Home
ಮೊಬೈಲ್

Realme: 50MP ಕ್ಯಾಮೆರಾ.. 5000mAh ಬ್ಯಾಟರಿ.. ಈ 5G ಫೋನಿನ ಬೆಲೆ ಭರ್ಜರಿ ಇಳಿಕೆ!

ರಿಯಲ್‌ಮಿ ತನ್ನ ಅಭಿಮಾನಿಗಳಿಗೆ ಬಂಪರ್ ಆಫರ್‌ ನೀಡುತ್ತಿದೆ. ನೀವು, ಕಡಿಮೆ ಬೆಲೆಯಲ್ಲಿ ರಿಯಲ್‌ಮಿ 5G ಮೊಬೈಲ್ ಖರೀದಿಸಬಹುದು. ಹೌದು, ಕಂಪನಿಯು ರಿಯಲ್‌ಮಿ 13+ 5G (realme 13+ 5G) ಫೋನಿನ ಬೆಲೆಯನ್ನು ಭಾರೀ ಇಳಿಕೆ ಮಾಡಿದೆ. ಹೊಸ ರಿಯಲ್‌ಮಿ ಸ್ಮಾರ್ಟ್‌ಫೋನ್ ಕೊಳ್ಳಲು ಬಯಸುವವರು, ಈ ದೊಡ್ಡ ರಿಯಾಯಿತಿಯ ಲಾಭ ಪಡೆಯಬಹುದು. ಬನ್ನಿ ಈ ಫೋನಿನ ಹೊಸ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ರಿಯಲ್‌ಮಿ 13+ 5G ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಈ ಫೋನ್ 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಎನರ್ಜಿ ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಹಾಗೆಯೇ 12GB RAM + 256GB ಸ್ಟೋರೇಜ್, 5000mAh ಬ್ಯಾಟರಿ ಮತ್ತು 80W ಸ್ಪೀಡ್ ಚಾರ್ಜಿಂಗ್ ಒಳಗೊಂಡಿದೆ. ಪ್ರಸ್ತುತ, ಕಂಪನಿಯು ಫೋನಿನ ಮೂರು ಸ್ಟೋರೇಜ್‌ ರೂಪಾಂತರಗಳ ದರ ಕಡಿತಗೊಳಿಸಿದೆ. ನೀವು ಬಿಡುಗಡೆ ಬೆಲೆಗಿಂತ ಕಡಿಮೆಗೆ ಖರೀದಿಸಬಹುದು.

Realme: 50MP ಕ್ಯಾಮೆರಾ.. 5000mAh ಬ್ಯಾಟರಿ.. ಈ ಫೋನಿನ ಬೆಲೆ ಭರ್ಜರಿ ಇಳಿಕೆ!

ರಿಯಲ್‌ಮಿ 13+ 5G ಬೆಲೆ ಮತ್ತು ಆಫರ್‌

ರಿಯಲ್‌ಮಿ 13+ 5G ಫೋನ್ ಮೂರು ಸ್ಟೋರೇಜ್‌ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ಕಂಪನಿಯು ಫೋನಿನ 8GB RAM + 128GB ಸ್ಟೋರೇಜ್‌ ರೂಪಾಂತರವನ್ನು 20,999 ರೂ.ಗೆ ಬಿಡುಗಡೆ ಮಾಡಿತ್ತು. ಪ್ರಸ್ತುತ 1,000 ರೂ. ಡಿಸ್ಕೌಂಟ್ ನೀಡುತ್ತಿದೆ. ನೀವು, ಕೇವಲ 19,999 ರೂ.ಗೆ ಖರೀದಿಸಬಹುದು. ಫೋನಿನ 8GB RAM + 256GB ಸ್ಟೋರೇಜ್‌ ಆಯ್ಕೆಯ ಮೇಲೆ 1,500 ರೂ. ರಿಯಾಯಿತಿ ಲಭ್ಯವಿದೆ. ನೀವು 21,499 ರೂ.ಗೆ ಕೊಳ್ಳಬಹುದು. ಇದನ್ನು 22,999 ರೂ.ಗೆ ಪರಿಚಯಿಸಲಾಗಿತ್ತು. ಈ ಆಫರ್‌ ಇಂದಿನಿಂದ (ಜನವರಿ 13) ಜನವರಿ 19 ರವರೆಗೆ ಮಾತ್ರ ಇರುತ್ತದೆ.

ರಿಯಲ್‌ಮಿ 13+ 5G ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ರಿಯಲ್‌ಮಿ 13+ 5G ಸ್ಮಾರ್ಟ್‌ಫೋನ್ 6.67 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 2400 × 1080 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 2,000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಡಿಸ್ಪ್ಲೇಯು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಹೊಂದಿದೆ.

ಪ್ರೊಸೆಸರ್ ಯಾವುದು?

ರಿಯಲ್‌ಮಿ 13+ 5G ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಎನರ್ಜಿ ಪ್ರೊಸೆಸರ್ ಹೊಂದಿದೆ. ಇದು ಗ್ರಾಫಿಕ್ಸ್‌ಗಾಗಿ, ಮಾಲಿ G615 ಜಿಪಿಯು ಹೊಂದಿದೆ. ಈ ಮೊಬೈಲ್ ಆಂಡ್ರಾಯ್ಡ್‌ 14 ಆಧಾರಿತ ರಿಯಲ್‌ಮಿ ಯುಐ 5.0 ಓಎಸ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಈ ಫೋನಿನಲ್ಲಿ 14GB ಡೈನಾಮಿಕ್ RAM ತಂತ್ರಜ್ಞಾನ ಲಭ್ಯವಿದೆ.

ಡ್ಯುಯಲ್ ಕ್ಯಾಮೆರಾ ಸೆಟಪ್

ರಿಯಲ್‌ಮಿ 13+ 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.

Realme: 50MP ಕ್ಯಾಮೆರಾ.. 5000mAh ಬ್ಯಾಟರಿ.. ಈ ಫೋನಿನ ಬೆಲೆ ಭರ್ಜರಿ ಇಳಿಕೆ!

ಸೂಪರ್ ಬ್ಯಾಟರಿ

ರಿಯಲ್‌ಮಿ 13+ 5G ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ಅಲ್ಟ್ರಾ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ರಿಯಲ್‌ಮಿ 13+ 5G ಮೊಬೈಲ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP65 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 3.5 ಎಂಎಂ ಆಡಿಯೊ ಜಾಕ್, ಸ್ಟಿರಿಯೊ ಸ್ಪೀಕರ್‌ಗಳು, 5G, ಡ್ಯುಯಲ್ 4G VoLTE, ವೈ-ಫೈ 6, ಬ್ಲೂಟೂತ್ 5.4, ಜಿಪಿಎಸ್, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Best Mobiles in India

English summary
Realme 13+ 5G Price Drop in India: Check new Price, availability, specs and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+