Home
ಮೊಬೈಲ್

Realme 13+ 5G ಮಾರಾಟಕ್ಕೆ ಸಿದ್ಧ: 3,000 ಅಗ್ಗ.. 1,500 ಕ್ಯಾಶ್‌ಬ್ಯಾಕ್! ಈ ಅವಕಾಶ ಬಿಡಬೇಡಿ

Realme 13+ 5G Sale: ರಿಯಲ್‌ಮಿ ಕಂಪನಿಯು ಇತ್ತೀಚೆಗೆ ರಿಯಲ್‌ಮಿ 13+ 5G (Realme 13+ 5G) ಫೋನನ್ನು ಬಿಡುಗಡೆ ಮಾಡಿದೆ. ಇದು ತನ್ನ ರಿಯಲ್‌ಮಿ 13 ಸರಣಿಯ ಇತ್ತೀಚಿನ ಮಧ್ಯಮ ಶ್ರೇಣಿಯ 5G ಸ್ಮಾರ್ಟ್‌ಫೋನ್‌ ಆಗಿದೆ. ಅಂದಹಾಗೆ, ಈ ಫೋನ್ ಸೆಪ್ಟೆಂಬರ್ 6 ರಿಂದ ಮೊದಲ ಮಾರಾಟ ಪ್ರಾರಂಭಿಸಲಿದೆ. ಈಗಾಗಲೇ ಮುಂಗಡ ಬುಕಿಂಗ್‌ ಶುರು ಆಗಿದೆ. ಕಂಪನಿಯು 3,000 ರೂ. ರಿಯಾಯಿತಿ ಮತ್ತು 1,500 ಕ್ಯಾಶ್‌ಬ್ಯಾಕ್ ಘೋಷಿಸಿದೆ. ಬನ್ನಿ, ಈ ಫೋನಿನ ಬೆಲೆ ಮತ್ತು ಲಭ್ಯತೆ ತಿಳಿಯೋಣ.

ರಿಯಲ್‌ಮಿ 13+ 5G ಫೋನ್ ಮೂರು ಸ್ಟೋರೇಜ್‌ಗಳಲ್ಲಿ ಬಿಡುಗಡೆಯಾಗಿದೆ. ಇದು 8GB RAM ಮತ್ತು 128GB ಸ್ಟೋರೇಜ್, 8GB RAM ಮತ್ತು 256GB ಸ್ಟೋರೇಜ್‌, 12GB ಮತ್ತು 256GB ಸ್ಟೋರೇಜ್‌ ಒಳಗೊಂಡಿದೆ. ಈ ಫೋನ್‌ ಇದು 6.67 ಇಂಚಿನ ಡಿಸ್ಲ್ಪೇ, ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್‌ ಹೊಂದಿದೆ. 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. 80W ವೇಗದ ಚಾರ್ಜಿಂಗ್‌ನೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ.

Realme 13+ 5G ಮಾರಾಟಕ್ಕೆ ಸಿದ್ಧ: 3,000 ಅಗ್ಗ.. 1,500 ಕ್ಯಾಶ್‌ಬ್ಯಾಕ್!

ರಿಯಲ್‌ಮಿ 13+ 5G ಫೋನಿನ ಬೆಲೆ ಮತ್ತು ಲಭ್ಯತೆ

8GB + 128GB ಸ್ಟೋರೇಜ್‌ ಬೆಲೆ = 22,999 ರೂ.
8GB + 256GB ಸ್ಟೋರೇಜ್‌ ಬೆಲೆ = 24,999 ರೂ.
12GB + 256GB ಸ್ಟೋರೇಜ್‌ ಬೆಲೆ = 26,999 ರೂ.

ಕಂಪನಿಯು ರಿಯಲ್‌ಮಿ 13+ 5G ಫೋನನ್ನು ವಿಕ್ಟರಿ ಗೋಲ್ಡ್, ಸ್ಪೀಡ್ ಗ್ರೀನ್ ಮತ್ತು ಡಾರ್ಕ್ ಪರ್ಪಲ್ ಬಣ್ಣಗಳಲ್ಲಿ ಪರಿಚಯಿಸಿದೆ. ಇದರ 8GB ಮತ್ತು 128GB ರೂಪಾಂತರದ ಬೆಲೆ 22,999 ರೂ. ಆಗಿದೆ. 8GB ಮತ್ತು 256GB ಮಾದರಿಯ ಬೆಲೆ 24,999 ರೂ. ಇದೆ. 12GB ಮತ್ತು 256GB ಸ್ಟೋರೇಜ್‌ ಬೆಲೆ 26,999 ರೂ.ಗೆ ಲಭ್ಯವಿದೆ. ನೀವು ಸೆಪ್ಟೆಂಬರ್ 6 ರಿಂದ ಈ ಫೋನನ್ನು ಖರೀದಿಸಬಹುದು.

