದು, 4 GB RAM ಮತ್ತು 64 GB ಇಂಟರ್ನಲ್ ಮೆಮೊರಿ ಆವೃತ್ತಿ ರೂ.10,990ಕ್ಕೆ ದೊರೆಯಲಿದೆ.

ರಿಯಲ್ ಮಿ 1 ಬೆಲೆ

ರಿಯಲ್ ಮಿ 1 ಬೆಲೆ

ರಿಯಲ್ ಮಿ 1 ಸ್ಮಾರ್ಟ್‌ಫೋನ್ 3 GB RAM ಮತ್ತು 32 GB ಇಂಟರ್ನಲ್ ಮೆಮೊರಿ ಆವೃತ್ತಿಯ ಬೆಲೆ ರೂ.8990, 4 GB RAM ಮತ್ತು 64 GB ಇಂಟರ್ನಲ್ ಮೆಮೊರಿ ಆವೃತ್ತಿಯೂ ರೂ.10,990 ಮತ್ತು 6 GB RAM ಮತ್ತು 128 GB ಇಂಟರ್ನಲ್ ಮೆಮೊರಿಯ ಆವೃತ್ತಿಯೂ ರೂ.13,990ಕ್ಕೆ ದೊರೆಯುತ್ತಿತು.

Best Mobiles in India

English summary
Realme 1 and Realme 2 Sales Crosses 1 Million in India: A milestone for a 4 month old brand, to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+