ಬಂದೇ ಬಿಡ್ತು ಹೊಸ Realme 13 5G ಫೋನ್; ಕಡಿಮೆ ಬೆಲೆ.. ಅಬ್ಬರ ಶುರು!
ದಿ ವೇಟ್ ಈಸ್ ಓವರ್..! ರಿಯಲ್‌ಮಿ ಪ್ರಿಯರ ಕಾಯುವಿಕೆ ಮುಗಿಯಿತು. ನಿರೀಕ್ಷೆಯಂತೆಯೇ ಎರಡು ಹೊಸ ರಿಯಲ್‌ಮಿ ಫೋನ್‌ಗಳು ಭಾರತಕ್ಕೆ ಎಂಟ್ರಿ ಕೊಟ್ಟಿವೆ. ಹೌದು, ಚೀನಾದ ಟೆಕ್ ದೈತ ರಿಯಲ್‌ಮಿ (Realme) ಕಂಪನಿಯು ಭಾರತದಲ್ಲಿ 13 ಸರಣಿಯನ್ನು ಬಿಡುಗಡೆ ಮಾಡಿದೆ. Realme 13 ಸರಣಿಯ ಅಡಿಯಲ್ಲಿ, Realme 13 ಮತ್ತು Realme 13+ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣಗೊಳಿಸಲಾಗಿದೆ. ಈ ಪೈಕಿ ನೂತನ Realme 13 ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ ಬನ್ನಿ.
ರಿಯಲ್‌ಮಿ 3 5G ಫೋನನ್ನು ಭಾರತದಲ್ಲಿ ಎರಡು ಸ್ಟೋರೇಜ್‌ಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದು 8GB RAM ಮತ್ತು 128GB ಸ್ಟೋರೇಜ್, 8GB RAM ಮತ್ತು 256GB ಸ್ಟೋರೇಜ್ ಅನ್ನು ಒಳಗೊಂಡಿದೆ. ಈ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 6nm ಪ್ರೊಸೆಸರ್ ಅನ್ನು ಹೊಂದಿದೆ. ಇದು 6.72 ಇಂಚಿನ ಪೂರ್ಣ HD+ ಡಿಸ್ಪ್ಲೇ, 8GB RAM, 45W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

Realme 13 ಬೆಲೆ ಮತ್ತು ಲಭ್ಯತೆ
8GB ಮತ್ತು 128GB ಸ್ಟೋರೇಜ್ ಬೆಲೆ = 17,999 ರೂ.
8GB ಮತ್ತು 256GB ಸ್ಟೋರೇಜ್ ಬೆಲೆ = 19,999 ರೂ.
Realme 13 5G ಫೋನ್ ಡಾರ್ಕ್ ಪರ್ಪಲ್ ಮತ್ತು ಸ್ಪೀಡ್ ಗ್ರೀನ್ ಬಣ್ಣಗಳಲ್ಲಿ ಬರುತ್ತದೆ. ಈ ಫೋನಿನ 8GB ಮತ್ತು 128GB ಸ್ಟೋರೇಜ್‌ನ ಮೂಲ ಮಾದರಿಯ ಬೆಲೆ 17,999 ರೂ. ಇದೆ. 8GB ಮತ್ತು 256GB ಸ್ಟೋರೇಜ್ ವೇರಿಯಂಟ್ ಬೆಲೆಯನ್ನು 19,999 ರೂ.ಗೆ ನಿಗದಿಪಡಿಸಲಾಗಿದೆ. ನೀವು, ಈ ಫೋನ್ ಸೆಪ್ಟೆಂಬರ್ 6 ರಿಂದ ಮೊದಲ ಮಾರಾಟ ಪ್ರಾರಂಭಿಸಲಿದೆ.
ಕಂಪನಿಯು ಬಿಡುಗಡೆಯ ಭಾಗವಾಗಿ ಹಲವು ಆಫರ್‌ಗಳನ್ನು ಘೋಷಿಸಿದೆ. 1,000 ರೂ. ಕ್ಯಾಶ್‌ಬ್ಯಾಕ್, 3,000 ಮೌಲ್ಯದ ಸೀಮಿತ ಪ್ರೀ ಬುಕ್ ಕೊಡುಗೆಗಳನ್ನು ಪಡೆಯಬಹುದು. ರಿಯಲ್‌ಮಿಯ ಅಧಿಕೃತ ವೆಬ್‌ಸೈಟ್ (realme.com), ಫ್ಲಿಪ್‌ಕಾರ್ಟ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಇಂದಿನಿಂದ (ಆಗಸ್ಟ್ 29) ಮುಂಗಡ ಬುಕಿಂಗ್‌ಗಳು ಪ್ರಾರಂಭವಾಗಿದೆ.
