Home
ಮೊಬೈಲ್

ಭಾರತಕ್ಕೆ Realme 13+ 5G ಎಂಟ್ರಿ: ಸ್ಟೈಲಿಶ್‌ ಲುಕ್‌, ಆಕರ್ಷಕ ಬೆಲೆ!

ರಿಯಲ್‌ಮಿ ಕಂಪನಿಯು ಭಾರತದಲ್ಲಿ 13 ಸರಣಿಯನ್ನು ಅನಾವರಣಗೊಳಿಸಿದೆ. ಈ ಸರಣಿಯ ಅಡಿಯಲ್ಲಿ ರಿಯಲ್‌ಮಿ 13 5G (Realme 13 5G) ಮತ್ತು ರಿಯಲ್‌ಮಿ 13+ 5G (Realme 13+ 5G) ಫೋನ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಪೈಕಿ ರಿಯಲ್‌ಮಿ 13+ 5G ಫೋನ್ ಕಂಪನಿಯ ಇತ್ತೀಚಿನ ಮಧ್ಯಮ ಶ್ರೇಣಿಯ 5G ಸ್ಮಾರ್ಟ್‌ಫೋನ್‌ ಆಗಿದೆ. ಇದು 6.67 ಇಂಚಿನ ಡಿಸ್ಲ್ಪೇ, ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್‌ ಸೇರಿದಂತೆ ಟಾಪ್ 5 ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಕಂಪನಿಯು ರಿಯಲ್‌ಮಿ 13+ 5G ಫೋನನ್ನು ಮೂರು ಸ್ಟೋರೇಜ್‌ಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದು 8GB RAM ಮತ್ತು 128GB ಸ್ಟೋರೇಜ್, 8GB RAM ಮತ್ತು 256GB ಸ್ಟೋರೇಜ್‌, 12GB ಮತ್ತು 256GB ಸ್ಟೋರೇಜ್‌ ಒಳಗೊಂಡಿದೆ. ಈ ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. 80W ವೇಗದ ಚಾರ್ಜಿಂಗ್‌ನೊಂದಿಗೆ 5000mAh ಬ್ಯಾಟರಿಯನ್ನು ಒಳಗೊಂಡಿದೆ. ಬನ್ನಿ, ಈ ಫೋನಿನ ಬೆಲೆ ಮತ್ತು ಲಭ್ಯತೆ ತಿಳಿಯೋಣ.

ಭಾರತಕ್ಕೆ Realme 13+ 5G ಎಂಟ್ರಿ: ಸ್ಟೈಲಿಶ್‌ ಲುಕ್‌, ಆಕರ್ಷಕ ಬೆಲೆ!

ರಿಯಲ್‌ಮಿ 13+ 5G ಫೋನಿನ ಬೆಲೆ

8GB ಮತ್ತು 128GB ಸ್ಟೋರೇಜ್‌ ಬೆಲೆ = 22,999 ರೂ.
8GB ಮತ್ತು 256GB ಸ್ಟೋರೇಜ್‌ ಬೆಲೆ = 24,999 ರೂ.
12GB ಮತ್ತು 256GB ಸ್ಟೋರೇಜ್‌ ಬೆಲೆ = 26,999 ರೂ.

ರಿಯಲ್‌ಮಿ 13+ 5G ಫೋನ್‌ ವಿಕ್ಟರಿ ಗೋಲ್ಡ್, ಸ್ಪೀಡ್ ಗ್ರೀನ್ ಮತ್ತು ಡಾರ್ಕ್ ಪರ್ಪಲ್ ಬಣ್ಣಗಳಲ್ಲಿ ಬರುತ್ತದೆ. ಈ ಫೋನಿನ 8GB ಮತ್ತು 128GB ಸ್ಟೋರೇಜ್‌ ಬೆಲೆ 22,999 ರೂ. ಇದೆ. 8GB ಮತ್ತು 256GB ಸ್ಟೋರೇಜ್‌ ಬೆಲೆ 24,999 ರೂ. ಮತ್ತು ಟಾಪ್‌ ಎಂಡ್‌ 12GB ಮತ್ತು 256GB ಸ್ಟೋರೇಜ್‌ ಬೆಲೆ 26,999 ರೂ.ಗೆ ಲಭ್ಯವಿದೆ. ಈ ಫೋನ್‌ ಸೆಪ್ಟೆಂಬರ್ 6 ರಿಂದ ಮೊದಲ ಮಾರಾಟ ಪ್ರಾರಂಭಿಸಲಿದೆ.

