Realme: ಬರ್ತಿದೆ ಹೊಸ ಫೋನ್: ಡಿಸೈನ್, ಫೀಚರ್ಸ್ ಲೀಕ್! ಯಾವಾಗ ಲಾಂಚ್?
ರಿಯಲ್‌ಮಿ (Realme) ಕಂಪನಿಯು ಕಳೆದ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ರಿಯಲ್‌ಮಿ 13 ಪ್ರೊ (Realme 13 Pro) ಸರಣಿಯನ್ನು ಬಿಡುಗಡೆ ಮಾಡಿತು. ಈ ಮೂಲಕ Realme 13 Pro ಮತ್ತು Realme 13 Pro+ ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಮಧ್ಯೆಯೇ, ಇದೀಗ Realme 13+ 5G ಹೆಸರಿನ ಮತ್ತೊಂದು ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇದು Realme 12+ ಫೋನಿನ ಉತ್ತರಾಧಿಕಾರಿಯಾಗಿ ಬರುತ್ತದೆ ಎಂದು ಹೇಳಲಾಗಿದೆ. ಬನ್ನಿ, ಹೊಸ ಫೋನಿನ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿಯೋಣ.
ಹೌದು, ರಿಯಲ್‌ಮಿ ಕಂಪನಿ ತನ್ನ ಗ್ರಾಹಕರಿಗೆ ಸರ್ಪ್ರೈಸ್ ಗಿಫ್ಟ್ ನೀಡುತ್ತಲೇ ಇದೆ. ಒಂದರ ಹಿಂದೆ ಒಂದರಂತೆ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇದೀಗ, Realme 13+ 5G ಫೋನಿನ ಬಿಡುಗಡೆ ಕಾಲ ಸನ್ನಿಹಿತವಾಗಿದೆ. ಈ ಫೋನನ್ನು TENAA ಪ್ರಮಾಣೀಕರಣ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ. ಫೋನಿನ ಸಂಪೂರ್ಣ ವಿಶೇಷತೆಗಳನ್ನು ಬಹಿರಂಗಪಡಿಸಿದೆ. ಇದು Realme 13 5G ಮತ್ತು Realme 13 Plus 5G ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿರಬಹುದು ಎನ್ನಲಾಗಿದೆ.

Realme 13 Plus 5G ಫೋನಿನ ವಿಶೇಷತೆಗಳು
ಚೀನಾದ TENAA ಮಾಣೀಕರಣ ವೆಬ್‌ಸೈಟ್‌ನಲ್ಲಿ ಮಾದರಿ ಸಂಖ್ಯೆ RMX5002 ನೊಂದಿಗೆ ಹೊಸ ರಿಯಲ್‌ಮಿ ಫೋನನ್ನು ಪಟ್ಟಿಮಾಡಲಾಗಿದೆ. ಇದು Realme 13 Plus 5G ಎಂದು ಹೇಳಲಾಗಿದೆ. ಈ ಫೋನ್ ಇತರ Realme 13 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಹೋಲುತ್ತದೆ.
ಡಿಸ್ಪ್ಲೇ: TENAA ಪ್ರಮಾಣೀಕರಣದ ಪ್ರಕಾರ, Realme 13+ 5G ಫೋನ್ 6.67-ಇಂಚಿನ AMOLED FHD+ ಡಿಸ್ಪ್ಲೇ ಪ್ಯಾನೆಲ್ ಅನ್ನು ಹೊಂದಿರಬಹುದು. 2400 x 1080 ಪಿಕ್ಸೆಲ್ ರೆಸಲ್ಯೂಶನ್ ಅನ್ನುಇದರಲ್ಲಿ ಕಾಣಬಹುದು.
ಪ್ರೊಸೆಸರ್: ಪಟ್ಟಿಯಲ್ಲಿ Realme 13+ 5G ಫೋನಿನ ಪ್ರೊಸೆಸರ್ ಅನ್ನು ಬಹಿರಂಗಪಡಿಸಿಲ್ಲ. ಆದಾಗ್ಯೂ, ಇದು 2.5GHz ಆಕ್ಟಾ-ಕೋರ್ ಚಿಪ್‌ಸೆಟ್‌ನೊಂದಿಗೆ ಬರಬಹುದು ಎನ್ನಲಾಗಿದೆ. ಈ ಫೋನ್ ಸುಮಾರು ನಾಲ್ಕು RAM ರೂಪಾಂತರಗಳಲ್ಲಿ ಬರುವ ಸಾಧ್ಯತೆಯಿದೆ. ಇದರಲ್ಲಿ ನೀವು 6GB, 8GB, 12GB ಮತ್ತು 16GB RAM ಜೊತೆಗೆ 128GB, 256GB, 512GB ಮತ್ತು 1 TB ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಬರಲಿದೆ. ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಸೌಲಭ್ಯವನ್ನೂ ಫೋನ್‌ನಲ್ಲಿ ಒದಗಿಸಬಹುದು.