ಮೊದಲ ಮಾರಾಟದ ಭಾಗವಾಗಿ ಕಂಪನಿಯು ಕೆಲವು ಆಫರ್‌ಗಳನ್ನು ಘೋಷಿಸಿದೆ. ಈ ಫೋನ್ ಖರೀದಿ ಮೇಲೆ 1,500 ಕ್ಯಾಶ್‌ಬ್ಯಾಕ್ ಮತ್ತು 3,000 ರೂ.ಗಳ ವೆರೆಗೆ ಸೀಮಿತ ಪ್ರೀ ಬುಕಿಂಗ್ ಆಫರ್‌ಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ರಿಯಲ್‌ಮಿಯ ಅಧಿಕೃತ ವೆಬ್‌ಸೈಟ್ (realme.com), ಫ್ಲಿಪ್‌ಕಾರ್ಟ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಮುಂಗಡ ಬುಕಿಂಗ್‌ ಕೂಡ ಮಾಡಬಹುದು.

ರಿಯಲ್‌ಮಿ 13+ 5G ಫೋನಿನ ವೈಶಿಷ್ಟ್ಯಗಳು

ರಿಯಲ್‌ಮಿ 13+ 5G ಫೋನ್ 6.67 ಇಂಚಿನ ಪೂರ್ಣ HD+ AMOLED ಡಿಸ್ಲ್ಪೇಯನ್ನು ಹೊಂದಿದೆ. ಇದು 2400 × 1080 ಪಿಕ್ಸೆಲ್‌ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್, 2000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಬೆಂಬಲವನ್ನು ಹೊಂದಿದೆ. ಇದು ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್ ಹೊಂದಿದೆ. ಈ ಫೋನ್ ರಿಯಲ್‌ಮಿ UI 5 ಜೊತೆಗೆ Android 14 ನಲ್ಲಿ ಕಾರ್ಯನಿರ್ವಹಿಸುತ್ತದೆ.

ರಿಯಲ್‌ಮಿ 13+ 5G ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು Sony LYT-600 ಸಂವೇದಕ ಹೊಂದಿದೆ. ಜೊತೆಗೆ, LED ಫ್ಲಾಶ್, 2 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಕ್ಯಾಮೆರಾ ಇದೆ. ಸೆಲ್ಪಿ ಮತ್ತು ವಿಡಿಯೋ ಕೆರೆಗಾಗಿ 16 ಮೆಗಾಪಿಕ್ಸೆಲ್ ಫ್ರಂಟ್‌ ಕ್ಯಾಮೆರಾ ಇದೆ. ಇದು ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸಂವೇದಕ ಹೊಂದಿದೆ. ಈ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್‌ ಸಪೋರ್ಟ್‌ ಇದೆ.

ರಿಯಲ್‌ಮಿ 13+ 5G ಫೋನ್ ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP65 ರೇಟಿಂಗ್ ಪಡೆದಿದೆ. 161.7×74.7×7.6 ಎಂಎಂ ದಪ್ಪ ಮತ್ತು 185 ಗ್ರಾಂ ತೂಕ ಹೊಂದಿದೆ. ಈ ಫೋನ್ 3.5 ಎಂಎಂ ಆಡಿಯೊ ಜಾಕ್, ಸ್ಟಿರಿಯೊ ಸ್ಪೀಕರ್‌ಗಳು, 5G, ಡ್ಯುಯಲ್ 4G VoLTE, Wi-Fi 6 802.11 ax (2.4GHz + 5GHz), ಬ್ಲೂಟೂತ್ 5.4, GPS, ಗೆಲಿಲಿಯೊ, ಯುಎಸ್‌ಬಿ ಟೈಪ್-ಸಿ ಸೇರಿದಂತೆ ಇನ್ನಿತರ ಸೌಲಭ್ಯ ಪಡೆದಿದೆ.

Best Mobiles in India

English summary
Realme 13+ 5G goes sale on September 6 via Flipkart : Price, Offer, Availability and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+