ರಿಯಲ್‌ಮಿ 13+ 5G ಬಿಡುಗಡೆಯ ಅಂಗವಾಗಿ ಕಂಪನಿಯು ಕೆಲವು ಆಫರ್‌ಗಳನ್ನು ನೀಡಲಿದೆ. ನೀವು 1,500 ಕ್ಯಾಶ್‌ಬ್ಯಾಕ್, 3,000 ರೂ.ಗಳ ವೆರೆಗೆ ಸೀಮಿತ ಪ್ರೀ ಬುಕಿಂಗ್ ಕೊಡುಗೆಗಳ ಲಾಭ ಪಡೆಯಬಹುದು. ಇದು ಸೆಪ್ಟೆಂಬರ್ 6 ರಿಂದ ಖರೀದಿಗೆ ಲಭ್ಯವಿರುತ್ತದೆ. ನೀವು ರಿಯಲ್‌ಮಿಯ ಅಧಿಕೃತ ವೆಬ್‌ಸೈಟ್ (realme.com), ಫ್ಲಿಪ್‌ಕಾರ್ಟ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಇಂದಿನಿಂದ (ಆಗಸ್ಟ್ 29) ಮುಂಗಡ ಬುಕಿಂಗ್‌ ಮಾಡಬಹುದು.

ರಿಯಲ್‌ಮಿ 13+ 5G ಫೋನಿನ ವೈಶಿಷ್ಟ್ಯಗಳು

ಡಿಸ್ಲ್ಪೇ: ರಿಯಲ್‌ಮಿ 13+ 5G ಫೋನ್ 6.67 ಇಂಚಿನ ಪೂರ್ಣ HD+ AMOLED ಡಿಸ್ಲ್ಪೇಯನ್ನು ಹೊಂದಿದೆ. ಇದು 2400 ×1080 ಪಿಕ್ಸೆಲ್‌ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್, 2000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಬೆಂಬಲವನ್ನು ಹೊಂದಿದೆ. ಜೊತೆಗೆ ಮಳೆ ನೀರಿನ ಸ್ಮಾರ್ಟ್ ಟಚ್, ಪಾಂಡ ಗ್ಲಾಸ್ ರಕ್ಷಣೆ ಪಡೆದಿದೆ.

ಪ್ರೊಸೆಸರ್: ರಿಯಲ್‌ಮಿ 13+ 5G ಮೊಬೈಲ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್ ಹೊಂದಿದೆ. ಈ ಫೋನ್ ರಿಯಲ್‌ಮಿ UI 5 ಜೊತೆಗೆ Android 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 8GB GB LPDDR4X RAM ಜೊತೆಗೆ 128GB ಮತ್ತು 256GB UFS 3.1 ಸ್ಟೋರೇಜ್‌ ಆಯ್ಕೆ ಒಳಗೊಂಡಿದೆ.

ಕ್ಯಾಮೆರಾ: ರಿಯಲ್‌ಮಿ 13+ 5G ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು Sony LYT-600 ಸಂವೇದಕ ಹೊಂದಿದೆ. ಜೊತೆಗೆ, LED ಫ್ಲಾಶ್, 2 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಕ್ಯಾಮೆರಾ ಇದೆ. ಸೆಲ್ಪಿ ಮತ್ತು ವಿಡಿಯೋ ಕೆರೆಗಾಗಿ 16 ಮೆಗಾಪಿಕ್ಸೆಲ್ ಫ್ರಂಟ್‌ ಕ್ಯಾಮೆರಾ ಇದೆ. ಇದು ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸಂವೇದಕ ಹೊಂದಿದೆ.

ಬ್ಯಾಟರಿ: ರಿಯಲ್‌ಮಿ 13+ 5G ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್‌ ಸಪೋರ್ಟ್‌ ಇದೆ. ಇದು ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP65 ರೇಟಿಂಗ್ ಪಡೆದಿದೆ. 161.7×74.7×7.6 ಎಂಎಂ ದಪ್ಪ ಮತ್ತು 185 ಗ್ರಾಂ ತೂಕ ಹೊಂದಿದೆ.

ಇತರೆ ಫೀಚರ್ಸ್‌: ಈ ಫೋನ್ 3.5 ಎಂಎಂ ಆಡಿಯೊ ಜಾಕ್, ಸ್ಟಿರಿಯೊ ಸ್ಪೀಕರ್‌ಗಳು, 5G, ಡ್ಯುಯಲ್ 4G VoLTE, Wi-Fi 6 802.11 ax (2.4GHz + 5GHz), ಬ್ಲೂಟೂತ್ 5.4, GPS, ಗೆಲಿಲಿಯೊ, ಯುಎಸ್‌ಬಿ ಟೈಪ್-ಸಿ ಸೇರಿದಂತೆ ಇನ್ನಿತರ ಸೌಲಭ್ಯ ಪಡೆದಿದೆ.

Best Mobiles in India

English summary
realme 13+ 5G with Dimensity 7300 Energy launched in India starting at Rs. 22,999: Know specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+