Realme 13 5G ಫೋನಿನ ವೈಶಿಷ್ಟ್ಯಗಳು
ಡಿಸ್ಲ್ಪೇ: ರಿಯಲ್‌ಮಿ 13 5G ಫೋನ್ 6.72 ಇಂಚಿನ ಪೂರ್ಣ HD+ ಡಿಸ್ಲ್ಪೇಯನ್ನು ಹೊಂದಿದೆ. ಇದು 2400 × 1080 ಪಿಕ್ಸೆಲ್ ರೆಸಲ್ಯೂಶನ್, 120Hz ಡೈನಾಮಿಕ್ ರಿಫ್ರೆಶ್ ದರ, 240Hz ಟಚ್ ಸ್ಯಾಂಪ್ಲಿಂಗ್ ದರ, 680 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲವನ್ನು ಹೊಂದಿದೆ.
ಪ್ರೊಸೆಸರ್: ರಿಯಲ್‌ಮಿ 13 5G ಮೊಬೈಲ್‌ನಲ್ಲಿ, ಕಂಪನಿಯು ಕಾರ್ಯಕ್ಷಮತೆಗಾಗಿ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 6nm ಪ್ರೊಸೆಸರ್ ಅನ್ನು ಅಳವಡಿಸಿದೆ. ಈ ಹೊಸಮೊಬೈಲ್ ರಿಯಲ್‌ಮಿ UI 5.0 ಜೊತೆಗೆ Android 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ 8GB LPDDR4x RAM, 128GB ಮತ್ತು 256GB (UFS 2.2) ಸ್ಟೋರೇಜ್, ಮೈಕ್ರೊ SD ಜೊತೆಗೆ 2TB ವರೆಗೆ ವಿಸ್ತರಿಸಬಹುದಾದ ಮೆಮೊರಿ ಅನ್ನು ಹೊಂದಿದೆ.
ಕ್ಯಾಮೆರಾ: ರಿಯಲ್‌ಮಿ 13 5G ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಜೊತೆಗೆ, Samsung ISOCELL S5KJNS ಸಂವೇದಕ, LED ಫ್ಲ್ಯಾಷ್, 2 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಕ್ಯಾಮೆರಾ ಮತ್ತು ಸೆಲ್ಪಿ ಕ್ಲಿಕ್ಕಿಸಲು 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
ಬ್ಯಾಟರಿ: ರಿಯಲ್‌ಮಿ 13 5G ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ವೇಗದ ಚಾರ್ಜಿಂಗ್ ಸಪೋರ್ಟ್ ಇದೆ. ಇದು ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP64 ರೇಟಿಂಗ್ ಪಡೆದಿದೆ. 165.6×76.1×7.79mm ದಪ್ಪ ಮತ್ತು 190 ಗ್ರಾಂ ತೂಕ ಹೊಂದಿದೆ.
ಇತರೆ ಫೀಚರ್ಸ್: ಈ ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, 3.5mm ಆಡಿಯೋ ಜ್ಯಾಕ್, ಸ್ಟೀರಿಯೋ ಸ್ಪೀಕರ್‌ಗಳು, ಹೈ-ರೆಸ್ ಆಡಿಯೋ, ಹೈಬ್ರಿಡ್ ಡ್ಯುಯಲ್ ಸಿಮ್, 5G SA / NSA, ಡ್ಯುಯಲ್ 4G VoLTE, Wi-Fi 802.11 ac (2.4GHz + 5GHz.), ಬ್ಲೂಟೂತ್, GPS5 , ಗ್ಲೋನಾಸ್, ಗೆಲಿಲಿಯೋ, QZSS, USB ಟೈಪ್-ಸಿ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.


Click it and Unblock the Notifications