ಕ್ಯಾಮೆರಾ: ಮುಂಬರುವ ರಿಯಲ್‌ಮಿ ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರುವ ಸಾಧ್ಯತೆಯಿದೆ. ಈ ಫೋನ್ 50MP ಮುಖ್ಯ ಕ್ಯಾಮೆರಾ ಮತ್ತು 2MP ಸೆಕೆಂಡರಿ ಕ್ಯಾಮೆರಾವನ್ನು ಹಿಂಬದಿಯ ಪ್ಯಾನೆಲ್‌ನಲ್ಲಿ ಒಳಗೊಂಡಿರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಆಯ್ಕೆ ಇರುತ್ತದೆ.
ಬ್ಯಾಟರಿ: Realme 13+ 5G ಸ್ಮಾರ್ಟ್‌ಫೋನ್ 4,880mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಆದರೆ, ಇದರ ಸಾಮಾನ್ಯ ಸಾಮರ್ಥ್ಯವು 5,000mAh ಆಗಿರಬಹುದು. ಇದನ್ನು ಚಾರ್ಜ್ ಮಾಡಲು, ಇದು 45W ವೇಗದ ಚಾರ್ಜಿಂಗ್ ಸಪೋರ್ಟ್ ಪಡೆಯಬಹುದು.
ಇತರೆ ಫೀಚರ್ಸ್: Realme 13 Plus 5G ಫೋನ್ ಭದ್ರತೆಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಹೊಂದಿರಬಹುದು. ಸಾಫ್ಟ್‌ವೇರ್ ಬಗ್ಗೆ ಹೇಳುವುದಾದರೆ, ಮುಂಬರುವ ಈ ಹೊಸ ಫೋನ್ Android 14 ಆಧಾರಿತ Realme UI 5 ನಲ್ಲಿ ಕೆಲಸ ಮಾಡಬಹುದು. ಈ ಫೋನ್ 161.7 x 74.7 x 7.6mm ಅಳತೆ ಮತ್ತು ಸುಮಾರು 185 ಗ್ರಾಂ ತೂಕ ಹೊಂದಿರಲಿದೆ.
ಪ್ರಸ್ತುತ, Realme 13+ 5G ಬಿಡುಗಡೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಕಂಪನಿಯು ಸಹ ಮುಂಬರುವ ಫೋನಿನ ಕುರಿತು ದೃಢಪಡಿಸಿಲ್ಲ. ಹೀಗಾಗಿ, ಈ ಮೇಲಿನ ಮಾಹಿತಿಗಳು ಊಹಾಪೋಗಳಾಗಿರುತ್ತವೆ. ಕಂಪನಿಯ ಅಧಿಕೃತ ಪ್ರಕಟಣೆಯವರೆಗೆ ನೀವು ಕಾಯಲೇಬೇಕು.


Click it and Unblock the Notifications








